For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ನಿಂದ ಆಯ್ದ ಠೇವಣಿಗಳ ಮೇಲೆ 7% ಬಡ್ಡಿ ದರ ಪಾವತಿ

|

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ), ಐಸಿಐಸಿಐ, ಎಚ್ ಡಿಎಫ್ ಸಿ, ಆಕ್ಸಿಸ್, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಇತರ ಬ್ಯಾಂಕ್ ಗಳು ನಿಶ್ಚಿತ ಠೇವಣಿ (ಎಫ್.ಡಿ.) ಮೇಲೆ 5ರಿಂದ 6% ಬಡ್ಡಿ ನೀಡುತ್ತವೆ. ಆದರೆ ಈಗಲೂ ಕೆಲವು ಬ್ಯಾಂಕ್ ಗಳು ಎಫ್.ಡಿ. ಮೇಲೆ 7% ಅಥವಾ ಅದಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡುತ್ತವೆ.

ಇಂಡಸ್ ಇಂಡ್ ಬ್ಯಾಂಕ್ ಮತ್ತು ಯೆಸ್ ಬ್ಯಾಂಕ್ ನಿಂದ 7 ಪರ್ಸೆಂಟ್ ತನಕ ಅಥವಾ ಅದಕ್ಕಿಂತ ಹೆಚ್ಚು ಬಡ್ಡಿಯನ್ನು ನೀಡಲಾಗುತ್ತದೆ. ಸಾರ್ವಜನಿಕರು ಮಾಡಿದ 2 ಕೋಟಿ ರುಪಾಯಿ ತನಕದ ಠೇವಣಿಗೆ ಯೆಸ್ ಬ್ಯಾಂಕ್ ನಿಂದ 5ರಿಂದ 7% ಬಡ್ಡಿ ನೀಡುತ್ತದೆ. 7ರಿಂದ 45 ದಿನಗಳ ಅವಧಿಗೆ 5% ಹಾಗೂ 46ರಿಂದ 90 ದಿನಗಳ ಅವಧಿಗೆ 5.5% ಬಡ್ಡಿ ನೀಡಲಾಗುತ್ತದೆ.

ಪರ್ಸನಲ್ ಲೋನ್ ಕಡಿಮೆ ಬಡ್ಡಿದರಕ್ಕೆ ನೀಡುವ ಟಾಪ್ 10 ಬ್ಯಾಂಕ್ ಗಳಿವುಪರ್ಸನಲ್ ಲೋನ್ ಕಡಿಮೆ ಬಡ್ಡಿದರಕ್ಕೆ ನೀಡುವ ಟಾಪ್ 10 ಬ್ಯಾಂಕ್ ಗಳಿವು

3 ತಿಂಗಳಿಂದ 6 ತಿಂಗಳಿಗಿಂತ ಕಡಿಮೆ ಅವಧಿಗೆ 6%, ಆ ನಂತರ 6ರಿಂದ 9 ತಿಂಗಳಿಗಿಂತ ಕಡಿಮೆ ಅವಧಿಗೆ 6.50%, ದೀರ್ಘಾವಧಿಗೆ ಠೇವಣಿ ಮಾಡಿದರೆ (ಒಂದರಿಂದ ಹತ್ತು ವರ್ಷದ ಅವಧಿಗೆ) 6.75% ಬಡ್ಡಿ ದರ ನೀಡಲಾಗುತ್ತದೆ. 2ರಿಂದ 3 ವರ್ಷಗಳ ಆವಧಿಗೆ ಯೆಸ್ ಬ್ಯಾಂಕ್ ನಿಂದ 7% ಬಡ್ಡಿ ಸಿಗುತ್ತದೆ. ಹಿರಿಯ ನಾಗರಿಕರಿಕರಿಗೆ ಈ ಎಲ್ಲ ಎಫ್.ಡಿ. ದರದ ಮೇಲೆ ಹೆಚ್ಚುವರಿಯಾಗಿ 75 ಬೇಸಿಸ್ ಪಾಯಿಂಟ್ ದೊರೆಯುತ್ತದೆ.

ಯೆಸ್ ಬ್ಯಾಂಕ್ ನಿಂದ ಆಯ್ದ ಠೇವಣಿಗಳ ಮೇಲೆ 7% ಬಡ್ಡಿ ದರ ಪಾವತಿ

ಹಿರಿಯ ನಾಗರಿಕರಿಗೆ ಸದ್ಯಕ್ಕೆ ಯೆಸ್ ಬ್ಯಾಂಕ್ ನಲ್ಲಿ ಎಫ್.ಡಿ. ದರವು 5.50%ನಿಂದ 7.75% ತನಕ ದೊರೆಯುತ್ತಿದೆ. ಈ ದರವು ಜುಲೈ 6ರಿಂದ ಜಾರಿಗೆ ಬಂದಿದೆ. ಅವಧಿಗೆ ಪೂರ್ವ ವಿಥ್ ಡ್ರಾ ಮಾಡಿದಲ್ಲಿ 181 ದಿನಗಳೊಳಗೆ ಅಥವಾ ಅದಕ್ಕಿಂತ ಮುಂಚೆ ತೆಗೆದುಕೊಂಡಲ್ಲಿ ಯಾವುದೇ ಕಡಿತ ಇರುವುದಿಲ್ಲ. 182 ದಿನ ಅದಕ್ಕೆ ಮೇಲ್ಪಟ್ಟು ಅವಧಿ ಪೂರ್ವ ವಿಥ್ ಡ್ರಾಗೆ 0.50% ಕಡಿತವಾಗುತ್ತದೆ.

English summary

Yes Bank Offers 7 Percent Interest On Selected Fixed Deposits

Now, Yes bank offering 7% interest rate on selected deposits. Here is the complete details.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X