For Quick Alerts
ALLOW NOTIFICATIONS  
For Daily Alerts

Year Ender 2022: ಈ ವರ್ಷ 5 ವಿಚಾರದಲ್ಲಿ ಹೆಡ್‌ಲೈನ್‌ನಲ್ಲಿ ಕಂಡ ಅಂಬಾನಿ ಕುಟುಂಬ!

|

ಸದ್ಯ ನಾವು 2022ರ ಕೊನೆಯಲ್ಲಿ ಇದ್ದೇವೆ. ಹೊಸ ವರ್ಷವನ್ನು ಸ್ವಾಗತಿಸಲು ಸಿದ್ಧವಾಗುತ್ತಿದ್ದೇವೆ. ಅದಕ್ಕೂ ಮುನ್ನ ಈ ವರ್ಷ ಪ್ರಮುಖ ವಿಚಾರಗಳನ್ನು ತಿಳಿದರೆ ಹೇಗೆ? ಅದಕ್ಕಾಗಿ ನಾವು ಪ್ರತಿ ದಿನ ಹಣಕಾಸು ಸಂಬಂಧಿತ ಅಥವಾ ಉದ್ಯಮಿಗಳಿಗೆ ಸಂಬಂಧಿಸಿದ 2022ರ ಅಥವಾ 2023ರ ವಿಶೇಷಗಳನ್ನು ನಿಮಗೆ ತಿಳಿಸುತ್ತೇವೆ.

 

ಅಂಬಾನಿ ಕುಟುಂಬವು ನಿರಂತರವಾಗಿ ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಾಗುತ್ತಲೇ ಇರುತ್ತದೆ. ದೇಶದ ಪ್ರಸಿದ್ಧ ಉದ್ಯಮಿಯಾದ ಮುಕೇಶ್ ಅಂಬಾನಿ ಈ ವರ್ಷವಂತೂ ಹಲವಾರು ಬಾರಿ ನ್ಯೂಸ್ ಹೆಡ್‌ಲೈನ್ ಆಗಿದ್ದಾರೆ. ಅವರ ಕುಟುಂಬ ಕೂಡಾ ಇದಕ್ಕೆ ಹೊರತಾಗಿಲ್ಲ.

ಕಳೆದ ವರ್ಷವೂ ಮುಕೇಶ್ ಅಂಬಾನಿ ಕುಟುಂಬ ಸಾಕಷ್ಟು ಸುದ್ದಿಯಾಗಿದೆ. ಈ ವರ್ಷವೂ ಅದರಿಂದ ಹೊರತಾಗಿಲ್ಲ. ದೇಶದ ಎರಡನೇ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಮುಕೇಶ್ ಅಂಬಾನಿ ಅವರ ಕುಟುಂಬವು ಈ ವರ್ಷ ಸುದ್ದಿಯಾದ ಪ್ರಮುಖ ವಿಚಾರಗಳು ಇಲ್ಲಿದೆ. ಮುಂದೆ ಓದಿ...

 ಸೊಸೆಗಾಗಿ ಅಂಬಾನಿಯಿಂದ ಅರಂಗೇತ್ರಂ ಕಾರ್ಯಕ್ರಮ

ಸೊಸೆಗಾಗಿ ಅಂಬಾನಿಯಿಂದ ಅರಂಗೇತ್ರಂ ಕಾರ್ಯಕ್ರಮ

ಭವಿಷ್ಯದಲ್ಲಿ ತಮ್ಮ ಸೊಸೆಯಾಗಲಿರುವ ರಾಧಿಕ ಮರ್ಚೆಂಟ್‌ಗಾಗಿ ಅಂಬಾನಿ ಕುಟುಂಬವು ಅರಂಗೇತ್ರಂ ಕಾರ್ಯಕ್ರಮ ಏರ್ಪಡಿಸುವ ಮೂಲಕ 2022ರಲ್ಲಿ ಸುದ್ದಿಯಾಗಿದೆ. ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರನಾದ ಅನಂತ್ ಅಂಬಾನಿಯನ್ನು ರಾಧಿಕ ಮರ್ಚೆಂಟ್‌ ವರಿಸಲಿದ್ದಾರೆ. ಅಸಲಿಗೆ ಅರಂಗೇತ್ರಂ ಎನ್ನವುದು ತಮಿಳು ಪದ. ನರ್ತಕಿಯು ಅಪ್ರಬುದ್ಧರಿಗೆ ಕಠಿಣ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ವೇದಿಕೆಯ ಮೇಲಿನ ಆರೋಹಣವನ್ನು ಸೂಚಿಸುವುದೇ ಅರಂಗೇತ್ರಂ ಎಂಬ ಪದದ ಅರ್ಥವಾಗಿದೆ. ಈ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್, ಅಮೀರ್ ಖಾನ್, ರಣ್‌ವೀರ್ ಸಿಂಗ್ ಮೊದಲಾದವರು ಭಾಗಿಯಾಗಿದ್ದರು. ನೀತಾ ಅಂಬಾನಿ ಕೂಡಾ ಭರತನಾಟ್ಯ ಕಲಾವಿದೆಯಾದ ಕಾರಣದಿಂದಾಗಿ ಕುಟುಂಬದ ಕಾರ್ಯಕ್ರಮದಲ್ಲಿ ಅವರು ಕೂಡಾ ಪ್ರದರ್ಶನ ನೀಡುತ್ತಾರೆ.

 ಜೈ ಅನ್ಮೋಲ್ ಅಂಬಾನಿ-ಕ್ರಿಷಾ ಶಾ ವಿವಾಹ

ಜೈ ಅನ್ಮೋಲ್ ಅಂಬಾನಿ-ಕ್ರಿಷಾ ಶಾ ವಿವಾಹ

ಅನಿಲ್ ಅಂಬಾನಿ ಹಾಗೂ ಟೀನಾ ಅಂಬಾನಿಯ ಹಿರಿಯ ಪುತ್ರ ಜೈ ಅನ್ಮೋಲ್ ಅಂಬಾನಿ, ಕ್ರಿಷಾ ಶಾರನ್ನು ವಿವಾಹವಾಗಿದ್ದು 2022ರಲ್ಲಿ ಆದ ಅಂಬಾನಿ ಕುಟುಂಬದ ಮತ್ತೊಂದು ಸುದ್ದಿಯಾಗಿದೆ. ಮುಂಬೈನಲ್ಲಿ ಈ ವಿವಾಹ ನಡೆದಿದೆ. 2021ರಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಈ ವಿವಾಹಕ್ಕೆ ಅಮಿತಾಬ್ ಬಚ್ಚನ್, ಐಶ್ವರ್ಯ ರೈ ಸೇರಿದಂತೆ ಹಲವಾರು ಸೆಲೆಬ್ರೆಟಿಗಳು ಭಾಗಿಯಾಗಿದ್ದರು. ಕಿಷಾ ಶಾ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ.

 ಇಶಾ ಅಂಬಾನಿ ಅವಳಿ ಜವಳಿ ಮಕ್ಕಳು
 

ಇಶಾ ಅಂಬಾನಿ ಅವಳಿ ಜವಳಿ ಮಕ್ಕಳು

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಏಕೈಕ ಪುತ್ರಿಯಾದ ಇಶಾ ಅಂಬಾನಿಗೆ ಅವಳಿ ಜವಳಿ ಮಕ್ಕಳಾಗಿರುವುದು ಕೂಡಾ 2022ರಲ್ಲಿ ಅಂಬಾನಿ ಕುಟುಂಬದ ಪ್ರಮುಖ ಸುದ್ದಿಯಾಗಿದೆ. ಇಶಾ ಅಂಬಾನಿಯ ಪತಿ ಆನಂದ್ ಪರಿಮಳ್ ಅವರು ಪರಿಮಳ್ ಗ್ರೂಪ್‌ನ ಮುಖ್ಯಸ್ಥರಾಗಿದ್ದಾರೆ. ದಂಪತಿಗೆ ಗಂಡು ಹಾಗೂ ಹೆಣ್ಣು ಮಕ್ಕಳಾಗಿದೆ. ತಮ್ಮ ಅವಳಿ ಜವಳಿ ಮಕ್ಕಳಿಗೆ ದಂಪತಿ ಆದಿಯಾ ಹಾಗೂ ಕೃಷ್ಣ ಎಂದು ಹೆಸರಿಟ್ಟಿದ್ದಾರೆ. ಯುಎಸ್‌ನಲ್ಲಿ ಇಶಾ ಮಗುವಿಗೆ ಜನನ ನೀಡಿದ್ದಾರೆ.

 ರಿಲಯನ್ಸ್ ಯೋಜನೆಯ ಯಶಸ್ವಿ ಘೋಷಣೆ

ರಿಲಯನ್ಸ್ ಯೋಜನೆಯ ಯಶಸ್ವಿ ಘೋಷಣೆ

ರಿಲಯನ್ಸ್ ಯೋಜನೆಯ ಯಶಸ್ವಿ ಘೋಷಣೆಯನ್ನು ಮುಕೇಶ್ ಅಂಬಾನಿ ಘೋಷಣೆ ಮಾಡಿರುವುದು ಕೂಡಾ 2022ರ ಪ್ರಮುಖ ಸುದ್ದಿಯಾಗಿದೆ. ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಈ ಘೋಷಣೆಯನ್ನು ಮಾಡಿದ್ದಾರೆ. ಮುಕೇಶ್ ಅಂಬಾನಿ ತನ್ನ ಮೂವರು ಮಕ್ಕಳಾದ ಇಶಾ, ಆಕಾಶ್, ಅನಂತ್ ಅಂಬಾನಿಗೆ ತನ್ನ ಉದ್ಯಮವನ್ನು ನೀಡಿದ್ದಾರೆ. ಜಿಯೋ ಹಾಗೂ ರಿಟೇಲ್ ಅನ್ನು ಆಕಾಶ್ ಹಾಗೂ ಇಶಾ ಅಂಬಾನಿ ನಿರ್ವಹಣೆ ಮಾಡಿದರೆ, ಅನಂತ್ ಅಂಬಾನಿ ನ್ಯೂ ಎನರ್ಜಿ ಉದ್ಯಮವನ್ನು ನಿರ್ವಹಣೆ ಮಾಡಲಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ.

 ಸಾಯಿ ದೇವಾಲಯಕ್ಕೆ 1.5 ಕೋಟಿ ದಾನ ನೀಡಿ ಅನಂತ್ ಅಂಬಾನಿ

ಸಾಯಿ ದೇವಾಲಯಕ್ಕೆ 1.5 ಕೋಟಿ ದಾನ ನೀಡಿ ಅನಂತ್ ಅಂಬಾನಿ

ಮುಕೇಶ್ ಅಂಬಾನಿ ಹಾಗೂ ನೀತಾ ಅಂಬಾನಿಯ ಕಿರಿಯ ಪುತ್ರ ಅನಂತ್ ಅಂಬಾನಿ ಶಿರಡಿಯ ಶ್ರೀ ಸಾಯಿಬಾಬಾ ಸಂಸ್ಥಾನ ಟ್ರಸ್ಟ್‌ಗೆ (ಎಸ್‌ಎಸ್‌ಎಸ್‌ಟಿ) 1.5 ಕೋಟಿ ರೂಪಾಯಿ ದಾನ ಮಾಡಿರುವುದು ಈ ವರ್ಷ ಮುಕೇಶ್ ಅಂಬಾನಿ ಕುಟುಂಬದ ಪ್ರಮುಖ ಸುದ್ದಿಗಳಲ್ಲಿ ಒಂದಾಗಿದೆ. ಅನಂತ್ ಅಂಬಾನಿ ಮಧ್ಯಾಹ್ನದ ಆರಂತಿಯನ್ನು ಮಾಡಿ ಬಳಿಕ ದಾನವನ್ನು ನೀಡಿದ್ದಾರೆ ಎಂದು ವರದಿಯಾಗಿದೆ. ಟ್ರಸ್ಟ್‌ನ ಸಿಇಒ ಜೊತೆ ಈ ದೇವಾಲಯದಲ್ಲಿ ಅನಂತ್ ಅಂಬಾನಿ ಸುಮಾರು ಒಂದು ಗಂಟೆಗಳ ಕಾಲವಿದ್ದು ಬಳಿಕ ಚೆಕ್ ಅನ್ನು ನೀಡಿದ್ದಾರೆ. ಸಾಯಿಬಾಬಾನ ಭಕ್ತರಿಗಾಗಿ ಈ ದಾನದ ಮೊತ್ತವನ್ನು ವಿನಿಯೋಗ ಮಾಡಲಾಗುತ್ತದೆ ಎಂದು ದೇವಾಲಯದ ವಕ್ತಾರರು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ ಸಾಯಿಬಾಬಾ ದೇವಾಲಯದ ಸಮೀಪದಲ್ಲಿ ಆಕ್ಸಿಜನ್ ಪ್ಲ್ಯಾಂಟ್ ಹಾಗೂ ಆರ್‌ಟಿಪಿಸಿಆರ್ ಲ್ಯಾಬ್ ಅನ್ನು ನಿಯೋಗಿಸಲು ಅನಂತ್ ಅಂಬಾನಿ ಸಹಾಯ ಮಾಡಿದ್ದರು.

English summary

Year Ender 2022: 5 Times The Ambani Family Made Headlines in 2022, Details in Kannada

Year Ender 2022: The Ambani clan is always making headlines for something or the other. 5 Times The Ambani Family Made Headlines in 2022, Details in Kannada.
Story first published: Tuesday, December 20, 2022, 14:30 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X