For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ 200 ಕೋಟಿ ಹಗರಣ: HDIL ರಾಕೇಶ್ ವಾಧ್ವಾನ್, ಸಾರಂಗ್ ವಾಧ್ವಾನ್ ವಿರುದ್ಧ ಸಿಬಿಐ ಪ್ರಕರಣ

|

ಯೆಸ್ ಬ್ಯಾಂಕ್ ನಲ್ಲಿ ನಡೆದಿದೆ ಎನ್ನಲಾದ 200 ಕೋಟಿ ರುಪಾಯಿ ವಂಚನೆ ಆರೋಪದಲ್ಲಿ ಎಚ್ ಡಿಐಎಲ್ ಪ್ರವರ್ತಕರಾದ ರಾಕೇಶ್ ವಾಧ್ವಾನ್, ಸಾರಂಗ್ ವಾಧ್ವಾನ್, ಇತರ ನಿರ್ದೇಶಕರು, ಸಂಸ್ಥೆಯ ಲೆಕ್ಕ ಪರಿಶೋಧಕರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಪ್ರಕರಣ ದಾಖಲಿಸಿದೆ.

 

ಪ್ರಕರಣ ದಾಖಲಾದ ನಂತರ ರಾಕೇಶ್ ವಾಧ್ವಾನ್ ಮತ್ತು ಅವರ ಮಗ ಸಾರಂಗ್ ವಾಧ್ವಾನ್ ರ ಮುಂಬೈನಲ್ಲಿರುವ ಮನೆಗಳಲ್ಲಿ ಸಿಬಿಐನಿಂದ ಶೋಧ ನಡೆಸಲಾಗಿದೆ. ಮುಂಬೈನಲ್ಲಿನ ಇತರ ಒಂಬತ್ತು ಕಡೆಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ. ಅದಲ್ಲಿ ಎಚ್ ಡಿಐಎಲ್ ಗೆ ಸೇರಿದ ಎರಡು ಕಚೇರಿ ಸಹ ಒಳಗೊಂಡಿದೆ ಎಂದು ಹೇಳಲಾಗಿದೆ.

ಯೆಸ್ ಬ್ಯಾಂಕ್ ಕಪೂರ್, ವಾಧ್ವಾನ್ 2200 ಕೋಟಿ ಆಸ್ತಿ ಜಪ್ತಿ ಮಾಡಿದ ಇ.ಡಿ.

ಆರೋಪ ಮಾಡಿರುವ ಪ್ರಕಾರ, ಯೆಸ್ ಬ್ಯಾಂಕ್ ನಿಂದ ಮ್ಯಾಕ್ ಸ್ಟಾರ್ ಎಂಬ ಕಂಪೆನಿಗೆ ಸಾಲ ನೀಡಲಾಗಿದೆ. ಆ ಕಂಪೆನಿಯಲ್ಲಿ ಎಚ್ ಡಿಐಎಲ್ ಗೆ ಸ್ವಲ್ಪ ಪ್ರಮಾಣದ ಷೇರಿದೆ. ಯೆಸ್ ಬ್ಯಾಂಕ್ ನಿಂದ ಮ್ಯಾಕ್ ಸ್ಟಾರ್ ಗೆ ವರ್ಗಾವಣೆಯಾದ ಸಾಲದ ಹಣವನ್ನು ಆ ನಂತರ ಕಂಪೆನಿಯು ಎಚ್ ಡಿಐಎಲ್ ಸಮೂಹದ ಕಂಪೆನಿಗಳ ಖಾತೆಗೆ ವರ್ಗಾವಣೆ ಮಾಡಿದೆ.

ಯೆಸ್ ಬ್ಯಾಂಕ್ ಹಗರಣ: ರಾಕೇಶ್, ಸಾರಂಗ್ ವಾಧ್ವಾನ್ ಮೇಲೆ CBI ಪ್ರಕರಣ

ಯೆಸ್ ಬ್ಯಾಂಕ್ ಗೆ ಸಾಲ ಮರುಪಾವತಿಸಲು ಹೀಗೆ ಹಣ ವರ್ಗಾಯಿಸಿದ್ದಾಗಿ ತಿಳಿಸಿದೆ ಎಂದು ಹೇಳಲಾಗಿದೆ. ಆದರೆ ಸಾರಂಗ್ ವಾಧ್ವಾನ್ ಅವರು ಇದನ್ನು ನಿರಾಕರಿಸಿದ್ದಾರೆ. ಯಾವುದೇ ತಪ್ಪಾದ ವ್ಯವಹಾರ ನಡೆಸಿಲ್ಲ ಎಂದಿದ್ದಾರೆ.

English summary

Yes Bank 200 Crore Loan Scam: CBI Books HDIL Promotors

CBI books HDIL promotors in 200 crore Yes bank loan scam. Here is the details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X