For Quick Alerts
ALLOW NOTIFICATIONS  
For Daily Alerts

ಪಿಪಿಎಫ್ - ಬ್ಯಾಂಕ್ ಡಿಪಾಸಿಟ್ ಯಾವುದು ಉತ್ತಮ?

By Siddu
|

ಸಂಘಟಿತ ವಲಯದಲ್ಲಿ ಕಾರ್ಮಿಕರ ಆರ್ಥಿಕ ರಕ್ಷಣೆಗಾಗಿ ಉದ್ಯೋಗ ಭವಿಷ್ಯ ನಿಧಿ(ಇಪಿಎಫ್) ಇದೆ. ಅದೇ ರಿತಿ ಅಸಂಘಟಿತ ವಲಯದ ಕಾರ್ಮಿಕರ ಕ್ಷೇಮಾಭಿವೃದ್ಧಿಗಾಗಿ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ಸೌಲಭ್ಯ ಕಲ್ಪಿಸಲಾಗಿದೆ.

 

ಜನಸಾಮಾನ್ಯರಲ್ಲಿ ಸಾಮಾನ್ಯವಾಗಿ ಪಿಪಿಎಫ್ ಮತ್ತು ಬ್ಯಾಂಕ್ ಡಿಪಾಸಿಟ್ ಗಳಲ್ಲಿ ಯಾವುದು ಉತ್ತಮ? ಯಾವುದರಲ್ಲಿ ಹೆಚ್ಚು ಬಡ್ಡಿದರ ಲಭ್ಯವಿದೆ? ಯಾವುದು ಹೆಚ್ಚು ಲಾಭದಾಯಕ? ಹೂಡಿಕೆಗೆ ಯಾವುದು ಆಯ್ಕೆ ಮಾಡಿಕೊಳ್ಳಬೇಕು? ಇತ್ಯಾದಿ ಗೊಂದಲಗಳು ಮೂಡುವುದು ಸಹಜ.

ಪಿಪಿಎಫ್ ಅಥವಾ ಬ್ಯಾಂಕ್ ಡಿಪಾಸಿಟ್ ಇವೆರಡರಲ್ಲಿ ಯಾವುದಾದರು ಒಂದರಲ್ಲಿ ನೀವು ಹೂಡಿಕೆ ಮಾಡಲು ಬಯಸಿದಲ್ಲಿ ಪಿಪಿಎಫ್ ಆಯ್ಕೆ ನಿಮ್ಮದಾಗಲಿ ಎಂಬುದು ನಮ್ಮ ಸಲಹೆ. (ಪ್ರತಿಯೊಬ್ಬರಿಗೂ 6 ಸಣ್ಣ ಉಳಿತಾಯ ಯೋಜನೆಗಳು)

ಅದಕ್ಕಾಗಿ ಈ ಕೆಳಗಿನ ಅಂಶಗಳನ್ನು ಗಮನಿಸಿದರೆ ಪಿಪಿಎಫ್ ನಲ್ಲಿ ಹೂಡಿಕೆ ಮಾಡುವುದು ಬ್ಯಾಂಕ್ ಡಿಪಾಸಿಟ್ ಗಿಂತ ಯಾಕೆ ಉತ್ತಮ ಎಂಬುದು ಗೊತ್ತಾಗುತ್ತದೆ.

ಇದಕ್ಕೆ ಸಂಬಂಧಿಸಿದ 7 ಪ್ರಮುಖ ಅಂಶಗಳನ್ನು ಇಲ್ಲಿ ನೀಡಲಾಗಿದೆ.

ಬಡ್ಡಿದರ ದರ

ಬಡ್ಡಿದರ ದರ

ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್) ಮೇಲೆ ಸಿಗುವ ಬಡ್ಡಿದರಗಳು ಯಾವಾಗಲೂ ಬ್ಯಾಂಕುಗಳು ನೀಡುವ ಬಡ್ಡಿದರಗಳಿಗಿಂತ ಹೆಚ್ಚಿರುತ್ತವೆ ಎಂಬುದನ್ನು ಮುಖ್ಯವಾಗಿ ಗಮನಿಸಬೇಕು. ಜತೆಗೆ ಪ್ರತಿ ತ್ರೈಮಾಸಿಕಕ್ಕೆ ಇವು ಪರಿಷ್ಕರಣೆಗೆ ಒಳಪಡುತ್ತವೆ.
ಪ್ರಸ್ತುತ ಪಿಪಿಎಫ್ ಮೇಲೆ ನಿಮಗೆ ಶೇ. 8.1ರಷ್ಟು ಬಡ್ಡಿದರ ಸಿಗುತ್ತದೆ. ಆದರೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಕೇವಲ ಶೇ. 7.5ರಷ್ಟು ಮಾತ್ರ ಬಡ್ಡಿದರ ಸಿಗುತ್ತದೆ.

ಬಡ್ಡಿ ಮೇಲೆ ತೆರಿಗೆ

ಬಡ್ಡಿ ಮೇಲೆ ತೆರಿಗೆ

ಬ್ಯಾಂಕ್ ಠೇವಣಿಗಳು ಕೊಡುವ ಬಡ್ಡಿಗೆ ತೆರಿಗೆ ಪಾವತಿಸಬೇಕಾಗುತ್ತದೆ. ಆದರೆ ಪಿಪಿಎಫ್ ಮೇಲೆ ಸಿಗುವ ಬಡ್ಡಿಗೆ ಗ್ರಾಹಕರು ಯಾವುದೇ ತರಹದ ತೆರಿಗೆಯನ್ನು ಪಾವತಿಸಬೇಕಾಗಿಲ್ಲ.

ಸೆಕ್ಷನ್ 80C ತೆರಿಗೆ ಪ್ರಯೋಜನಗಳು
 

ಸೆಕ್ಷನ್ 80C ತೆರಿಗೆ ಪ್ರಯೋಜನಗಳು

ಪಿಪಿಎಫ್ ನಲ್ಲಿ ನೀವು 1.5 ಲಕ್ಷದವರೆಗೆ ಹೂಡಿಕೆ ಮಾಡಿದಲ್ಲಿ ಆದಾಯ ಇಲಾಖೆಯ ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ಆದರೆ ಬ್ಯಾಂಕು ಠೇವಣಿಗಳ ಮೇಲೆ ಈ ಸೌಲಭ್ಯ ಪಡೆಯಲು ಸಾಧ್ಯವಿರುವುದಿಲ್ಲ.

ನಿವೃತ್ತಿ ಕಾರ್ಪಸ್ ಹೆಚ್ಚಳಕ್ಕೆ ಸಹಕಾರಿ

ನಿವೃತ್ತಿ ಕಾರ್ಪಸ್ ಹೆಚ್ಚಳಕ್ಕೆ ಸಹಕಾರಿ

ಪಿಪಿಎಫ್ ನಲ್ಲಿ ದೀರ್ಘಾವಧಿಗೆ ಅಂದರೆ 15 ವರ್ಷಗಳ ಕಾಲಾವಧಿ ಮೇಲೆ ಉತ್ತಮವಾದ ಕಾರ್ಪಸ್ ಸಿಗುತ್ತದೆ. ಅಂದರೆ ದೀರ್ಘಾವಧಿಗಾಗಿ ಪಿಪಿಎಫ್ ನಲ್ಲಿ ಹೂಡಿಕೆ ಮಾಡಿದರೆ ನಿವೃತ್ತಿ ನಂತರದಲ್ಲಿ ಉತ್ತಮ ಪ್ರತಿಫಲ ಸಿಗುತ್ತದೆ.

ಸುಲಭ ಲಿಕ್ವಿಡಿಟಿ

ಸುಲಭ ಲಿಕ್ವಿಡಿಟಿ

ಬ್ಯಾಂಕ್ ಠೇವಣಿಗಳ ಒಂದು ಲಾಭವೆಂದರೆ ಇದರ ದ್ರವ್ಯತೆ. ಬ್ಯಾಂಕುಗಳಲ್ಲಿ ಎಕ್ಸ್ ಪೈರಿ ಮೊದಲು ನಗದು ಪಡೆಯಬಹುದು. ಆದರೆ ಈ ಸೌಲಭ್ಯ ಪಿಪಿಎಫ್ ನಲ್ಲಿ ಇರುವುದಿಲ್ಲ.
ಪಿಪಿಎಫ್ ನಲ್ಲಿ ಇದು ಭಾಗಶಹ ೭ ವರ್ಷಗಳ ನಂತರ ಹಿಂಪಡೆಯಲು ಅವಕಾಶ ಇರುತ್ತದೆ.

ಮುಕ್ತಾಯ

ಮುಕ್ತಾಯ

ಒಟ್ಟಿನಲ್ಲಿ ಪಿಪಿಎಫ್ ನಲ್ಲಿ ಅನೇಕ ಪ್ರಯೋಜನಗಳು ಇರುವುದಂತು ನಿಜ. ನಿವೃತ್ತಿ ನಂತರದ ಉತ್ತಮ ಪ್ರತಿಫಲಕ್ಕೆ ಇವು ಅತ್ಯುತ್ತಮ ಆಯ್ಕೆ. ಬ್ಯಾಂಕ್ ಡಿಪಾಸಿಟ್ಸ್ ಗಳಿಗೆ ಹೋಲಿಸಿದರೆ ಇವು ಉತ್ತಮವಾದವು ಎಂದೇ ಹೇಳಬಹುದು. ಆದರೆ ಸಲ್ಪ ದೀರ್ಘಾವಧಿ ಹೊಂದಿರುತ್ತವೆ.

ಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗಪ್ರತಿ ತಿಂಗಳ ಸಂಬಳದಲ್ಲಿ ಉಳಿತಾಯ ಮಾಡಬೇಕೆ? ಇಲ್ಲಿವೆ 8 ಮಾರ್ಗ

English summary

Which is better among PPF and Bank Deposits

If you have to decide on an investment between the Public Provident Fund (PPF) and bank deposits, we suggest you go in for the ppf. Here are 7 good reasons why PPF is better than bank deposits.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X