Englishहिन्दी മലയാളം தமிழ் తెలుగు

ಎಟಿಎಂ ಹೆಚ್ಚುವರಿ ಚಾರ್ಜ್ ತಪ್ಪಿಸಿಕೊಳ್ಳಬೇಕೆ? ಇಲ್ಲಿವೆ 10 ದಾರಿ

By: Siddu Thorat
Subscribe to GoodReturns Kannada

ಎಟಿಎಂ ವ್ಯವಹಾರ ಜೀವನದ ಅವಿಭಾಜ್ಯ ಅಂಗವಾಗಿದ್ದು, ಪ್ರತಿಯೊಬ್ಬರು ಎಟಿಎಂ ಬಳಕೆ ಮಾಡಿರುತ್ತೇವೆ. ಆದರೆ ಎಟಿಎಂ ನಲ್ಲಿ ವ್ಯವಹರಿಸುವಾಗ ತಿಂಗಳಿಗೆ ಎಷ್ಟು ಬಾರಿ ಬಳಸಬೇಕು? ಯಾವ ಬ್ಯಾಂಕಿನ ಎಟಿಎಮ್ ಬಳಸಬೇಕು? ಶುಲ್ಕ ಯಾವಾಗ, ಹೇಗೆ ವಿಧಿಸಲ್ಪಡುತ್ತದೆ? ಇತ್ಯಾದಿ ಸಂಗತಿಗಳ ಬಗ್ಗೆ ನಮ್ಮಲ್ಲಿ ಗೊಂದಲ ಇದ್ದೆ ಇರುತ್ತದೆ.

ಎಟಿಎಂ ಶುಲ್ಕಗಳ ಮೇಲಿನ ನಿಯಮಾವಳಿಗಳು ನವೆಂಬರ್ 1, 2014ರಿಂದ ಜಾರಿ ಬಂದಿದೆ. ಈ ನಿಯಮಾವಳಿ ಅನುಸಾರ ನಿಮ್ಮ ಖಾತೆ ಇರುವ ಬ್ಯಾಂಕಿನ ಎಟಿಎಂ ನಲ್ಲಿ ತಿಂಗಳಿಗೆ ಐದು ಬಾರಿ ಹಾಗೂ ಬೇರೆ ಎಟಿಎಂ ಗಳಲ್ಲಿ ತಿಂಗಳಿಗೆ ಮೂರು ಬಾರಿ ವ್ಯವಹಾರ ನಡೆಸಬಹುದಾಗಿದೆ. ಜೊತೆಗೆ, ನಿಗದಿತ ಮಿತಿ ಮೀರಿದ ವ್ಯವಹಾರಗಳ ಮೇಲೆ ಶುಲ್ಕ ವಿಧಿಸಲಾಗುತ್ತದೆ.

ಅದಾಗ್ಯೂ, ಎಟಿಎಂ ವ್ಯವಹಾರಗಳ ಮೇಲೆ ಅನೇಕ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಂಡರೆ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು. ನಮ್ಮ ಹಣಕಾಸಿನ ಅಗತ್ಯಗಳಿಗೆ ಅನುಗುಣವಾಗಿ ವ್ಯವಹಾರದ ನಡತೆಯಲ್ಲಿ ಬದಲಾವಣೆ ತರಬೇಕು. ಅನಗತ್ಯ ಶುಲ್ಕಗಳಿಂದ ತಪ್ಪಿಸಿಕೊಳ್ಳಲು ಅನೇಕ ಮುಂಜಾಗ್ರತಾ ಕ್ರಮಗಳನ್ನು ಹಾಗೂ ವಿಧಾನಗಳನ್ನು ಪಾಲಿಸಬಹುದಾಗಿದೆ. 

ಅವುಗಳು ಇಲ್ಲಿವೆ ನೋಡಿ...

ವಾರದ ಖರ್ಚನ್ನು ನಿಗದಿಪಡಿಸಿ

ಒಂದು ವಾರಕ್ಕೆ ಬೇಕಾಗಬಹುದಾದ ಖರ್ಚಿನ ಬಗ್ಗೆ ಯೋಜನೆ ಹಾಕಿ ಮೊದಲೆ ನಿಗದಿ ಪಡಿಸುವುದರಿಂದ ಎಟಿಎಮ್ ನಿಂದ ಹಣವನ್ನು ಬಿಡಿಸಿಕೊಳ್ಳುವುದು ಉತ್ತಮ. ಇದರಿಂದಾಗಿ ಬೇರೆ ಎಟಿಎಮ್ ಗಳಲ್ಲಿ ಹಣ ತೆಗೆಯುವುದನ್ನು ತಪ್ಪಿಸಬಹುದು. ಅಲ್ಲದೆ ಅನಗತ್ಯವಾಗಿ ಪದೆ ಪದೆ ಎಟಿಎಮ್ ಗಳಿಗೆ ಹೋಗುವುದು ಹಾಗೂ ಅನಗತ್ಯ ಖರ್ಚುಗಳನ್ನು ತಪ್ಪಿಸಬಹುದು.

ತುರ್ತಿನ ಸಂದರ್ಭಕ್ಕಾಗಿ ಹಣ ಇಟ್ಟುಕೊಳ್ಳಿ

ಕೆಲ ಸಂದರ್ಭಗಳಲ್ಲಿ ಜೀವನದಲ್ಲಿ ಅನೇಕ ತೊಂದರೆಗಳು ಎದುರಾಗಿ ಹಣದ ತುರ್ತು ಅವಶ್ಯಕತೆ ಬರಬಹುದು. ಹೀಗಾಗಿ ಮನೆಯಲ್ಲಿ ಅಥವಾ ನಮ್ಮ ಬಳಿ ಹೆಚ್ಚುವರಿ ಹಣವನ್ನು ಇಟ್ಟುಕೊಳ್ಳುವುದು ಉತ್ತಮ. ಕಷ್ಟಕಾಲದ ನಿಧಿಯಾಗಿ ಅದನ್ನು ಬಳಸಬಹುದು.

ನಿಮ್ಮ ಬ್ಯಾಂಕ್ ಗೆ ಆದ್ಯತೆ

 ಬೇರೆ ಬ್ಯಾಂಕುಗಳ ಎಟಿಎಮ್ ಗಳಲ್ಲಿ ವ್ಯವಹರಿಸುವುದನ್ನು ಕಡಿಮೆ ಮಾಡಿ. ಒಂದು ವೇಳೆ ನಿಮ್ಮ ಎಟಿಮ್ ದುರಸ್ತಿಯಲ್ಲಿದ್ದರೆ ಅಥವಾ ಮುಚ್ಚಿದ್ದರೆ ಮಾತ್ರ ಬೇರೆ ಎಟಿಎಮ್ ಗಳಿಗೆ ಹೋಗಿ. ಸ್ಮಾರ್ಟ್ ಪೋನ್ ಗಳಲ್ಲಿ ಕೆಲ ಬ್ಯಾಂಕುಗಳ ಆಪ್ ಗಳಿದ್ದು ಅದರ ಮೂಲಕ ಹತ್ತಿರದ ಎಟಿಎಮ್ ಶಾಖೆಗಳನ್ನು ತಿಳಿದುಕೊಳ್ಳಬಹುದಾಗಿದೆ.

ಕಾರ್ಡುಗಳನ್ನು ಬಳಸಿ

ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡುಗಳನ್ನು ಬಳಸುವುದರಿಂದಾಗಿ ನಿಮಗೆ ತುಂಬಾ ಹಣದ ಅವಶ್ಯಕತೆ ಇರುವುದಿಲ್ಲ. ಅದಾಗ್ಯೂ, 1-2% ವ್ಯವಹಾರ ಶುಲ್ಕ ವಿಧಿಸಲಾಗುತ್ತದೆ. ಅತಿಹೆಚ್ಚು ಖರ್ಚು ಮಾಡುವುದು ಸಹ ಅಪಾಯಕಾರಿ.

ಸುಪ್ತ ಖಾತೆ ಉಪಯೋಗಿಸಿ

ಸುಪ್ತ ಬ್ಯಾಂಕ್ ಖಾತೆ ಬಳಸುವುದರಿಂದ ಎಟಿಎಮ್ ಶುಲ್ಕಗಳಿಂದ ಸುಧಾರಿಸಲು ಸಹಾಯಕವಾಗುತ್ತದೆ. ಹೆಚ್ಚಿನ ಬ್ಯಾಂಕುಗಳು ವಾರ್ಷಿಕವಾಗಿ ರೂ. 80-100 ಶುಲ್ಕ ವಿಧಿಸುತ್ತವೆ.

ಹಣದ ಪಾವತಿಗೆ ಕಾರ್ಡ್ ಸ್ವೈಪ್ ಮಾಡಿ

ಮಾಲ್ ಗಳಲ್ಲಿ ಅಥವಾ ವಾಣಿಜ್ಯ ಸ್ಟೋರ್ ಗಳಲ್ಲಿ ಶಾಪಿಂಗ್ ಅಥವಾ ಸರಕು ಸೇವೆಗಳನ್ನು ಖರೀದಿಸುವಾಗ ಹಣವನ್ನು ಪಾವತಿಸುವುದಕ್ಕಾಗಿ ಕಾರ್ಡ್ ಗಳನ್ನು ಬಳಸಬೇಕು. ಹಣವಿಲ್ಲದಿದ್ದಾಗ ವ್ಯವಹಾರ ಮಾಡುವ ಪ್ರವೃತ್ತಿಯನ್ನು ಕಡಿಮೆ ಮಾಡಬೇಕು. ಅಲ್ಲದೆ ಡೆಬಿಟ್ ಕಾರ್ಡ್ ಬಳಸುವುದರಿಂದ ಎಟಿಎಮ್ ಶುಲ್ಕಗಳನ್ನು ಕಡಿಮೆ ಮಾಡಬಹುದು. ಆದರೆ ಕಾರ್ಡ್ ಗಳನ್ನು ಅತಿ ಬುದ್ದಿವಂತಿಕೆಯಿಂದ ಬಳಸಬೇಕು.

ನಗದು ವಿನಿಮಯ ಸಾಧ್ಯವಾದರೆ ತಪ್ಪಿಸಿ

 ಪ್ರತಿಯೊಂದು ಬಾರಿ ಎಟಿಎಮ್ ಮೂಲಕ ವ್ಯವಹರಿಸುವ ಅಥವಾ ಪಾವತಿಸುವ ಅಭ್ಯಾಸ ಇದ್ದಲ್ಲಿ ಅವಶ್ಯವಾಗಿ ನಿಮ್ಮ ನಡೆಯಲ್ಲಿ ಬದಲಾವಣೆ ತರಬೇಕಾಗುತ್ತದೆ. ವಿದ್ಯುನ್ಮಾನ ಫಂಡ್ ವರ್ಗಾವಣೆ, ಚೆಕ್, ಡ್ರಾಪ್ಟ್ ಗಳ ಮುಖಾಂತರ ನಗದು ಪಡೆಯಿರಿ ಮತ್ತು ಪಾವತಿ ಮಾಡಿ. ಇದರಿಂದಾಗಿ ಎಟಿಎಮ್ ಶುಲ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯ.

ನೆಟ್ ಬ್ಯಾಂಕಿಂಗ್ ಅಥವಾ ಪೋನ್ ಬ್ಯಾಂಕಿಂಗ್ ಬಳಸಿ

ನಗದು ಇಲ್ಲದ ವ್ಯವಹಾರದ ಮೇಲೆ ಹೆಚ್ಚು ಅವಲಂಬಿತವಾದಲ್ಲಿ ಎಟಿಮ್ ಶುಲ್ಕವನ್ನು ಯಶಸ್ವಿಯಾಗಿ ಕಡಿಮೆ ಮಾಡಿಕೊಳ್ಳಬಹುದು. ನಗದು ಇಲ್ಲದೆ ಹಣಕಾಸು ವ್ಯವಹಾರ ಮಾಡಬಹುದಾದ ಅನೇಕ ವಾಹಿನಿಗಳು ಲಭ್ಯ ಇವೆ. ಅವುಗಳಲ್ಲಿ ನೆಟ್ ಬ್ಯಾಂಕಿಂಗ್ ಹಾಗೂ ಪೋನ್ ಬ್ಯಾಂಕಿಂಗ್ ಮುಖ್ಯವಾಗಿದ್ದು, ಇವುಗಳ ಮೂಲಕ ಖಾತೆ ಮತ್ತು ಹಣದ ವ್ಯವಹಾರ ಮಾಡುವುದಕ್ಕಾಗಿ ನೋಂದಾಯಿಸಿಕೊಳ್ಳಿ. ನೀವು ಪೋನ್ ಬ್ಯಾಂಕಿಂಗ್ ಆಪ್ ಗಳನ್ನು ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.

ನಿಮ್ಮ ಬ್ಯಾಂಕ್ ಶಾಖೆಗೆ ಬೇಟಿ ನೀಡಿ

ಒಂದು ತಿಂಗಳಿಗೆ ಎಟಿಎಮ್ ಕಾರ್ಡ್ ಬಳಸಬಹುದಾದ ಮಿತಿಯನ್ನು ದಾಟಿದ್ದರೆ ಅಥವಾ ಆನ್ಲೈನ್/ಎಟಿಎಮ್ ಮೂಲಕ ಹಣಕಾಸು ವ್ಯವಹಾರ ಮಾಡಲು ತೊಂದರೆಗಳಿದ್ದಲ್ಲಿ ನಿಮ್ಮ ಬ್ಯಾಂಕ್ ಶಾಖೆಗೆ ಬೇಟಿ ನೀಡಿರಿ. ಅಲ್ಲದೆ ನೀವು ಹೆಚ್ಚು ಮೊತ್ತದ ಹಣವನ್ನು ಡ್ರಾ ಮಾಡಿಕೊಳ್ಳುವುದಿದ್ದರೆ ಎಟಿಎಮ್ ಗಿಂತಲೂ ಬ್ಯಾಂಕಿಗೆ ಹೋಗುವುದು ಮುಂಜಾಗ್ರತೆ ದೃಷ್ಟಿಯಿಂದ ಒಳಿತು.

ಸಣ್ಣ ಮೊತ್ತವನ್ನು ಡ್ರಾ ಮಾಡಿಕೊಳ್ಳಬೇಡಿ

ಪದೆ ಪದೆ ಸಣ್ಣ ಮೊತ್ತದ ಹಣವನ್ನು ಡ್ರಾ ಮಾಡಿಕೊಳ್ಳುವುದರಿಂದ ಎಟಿಎಮ್ ಮುಖಾಂತರ ವ್ಯವಹಾರದ ಪ್ರಮಾಣ ಹೆಚ್ಚಾಗುತ್ತದೆ. ಇದರಿಂದಾಗಿ ಅನವಶ್ಯಕ ಶುಲ್ಕ ಪಾವತಿಸಬೇಕಾಗುತ್ತದೆ.

READ ALSO: RBI caps free usage of cross-bank ATMs to 3 a month

English summary

How to avoid or reduce high atm charges

The current rules on ATM charges in India came into effect from November 1, 2014, which allows only five ATM transaction in home bank’s ATM and three from other bank’s ATM in a month. Besides, there will be charges levied on any transaction beyond the stipulated limit.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC