ಕೇಂದ್ರ ಬಜೆಟ್‌ಗೂ ಮುನ್ನ ನೀವು ಖರೀದಿಸಬಹುದಾದ 15 ಷೇರುಗಳಿವು
ಯಾವುದೇ ಕಂಪನಿಯಲ್ಲಿ ಷೇರು ಮಾಡಬೇಕೆಂದರೆ ಬ್ರೋಕರ್ ಅಥವಾ ಮಧ್ಯವರ್ತಿ ಕಂಪನಿಗಳು ಬೇಕು. ಇಂತಹ ಹತ್ತಾರು ಕಂಪನಿಗಳಲ್ಲಿ 'ಶೇರ್ ಖಾನ್' ಷೇರು ಕಂಪನಿ ಕೂಡ ಒಂದು. 2022-23ನೇ ಸಾಲಿನ ಕೇಂದ್ರ ಬಜೆಟ್ ಮಂಡನೆಗೂ ಮುನ್ನ ಷೇರ್‌ಖಾನ್ ಪೂರ್ವ ವಿಶ್ಲೇಷಣೆ ಮಾಡಿದೆ. ಇದರ ಪ್ರಕಾರ, ಕೇಂದ್ರ ಬಜೆಟ್ 2022-23ರಲ್ಲಿ ಹಣಕಾಸಿನ ಬಲವರ್ಧನೆಯ ಪ್ರಾರಂಭವನ್ನು ಗುರುತಿಸುತ್ತದೆ. ಜೊತೆಗೆ ಆದಾಯ ಸಂಗ್ರಹಣೆಗೆ ಒತ್ತು ನೀಡಿ ಹೆಚ್ಚಿನ ಕೊರತೆಯನ್ನು ತಪ್ಪಿಸಲು ಕಾರ‌್ಯ ತಂತ್ರ ರೂಪಿಸುತ್ತದೆ.
ಚಿನ್ನದ ಬೆಲೆ ಇಳಿಕೆ: ಜನವರಿ 27ರ ದರ ತಿಳಿದುಕೊಳ್ಳಿ
ಕೇಂದ್ರ ಬಜೆಟ್‌ಗಿಂತ ಮುನ್ನ ಖರೀದಿಸಬೇಕಾದ ಷೇರುಗಳಿವು: ಶೇರ್ಖಾನ್ ತನ್ನ ಬಜೆಟ್ ಪೂರ್ವವೀಕ್ಷಣೆಯಲ್ಲಿ ಕೆಲವೊಂದು ಷೇರ್ ಆಯ್ಕೆಗಳನ್ನು ಗುರುತಿಸಿದೆ. ಅಂತಹ 15 ಷೇರುಗಳು ಯಾವುವೆಂದರೆ- ಐಸಿಐಸಿಐ ಬ್ಯಾಂಕ್, ಎಸ್‌ಬಿಐ, ಎಚ್‌ಡಿಎಫ್ ಸಿ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್, ಥರ್ಮ್ಯಾಕ್ಸ್, ಟಾಟಾ ಪವರ್ ಲಿ., ಭಾರತ್ ಎಲೆಕ್ಟ್ರಾನಿಕ್ಸ್ ಲಿ., ಟಾಟಾ ಮೋಟಾರ್ಸ್, ಅಲ್ಟ್ರಾಟೆಕ್, ಎಂ ಅಂಡ್ ಎಂ, ಡಿಎಲ್‌ಎಫ್, ಪವರ್ ಗ್ರಿಡ್, ಎಚ್‌ಸಿಜಿ, ಗ್ಲೋಬಸ್ ಸ್ಪಿರಿಟ್ಸ್.
ಕಾಫಿ, ಅಡಿಕೆ, ಮೆಣಸು ಹಾಗೂ ಏಲಕ್ಕಿ ಜನವರಿ 27ರ ಪೇಟೆ ಧಾರಣೆ

ಏಕೆ ಈ ಷೇರು ಖರೀದಿ?
ಕೇಂದ್ರ ಬಜೆಟ್‌ಗಿಂತ ಮುಂಚಿತವಾಗಿ ಈ ಷೇರುಗಳನ್ನು ಏಕೆ ಖರೀದಿಸಬೇಕು ಎಂಬುದಕ್ಕೆ ಶೇರ್‌ಖಾನ್ ಕಂಪನಿ ಯಾವುದೇ ನಿರ್ದಿಷ್ಟ ಕಾರಣವನ್ನು ನೀಡಿಲ್ಲ. ಆದರೆ, ಮೇಲೆ ತಿಳಿಸಿರುವ ಷೇರುಗಳು ಉತ್ತಮ ಗುಣಮಟ್ಟದ ಮೂಲಕ ಹೆಸರುಗಳಾಗಿವೆ. ಹಲವು ಕಂಪನಿಗಳು ಕೂಡ ಇವುಗಳನ್ನೇ ಶಿಫಾರಸು ಮಾಡುತ್ತದೆ ಎಂಬ ಅಂಶವನ್ನು ತಿಳಿಸಲಾಗಿದೆ. ಆದರೂ, ಕಳೆದ 1 ವರ್ಷದಲ್ಲಿ ಐಸಿಐಸಿಐ ನಂತಹ ಬ್ಯಾಂಕ್‌ಗಳ ಕೆಲವು ಷೇರುಗಳು ನಿರಂತರವಾಗಿ ಹೆಚ್ಚಳ ಆಗುವತ್ತ ಸಾಗಿವೆ.

ಏಕೀಕರಣ ವ್ಯವಸ್ಥೆ ಬಾಂಡ್ ಮಾರುಕಟ್ಟೆಗೆ ಉತ್ತಮ ಮಾರ್ಗ
ಸದ್ಯ ಕೊರೊನಾ ಕಾರಣದಿಂದ ವ್ಯಾಪಾರ ವಹಿವಾಟುಗಳಿಗೆ ತೊಂದರೆ ಉಂಟಾಗಿದೆ. ಇದರಿಂದ ಹಣಕಾಸಿನ ಕೊರತೆಯೂ ಹೆಚ್ಚಾಗಿದೆ. ಹೀಗಾಗಿ ಆರ್ಥಿಕ ಸ್ಥಿತಿ ದುರ್ಬಲಗೊಂಡಿದೆ. ಸರಕಾರಗಳ ಆದಾಯ ಮೂಲವು ಆಮೆಗತಿಯಲ್ಲಿ ಸಾಗುತ್ತಿದೆ. ಈ ನಿಟ್ಟಿನಲ್ಲಿ ಆರ್ಥಿಕತೆಗೆ ಹೊಸ ಚೈತನ್ಯ ನೀಡುವ ಉದ್ದೇಶದಿಂದ ಕೇಂದ್ರ ಬಜೆಟ್ ಮಂಡನೆ ಮಾಡಬೇಕಾದ ಅಗತ್ಯವಿದೆ. ಆದ್ದರಿಂದ, ಸರಕಾರವು ಇಲ್ಲಿ ಆಕ್ರಮಣಕಾರಿ ಹಣಕಾಸಿನ ಬಲವರ್ಧನೆಯ ಮಾರ್ಗವನ್ನು ಆರಿಸಿಕೊಳ್ಳಲು ಸಾಧ್ಯವಿಲ್ಲ. ಆರ್ಥಿಕ ಬೆಳವಣಿಗೆ ಮತ್ತು ಹಣಕಾಸಿನ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗುತ್ತದೆ. ಏಕೀಕರಣ ವ್ಯವಸ್ಥೆ ಬಾಂಡ್ ಮಾರುಕಟ್ಟೆಗೆ ಉತ್ತಮ ಮಾರ್ಗವಾಗಿದೆ. ಜಿಎಸ್‌ಟಿ ಸಂಗ್ರಹಣೆಯಲ್ಲಿ ತೀವ್ರ ಏರಿಕೆ ಮತ್ತು ಹೆಚ್ಚಿನ ಮುಂಗಡ ತೆರಿಗೆಗಳನ್ನು ನೀಡಲಾಗಿದೆ, ಇಂಧನ ಅಬಕಾರಿ ಸುಂಕಗಳಲ್ಲಿನ ಕಡಿತ, ಹೆಚ್ಚಿನ ಸಬ್ಸಿಡಿಗಳು ಮತ್ತು ಒಂದು ಆದಾಯ ನಷ್ಟದ ಹೊರತಾಗಿಯೂ ಎಫ್ ವೈ22 ರಲ್ಲಿ ಸರ್ಕಾರವು ವಾಸ್ತವಿಕ ವಿತ್ತೀಯ ಕೊರತೆಯಲ್ಲಿ ಸ್ವಲ್ಪ ನಿಧಾನಗತಿ ಕಾಣಬಹುದು. ಮಾರ್ಚ್ 2022 ರವರೆಗೆ ಉಚಿತ ಪಡಿತರ ಯೋಜನೆಯ ವಿಸ್ತರಣೆಯಿಂದಾಗಿ ವೆಚ್ಚದಲ್ಲಿ ಹೆಚ್ಚಳವಾಗಿದೆ. ಎಫ್ ವೈ22ಗಾಗಿ ಸರ್ಕಾರವು ತನ್ನ ಹಣಕಾಸಿನ ಕೊರತೆಯ ಗುರಿಯನ್ನು ಶೇ.6.7% ನಲ್ಲಿ ಉಳಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಶೇರ್‌ಖಾನ್ ಕಂಪನಿಯ ಬ್ರೋಕರೇಜ್ ಹೇಳಿದೆ.

ಆರ್ಥಿಕ ಪುನರುಜ್ಜೀವನವನ್ನು ಬೆಂಬಲಿಸುವ ಅಗತ್ಯ
ಶೇರ್‌ಖಾನ್ ಪ್ರಕಾರ, ಆರ್ಥಿಕ ಪುನರುಜ್ಜೀವನವನ್ನು ಬೆಂಬಲಿಸುವ ಅಗತ್ಯ ಒಂದೆಡೆಯಾದರೆ ಹೂಡಿಕೆ ನೀತಿ ಕಾರ್ಯಸೂಚಿಯಲ್ಲಿ ಉನ್ನತ ಮಟ್ಟದಲ್ಲಿ ಮುಂದುವರಿಯಬೇಕಾಗುತ್ತದೆ. ಇತ್ತೀಚಿನ ವರದಿಗಳು 2021-22 ರಲ್ಲಿ ರೂ 5.5 ಟ್ರಿಲಿಯನ್ (2019-20 ರಿಂದ 26% ರಷ್ಟು) ಹೋಲಿಸಿದರೆ 2022-23 ರಲ್ಲಿ ಸುಮಾರು 6.5 ಟ್ರಿಲಿಯನ್ ರೂ.ಗಳಷ್ಟು ಬಂಡವಾಳದ ವೆಚ್ಚದ ಮೇಲೆ 6.5 ಟ್ರಿಲಿಯನ್ ಆಗಿರಬಹುದು ಎಂದು ಸೂಚಿಸುತ್ತದೆ. ಇದಲ್ಲದೆ, ಸುಸ್ಥಿರ ಉತ್ಪಾದನೆ-ಸಂಯೋಜಿತ ಪ್ರೋತ್ಸಾಹ ಮತ್ತು ರಾಷ್ಟ್ರೀಯ ಮೂಲಸೌಕರ್ಯ ಕಡೆಗೆ ನಿರಂತರ ಗಮನಹರಿಸಬೇಕಾಗುತ್ತದೆ. ಟ್ರಸ್ಟ್‌ಗಳಲ್ಲಿ ಹೂಡಿಕೆಗೆ ತೆರಿಗೆ ಪ್ರೋತ್ಸಾಹ ಮತ್ತು ಶೀತಲ ಶೇಖರಣೆ, ಉಗ್ರಾಣ ಇತ್ಯಾದಿಗಳಂತಹ ಕೃಷಿ ಮೂಲಸೌಕರ್ಯಗಳಲ್ಲಿನ ಹೂಡಿಕೆಗಳ ಕಡೆಗೆ ಒತ್ತು ನೀಡಬೇಕಾಗುತ್ತದೆ. ಇಲ್ಲಿಯವರೆಗೆ ಖಾಸಗಿ ಹೂಡಿಕೆಗಳು ದೇಶದಲ್ಲಿ ನಿಧಾನಗತಿಯಲ್ಲಿವೆ. ಇದು ಚೇತರಿಕೆ ಹಾದಿಗೆ ಬರಲು ಬಜೆಟ್ ಪ್ರೋತ್ಸಾಸ ನೀಡಬೇಕಾಗುತ್ತದೆ.

ಇಲ್ಲಿ ಗಮನಿಸಿ
ಮೇಲಿನ ಮಾಹಿತಿ ಶೇರ್‌ಖಾನ್ ಕಂಪನಿಯ ಬ್ರೋಕರೇಜ್ ವರದಿಯಿಂದ ಆಯ್ಕೆ ಮಾಡಲಾಗಿದೆ. ಲೇಖನದ ಆಧಾರದ ಮೇಲೆ ನಿರ್ಧಾರಗಳ ಪರಿಣಾಮದಿಂದ ಉಂಟಾಗುವ ನಷ್ಟಗಳಿಗೆ ಗ್ರೇನಿಯಮ್ ತಂತ್ರಜ್ಞಾನಗಳು ಮತ್ತು ಲೇಖಕರು ಜವಾಬ್ದಾರಿ ಆಗಿರುವುದಿಲ್ಲ. ಈಕ್ವಿಟಿಗಳಲ್ಲಿ ಹೂಡಿಕೆ ಮಾಡುವುದು ಅಪಾಯಕಾರಿ. ನಿಮಗೆ ರಿಸ್ಕ್ ತೆಗೆದುಕೊಳ್ಳುವ ಧೈರ್ಯ ಇದ್ದರೆ ಮಾತ್ರ ಹೂಡಿಕೆ ಮಾಡಿ. ಲೇಖಕರು ಮತ್ತು ಅವರ ಕುಟುಂಬಗಳ ಪಟ್ಟಿ ಮಾಡಲಾದ ಯಾವುದೇ ಕಂಪನಿಗಳಲ್ಲಿ ಷೇರುಗಳನ್ನು ಹೊಂದಿಲ್ಲ.