For Quick Alerts
ALLOW NOTIFICATIONS  
For Daily Alerts

ಅಯ್ಯೋ.. ತೆರಿಗೆ ರಿಫಂಡ್ ಚೆಕ್ CPC ಗೆ ವಾಪಸ್ಸಾಯಿತೆ? ಇಲ್ಲಿವೆ 6 ಕಾರಣ

By Siddu Thorat
|

ನಿಮ್ಮ ರಿಫಂಡ್ ಚೆಕ್ ಕೇಂದ್ರಿಯ ಪ್ರಕ್ರಿಯಾ ಕೇಂದ್ರಕ್ಕೆ(ಸಿಪಿಸಿ) ವಾಪಸ್ಸು ಹೋದಾಗ ತೆರಿಗೆದಾರರಿಗೆ ಅದರ ಬಗ್ಗೆ ಸಂದೇಶ ಬರುತ್ತದೆ. ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ಗೆ ಭೇಟಿ ನೀಡಿ ರಿಫಂಡ್ ಚೆಕ್ ವಾಪಸ್ಸು ಹೋಗಿರುವ ಕಾರಣ ತಿಳಿದು ಅದನ್ನು ಸರಿಪಡಿಸಿಬೇಕಾಗುತ್ತದೆ.

ತೆರಿಗೆದಾರರು ರಿಟರ್ನ್ ಫೈಲ್ ಮಾಡುವಾಗ ಎಲ್ಲ ವಿವರಗಳನ್ನು ಹಾಗೂ ಸಂಬಂಧಿಸಿದ ಮಾಹಿತಿಯನ್ನು ಸರಿಯಾಗಿ ತುಂಬಲಾಗಿದೆಯೇ ಇಲ್ಲವೇ ಎಂಬುದನ್ನು ಎಚ್ಚರಿಕೆಯಿಂದ ಖಚಿತಪಡಿಸಿಕೊಳ್ಳಬೇಕು.

ಒಮ್ಮೆ ನೀವು ರಿಟರ್ನ್ ಫೈಲ್ ಮಾಡಿದ ನಂತರ ಪ್ರಸ್ತುತ ಮಾಹಿತಿಯ ಬಗ್ಗೆ ಪರಿಶೀಲಿಸುತ್ತಿರಬೇಕು. ಆದಾಯ ಇಲಾಖೆಯಿಂದ ಏನಾದರೂ ತಪ್ಪು ಅಥವಾ ತೊಂದರೆಗಳಿದ್ದರೆ ಆಗಾಗ್ಗೆ ಗಮನಿಸುತ್ತಿರಬೇಕಾಗುತ್ತದೆ.

ನಿಮ್ಮ ತೆರಿಗೆ ರಿಫಂಡ್ ಚೆಕ್ ಸಿಪಿಸಿ (CPC) ಗೆ ವಾಪಸ್ಸಾಗಲು ಕಾರಣವಾಗುವ ೬ ಅಂಶಗಳು ಇಲ್ಲಿವೆ ನೋಡಿ...

ಮನೆ ಬಾಗಿಲು ಲಾಕ್ ಆಗಿರುವಾಗ

ಮನೆ ಬಾಗಿಲು ಲಾಕ್ ಆಗಿರುವಾಗ

ರಿಫಂಡ್ ಚೆಕ್ ಮನೆಗೆ ಬಂದಾಗ ನೀವು ಮನೆ ಬಾಗಿಲನ್ನು ಲಾಕ್ ಮಾಡಿ ಹೊರಗಡೆ ಹೋಗಿರುವಂತಹ ಸಂದರ್ಭದಲ್ಲಿ ಅದು ಹಿಂತಿರುಗಿ ಹೋಗುವ ಸಂಭವ ಇರುತ್ತದೆ.
ಅಂತಹ ಸಂದರ್ಭಗಳಲ್ಲಿ ನಿಮ್ಮ ರಿಫಂಡ್ ಚೆಕ್ ಮರುಪಾವತಿಗಾಗಿ ನೀವು ಇಲಾಖೆಗೆ ಅರ್ಜಿಯನ್ನು ಬರೆಯಬೇಕಾಗುತ್ತದೆ. ಇಲ್ಲದಿದ್ದರೆ ಆನ್ಲೈನ್ ಮೂಲಕ ಸಹ ಮರುಪಾವತಿಗಾಗಿ ಮನವಿ ಸಲ್ಲಿಸಬಹುದು.

ವ್ಯಕ್ತಿ ಸ್ಥಳಾಂತರ

ವ್ಯಕ್ತಿ ಸ್ಥಳಾಂತರ

ಸಂಬಂಧಪಟ್ಟ ವ್ಯಕ್ತಿಗೆ ರಿಫಂಡ್ ಚೆಕ್ ರವಾನಿಸಿದಾಗ ಆ ವಿಳಾಸದಲ್ಲಿ ಆ ವ್ಯಕ್ತಿ ಇಲ್ಲದಿದ್ದಾಗ ರಿಫಂಡ್ ಚೆಕ್ ಕೇಂದ್ರಿಯ ಪ್ರಕ್ರಿಯಾ ಕೇಂದ್ರಕ್ಕೆ(ಸಿಪಿಸಿ) ವಾಪಸ್ಸಾಗುತ್ತದೆ.
ಒಂದು ವೇಳೆ ನೀವು ವಿಳಾಸವನ್ನು ಬದಲಾಯಿಸಿದಲ್ಲಿ ಅಥವಾ ಮೊದಲಿನ ವಿಳಾಸಕ್ಕೆ ಲಭ್ಯರಿಲ್ಲದಿದ್ದಾಗ ರಿಫಂಡ್ ಮರುಪಾವತಿಗಾಗಿ ಅರ್ಜಿಯನ್ನು ಬರೆಯಬೇಕಾಗುತ್ತದೆ. ಹಾಗೂ ಹೊಸ ವಿಳಾಸವನ್ನು ನವೀಕರಿಸಬೇಕಾಗುತ್ತದೆ. ಜೊತೆಗೆ ಆನ್ಲೈನ್ ಮೂಲಕ ಸಹ ಮರುಪಾವತಿಗಾಗಿ ಮನವಿ ಸಲ್ಲಿಸಬಹುದು.

ತಪ್ಪು ವಿಳಾಸ

ತಪ್ಪು ವಿಳಾಸ

ನೀವು ಕೊಟ್ಟ ವಿಳಾಸ ತಪ್ಪಾಗಿದ್ದಲ್ಲಿ ಸಿಪಿಸಿಯವರಿಂದ ರವಾನಿಸಲ್ಪಟ್ಟ ರಿಫಂಡ್ ಚೆಕ್ ಮತ್ತೆ ಅವರಿಗೆ ಹಿಂತಿರುಗುತ್ತದೆ.
ಅಂತಹ ಸಂದರ್ಭಗಳಲ್ಲಿ ಹೊಸ ವಿಳಾಸವನ್ನು ನವೀಕರಿಸುವುದರ ಮೂಲಕ ರಿಫಂಡ್ ಮರುಪಾವತಿಗಾಗಿ ಅರ್ಜಿಯನ್ನು ಬರೆಯಲು ಕೋರಲಾಗುತ್ತದೆ. ಜತೆಗೆ ಆನ್ಲೈನ್ ಮೂಲಕ ಸಹ ಮರುಪಾವತಿಗಾಗಿ ಮನವಿ ಸಲ್ಲಿಸಬಹುದು. ಹೀಗಾಗಿ ತೆರಿಗೆ ಪಾವತಿಸುವ ಮುನ್ನ ನಿಮ್ಮ ವಿಳಾಸವನ್ನು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ನಲ್ಲಿ ಸರಿಪಡಿಸುವುದು ಉತ್ತಮ.

ತೆರಿಗೆದಾರ ವ್ಯಕ್ತಿ ಸಿಗದಿದ್ದಾಗ

ತೆರಿಗೆದಾರ ವ್ಯಕ್ತಿ ಸಿಗದಿದ್ದಾಗ

ಆದಾಯ ಇಲಾಖೆಯವರು ನೀವು ಒದಗಿಸಿದ ವಿಳಾಸಕ್ಕೆ ರಿಫಂಡ್ ಚೆಕ್ ರವಾನಿಸಿದಾಗ ಆ ವಿಳಾಸದಲ್ಲಿ ಖಚಿತವಾದ ವ್ಯಕ್ತಿ ಇಲ್ಲದಿದ್ದಾಗ ರಿಫಂಡ್ ಚೆಕ್ ಸಿಪಿಸಿ ಗೆ ಹಿಂತಿರುಗಿ ಹೋಗುತ್ತದೆ.
ಆಗ ರಿಫಂಡ್ ಮರುಪಾವತಿಗಾಗಿ ಅರ್ಜಿಯನ್ನು ಬರೆಯಬೇಕಾಗುತ್ತದೆ. ಅಲ್ಲದೆ ಆನ್ಲೈನ್ ಮೂಲಕ ಕೂಡ ಮರುಪಾವತಿಗಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಸರಿಯಲ್ಲದ ವಿಳಾಸ

ಸರಿಯಲ್ಲದ ವಿಳಾಸ

ಅಸಮರ್ಪಕವಾದ ವಿಳಾಸ ಅಥವಾ ನೀವು ಕೊಟ್ಟ ವಿಳಾಸ ತುಂಬಾ ಉದ್ದವಾಗಿ ಇರಬಹುದು. ವಿಳಾಸ ನೀಡುವಾಗ ಅಂದರೆ ಮನೆ ಸಂಖ್ಯೆ, ಕ್ರಾಸ್, ಬ್ಲಾಕ್ ಇತ್ಯಾದಿಗಳಲ್ಲಿ ತಪ್ಪುಗಳಾದರೆ ರಿಫಂಡ್ ಚೆಕ್ ನಿಮ್ಮ ವಿಳಾಸಕ್ಕೆ ಬರುವುದಿಲ್ಲ.
ಇಂತಹ ಸಂದರ್ಭಗಳಲ್ಲಿ ರಿಫಂಡ್ ಮರುಪಾವತಿಗಾಗಿ ಅರ್ಜಿಯನ್ನು ತಪ್ಪದೆ ಬರೆಯಬೇಕಾಗುತ್ತದೆ.

ಚೆಕ್ ಮರುಪಾವತಿಗಾಗಿ ವಿನಂತಿ ಮಾಡುವುದು ಹೆಗೆ?

ಚೆಕ್ ಮರುಪಾವತಿಗಾಗಿ ವಿನಂತಿ ಮಾಡುವುದು ಹೆಗೆ?

ಇಂತಹ ಸನ್ನಿವೇಶಗಳಲ್ಲಿ ವ್ಯಕ್ತಿಗಳು ಆದಾಯ ಇಲಾಖೆಗೆ ಮನವಿಯನ್ನು ಸಲ್ಲಿಸಬೇಕಾಗುತ್ತದೆ.
* www.incometaxindiaefiling.gov.in ನಲ್ಲಿ ಲಾಗಿನ್ ಆಗಿ
* ನನ್ನ ಖಾತೆ ರಿಫಂಡ್ ಮರುಪಾವತಿ ಮನವಿ
* ಸಿಪಿಸಿ ಸಂಪರ್ಕ ನಂಬರ್ ಮತ್ತು ಜನ್ಮದಿನಾಂಕ ನಮೂದಿಸಿ
* ಇಸಿಎಸ್(ECS) ಆಯ್ಕೆ ಮಾಡಿ.

Read more: click here

ತೆರಿಗೆ ಪಾವತಿಸಿದ ನಂತರ ಏನು ಮಾಡಬೇಕು?ತೆರಿಗೆ ಪಾವತಿಸಿದ ನಂತರ ಏನು ಮಾಡಬೇಕು?

English summary

6 Reasons When Your Income Tax Refund Cheque Is Returned To CPC

When the refund cheque is returned to CPC, the taxpayer will get the intimation about the same. One can visit the income tax department site to know the reason for return and file again by rectifying the issue.
Story first published: Friday, July 29, 2016, 12:09 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X