For Quick Alerts
ALLOW NOTIFICATIONS  
For Daily Alerts

ಕೊರೊನಾ ಹೊಡೆತಕ್ಕೆ ಮಕಾಡೆ ಮಲಗಿದ ವೈಮಾನಿಕ ಕ್ಷೇತ್ರ: ನಷ್ಟ ಎಷ್ಟು ಗೊತ್ತಾ?

|

ಕೊರೊನಾವೈರಸ್ ಎಂಬ ಮಹಾಮಾರಿ ಅನೇಕ ಕ್ಷೇತ್ರಗಳ ಮೇಲೆ ಮಾರಕ ಪರಿಣಾಮ ಬೀರಿದೆ. ಅದರಲ್ಲೂ ವೈಮಾನಿಕ ಕ್ಷೇತ್ರವನ್ನಂತೂ ಮಕಾಡೆ ಮಲಗಿಸಿದೆ.

ಕೆನಡಾ ಮೂಲದ ಅಂತಾರಾಷ್ಟ್ರೀಯ ವಾಯು ಸಾರಿಗೆ ಸಂಸ್ಥೆಯ (ಐಎಟಿಎ) ಪ್ರಕಾರ, ಕೊರೊನಾವೈರಸ್ ಸಾಂಕ್ರಾಮಿಕ ರೋಗದಿಂದಾಗಿ 2020 ರಲ್ಲಿ ವಿಶ್ವದಾದ್ಯಂತ ವಿಮಾನಯಾನ ಸಂಸ್ಥೆಗಳು 84.3 ಬಿಲಿಯನ್ ಡಾಲರ್ ನಷ್ಟವನ್ನು ಅನುಭವಿಸಿವೆ ಎಂದು ಹೇಳಿದೆ. ಇಷ್ಟು ಪ್ರಮಾಣದ ನಷ್ಟ ಇತಿಹಾಸದಲ್ಲಿ ಇದೇ ಮೊದಲ ಬಾರಿ ಎಂದು ಕೂಡ ಸಂಸ್ಥೆ ಹೇಳಿದೆ.

ಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜುಕೊರೊನಾವೈರಸ್ ಲಾಕ್‌ಡೌನ್ ಎಫೆಕ್ಟ್: 30 ಲಕ್ಷ ಕೋಟಿ ರುಪಾಯಿ ನಷ್ಟದ ಅಂದಾಜು

ಈ ವರ್ಷ ವೈಮಾನಿಕ ಕ್ಷೇತ್ರದ ಆದಾಯವು ಶೇಕಡಾ 50 ರಷ್ಟು ಕುಸಿದು 838 ಶತಕೋಟಿ ರುಪಾಯಿಯಿಂದ 419 ಶತಕೋಟಿಗೆ ಕುಸಿದಿದೆ ಎಂದು ಐಎಟಿಎ ಮಂಗಳವಾರ ಬಿಡುಗಡೆ ಮಾಡಿದ ಜಾಗತಿಕ ವಾಯು ಸಾರಿಗೆ ಉದ್ಯಮದ ಆರ್ಥಿಕ ದೃಷ್ಟಿಕೋನದಲ್ಲಿ ತಿಳಿಸಿದೆ. 2021 ರಲ್ಲಿ ವೈಮಾನಿಕ ಕ್ಷೇತ್ರದ ನಷ್ಟವು 15.8 ಬಿಲಿಯನ್ ಡಾಲರ್ ಕಡಿತಗೊಳ್ಳುವ ನಿರೀಕ್ಷೆಯಿದೆ ಎಂದಿದೆ.

ಅತ್ಯಂತ ಕೆಟ್ಟ ವರ್ಷ

ಅತ್ಯಂತ ಕೆಟ್ಟ ವರ್ಷ

2020 ನೇ ವರ್ಷ ವಾಯುಯಾನ ಕ್ಷೇತ್ರದಲ್ಲಿನ ಇತಿಹಾಸದ ಅತ್ಯಂತ ಕೆಟ್ಟ ವರ್ಷವಾಗಿ ಹೊರಹೊಮ್ಮಿದೆ. ಸರಾಸರಿ, ಈ ವರ್ಷದ ಪ್ರತಿದಿನ 230 ಮಿಲಿಯನ್ ಡಾಲರ್ ನಷ್ಟವಾಗಿದೆ. ಒಟ್ಟಾರೆಯಾಗಿ ಅದು 84.3 ಬಿಲಿಯನ್ ಡಾಲರ್ ನಷ್ಟವಾಗಿದೆ ಎಂದು ಐಎಟಿಎ ನಿರ್ದೇಶಕ ಮತ್ತು ಸಿಇಒ ಅಲೆಕ್ಸಾಂಡ್ರ ಡಿ ಜುನಿಯಾಕ್ ಹೇಳುತ್ತಾರೆ.

ನಷ್ಟವು 100 ಬಿಲಿಯನ್ ಡಾಲರ್ ಆಗಬಹುದು

ನಷ್ಟವು 100 ಬಿಲಿಯನ್ ಡಾಲರ್ ಆಗಬಹುದು

2021 ರಲ್ಲಿ ವೈಮಾನಿಕ ಕ್ಷೇತ್ರ ಚೇತರಿಸಿಕೊಳ್ಳಲು ಮತ್ತು ವಿಮಾನಯಾನ ಸಂಸ್ಥೆಗಳು ಸ್ಪರ್ಧೆಯನ್ನು ಗೆಲ್ಲಲು ದರ ಸಮರಕ್ಕೆ ಮುಂದಾಗಬಹುದು. ಈ ನಷ್ಟವು 100 ಬಿಲಿಯನ್ ಡಾಲರ್ ಆಗಬಹುದು ಎಂದು ಐಎಟಿಎ ಎಚ್ಚರಿಸಿದೆ. 2021 ರಲ್ಲಿ ವೈಮಾನಿಕ ಕ್ಷೇತ್ರ ಇನ್ನೂ ಆರ್ಥಿಕವಾಗಿ ದುರ್ಬಲವಾಗಲಿದೆ ಎಂದು ಜುನಿಯಾಕ್ ಹೇಳುತ್ತಾರೆ.

ಸಾವಕಾಶವಾಗಿ ಆರಂಭ

ಸಾವಕಾಶವಾಗಿ ಆರಂಭ

ಕರೊನಾವೈರಸ್ ಪ್ರಕರಣಗಳ ಸಂಖ್ಯೆಯು ಜಾಗತಿಕವಾಗಿ ಏರುತ್ತಲೇ ಇದ್ದರೂ, ವಿವಿಧ ದೇಶಗಳು ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನ ಪ್ರಯಾಣವನ್ನು ಪುನರಾರಂಭಿಸಿವೆ. ಆದರೂ ಡೆಡ್ಲಿ ವೈರಸ್‌ನ ಮುನ್ನೆಚ್ಚರಿಕೆ ಕ್ರಮವಾಗಿ ಹಲವು ನಿಯಂತ್ರಣ ಕ್ರಮಗಳನ್ನು ವೈಮಾನಿಕ ಕ್ಷೇತ್ರದ ಮೇಲೆ ಹೇರಲಾಗಿದೆ.

300 ವಿಮಾನಯಾನ ಸಂಸ್ಥೆ

300 ವಿಮಾನಯಾನ ಸಂಸ್ಥೆ

ಐಎಟಿಎ ಸುಮಾರು 300 ವಿಮಾನಯಾನ ಸಂಸ್ಥೆಗಳನ್ನು ತನ್ನ ಸದಸ್ಯರನ್ನಾಗಿ ಹೊಂದಿದೆ. ಇದು ಒಟ್ಟು ಜಾಗತಿಕ ವಾಯು ಸಂಚಾರದ ಶೇಕಡಾ 82 ರಷ್ಟನ್ನು ನಿರ್ವಹಿಸುತ್ತದೆ.

English summary

Worldwide 84 Billion Dollar Loss For Airlines Sector Due to Coronavirus

Worldwide 84 Billion Dollar Lose For Airlines Sector Ahead Of Coronavirus In 2020.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X