For Quick Alerts
ALLOW NOTIFICATIONS  
For Daily Alerts

RBL ಬ್ಯಾಂಕ್ IPO 364 ಕೋಟಿ: ಹೂಡಿಕೆದಾರರಿಗೆ ಪಂಥಾಹ್ವಾನ

By Siddu
|

ದೇಶದಲ್ಲಿ ಕಳೆದ ಒಂದು ದಶಕದಲ್ಲಿ ಖಾಸಗಿ ವಲಯದ ಆರ್ಬಿಎಲ್ ಬ್ಯಾಂಕು ಹೆಚ್ಚು ಸಾರ್ವಜನಿಕರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಇದು 363.88 ಕೋಟಿ ರೂ. ಐಪಿಒ (ಆರಂಭಿಕ ಸಾರ್ವಜನಿಕ ಕೊಡುಗೆ) ಮೂಲಕ ಸಂಗ್ರಹಿಸಿದೆ.

ಇದಕ್ಕೂ ಮುಂಚೆ ಭಾರತದಲ್ಲಿ ಖಾಸಗಿ ವಲಯದ ಯೆಸ್ ಬ್ಯಾಂಕ್ 2015ರ ಜುಲೈ ನಲ್ಲಿ ಐಪಿಒ ಘೋಷಣೆ ಮಾಡಿತ್ತು. ಆಗ ಈ ಬ್ಯಾಂಕು ರೂ. 315 ಕೋಟಿ ಐಪಿಒ ಸಂಗ್ರಹಿಸಿತ್ತು. 2010ರಲ್ಲಿ ಸರ್ಕಾರಿ ಸ್ವಾಮ್ಯದ ಪಂಜಾಬ್ ಮತ್ತು ಸಿಂಧ್ ಬ್ಯಾಂಕು ರೂ. 480 ಕೋಟಿ ಐಪಿಒ ಮೂಲಕ ಸಂಗ್ರಹಿಸಲು ಸಾಧ್ಯವಾಗಿತ್ತು.

ಈ ಹಿನ್ನೆಲೆಯಲ್ಲಿ ರತ್ನಾಕರ ಬ್ಯಾಂಕು ಅಗಸ್ಟ್ 19 ರಿಂದ 23 ವರೆಗೆ ಐಪಿಒ ಪ್ರಕ್ರಿಯೆ ತೆರೆದಿದೆ. ಷೇರುಗಳ ಬೆಲೆ ರೂ. 224-225 ಆಗಿದ್ದು, ಒಬ್ಬರು ತಲಾ 65 ಷೇರುಗಳನ್ನು ಪಡೆಯಬಹುದಾಗಿದೆ.

ರತ್ನಾಕರ ಬ್ಯಾಂಕಿನಲ್ಲಿ ಷೇರುಗಳನ್ನು ಪಡೆಯಲು, ಇಲ್ಲವೆ ಹೂಡಿಕೆ ಮಾಡಲು ಪ್ರಮುಖ ಕಾರಣಗಳನ್ನು ಇಲ್ಲಿ ನೀಡಲಾಗಿದೆ.

IPO 363.88 ಕೋಟಿಗೆ ಏರಿಕೆ

IPO 363.88 ಕೋಟಿಗೆ ಏರಿಕೆ

ಖಾಸಗಿ ವಲಯದ ಆರ್ಬಿಎಲ್ ಬ್ಯಾಂಕ್ ಲಿಮಿಟೆಡ್ ಸಣ್ಣ/ಆಧಾರ ಹೂಡಿಕೆದಾರರಿಗೆ ಷೇರುಗಳನ್ನು ಮಾರಾಟ ಮಾಡುವುದಕ್ಕಾಗಿ ಮುಂದಿನ ಮೂರು ದಿನಗಳ ಆರಂಭಿಕ ಸಾರ್ವಜನಿಕ ಕೊಡುಗೆ (IPO) ರೂ. 363.88 ಕೋಟಿ ಸಂಗ್ರಹಿಸಿದೆ.

ಆಧಾರ ಪುಸ್ತಕ (Anchor book)

ಆಧಾರ ಪುಸ್ತಕ (Anchor book)

ಐಪಿಒ ಬಿಡುಗಡೆಗೆ ಮುಂಚಿತವಾಗಿ ಒಂದು ದಿನ ಆಧಾರ ಪುಸ್ತಕ ಚಂದಾ ಪ್ರಾರಂಭಗೊಳ್ಳಲಿದ್ದು, ಸಾಂಸ್ಥಿಕ ಹೂಡಿಕೆದಾರರ ಆಸಕ್ತಿಗೆ ಅನುಗುಣವಾಗಿ ಇದು ಕಾರ್ಯನಿರ್ವಹಿಸಲಿದೆ.

ಐಪಿಒ ಚಂದಾ ಶುಕ್ರವಾರ ಆರಂಭ

ಐಪಿಒ ಚಂದಾ ಶುಕ್ರವಾರ ಆರಂಭ

ಷೇರುಗಳ ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) ಶುಕ್ರವಾರ ಪ್ರಾರಂಭವಾಗಲಿದ್ದು, ರೂ. 1,211.2 ಕೋಟಿ ಐಪಿಒ ಸಂಗ್ರಹ ಆಗಲಿದೆ ಎಂದು ಅಂದಾಜಿಸಿದೆ. ಈ ಪ್ರಕ್ರಿಯೆ 23 ಅಗಸ್ಟ್ ಗೆ ಕೊನೆಗೊಳ್ಳಲಿದೆ.

ಐಪಿಒ ಷೇರು ದರ

ಐಪಿಒ ಷೇರು ದರ

25 ಸಾಂಸ್ಥಿಕ ಹೂಡಿಕೆದಾರಿಗೆ 16.7ಮಿಲಿಯನ್ ಷೇರುಗಳನ್ನು ಕೊಡಲಾಗಿದ್ದು, ಪ್ರತಿ ಐಪಿಒ ಬೆಲೆ ರೂ. 224-225 ಆಗಲಿದೆ. ಷೇರುಗಳ ಮುಖಬೆಲೆ 10 ರೂ. ಇದ್ದು ಒಬ್ಬರು 65 ಷೇರುಗಳನ್ನು ಪಡೆಯಬಹುದು.

ನಿವ್ವಳ ಲಾಭದಲ್ಲಿ ಮುನ್ನುಗುವಿಕೆ

ನಿವ್ವಳ ಲಾಭದಲ್ಲಿ ಮುನ್ನುಗುವಿಕೆ

ಕಳೆದ ನಾಲ್ಕು ವರ್ಷಗಳಲ್ಲಿ ಆರ್ಬಿಎಲ್ ಬ್ಯಾಂಕಿನ ವಾರ್ಷಿಕ ಬೆಳವಣಿಗೆ ದರ ಉತ್ತಮವಾಗಿದ್ದು, ಶೆ. 145ರಷ್ಟು ನಿವ್ವಳ ಲಾಭದಲ್ಲಿದೆ.
ಇದು ಎಲ್ಲ ದೃಷ್ಟಿಯಿಂದಲೂ ತುಂಬಾ ವೇಗದ ಬೆಳವಣಿಗೆ ಆಗಿದೆ.

ಗಮನಾರ್ಹ ವಿದೇಶಿ ಹಿಡಿತ

ಗಮನಾರ್ಹ ವಿದೇಶಿ ಹಿಡಿತ

2015 ಮಾರ್ಚ್ 31ರ ಪ್ರಕಾರ ಶೇ. 41ರಷ್ಟು ವಿದೇಶಿ ಬ್ಯಾಂಕುಗಳ ಮೇಲೆ ಹಿಡಿತ ಹೊಂದಿದೆ. ಹೀಗಾಗಿ ಇದು ರತ್ನಾಕರ ಬ್ಯಾಂಕಿಗೆ ಉತ್ತಮ ಶಕ್ತಿಯಾಗಿದೆ.

ಸಾಕಷ್ಟು ಉತ್ತಮ ಬಂಡವಾಳ

ಸಾಕಷ್ಟು ಉತ್ತಮ ಬಂಡವಾಳ

ಆರ್ಬಿಎಲ್ ಬ್ಯಾಂಕು ಸಾಕಷ್ಟು ಉತ್ತಮ ಬಂಡವಾಳ ಹೊಂದಿದ್ದು, ಇದು ಹೆಚ್ಚುಕಡಿಮೆ ಶೇ. 13ರಷ್ಟಿದೆ. ಬ್ಯಾಂಕು ತುಂಬಾ ವೇಗವಾಗಿ ಬೆಳೆಯಲು ಇದು ಅವಕಾಶ ಮಾಡಿಕೊಡುತ್ತದೆ.

ಸಾಂಸ್ಥಿಕ ಹೂಡಿಕೆದಾರರು

ಸಾಂಸ್ಥಿಕ ಹೂಡಿಕೆದಾರರು

ಮೆರಿಲ್ ಲಿಂಚ್ ಕ್ಯಾಪಿಟಲ್ ಮಾರ್ಕೆಟ್ಸ್ ಸಿಂಗಾಪುರ್ ಪ್ರೈವೇಟ್ ಲಿಮಿಟೆಡ್, FIL ಮಾರಿಷಸ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್, ಗವರ್ನಮೆಂಟ ಪೆನ್ಷನ್ ಫಂಡ್ ಗ್ಲೋಬಲ್ ( ನಾರ್ವೇ), ಗೋಲ್ಡ್ಮನ್ ಸ್ಯಾಚ್ಸ್ ಇಂಡಿಯ ಫಂಡ್ ಲಿಮಿಟೆಡ್, GMO ಎಮರ್ಜಿಂಗ್ ಡೊಮೆಸ್ಟಿಕ್ ಅಪೊರ್ಚ್ಯುನಿಟಿ ಫಂಡ್ ಮತ್ತು ಆಬರ್ನ್ ಲಿಮಿಟೆಡ್ ಇತ್ಯಾದಿ ಹೂಡಿಕೆ ಕಂಪನಿಗಳಿವೆ.

Read More: 7 Reasons To Apply For The RBL Bank IPO

English summary

RBL Bank IPO 364 Crore: Good bet for Investors

RBL Bank will become the country’s first private-sector bank to go public in more than a decade. Private sector lender RBL Bank Ltd on Thursday raised Rs.363.88 crore by selling shares to anchor investors ahead of its three-day initial public offering (IPO).
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X