For Quick Alerts
ALLOW NOTIFICATIONS  
For Daily Alerts

Year Ender 2022: 2023ರಲ್ಲಿ 89 ಕಂಪನಿಗಳ ಐಪಿಒ, ಯಾವುದು ನೋಡಿ

|

2022ರಲ್ಲಿ ಹಲವಾರು ಐಪಿಒಗಳು ಆರಂಭವಾಗಿದ್ದು, ಎಲ್‌ಐಸಿ ಸೇರಿದಂತೆ ಪ್ರಮುಖ ಸಂಸ್ಥೆಗಳು ಸಾರ್ವಜನಿಕ ಹೂಡಿಕೆಗೆ ತೆರೆದುಕೊಂಡಿದೆ. ಮುಂದಿನ ವರ್ಷವೂ ಕೂಡಾ ಹಲವಾರು ಐಪಿಒಗಳು ನಡೆಯಲಿದೆ. ಅದರಲ್ಲೂ ಮುಖ್ಯವಾಗಿ 89 ಸಂಸ್ಥೆಗಳು ಮುಂದಿನ ವರ್ಷದಲ್ಲಿ (2023) ಐಪಿಒ ಆರಂಭಿಸಲು ಸೆಬಿಯಿಂದ ಅನುಮೋದನೆಯನ್ನು ಪಡೆದುಕೊಂಡಿದೆ. 2023ರಲ್ಲಿ ಪ್ರಮುಖವಾಗಿ ನಡೆಯಲಿರುವ ಐಪಿಒಗಳನ್ನು ನಾವಿಲ್ಲಿ ನಿಮಗೆ ವಿವರಿಸಿದ್ದೇವೆ.

2021ರಲ್ಲಿ ಒಟ್ಟು 63 ಸಂಸ್ಥೆಗಳು 1.19 ಟ್ರಿಲಿಯನ್ ಮೌಲ್ಯದ ಐಪಿಒ ಆರಂಭಿಸಿದೆ. 2022ರಲ್ಲಿ ನವೆಂಬರ್‌ವರೆಗೆ 33 ಸಂಸ್ಥೆಗಳು 55,145.80 ಕೋಟಿ ರೂಪಾಯಿಯ ಐಪಿಒ ಚಂದಾದಾರಿಕೆ ನಡೆಸಿದೆ. ಮುಂದಿನ ವರ್ಷದಲ್ಲಿ ಸುಮಾರು 1.4 ಟ್ರಿಲಿಯನ್ ರೂಪಾಯಿಯ ಐಪಿಒ ನಡೆಯಲಿದೆ.

Year Ender 2022: ಈ ವರ್ಷದ 4 ಅತೀ ದೊಡ್ಡ ಐಪಿಒಗಳುYear Ender 2022: ಈ ವರ್ಷದ 4 ಅತೀ ದೊಡ್ಡ ಐಪಿಒಗಳು

ಕಳೆದ ವರ್ಷದಲ್ಲಿ ಎಲ್‌ಐಸಿ ಐಪಿಒ ಅತೀ ದೊಡ್ಡ ಐಪಿಒ ಆಗಿದೆ. ಅದಾನಿ ವಿಲ್ಮಾರ್ ಲಿಮಿಟೆಡ್ , ಹರಿಓಂ ಪೈಪ್ ಇಂಡಸ್ಟ್ರೀಸ್ ಲಿಮಿಟೆಡ್, ಡೆಲಿವರಿ ಲಿಮಿಟೆಡ್ ಕೂಡಾ ಕಳೆದ ವರ್ಷದ ಪ್ರಮುಖ ಐಪಿಒಗಳು ಆಗಿದೆ. ಮುಂದಿನ ವರ್ಷದ ಪ್ರಮುಖ ಐಪಿಒಗಳ ಬಗ್ಗೆ ಇಲ್ಲಿದೆ ವಿವರ ಮುಂದೆ ಓದಿ....

 ಓಯೋ ಐಪಿಒ

ಓಯೋ ಐಪಿಒ

ಓಯೋ ಎಂದೇ ಪ್ರಸಿದ್ಧವಾಗಿರುವ ಓರವೆಲ್ ಸ್ಟೇಸ್ ಡಿಆರ್‌ಎಚ್‌ಪಿಗೆ ತನ್ನ ಐಪಿಒ ಡ್ರಾಫ್ಟ್ ಅನ್ನು ಸಲ್ಲಿಸಿದೆ. 2021ರ ಅಕ್ಟೋಬರ್‌ನಲ್ಲೇ ಡ್ರಾಫ್ಟ್ ಸಲ್ಲಿಸಲಾಗಿದ್ದು 2022ರಲ್ಲಿ ಐಪಿಒ ಆರಂಭಿಸುವ ಚಿಂತನೆಯನ್ನು ನಡೆಸಿತ್ತು. ಆದರೆ ನಿರಂತರವಾಗಿ ಷೇರುಪೇಟೆಯಲ್ಲಿ ಕರಣಿ ಕುಣಿತ (ಷೇರು ಡೌನ್) ಕಂಡು ಬಂದ ಕಾರಣ ಓಯೋ ತನ್ನ ಐಪಿಒ ಅನ್ನು ಮುಂದೂಡಿದೆ. 2023ರಲ್ಲಿ 8,430 ಕೋಟಿ ಮೌಲ್ಯದ ಐಪಿಒಗಾಗಿ ಸೆಬಿ ಅನುಮೋದನೆಗೆ ಕಾಯುತ್ತಿದೆ.

 ಫ್ಯಾಬ್‌ಇಂಡಿಯಾ ಐಪಿಒ

ಫ್ಯಾಬ್‌ಇಂಡಿಯಾ ಐಪಿಒ

ಜನಪ್ರಿಯ ಬಟ್ಟೆ ಬ್ರ್ಯಾಂಡ್ ಆದ ಫ್ಯಾಬ್‌ಇಂಡಿಯಾ ಸುಮಾರು 4,000 ಕೋಟಿ ರೂಪಾಯಿಯ ಐಪಿಒ ಅನ್ನು 2023ರಲ್ಲಿ ಆರಂಭಿಸಲಿದೆ. ಸೆಬಿ ಅನುಮೋದನೆ, ಮಾರುಕಟ್ಟೆ ಸ್ಥಿತಿ, ಹೂಡಿಕೆದಾರರ ಅಭಿಪ್ರಾಯ, ಬೇರೆ ಪರಿಣಾಮಗಳ ಬಗ್ಗೆ ಚಿಂತನೆ ನಡೆಸಿ ಸಂಸ್ಥೆಯು ಐಪಿಒ ಅನ್ನು ಆರಂಭ ಮಾಡಲಿದೆ ಎಂದು ಫ್ಯಾಬ್‌ಇಂಡಿಯಾ ಸಂಸ್ಥೆಯ ನಿರ್ವಹಣಾ ಅಧಿಕಾರಿ ತಿಳಿಸಿದ್ದಾರೆ.

 ಆಧಾರ್ ಹೌಸಿಂಗ್ ಫೈನಾನ್ಸ್ ಐಪಿಒ
 

ಆಧಾರ್ ಹೌಸಿಂಗ್ ಫೈನಾನ್ಸ್ ಐಪಿಒ

ಆಧಾರ್ ಹೌಸಿಂಗ್ ಫೈನಾನ್ಸ್ 2021ರ ಜನವರಿ 24ರಂದು ಸೆಬಿಗೆ ಐಪಿಒ ಡ್ರಾಫ್ಟ್ ಅನ್ನು ಸಲ್ಲಿಸಿದ್ದು 2022ರ ಮೇ 5ರಂದು ಸಂಸ್ಥೆಗೆ ಸೆಬಿ ಗ್ರೀನ್ ಸಿಗ್ನಲ್ ನೀಡಿದೆ. ಇದರ ಮೊತ್ತ 7,300 ರೂಪಾಯಿ ಆಗಿದೆ. ಹಾಗೆಯೇ ಡಿಸೆಂಬರ್ 12ರವರೆಗೆ ಸೆಬಿಯ ಅನುಮೋದನೆ ಪಡೆದ ಸಂಸ್ಥೆಗಳಲ್ಲಿ ಅಧಿಕ ಮೊತ್ತದ ಐಪಿಒ ಈ ಸಂಸ್ಥೆಯದ್ದಾಗಿದೆ.

 ಯಾತ್ರಾ ಆನ್‌ಲೈನ್ ಐಪಿಒ

ಯಾತ್ರಾ ಆನ್‌ಲೈನ್ ಐಪಿಒ

ಸೆಬಿಯ ಅನುಮೋದನೆ ಪಡೆದ ಮತ್ತೊಂದು ಸಂಸ್ಥೆಯೆಂದರೆ ಯಾತ್ರಾ ಆನ್‌ಲೈನ್ ಆಗಿದೆ. ಇದರ ಐಪಿಒ ಮೊತ್ತ 750 ಕೋಟಿ ರೂಪಾಯಿ ಆಗಿದೆ. ಈ ಸಂಸ್ಥೆಯು ಭಾರತದ ಪ್ರಮುಖ ಪ್ರಯಾಣ ಸೇವೆ ಒದಗಿಸುವ ಸಂಸ್ಥೆಯಾಗಿದೆ. 700 ಕಾರ್ಪೋರೇಟ್ ಕ್ಲೈಂಟ್‌ಗಳನ್ನು ಸಂಸ್ಥೆ ಹೊಂದಿದೆ. 46,000ಕ್ಕೂ ಅಧಿಕ ಎಸ್‌ಎಂಇ ಕ್ಲೈಂಟ್‌ಗಳನ್ನು ಹೊಂದಿದೆ.

 ಮ್ಯಾನ್‌ಕೈಂಡ್ ಫಾರ್ಮಾ ಐಪಿಒ

ಮ್ಯಾನ್‌ಕೈಂಡ್ ಫಾರ್ಮಾ ಐಪಿಒ

ಮ್ಯಾನ್‌ಕೈಂಡ್ ಫಾರ್ಮಾದ ಐಪಿಒ ಮೊತ್ತ 5,500 ಕೋಟಿ ರೂಪಾಯಿ ಆಗಿದೆ. ಸ್ಥಳೀಯ ಫಾರ್ಮಾ ಸಂಸ್ಥೆಗಳ ಪೈಕಿ ಈ ಸಂಸ್ಥೆಯ ಐಪಿಒನೆ ಅತೀ ದೊಡ್ಡ ಐಪಿಒ ಆಗಲಿದೆ. ಈ ಸಂಸ್ಥೆಯಲ್ಲಿ ಸಾಮಾನ್ಯ ಔಷಧಿಗಳು ಸೇರಿದಂತೆ, ಪ್ರೆಗ ನ್ಯೂಸ್ ಕಿಟ್, ಮ್ಯಾನ್‌ಫೊರ್ಸ್ ಕಾಂಡಮ್, ಗ್ಯಾಸ್-ಒ-ಫಾಸ್ಟ್ ಆಯೂರ್ವೇದಿಕ್ ಔಷಧಿ, ಅಕ್ನೆಸ್ಟಾರ್ ಅನ್ನು ಕೂಡಾ ಉತ್ಪಾದಿಸುತ್ತದೆ. "ನಾವು ಸ್ಥಳೀಯ ಭಾರತೀಯ ಮಾರುಕಟ್ಟೆಯ ಮೇಲೆ ಅಧಿಕ ಗಮನವನ್ನು ಹರಿಸಿದ್ದೇವೆ," ಎಂದು ಸಂಸ್ಥೆಯು ಹೇಳಿದೆ. ಭಾರತ ಹೊರತಾಗಿ ಯುಎಸ್‌, ಬಾಂಗ್ಲಾದೇಶ, ಶ್ರೀಲಂಕಾ, ನೇಪಾಳದಲ್ಲಿ ಕೂಡಾ ಮ್ಯಾನ್‌ಕೈಂಡ್ ಫಾರ್ಮಾ ಉತ್ಪಾದನೆಗಳನ್ನು ಮಾಡುತ್ತದೆ. ಮಾರ್ಚ್‌ 31ರ ಕೊನೆಯಲ್ಲಿ 7,781.5 ಕೋಟಿ ರೂಪಾಯಿ ಆದಾಯವಿದೆ. ಕಳೆದ ಹಣಕಾಸು ವರ್ಷದಲ್ಲಿ 6,214.4 ಕೋಟಿ ರೂಪಾಯಿ ಆದಾಯವನ್ನು ಹೊಂದಿತ್ತು.

 ಇಝೀಗೋ ಐಪಿಒ

ಇಝೀಗೋ ಐಪಿಒ

ಇಝೀಗೋ ಪ್ರಮುಖ ಟ್ರಾವೆಲ್ ಪೋರ್ಟಲ್ ಆಗಿದೆ. ಸಂಸ್ಥೆಯ ಐಪಿಒ ಮೊತ್ತ 1,600 ಕೋಟಿ ರೂಪಾಯಿ ಆಗಿದೆ. ಇಝೀಗೋ ಲಾಭದಾಯಕ ಸಂಸ್ಥೆಯಾಗಿದೆ ಎಂದು ಸಂಸ್ಥೆಯ ಸಿಇಒ, ಸಹ ಸಂಸ್ಥಾಪಕ ಅಲೋಕ್ ಹೇಳಿದ್ದಾರೆ. ಹಣಕಾಸು ವರ್ಷ 2023ರ ಮೊದಲ ತ್ರೈಮಾಸಿಕದಲ್ಲಿ ನಮ್ಮ ನಿವ್ವಳ ಆದಾಯ 8.7 ಕೋಟಿ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿಯೂ ಉತ್ತಮ ಆದಾಯವನ್ನು ಪಡೆಯುವ ಸಿದ್ಧತೆಯಲ್ಲಿ ನಾವಿದ್ದೇವೆ," ಎಂದು ತಿಳಿಸಿದ್ದಾರೆ. 2007ರಲ್ಲಿ ಇಝೀಗೋ ಆರಂಭವಾಗಿದ್ದು, ಇದು ಭಾರತದ ಗ್ರಾಹಕರು ರೈಲ್ವೆ, ವಿಮಾನ, ಬಸ್, ಹೊಟೇಲ್ ಬುಕ್ಕಿಂಗ್‌ಗೆ ಗ್ರಾಹಕರಿಗೆ ಸಹಾಯ ಮಾಡುತ್ತದೆ.

English summary

Year Ender 2022: 89 IPOs in 2023, Details in Kannada

Year Ender 2022: In the year 2022, the Indian Capital Market witnessed multiple IPO. 89 IPOs to come in 2023, here;s most important IPOs Of 2023, Details in Kannada.
Story first published: Monday, December 19, 2022, 12:44 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X