For Quick Alerts
ALLOW NOTIFICATIONS  
For Daily Alerts

ಐಪಿಒಗೂ ಮುನ್ನವೇ ಸಾರ್ವಜನಿಕ ನಿಯಮಿತ ಸಂಸ್ಥೆಯಾಗಿ ಜೋಮ್ಯಾಟೋ

|

ಐಪಿಒ ಬಿಡುಗಡೆಗೂ ಮುನ್ನವೇ ಜೋಮ್ಯಾಟೋ ಕಂಪನಿಯ ಹಿಡುವಳಿ ಘಟಕ(holding unit)ನ್ನು ಖಾಸಗಿ ಕಂಪನಿಯಿಂದ ಸಾರ್ವಜನಿಕ ನಿಯಮಿತ ಕಂಪನಿ(Public Limited Compnay) ಯಾಗಿ ಪರಿವರ್ತಿಸಲಾಗಿದೆ.

 

ವಿಶೇಷ ತಿದ್ದುಪಡಿ ಬಳಸಿ ಈ ನಿರ್ಣಯ ತೆಗೆದುಕೊಂಡಿರುವ ಜೋಮ್ಯಾಟೋ ಏಪ್ರಿಲ್ 9 ರಂದೇ ಜೋಮ್ಯಾಟೋ ಲಿಮಿಟೆಡ್ ಆಗಿ ಪರಿವರ್ತನೆಗೊಂಡಿದ್ದು, ಈ ಬಗ್ಗೆ ಬಿಎಸ್ಇಗೆ ತಿಳಿಸಲು ಮುಂದಾಗಿದೆ.

 

ಕಂಪೆನಿಗಳ ಕಾಯ್ದೆ 2013ರ ಅನ್ವಯ ಸಾರ್ವಜನಿಕ ನಿಯಮಿತ ಸಂಸ್ಥೆಗಳು ಮಾತ್ರ ಯಾವುದೇ ಷೇರು ಮಾರುಕಟ್ಟೆ ಲಿಸ್ಟಿಂಗ್‌ನಲ್ಲಿ ಕಾಣಿಸಿಕೊಳ್ಳಬಹುದು. ಕಾನೂನು ಮಾನದಂಡಗಳನ್ನು ಅನುಸರಿಸಲು ಬೇಕಾದ ಸೂಕ್ತ ನಿರ್ಣಯಗಳನ್ನು ತೆಗೆದುಕೊಂಡಿರುವ ಜೋಮ್ಯಾಟೋ ''ಲಿಮಿಟೆಡ್'' ಸಂಸ್ಥೆ ಎನಿಸಿಕೊಂಡಿದೆ.

ಐಪಿಒಗೂ ಮುನ್ನವೇ ಸಾರ್ವಜನಿಕ ನಿಯಮಿತ ಸಂಸ್ಥೆಯಾಗಿ ಜೋಮ್ಯಾಟೋ

ಬರಿ ಕಂಪನಿಯ ಸ್ವರೂಪ ಬದಲಾಗಿಲ್ಲ, ಜೊತೆಗೆ 44,30,60,73,250 ಈಕ್ವಿಟಿ ಷೇರುಗಳನ್ನು ಷೇರುದಾರರಿಗೆ ಹಂಚಿಕೆ ಮಾಡಿದೆ. ಜೊತೆಗೆ 6699:1 ಅನುಪಾತದಲ್ಲಿ ಬೋನಸ್ ಷೇರುಗಳ ರೂಪದಲ್ಲಿ 247,60,30,788 ಈಕ್ವಿಟಿ ಷೇರು ಹಂಚಿಕೆಯಾಗಿದೆ.

ಐಪಿಒ ಪ್ರಕ್ರಿಯೆ ನಡೆಸಲು ಕೋಟಕ್ ಮಹೀಂದ್ರಾ ಬ್ಯಾಂಕ್, ಮಾರ್ಗನ್ ಸ್ಟ್ಯಾನಿ, ಸಿಟಿ ಬ್ಯಾಂಕ್, ಕ್ರೆಡಿಟ್ ಸೂಸೆ ಹಾಗೂ ಬ್ಯಾಂಕ್ ಆಫ್ ಅಮೆರಿಕಗಳನ್ನು ಬ್ಯಾಂಕರ್‌ಗಳಾಗಿ ಆಯ್ಕೆ ಮಾಡಲಾಗಿದೆ.

English summary

Zomato becomes public limited company Ahead of IPO

Zomato’s public listing is around the corner as company’s holding entity has been converted from a private company to a public limited company, regulatory filings show.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X