ಪಿಎಫ್ ವಿಥ್ ಡ್ರಾ ಮಾಡುವ ಮುನ್ನ ಆರು ಅಂಶ ತಲೆಯಲ್ಲಿರಲಿ

ವೇತನ ಪಡೆಯುತ್ತಿರುವ ಯಾವುದೇ ಉದ್ಯೋಗಿಗೆ ಎಂಪ್ಲಾಯ್ ಪ್ರಾವಿಡೆಂಟ್ ಫಂಡ್ (ಇಪಿಎಫ್) ಬಹಳ ಮುಖ್ಯವಾಗುತ್ತದೆ. ಒಂದು ದೃಷ್ಟಿಯಲ್ಲಿ ಹೇಳುವುದಾದರೆ ಇದು ಆತನ ಜೀವನಕ್ಕೆ ಭದ್ರತೆಯನ್ನು ಒದಗಿಸುತ್ತದೆ.

ಈ ಬಾರಿಯ ಅಂದರೆ 2015 ರ ಕೇಂದ್ರ ಬಜೆಟ್ ನಲ್ಲಿ ಇಪಿಎಫ್ ಗೆ ಸಂಭಂಧಿಸಿದ ನಿಯಮಾವಳಿಗಳಲ್ಲಿ ಕೆಲ ಮಹತ್ವದ ಬದಲಾವಣೆ ಮಾಡಲಾಗಿದ್ದು ಜೂನ್ 1 ರಿಂದ ದೇಶಾದ್ಯಂತ ಜಾರಿಯಾಗಿದೆ.

ಇಪಿಎಫ್ ಮತ್ತು ಟ್ಯಾಕ್ಸ್ ಡಿಟಕ್ಟಡ್ ಆಟ್ ಸೋರ್ಸ್(ಟಿಡಿಎಸ್) ನಡುವಿನ ಸಂಬಂಧವನ್ನು ತಿಳಿದುಕೊಳ್ಳುವುದು ಮುಖ್ಯವಾಗುತ್ತದೆ.[ಮೊಬೈಲಿನಲ್ಲೇ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ]

ಪಿಎಫ್ ವಿಥ್ ಡ್ರಾ ಮಾಡುವ ಮುನ್ನ ಆರು ಅಂಶ ತಲೆಯಲ್ಲಿರಲಿ

ಇಪಿಎಫ್ ವಿಥ್ ಡ್ರಾ ಮಾಡಬೇಕಾದಾಗ ಈ ಅಂಶಗಳು ತಲೆಯಲ್ಲಿರಲಿ. ಯಾವ ಯಾವ ಸಂದರ್ಭದಲ್ಲಿ ವಿಥ್ ಡ್ರಾ ಮಾಡುವಾಗ ಟಿಡಿಎಎಸ್ ಅನ್ವಯವಾಗುವುದಿಲ್ಲ? ಮುಂದಕ್ಕೆ ಓದಿ..

* ಒಂದು ಖಾತೆಯಿಂದ ಮತ್ತೊಂದು ಖಾತೆಗೆ ಇಪಿಎಫ್ ಟ್ರಾನ್ಸಫರ್ ಮಾಡಿದರೆ ಟಿಡಿಎಸ್ ಅನ್ವಯವಾಗುವುದಿಲ್ಲ.

* ಪಾಲಿಸಿದಾರ ಅಥವಾ ಎಂಪ್ಲಾಯ್ ಅಥವಾ ಇಪಿಎಫ್ ಯಾರ ಹೆಸರಿನಲ್ಲಿದೆಯೋ ಅವರು ಅನಾರೋಗ್ಯ ಸಮಸ್ಯೆಗೆ ತುತ್ತಾದರೆ ಟಿಡಿಎಸ್ ಅನ್ವಯವಾಗಲ್ಲ.

* 5 ವರ್ಷದ ಅವಧಿ ಮುಗಿದ ನಂತರ ಹಣ ವಿಥ್ ಡ್ರಾ ಮಾಡಲು ಮುಂದಾದರೆ ಟಿಡಿಎಸ್ ಇಲ್ಲ[ಪಿಎಫ್ ಆನ್ ಲೈನ್ ಗೆ ವರ್ಗ]

* ಪಿಎಫ್ ಮೊತ್ತ 30 ಸಾವಿರ ರು. ಗಿಂತ ಕಡಿಮೆ ಇದ್ದು, ಉದ್ಯೋಗಿ ಐದು ವರ್ಷಕ್ಕಿಂತ ಕಡಿಮೆ ಕಾಲ ಕೆಲಸ ಮಾಡಿದ್ದರೆ ಟಿಡಿಎಸ್ ಇಲ್ಲ.

* 30 ಸಾವಿರಕ್ಕಿಂತ ಹೆಚ್ಚಿ ಹಣ ವಿಥ್ ಡ್ರಾ ಗೆ ಮುಂದಾದಾಗ ಫಾರ್ಮ್ 15ಜಿ/15ಎಚ್ ಹಾಜರುಪಡಿಸಿದರೆ ಟಿಡಿಎಸ್ ನಿಂದ ಮುಕ್ತಿ

ಯಾವ ಯಾವ ಸಂದರ್ಭದಲ್ಲಿ ಟಿಡಿಎಸ್ ಕಟ್ಟಬೇಕಾಗುತ್ತದೆ?
* 30 ಸಾವಿರಕ್ಕಿಂತ ಅಧಿಕ ಮೊತ್ತದ ಹಣ ಡ್ರಾ ಮಾಡಲು ಮುಂದಾದ ಉದ್ಯೋಗಿ 5 ವರ್ಷಗಳಿಗಿಂತ ಕಡಿಮೆ ಸೇವೆ ಸಲ್ಲಿಸಿದ್ದರೆ,

* 15ಜಿ/15ಎಚ್ ನಮೂನೆಯನ್ನು ಹಾಜರು ಪಡಿಸದೇ ಇದ್ದಲ್ಲಿ ಶೇ. 10 ರಷ್ಟು ಟಿಡಿಎಸ್ ಕಟ್ಟಬೇಕಾಗುತ್ತದೆ.

* ಅತಿ ಹೆಚ್ಚು ಅಂದರೆ ಶೇ. 34 .608 ರಷ್ಟು ಮೊತ್ತವನ್ನು ಟಿಡಿಎಸ್ ಆಗಿ ಕಟ್ಟಬೇಕಾದ ಸಂದರ್ಭವೂ ಬರಬಹುದು.

ಕೊನೆ ಮಾತು
ನೀವು ಇಪಿಎಫ್ ಹಣ ವಿಥ್ ಡ್ರಾಕ್ಕೆ ಮುಂದಾಗುತ್ತೀರಿ ಎಂದಾದರೆ ಪ್ಯಾನ್ ನಂಬರ್ ಜತೆ 15ಜಿ/15ಎಚ್ ನಮೂನೆ ಅಡಿ ನಂ.19ರಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+