Englishहिन्दी മലയാളം தமிழ் తెలుగు

ಈ 20 ವ್ಯವಹಾರಗಳಿಗೆ ಪಾನ್ ಕಾರ್ಡ್ ಕಡ್ಡಾಯ

Written By: Siddu
Subscribe to GoodReturns Kannada

ಆದಾಯ ತೆರಿಗೆ ಇಲಾಖೆ ಒದಗಿಸುವ ಶಾಶ್ವತ ಖಾತೆ ಸಂಖ್ಯೆ(PAN) ಹೆಚ್ಚಿನ ಹಣಕಾಸು ವ್ಯವಹಾರಗಳನ್ನು ನಿರ್ವಹಿಸುವಾಗ ಕಡ್ಡಾಯವಾಗಿರುತ್ತದೆ. ಕಪ್ಪುಹಣ ಮತ್ತು ತೆರಿಗೆ ವಂಚನೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಪಾನ್ ಕಾರ್ಡ್ ಅಸ್ತ್ರವನ್ನಾಗಿ ಬಳಸುತ್ತಿದೆ. 2 ದಿನಗಳಲ್ಲಿ ಪಾನ್ ಕಾರ್ಡ್ ಪಡೆಯುವುದು ಹೇಗೆ?

ಶಾಶ್ವತ ಖಾತೆ ಸಂಖ್ಯೆ 10 ಅಂಕೆಗಳನ್ನು ಹೊಂದಿದ್ದು, ನಿಮ್ಮ ವಿಳಾಸ ಬದಲಾವಣೆ ಯಾವ ಪರಿಣಾಮ ಉಂಟು ಮಾಡುವುದಿಲ್ಲ. ಅಲ್ಲದೇ ಇದನ್ನು ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಯುನಿವರ್ಸ್ ಗುರುತಿನ ಚೀಟಿಯಾಗಿ ಕೆಲಸ ಮಾಡುತ್ತದೆ. ಆದಾಯ ತೆರಿಗೆ, ಹಣಕಾಸು ವ್ಯವಹಾರಗಳು, ಸಾಲ, ಬಂಡವಾಳ ಹೂಡಿಕೆ, ಆಸ್ತಿ ಖರೀದಿ ಮತ್ತು ಮಾರಾಟ ಎಲ್ಲದಕ್ಕೂ ಪಾನ್ ಕಾರ್ಡ್ ಮುಖ್ಯ ಆಧಾರವಾಗಿರುತ್ತದೆ.

ನಮ್ಮ ದೇಶದಲ್ಲಿ ವ್ಯವಹಾರ ಕೈಗೊಳ್ಳುವಾಗ PAN ಕಾಯಿದೆ 114B ಅನ್ವಯ ಹಲವು ಸಂದರ್ಭದಲ್ಲಿ ಪಾನ್ ಕಾರ್ಡ್ ಕಡ್ಡಾಯವಾಗಿದೆ. ಅಂತಹ ಪ್ರಮುಖ 20 ವ್ಯವಹಾರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.

1. ಸ್ಥಿರ ಆಸ್ತಿ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 5 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಮೌಲ್ಯದ ಮಾರಾಟ ಅಥವಾ ಖರೀದಿ
ಹೊಸ ಅವಶ್ಯಕತೆ:
* ರೂ. 10 ಲಕ್ಷ ಮೀರಿದ ಖರೀದಿ ಅಥವಾ ಮಾರಾಟ
* ರೂ. 10 ಲಕ್ಷ ಮೌಲ್ಯ ಮೀರಿದ ಆಸ್ತಿಯನ್ನು ಸ್ಟಾಂಪ್ ಮೌಲ್ಯಾಂಕನ ಮಾಡುವ ಸಂದರ್ಭದಲ್ಲಿ ಪಾನ್ ಅಗತ್ಯ
* ಒಂದು ವೇಳೆ ಜಂಟಿ ಆಸ್ತಿಯಾಗಿದ್ದಲ್ಲಿ ಪ್ರತಿ ವ್ಯಕ್ತಿಯ ಪಾನ್ ವಿವರ

2. ವಾಹನ ಖರೀದಿ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ದ್ವಿಚಕ್ರ ವಾಹನಗಳನ್ನು ಹೊರತುಪಡಿಸಿ ನಡೆಸುವ ಎಲ್ಲ ಖರೀದಿ ಮತ್ತು ಮಾರಾಟ
ಹೊಸ ಅವಶ್ಯಕತೆ:
* ಯಾವುದೇ ಬದಲಾವಣೆ ಇಲ್ಲ

3. ಟೈಮ್ ಡಿಪಾಸಿಟ್

ಅಸ್ತಿತ್ವದಲ್ಲಿರುವ ಅವಶ್ಯಕತೆ:
ಬ್ಯಾಂಕುಗಳೊಂದಿಗೆ ರೂ. 50,000 ಮೀರಿದ ಟೈಮ್ ಡಿಪಾಸಿಟ್ ಮಾಡುವಾಗ ಪಾನ್ ಕಡ್ಡಾಯ
ಹೊಸ ಅವಶ್ಯಕತೆ:
* ಕೋ-ಅಪರೇಟಿವ್ ಬ್ಯಾಂಕ್, ಅಂಚೆ ಕಚೇರಿ, ನಿಧಿ, NBFC ಕಂಪನಿ
* ವರ್ಷದ ಅವಧಿಯಲ್ಲಿ ರೂ. 5 ಲಕ್ಷಕ್ಕಿಂತ ಹೆಚ್ಚಿನ ಠೇವಣಿ ಇಡುವಾಗ ಪಾನ್ ಅಗತ್ಯ

4. ಅಂಚೆ ಕಚೇರಿ ಉಳಿತಾಯ ಠೇವಣಿ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 50,000 ಮೀರಿದ ಠೇವಣಿ
ಹೊಸ ಅವಶ್ಯಕತೆ:
* ಅನ್ವಯವಾಗುವುದಿಲ್ಲ

5. ಭದ್ರತೆ ಮಾರಾಟ/ಖರೀದಿ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. ಒಂದು ಲಕ್ಷಕ್ಕಿಂತ ಹೆಚ್ಚಿನ ಮೌಲ್ಯದ ಖರೀದಿ ಅಥವಾ ಮಾರಾಟ ಮಾಡುವಾಗ ಪಾನ್ ಅಗತ್ಯ.
ಹೊಸ ಅವಶ್ಯಕತೆ:
* ಯಾವುದೇ ಬದಲಾವಣೆ ಇಲ್ಲ

6. ಬ್ಯಾಂಕು ಖಾತೆ ತೆರೆಯಲು

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಎಲ್ಲ ಹೊಸ ಖಾತೆಗಳನ್ನು ತೆರೆಯುವಾಗ ಅಗತ್ಯ
ಹೊಸ ಅವಶ್ಯಕತೆ:
* ಬೇಸಿಕ್ ಉಳಿತಾಯ ಠೇವಣಿ ಖಾತೆ ಹೊರತುಪಡಿಸಿ(ಈ ಖಾತೆಗಳನ್ನು ತೆರೆಯಲು ಪಾನ್ ಅಗತ್ಯವಿಲ್ಲ)
* ಕೋ-ಅಪರೇಟಿವ್ ಬ್ಯಾಂಕುಗಳಿಗೂ ಪಾನ್ ಅಗತ್ಯವಿಲ್ಲ

7. ದೂರವಾಣಿ/ಮೊಬೈಲ್ ಸಂಪರ್ಕ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಹೊಸದಾಗಿ ದೂರವಾಣಿ/ಮೊಬೈಲ್ ಸಂಪರ್ಕ ಕಲ್ಪಿಸುವಾಗ ಪಾನ್ ಕಡ್ಡಾಯ
ಹೊಸ ಅವಶ್ಯಕತೆ:
* ಅನ್ವಯವಾಗುವುದಿಲ್ಲ

8. ಹೋಟೆಲ್ ಅಥವಾ ರೆಸ್ಟೊರೆಂಟ್ ಬಿಲ್

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಒಂದು ಬಾರಿ ರೂ. 25,000ಕ್ಕಿಂತ ಹೆಚ್ಚಿನ ಮೊತ್ತ ಆದಲ್ಲಿ ಪಾನ್ ಕಡ್ಡಾಯ
ಹೊಸ ಅವಶ್ಯಕತೆ:
* ರೂ. 50,000ಕ್ಕಿಂತ ಹೆಚ್ಚಿನ ನಗದು ಪಾವತಿ

9. ಬ್ಯಾಂಕ್ ಡ್ರಾಪ್ಟ್/ಪೇ ಆರ್ಡರ್/ಬ್ಯಾಂಕರ್ಸ್ ಚೆಕ್

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಒಂದು ಬಾರಿ ಒಟ್ಟು ರೂ. 50,000 ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತಕ್ಕೆ ಪಾನ್ ಕಡ್ಡಾಯ
ಹೊಸ ಅವಶ್ಯಕತೆ:
* ಯಾವುದೇ ಒಂದು ದಿನ ರೂ. 50,000ಕ್ಕಿಂತ ಹೆಚ್ಚಿನ ವ್ಯವಹಾರ

10. ಬ್ಯಾಂಕು ನಗದು ಠೇವಣಿ
ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಯಾವುದೇ ಒಂದು ದಿನ ಒಟ್ಟು ರೂ. 50,000 ಅಥವಾ ಅದಕ್ಕಿಂತ ಹೆಚ್ಚಿನ ನಗದು
ಹೊಸ ಅವಶ್ಯಕತೆ:
* ಒಂದು ದಿನದಲ್ಲಿಡುವ ರೂ. 50,000ಕ್ಕಿಂತ ಹೆಚ್ಚಿನ ನಗದು ಠೇವಣಿ

11. ವಿದೇಶಿ ಪ್ರವಾಸ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಯಾವುದೇ ಒಂದು ಬಾರಿ ರೂ. 25,000ಕ್ಕಿಂತ ಹೆಚ್ಚಿನ ನಗದು ಪಾವತಿ ಮಾಡುವಾಗ ಪಾನ್ ಅಗತ್ಯ
ಹೊಸ ಅವಶ್ಯಕತೆ:
* ವಿದೇಶಿ ಪ್ರವಾಸದ ಸಂದರ್ಭದಲ್ಲಿ ಒಂದು ಬಾರಿ ರೂ. 50,000ಕ್ಕಿಂತ ಹೆಚ್ಚಿನ ನಗದು ಪಾವತಿ ಅಥವಾ ವಿದೇಶಿ ಕರೆನ್ಸಿ ವಿನಿಮಯ ಮಾಡುವಾಗ

12. ಕ್ರೆಡಿಟ್ ಕಾರ್ಡ್

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಬ್ಯಾಂಕು/ಕಂಪನಿ/ಸಂಸ್ಥೆಗಳಿಗೆ ಕ್ರೆಡಿಟ್ ಕಾರ್ಡ್ ಗಾಗಿ ಅರ್ಜಿ ಸಲ್ಲಿಸುವಾಗ ಪಾನ್ ಅಗತ್ಯ
ಹೊಸ ಅವಶ್ಯಕತೆ:
* ಯಾವುದೇ ಬದಲಾವಣೆ ಇಲ್ಲ
* ಕೋ-ಅಪರೇಟಿವ್ ಬ್ಯಾಂಕುಗಳಿಗೆ ಪಾನ್ ಅಗತ್ಯವಿಲ್ಲ

13. ಮ್ಯೂಚುವಲ್ ಫಂಡ್ಸ್ ಯುನಿಟ್

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 50,000 ಪಾವತಿ ಅಥವಾ ಹೆಚ್ಚಿನ ಖರೀದಿಗಾಗಿ
ಹೊಸ ಅವಶ್ಯಕತೆ:
* ಯಾವುದೇ ಬದಲಾವಣೆ ಇಲ್ಲ

14. ಷೇರು ಕಂಪನಿ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 50,000 ಪಾವತಿ ಅಥವಾ ಹೆಚ್ಚಿನ ಷೇರುಗಳ ಸ್ವಾಧೀನಪಡಿಸುವುದಕ್ಕಾಗಿ ಪಾನ್ ಅಗತ್ಯ
ಹೊಸ ಅವಶ್ಯಕತೆ:
* ಡಿಮ್ಯಾಟ್ ಖಾತೆ ತೆರೆಯಲು
* ರೂ. 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತದ ಷೇರುಗಳ ಪ್ರತಿ ಮಾರಾಟ/ಖರೀದಿ ವ್ಯವಹಾರ

15. ಡಿಬೆಂಚರು/ಬಾಂಡ್ಸ್

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 50,000 ಮೊತ್ತ ಪಾವತಿ
ಹೊಸ ಅವಶ್ಯಕತೆ:
ರೂ. 50,000ಕ್ಕಿಂತ ಹೆಚ್ಚಿನ ಮೊತ್ತ ಪಾವತಿ ಸಂದರ್ಭದಲ್ಲಿ ಪಾನ್ ಅಗತ್ಯ

 

16. RBI ಬಾಂಡ್ಸ್
ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 50,000 ಮೊತ್ತ ಪಾವತಿ ಮಾಡುವಾಗ ಅಥವಾ ಆರ್ಬಿಐ ಬಾಂಡುಗಳನ್ನು ಸ್ವಾಧೀನಪಡಿಸುವಾಗ
ಹೊಸ ಅವಶ್ಯಕತೆ:
* ರೂ. 50,000ಕ್ಕಿಂತ ಹೆಚ್ಚಿನ ಮೊತ್ತ ಪಾವತಿ

17. ಲೈಫ್ ಇನ್ಸೂರೆನ್ಸ್ ಪ್ರೀಮಿಯಂ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 50,000 ಪಾವತಿ ಅಥವಾ ಒಂದು ವರ್ಷದ ಅವಧಿಯಲ್ಲಿ
ಪ್ರೀಮಿಯಂಗೆ ಅನುಗುಣವಾಗಿ ಪಾನ್ ಅಗತ್ಯ
ಹೊಸ ಅವಶ್ಯಕತೆ:
* ಒಂದು ವರ್ಷದ ಅವಧಿಯಲ್ಲಿ ರೂ. 50,000ಕ್ಕಿಂತ ಹೆಚ್ಚಿನ ಪಾವತಿ

18. ಆಭರಣ ಖರೀದಿ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ರೂ. 5 ಲಕ್ಷ ಪಾವತಿ ಅಥವಾ ಯಾವುದೇ ಒಂದು ಸಂದರ್ಭದಲ್ಲಿ ಅಥವಾ ಬಿಲ್ ಪಾವತಿಗೆ ಪಾನ್ ಅಗತ್ಯ
ಹೊಸ ಅವಶ್ಯಕತೆ:
* ಅನ್ವಯವಾಗುವುದಿಲ್ಲ

19. ಸರಕುಗಳ ಖರೀದಿ ಅಥವಾ ಮಾರಾಟ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಅಗತ್ಯವಿಲ್ಲ
ಹೊಸ ಅವಶ್ಯಕತೆ:
* ರೂ. 2 ಲಕ್ಷಕ್ಕಿಂತ ಹೆಚ್ಚಿನ ಸರಕು ಸೇವೆಗಳ ಖರೀದಿ/ಮಾರಾಟ

20. ಕ್ಯಾಶ್ ಕಾರ್ಡ್ಸ್/ಪ್ರಿಪೇಡ್/ ಸೆಟ್ಲಮೆಂಟ್ ಕಾಯಿದೆ

ಅಸ್ತಿತ್ವದಲ್ಲಿರುವ ಅವಶ್ಯಕತೆ:
* ಯಾವುದೇ ಅಗತ್ಯವಿಲ್ಲ
ಹೊಸ ಅವಶ್ಯಕತೆ:
* ಒಂದು ವರ್ಷದಲ್ಲಿ ಒಟ್ಟು ರೂ. 50,000ಕ್ಕಿಂತ ಹೆಚ್ಚಿನ ನಗದು ಪಾವತಿಗೆ ಪಾನ್ ಅಗತ್ಯ.

English summary

20 Transactions Where Quoting PAN is Mandatory

The Permanent Account Number (PAN) is a must for most of the financial transaction. The government has issued new guidelines in order to curb circulation of black money and widening of tax base, for which quoting PAN is necessary.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC