For Quick Alerts
ALLOW NOTIFICATIONS  
For Daily Alerts

  ಉದ್ಯೋಗಸ್ಥರಿಗಾಗಿ ದೀರ್ಘಾವಧಿ ಹೂಡಿಕೆಗೆ 8 ಶ್ರೇಷ್ಠ ಮಾರ್ಗ

  |

  5 ವರ್ಷಗಳಿಗಿಂತ ಹೆಚ್ಚಿನ ಅವಧಿಯ ಹೂಡಿಕೆಗಳನ್ನು ಸಾಮಾನ್ಯವಾಗಿ ದೀರ್ಘಾವಧಿ ಹೂಡಿಕೆ ಎಂದು ನಿರ್ಧರಿಸಲಾಗುತ್ತದೆ. ದೀರ್ಘಾವಧಿ ಹೂಡಿಕೆಗಳನ್ನು ಮಕ್ಕಳ ಶಿಕ್ಷಣ, ಆರೋಗ್ಯ ಮತ್ತು ನಿವೃತ್ತಿ ನಂತರದ ಭವಿಷ್ಯ ನಿಧಿಯಾಗಿ ಹೂಡಿಕೆ ಮಾಡುವುದು ವಾಡಿಕೆ. ತಿಂಗಳ ಸಂಬಳ ಪಡೆಯುವವರು ಉತ್ತಮವಾದ ಹಣಕಾಸು ಜೀವನಕ್ಕಾಗಿ, ಉಜ್ವಲ ಭವಿಷ್ಯಕ್ಕಾಗಿ ದೀರ್ಘಾವಧಿಯ ಹೂಡಿಕೆ ಮಾಡುವುದು ಉತ್ತಮ ಆಯ್ಕೆ. ಖಾಸಗಿ ವಲಯದಲ್ಲಿ ಕೆಲಸ ಮಾಡುವವರಿಗೆ ಸಾಮಾನ್ಯವಾಗಿ ನಿವೃತ್ತಿ ನಂತರದ ಪಿಂಚಣಿ ಭದ್ರತೆ ಮತ್ತು ಉಳಿತಾಯ ಇರುವುದಿಲ್ಲ.

  ಅಲ್ಪಾವಧಿಯ ಹೂಡಿಕೆಗಳು ಯಾವಾಗಲೂ ಅಪಾಯಕಾರಿಯಾಗಿರುತ್ತವೆ. ಏಕೆಂದರೆ ಹೂಡಿಕೆ ಸಮಯ ಕಡಿಮೆಯಾಗಿರುವುದರಿಂದ ನಿಮ್ಮ ಹೂಡಿಕೆ ಹಾಳುಮಾಡಬಲ್ಲದು. ಜತೆಗೆ ಹೆಚ್ಚು ಪ್ರಯೋಜನಗಳನ್ನು ಪಡೆಯುವುದು ಸಾಮಾನ್ಯವಾಗಿ ಕಷ್ಟಕರವಾಗಿರುತ್ತದೆ. (ಭಾರತದಲ್ಲಿನ 6 ಉತ್ತಮ ಸಂಬಳ ಖಾತೆಗಳು)

   

  ಹೂಡಿಕೆ ಸಲಹೆಗಾರರ ಪ್ರಕಾರ ಒಂದೇ ವಲಯದಲ್ಲಿ, ಕಂಪನಿ ಅಥವಾ ಒಂದೇ ಉತ್ಪನ್ನದಲ್ಲಿ ಹೂಡಿಕೆ ಮಾಡಬಾರದು. ವೈಯಕ್ತಿಕ ಆದಾಯಕ್ಕಾಗಿ ಯಾವುದೇ ಪರಿಪೂರ್ಣವಾದ ಯೋಜನೆಗಳಿರುವುದಿಲ್ಲ. (9 ಹಣಕಾಸು ಸಲಹೆ: ದಂಪತಿಗಳು ಪಾಲಿಸಿದರೆ ಬಾಳು ಬಂಗಾರ...)

  ಹೀಗಾಗಿ ತಿಂಗಳ ಸಂಬಳ ಪಡೆಯುವವರು ಹಾಗೂ ಹೂಡಿಕೆದಾರರು ತಮ್ಮ ಆದಾಯದ ಮೂಲಗಳನ್ನು ಗಮನಿಸಿ ಅದಕ್ಕನುಗುಣವಾಗಿ ಬೇರೆ ಬೇರೆ ಉತ್ತಮ ಮತ್ತು ಸುರಕ್ಷಿತವಾದ ಕಂಪನಿ, ವಲಯಗಳಲ್ಲಿ ಹೂಡಿಕೆ ಮಾಡಬೇಕು.

  ಇಲ್ಲಿ ದೀರ್ಘಾವಧಿಗಾಗಿ ಹೂಡಿಕೆ ಮಾಡಬಹುದಾದ 8 ಹೂಡಿಕೆ ಆಯ್ಕೆಗಳನ್ನು ನೀಡಲಾಗಿದೆ.

  ರಿಯಲ್ ಎಸ್ಟೇಟ್ ಹೂಡಿಕೆ

  ಭೂಮಿ ಅಥವಾ ಆಸ್ತಿ ಗಳಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮವಾದ ಆಯ್ಕೆ ಆಗಿದ್ದು, ಇವು ಮೆಚ್ಚುಗೆ ಅಥವಾ ಬಾಡಿಗೆ ರೂಪದಲ್ಲಿ ಉತ್ತಮ ಆದಾಯ ತಂದುಕೊಡಬಲ್ಲದು. ಯಾರಿಗಾದರೂ ಗೃಹಸಾಲ ಪಡೆಯುವ ಅವಕಾಶವಿದ್ದಲ್ಲಿ ಇದು ಬಹು ಪ್ರಯೊಜನಕಾರಿಯಾಗಿರುತ್ತದೆ. ಅಲ್ಲದೆ ಬಡ್ಡಿ ಆದಾಯ ಮತ್ತು ಮೂಲ ಮೊತ್ತದ ಮೇಲೆ ತೆರಿಗೆ ಉಳಿತಾಯ ಮಾಡಲು ಅವಕಾಶವಿರುತ್ತದೆ.

  ಈಕ್ವಿಟಿಗಳಲ್ಲಿ ಹೂಡಿಕೆ

  ಬಹುಸಂಖ್ಯೆಯ ಹೂಡಿಕೆದಾರರು ಇದು ಅಪಾಯಕಾರಿ ಹೂಡಿಕೆ ಎಂದೇ ಭಾವಿಸಿದ್ದಾರೆ. ಯಾರಾದರೂ ದೀರ್ಘಾವಧಿಯ ಹೂಡಿಕೆ ಮೇಲೆ ಉತ್ತಮ ಆದಾಯ ಬಯಸಿದಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ ಆಯ್ಕೆ. ಅಪಾಯಗಳನ್ನು ಕಡಿಮೆ ಮಾಡಲು ಬ್ಲ್ಯೂ ಚಿಪ್ ಸ್ಟಾಕ್ಸ್ ಅಥವಾ ಇತರೆ ವಿಭಿನ್ನ ವಲಯಗಳಲ್ಲಿ ಹೂಡಿಕೆ ಮಾಡಬಹುದು.

  ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ

  ಅನೇಕ ಮ್ಯೂಚುವಲ್ ಫಂಡ್ ಗಳು ಲಭ್ಯವಿದ್ದು, ಅವು ಕೊಡುವ ಉತ್ತಮ ಆದಾಯ ಮತ್ತು ಎದುರಾಗುವ ಅಪಾಯಗಳಿಗೆ ಅನುಗುಣವಾಗಿ ಆಯ್ಕೆ ಮಾಡಬಹುದು. ವ್ಯವಸ್ಥಿತ ಹೂಡಿಕೆ ಯೋಜನೆ ಮೂಲಕ ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡುವುದು ಜಾಣ ನಡೆ. ಅಲ್ಲದೆ ಸಣ್ಣ ಮೊತ್ತವನ್ನು ಪ್ರತಿ ತಿಂಗಳು ಹೂಡಿಕೆ ಮಾಡುವುದರಿಂದ ಉತ್ತಮ ಕಾರ್ಪಸ್ ಪಡೆಯಲು ಸಾಧ್ಯ.

  ಬಾಂಡುಗಳಲ್ಲಿ ಹೂಡಿಕೆ

  ಹೆಚ್ಚು ತೆರಿಗೆಯನ್ನು ಪಾವತಿಸುವವರು ಬಾಂಡುಗಳಲ್ಲಿ ಹೂಡಿಕೆ ಮಾಡುವುದು ಅತ್ಯುತ್ತಮ. ಬಾಂಡುಗಳಲ್ಲಿ ಹೂಡಿಕೆ ಮಾಡುವುದರಿಂದ ಸ್ಥಿರ ಠೇವಣಿಗಳಿಗಿಂತ ಉತ್ತಮ ಆದಾಯ ಪಡೆಯಬಹುದಾಗಿದೆ.

  ಪಬ್ಲಿಕ್ ಪ್ರಾವಿಡೆಂಟ್ ಫಂಡ್

  ಭಾರತದಲ್ಲಿನ ಅತ್ಯುತ್ತಮವಾದ ಹೂಡಿಕೆಗಳಲ್ಲಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಇವುಗಳಲ್ಲಿ ಹೂಡಿಕೆ ಮಾಡುವುದರಿಂದ ಹೂಡಿಕೆದಾರ ತೆರಿಗೆ ಮುಕ್ತನಾಗಿರುತ್ತಾನೆ. ಪಡೆಯುವ ಆದಾಯದ ಮೇಲೆ ತೆರಿಗೆ ಪಾವತಿಸಬೇಕಾದ ಅಗತ್ಯ ಇರುವುದಿಲ್ಲ.

  ಬಂಗಾರದ ಮೆಲೆ ಹೂಡಿಕೆ

  ತುಂಬಾ ವೈವಿದ್ಯಕರಣದ ಉದ್ದೇಶಗಳಿಂದ ಕೂಡಿರುವ ಹೂಡಿಕೆಗಳಲ್ಲಿ ಬಂಗಾರವು ಒಂದು. ಬಂಗಾರದ ಮೇಲೆ ಹೂಡಿಕೆ ಮಾಡುವುದು ಯಾವಾಗಲೂ ಉತ್ತಮ ಮತ್ತು ಕ್ಷೇಮಕರ. ಇದರಲ್ಲಿ ಯಾವುದೇ ಗಂಡಾಂತರ ಇರುವುದಿಲ್ಲ. ಇದರಲ್ಲಿ ಹೂಡಿಕೆಯ ಅನೇಕ ವಿಧಾನಗಳಿದ್ದು, ಗೋಲ್ಡ್ ಇಟಿಎಫ್(ETF), ಗೋಲ್ಡ್ ಬಾಂಡ್ ಗಳಲ್ಲಿ ಹೂಡಿಕೆ ಮಾಡಬಹುದು.

  ಐಪಿಒ(IPO) ಗಳಲ್ಲಿ ಹೂಡಿಕೆ

  ಐಪಿಒಗಳು (ಆರಂಭಿಕ ಸಾರ್ವಜನಿಕ ಕೊಡುಗೆ) ಕಳೆದ ಒಂದು ವರ್ಷದಲ್ಲಿ ಉತ್ತಮವಾದ ಆದಾಯ ತಂದು ಕೊಟ್ಟಿವೆ. ಪ್ರಸಿದ್ದ ಮತ್ತು ಸುರಕ್ಷಿತ ಕಂಪನಿಗಳಲ್ಲಿ ಹೂಡಿಕೆ ಮಾಡಿದರೆ ಐಪಿಒ ಆಕರ್ಷಕ ಆದಾಯ ತಂದುಕೊಡುವುದರಲ್ಲಿ ಯಾವುದೇ ಸಂಶಯವಿಲ್ಲ.

  ULIP(ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲ್ಯಾನ್)

  ಯುನಿಟ್ ಲಿಂಕ್ಡ್ ಇನ್ಶುರೆನ್ಸ್ ಪ್ಲ್ಯಾನ್ ಒಂದು ಉತ್ತಮವಾದ ಹೂಡಿಕೆ ಆಗಿದ್ದು, ವಿಮೆ ಮತ್ತು ಹೂಡಿಕೆಗೆ ರಕ್ಷಣೆ ಒದಗಿಸುತ್ತದೆ. ಇದು ಸಹ ದೀರ್ಘಾವಧಿಯ ಹೂಡಿಕೆಗೆ ಆಯ್ಕೆ ಮಾಡಬಹುದು.

  ಮುಕ್ತಾಯ

  ಈ ಮೇಲಿನ ಎಲ್ಲ ಹಣಕಾಸು ಉತ್ಪನ್ನಗಳು, ಕಂಪನಿಗಳು ಕಳೆದ ವರ್ಷಗಳಲ್ಲಿ ಉತ್ತಮವಾದ ಲಾಭವನ್ನು ತಂದುಕೊಟ್ಟಿವೆ. ಆದರೆ ಭವಿಷ್ಯದಲ್ಲಿ ಇದು ಮಾರುಕ್ಟ್ಎಯ ಏರಿಳಿತ ಮತ್ತು ಇನ್ನಿತರ ಅಂಶಗಳನ್ನು ಒಳಗೊಂಡಿರುತ್ತದೆ. ಅದಕ್ಕಾಗಿ ಯಾವುದೇ ಹೂಡಿಕೆಗಳಲ್ಲಿ ಹಣವನ್ನು ಹೂಡಿಕೆ ಮಾಡುವಾಗ ಅದರ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಂಡು ಹೂಡಿಕೆ ಮಾಡುವುದರಿಂದ ಯಾವುದೇ ಕೆಟ್ಟ ಪರಿಣಾಮಗಳು ಬೀರುವುದಿಲ್ಲ.

  Read More: ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು

  English summary

  8 Best Long Term Investment Options For Employees

  Any investment of more than 5 years is considered as long term investment. Long term investment can be either used for kids education or as a retirement fund. Employees should make sure they have made enough investments to lead a financially healthy life. So we had given here best long term investment plans.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more