For Quick Alerts
ALLOW NOTIFICATIONS  
For Daily Alerts

5 ವರ್ಷದ ಅವಧಿಗೆ 10 ಅತ್ಯುತ್ತಮ ಬಡ್ಡಿ ಸಿಗುವ ಎಫ್‌ಡಿ ಯೋಜನೆಗಳು

|

ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಮೂಲಕ ಆದಾಯ ಗಳಿಸಿ ಜೀವನ ಸಾಗಿಸುತ್ತಿದ್ದವರಿಗೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ನಿರಾಸೆಯಾಗಿದೆ. ಏಕೆಂದರೆ ಇತ್ತೀಚಿನ ಕೆಲವು ತಿಂಗಳುಗಳಲ್ಲಿ ಬ್ಯಾಂಕುಗಳಲ್ಲಿ ಬಡ್ಡಿದರಗಳು ತೀವ್ರ ಕುಸಿತ ದಾಖಲಿಸಿವೆ. ಪ್ರಮುಖವಾಗಿ ಸರ್ಕಾರಿ ಮತ್ತು ಖಾಸಗಿಯ ಬಹುತೇಕ ಬ್ಯಾಂಕುಗಳು ವಾರ್ಷಿಕ ಬಡ್ಡಿದರವನ್ನು ಇಳಿಕೆ ಮಾಡಿವೆ. ಇಂತಹ ಸಂದರ್ಭದಲ್ಲಿ ಎಲ್ಲಿ ಹೆಚ್ಚು ಬಡ್ಡಿ ಸಿಗಬಹುದು ಎಂದು ಹುಡುಕುತ್ತಿದ್ದವರಿಗೆ ಇಲ್ಲಿದೆ ಮಾಹಿತಿ.

ನಿಮ್ಮ ಅನುಕೂಲತೆ ಮತ್ತು ಬಡ್ಡಿ ದರದ ಆಧಾರದ ಮೇಲೆ ನೀವು ಎಫ್‌ಡಿಯಲ್ಲಿ ಹಣವನ್ನು ಠೇವಣಿ ಮಾಡಬಹುದು. ಉಳಿತಾಯ ಖಾತೆಗೆ ಹೋಲಿಸಿದರೆ ನಿಮ್ಮ ಠೇವಣಿಯ ಮೇಲೆ ಹೆಚ್ಚಿನ ಬಡ್ಡಿದರವನ್ನು ಪಡೆಯಬಹುದು. ಬ್ಯಾಂಕುಗಳಲ್ಲದೆ, ಬ್ಯಾಂಕೇತರ ಹಣಕಾಸು ಕಂಪನಿಗಳು (ಎನ್‌ಬಿಎಫ್‌ಸಿ), ಕಾರ್ಪೊರೇಟ್ ಕಂಪನಿಗಳು ಮತ್ತು ಸಣ್ಣ ಹಣಕಾಸು ಬ್ಯಾಂಕುಗಳು ಸಹ ಎಫ್‌ಡಿ ಆಯ್ಕೆಗಳನ್ನು ನೀಡುತ್ತವೆ.

ಐದು ವರ್ಷಗಳ ಅವಧಿಗೆ ಸಾಮಾನ್ಯ ನಾಗರಿಕರಿಗೆ ಮತ್ತು ಹಿರಿಯ ನಾಗರಿಕರಿಗೆ ಸಿಗಲಿರುವ 10 ಅತ್ಯುತ್ತಮ ಬಡ್ಡಿ ನೀಡುವ ಫಿಕ್ಸೆಡ್ ಡೆಪಾಸಿಟ್ ಯೋಜನೆಗಳು ಯಾವುವು ಎಂಬುದನ್ನ ಈ ಕೆಳಗೆ ತಿಳಿಯಿರಿ.

5 ವರ್ಷಗಳ ಅವಧಿಗೆ ಉತ್ತಮ ಬಡ್ಡಿ ನೀಡುವ ಖಾಸಗಿ ವಲಯದ ಬ್ಯಾಂಕುಗಳು

5 ವರ್ಷಗಳ ಅವಧಿಗೆ ಉತ್ತಮ ಬಡ್ಡಿ ನೀಡುವ ಖಾಸಗಿ ವಲಯದ ಬ್ಯಾಂಕುಗಳು

ಖಾಸಗಿ ವಲಯದ ಪ್ರಮುಖ ಬ್ಯಾಂಕುಗಳಲ್ಲಿ, ಆರ್‌ಬಿಎಲ್‌ ಮತ್ತು ಡಿಸಿಬಿ ಬ್ಯಾಂಕ್ ಮತ್ತು ಯೆಸ್‌ ಬ್ಯಾಂಕ್ ಪ್ರಸ್ತುತ ಐದು ವರ್ಷಗಳ ನಿಶ್ಚಿತ ಠೇವಣಿಗಳ ಮೇಲೆ ಉತ್ತಮ ಬಡ್ಡಿದರಗಳನ್ನು ನೀಡುತ್ತಿವೆ. ಐದು ವರ್ಷದ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರ ನೀಡುವ ಟಾಪ್ 10 ಖಾಸಗಿ ವಲಯದ ಬ್ಯಾಂಕುಗಳು ಇಲ್ಲಿವೆ.

ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರಗಳು:

ಆರ್‌ಬಿಎಲ್‌ ಬ್ಯಾಂಕ್ 50%, 7.00%
ಡಿಸಿಬಿ ಬ್ಯಾಂಕ್: 6.50%, 7.00%
ಯೆಸ್ ಬ್ಯಾಂಕ್: 6.25%, 7.00%
ಇಂಡಸ್‌ಇಂಡ್ ಬ್ಯಾಂಕ್: 6.00%, 6.50%
ಐಡಿಎಫ್‌ಸಿ ಫಸ್ಟ್‌ ಬ್ಯಾಂಕ್: 5.75%, 6.25%
ಆ್ಸಕ್ಸಿಸ್ ಬ್ಯಾಂಕ್: 5.40%, 5.90%
ಐಸಿಐಸಿಐ ಬ್ಯಾಂಕ್: 5.35%, 5.85%
ಎಚ್‌ಡಿಎಫ್‌ಸಿ ಬ್ಯಾಂಕ್: 5.30%, 5.80%
ಬಂಧನ್ ಬ್ಯಾಂಕ್: 5.25%, 6.00%
ಕೋಟಕ್ ಮಹೀಂದ್ರಾ ಬ್ಯಾಂಕ್: 5.25%, 5.75%

 

5 ವರ್ಷಗಳ ಅವಧಿಗೆ ಉತ್ತಮ ಬಡ್ಡಿ ನೀಡುವ ಸಾರ್ವಜನಿಕ ವಲಯದ ಬ್ಯಾಂಕುಗಳು:

5 ವರ್ಷಗಳ ಅವಧಿಗೆ ಉತ್ತಮ ಬಡ್ಡಿ ನೀಡುವ ಸಾರ್ವಜನಿಕ ವಲಯದ ಬ್ಯಾಂಕುಗಳು:

5 ವರ್ಷಗಳ ನಿಶ್ಚಿತ ಠೇವಣಿಗಳ ಮೇಲೆ ಬಡ್ಡಿದರಗಳನ್ನು ನೀಡುವ ವಿಷಯದಲ್ಲಿ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕೆನರಾ ಬ್ಯಾಂಕ್ ಸಾರ್ವಜನಿಕ ವಲಯದ ಉನ್ನತ ಬ್ಯಾಂಕುಗಳಲ್ಲಿ ಸೇರಿವೆ. ಪ್ರಸ್ತುತ 5 ವರ್ಷದ ನಿಶ್ಚಿತ ಠೇವಣಿಗಳ ಮೇಲೆ ಹೆಚ್ಚಿನ ಲಾಭವನ್ನು ನೀಡುವ ಅಗ್ರ 10 ವಾಣಿಜ್ಯ ಬ್ಯಾಂಕುಗಳನ್ನು ಕೆಳಗೆ ತಿಳಿಸಲಾಗಿದೆ.

ಸಣ್ಣ ಹಣಕಾಸು ಬ್ಯಾಂಕುಗಳು

ಸಣ್ಣ ಹಣಕಾಸು ಬ್ಯಾಂಕುಗಳು

ಠೇವಣಿದಾರರು ಸಾಮಾನ್ಯವಾಗಿ ಸಾಮಾನ್ಯ ನಾಗರಿಕರು ಮತ್ತು ಹಿರಿಯ ನಾಗರಿಕರು ಸೇರಿದಂತೆ ಎರಡು ವಿಧಗಳನ್ನು ಹೊಂದಿರುತ್ತಾರೆ. ಈ ಸಮಯದಲ್ಲಿ, ದೊಡ್ಡ ಬ್ಯಾಂಕುಗಳಲ್ಲಿನ ಎಫ್‌ಡಿಗಳ ಮೇಲಿನ ಬಡ್ಡಿದರಗಳು ಉತ್ತಮವಾಗಿಲ್ಲ. ಆದರೆ ಕೆಲವು ಸಣ್ಣ ಬ್ಯಾಂಕುಗಳು ಇನ್ನೂ ಉತ್ತಮ ಬಡ್ಡಿದರಗಳನ್ನು ನೀಡುತ್ತಿವೆ.

ಉಜ್ಜೀವನ್ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಮತ್ತು ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್ ಪ್ರಸ್ತುತ ಐದು ವರ್ಷದ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ಭರವಸೆ ನೀಡುತ್ತಿವೆ. 5 ವರ್ಷದ ಸ್ಥಿರ ಠೇವಣಿಗಳ ಮೇಲೆ ಹೆಚ್ಚಿನ ಬಡ್ಡಿದರಗಳನ್ನು ನೀಡುತ್ತಿರುವ ಟಾಪ್ 10 ಸಣ್ಣ ಹಣಕಾಸು ಬ್ಯಾಂಕುಗಳು ಯಾವುವು ಎಂಬುದನ್ನ ಮುಂದೆ ತಿಳಿಯಿರಿ

ಸಾಮಾನ್ಯ ಹಾಗೂ ಹಿರಿಯ ನಾಗರಿಕರಿಗೆ ನೀಡುವ ಬಡ್ಡಿದರಗಳು:
ಉಜ್ಜೀವನ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್ : 6.75 %, 7.25%
ಜನ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.50%, 7.00%
ನಾರ್ತ್‌ ಈಸ್ಟ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.50%, 7.00%
ಸೂರ್ಯೋದಯ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.25%, 6.50%
ಇಕ್ವಿಟಾಸ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.25%, 6.75%
ಕ್ಯಾಪಿಟಲ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.25%, 6.75%
ಫಿನ್‌ಕೇರ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.25%, 6.75%
ಉತ್ಕರ್ಷ್‌ ಸ್ಮಾಲ್ ಫೈನಾನ್ಸ್ ಬ್ಯಾಂಕ್: 6.00%, 6.50%
ಎಯು ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 6.00%, 6.50%
ಇಎಸ್‌ಎಎಫ್ ಸ್ಮಾಲ್ ಫೈನಾನ್ಸ್‌ ಬ್ಯಾಂಕ್: 5.25%, 5.75%

 

Array

Array

ಸಾರ್ವಜನಿಕ ವಲಯದ ಬ್ಯಾಂಕ್‌ಗಳು:
ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ: 5.50%, 6.00%
ಕೆನರಾ ಬ್ಯಾಂಕ್: 5.40%, 5.90%
ಆ್ಯಕ್ಸಿಸ್ ಬ್ಯಾಂಕ್: 5.40%, 5.90%
ಬ್ಯಾಂಕ್ ಆಫ್ ಇಂಡಿಯಾ: 5.15%, 5.65 %
ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ: 5.10%, 5.60%

ಖಾಸಗಿ ಬ್ಯಾಂಕ್‌ಗಳು:
ಇಂಡಸ್‌ಇಂಡ್ ಬ್ಯಾಂಕ್: 6.50%, 7.00%
ಡಿಸಿಬಿ ಬ್ಯಾಂಕ್: 6.50%, 7.00%
ಆರ್‌ಬಿಎಲ್‌ ಬ್ಯಾಂಕ್: 6.10%, 6.60%
ಯೆಸ್‌ ಬ್ಯಾಂಕ್: 6.00%, 6.50%
ಕರೂರ್ ವೈಶ್ಯ ಬ್ಯಾಂಕ್: 5.50%, 6.00%

 

English summary

10 Best 5 Years Fixed Deposit Scheme For Both Regular & Senior Citizens

Here the details of 10 best 5 years FD for Regular and senior citizens, check latest rates.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X