For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಗ್ರಾಹಕರಿಗೆ ಸಿಹಿ ಸುದ್ದಿ, ವಿತ್‌ಡ್ರಾ ಮಿತಿ ಬುಧವಾರಕ್ಕೆ ಕೊನೆ

|

ಆರ್ಥಿಕ ಮುಗ್ಗಟ್ಟಿನಿಂದಾಗಿ ಆರ್‌ಬಿಐನಿಂದ ನಿಯಂತ್ರಣಕ್ಕೆ ಒಳಪಟ್ಟಿದ್ದ ಯೆಸ್‌ ಬ್ಯಾಂಕ್ ನಲ್ಲಿ ಗ್ರಾಹಕರ ವಿತ್‌ಡ್ರಾ ಮೇಲಿನ ಮಿತಿಯನ್ನು ಬುಧವಾರ (ಮಾರ್ಚ್ 18) ಸಂಜೆ 6ಗಂಟೆಯೊಳಗೆ ತೆಗೆದುಹಾಕಲಾಗುವುದು ಎಂದು ಹಣಕಾಸು ಸಚಿವಾಲಯ ಹೇಳಿದೆ.

ಯೆಸ್ ಬ್ಯಾಂಕ್‌ ಪಾಲು ಖರೀದಿಸುವ ಯೋಜನೆಗೆ ಸಚಿವ ಸಂಪುಟ ಅಸ್ತುಯೆಸ್ ಬ್ಯಾಂಕ್‌ ಪಾಲು ಖರೀದಿಸುವ ಯೋಜನೆಗೆ ಸಚಿವ ಸಂಪುಟ ಅಸ್ತು

ಯೆಸ್‌ ಬ್ಯಾಂಕ್ ಪುನಶ್ಚೇತನ ಯೋಜನೆಯಂತೆ ಮುಂದಿನ ಮೂರು ಕಚೇರಿ ಕಾರ್ಯನಿರ್ವಹಣೆ ದಿನಗಳೊಳಗೆ(ವರ್ಕಿಂಗ್ ಡೇ) ಹಣದ ವಿತ್‌ಡ್ರಾ ಮಿತಿಯನ್ನು ತೆಗೆದುಹಾಕಲು ಹಣಕಾಸು ಸಚಿವಾಲಯ ನಿರ್ಧರಿಸಿದೆ.

ಯೆಸ್ ಬ್ಯಾಂಕ್ ಹಣ ವಿತ್‌ಡ್ರಾ ಮಿತಿ ಬುಧವಾರಕ್ಕೆ ಮುಕ್ತಾಯ

ಆರ್ಥಿಕ ಸಂಕಷ್ಟ ಮತ್ತು ಅದರ ವ್ಯವಸ್ಥಾಪಕರ ಮೇಲೆ ಕೇಳಿಬಂದ ಹಗರಣ ಆರೋಪ ಹಿನ್ನೆಲೆಯಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಈ ತಿಂಗಳ ಆರಂಭದಲ್ಲಿ ಯೆಸ್ ಬ್ಯಾಂಕ್ ನ ಚಟುವಟಿಕೆಗಳಿಗೆ ತಾತ್ಕಾಲಿಕ ನಿಷೇಧ ಹೇರಿತ್ತು. ಏಪ್ರಿಲ್ 3ರವರೆಗೆ ವಿತ್‌ಡ್ರಾ ಮಿತಿ ಹೇರಿತ್ತು. ಆದರೆ ಇನ್ನು ಮೂರು ದಿನಗಳಲ್ಲಿ ಸಹಜ ಸ್ಥಿತಿಗೆ ತರಲಾಗುವುದು ಎಂದು ಸರ್ಕಾರ ನಿನ್ನೆ ಹೊರಡಿಸಿರುವ ಅಧಿಸೂಚನೆಯಲ್ಲಿ ತಿಳಿಸಿದೆ.

ಯೆಸ್‌ ಬ್ಯಾಂಕ್‌ ಪುನರ್‌ರಚನಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಶುಕ್ರವಾರವಷ್ಟೇ (ಮಾರ್ಚ್‌ 14)ರಂದು ಅನುಮೋದನೆ ನೀಡಿತ್ತು. ಅಲ್ಲದೆ ಇತ್ತೀಚೆಗಷ್ಟೇ ಗ್ರಾಹಕರು ಇತರೆ ಬ್ಯಾಂಕ್ ಖಾತೆಯ ಮೂಲಕ ಯೆಸ್‌ ಬ್ಯಾಂಕ್‌ಗೆ IMPS/NEFT ಮೂಲಕ ಪಾವತಿಸಬೇಕಿರುವ ಹಣವನ್ನು ವರ್ಗಾಯಿಸಬಹುದು ಎಂದು ಬ್ಯಾಂಕ್ ತಿಳಿಸಿದೆ.

English summary

Yes Bank Withdraw Limit Will End On Wednesday 6PM

Relief For Yes Bank Customers as withdrawal limit to end on wednesday
Story first published: Saturday, March 14, 2020, 19:05 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X