Englishहिन्दी മലയാളം தமிழ் తెలుగు

ಎಲ್ಐಸಿ(1957-2017) 60ರ ಸಂಭ್ರಮ: ಗ್ರಾಹಕರು ತಿಳಿದುಕೊಳ್ಳಬೇಕಾದ ಸಂಗತಿಗಳೇನು?

Written By: Siddu
Subscribe to GoodReturns Kannada

ದೇಶದ ವಿಮಾ ಕ್ಷೇತ್ರದಲ್ಲಿ ಜೀವನ ವಿಮಾ ನಿಗಮ(ಎಲ್ಐಸಿ) ಬಹುಮುಖ್ಯ ಹಣಕಾಸು ಸಂಸ್ಥೆ. ದೇಶವ್ಯಾಪಿ ಇದು ತನ್ನ ಜಾಲವನ್ನು ಹೊಂದಿದ್ದು, ಪ್ರತಿಯೊಂದು ಮನೆಗಳಲ್ಲೂ ಎಲ್ಐಸಿ ಪಾಲಿಸಿದಾರರಿದ್ದಾರೆಂದರೆ ತಪ್ಪಾಗಲಾರದು. ಹೀಗಾಗಿ ಇದು ಜೀವನದ ಅವಿಭಾಜ್ಯ ಅಂಗವಾಗಿ ವಿಶ್ವಾಸಾರ್ಹತೆಯನ್ನು ಗಳಿಸಿದೆ.

ವಿಮಾದಾರರಿಗೆ ಆಪತ್ ಕಾಲದಲ್ಲಿ ಸಹಾಯಕ್ಕೆ ನಿಲ್ಲಬಲ್ಲ, ಸುರಕ್ಷತೆ, ಭದ್ರತೆ, ಅನಾರೋಗ್ಯ, ನಿಧನ ಮತ್ತು ಅಪಘಾತ ಪರಿಹಾರ ಕೊಡುತ್ತಿರುವ ಎಲ್ಐಸಿ ಸಂಸ್ಥೆಗೆ ಈಗ 60ರ ಸಂಭ್ರಮ. 1957-2017 ನಡುವಿನ ಯಶಸ್ವಿ ಸಾಹಸಗಾಥೆ, ಒಟ್ಟು ಆಸ್ತಿ, ಆದಾಯ, ವ್ಯಾಪಕ ಜಾಲ, ಗ್ರಾಹಕರಿಗೆ ನೀಡುತ್ತಿರುವ ಪಾಲಿಸಿ ಮತ್ತು ವಿಮಾ ಸೌಲಭ್ಯ ಇತ್ಯಾದಿ ಕುರಿತು ತಿಳಿಯೋಣ...

ಎಲ್ಐಸಿ ಆಸ್ತಿ

ಎಲ್ಐಸಿ ಅತಿದೊಡ್ಡ ದೇಶೀಯ ಹೂಡಿಕೆದಾರ ಸಂಸ್ಥೆ. 2017ರ ಹಣಕಾಸು ವರ್ಷದಲ್ಲಿ ತನ್ನ ಷೇರುಗಳ ವಹಿವಾಟಿನಿಂದ ಶೇ. 72ರಷ್ಟು ಅಂದರೆ ರೂ. 19,000 ಕೋಟಿ ಲಾಭವನ್ನು ಗಳಿಸಿದೆ.

ದೊಡ್ಡ ಹೂಡಿಕೆದಾರರು

ಪ್ರಸಕ್ತ ಸಾಲಿನಲ್ಲಿ ITCBSE, ONGCBSE, NHPCBSE, NTPCBSE, SBI, ICICI, Coal IndiaBSE, SAILBSE ಮತ್ತು NMDCBSE ಒಳಗೊಂಡಂತೆ ಹಲವು ದೊಡ್ಡ ಹೂಡಿಕೆದಾರರ ಮೂಲಕ ಬಂಡವಾಳ ಹೂಡಿ ಉತ್ತಮವಾದ ಆದಾಯವನ್ನು ಗಳಿಸಿದೆ.

ಗ್ರಾಹಕರಿಗೆ ಸಂತಸದ ಸುದ್ದಿ

ದೊಡ್ಡ ಬಂಡವಾಳದ ಮೂಲಕ ಹೆಚ್ಚಿನ ಲಾಭ ಪಡೆದಿರುವ ಎಲ್ಐಸಿ ತನ್ನ ಗ್ರಾಹಕರಿಗೆ ಮತ್ತು ಸರ್ಕಾರಕ್ಕೆ ಶೇ. 40ರಷ್ಟು ಹೆಚ್ಚಿನ ಬೋನಸ್ ಮತ್ತು ಡಿವಿಡೆಂಟ್ ಗಳನ್ನು(2016-17) ನೀಡಲು ನಿರ್ಧರಿಸಿದೆ.

ಪಯಣದ ಹಾದಿ

ಜೂನ್ 19, 1956ರಂದು ಭಾರತೀಯ ಸಂಸತ್ತು ಲೈಫ್ ಇನ್ಸೂರೆನ್ಸ್ ಕಾರ್ಪೋರೇಷನ್ ಕಾಯಿದೆ ಫಾಸು ಮಾಡಿ, ಸೆಪ್ಟೆಂಬರ್ 1, 1956ರಂದು ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ರಚಿಸಲಾಯಿತು. ವಿಮಾದಾರರಿಗೆ ಸೂಕ್ತವಾದ ವೆಚ್ಚದಲ್ಲಿ ಸಾಕಷ್ಟು ಹಣಕಾಸಿನ ನೆರವು ಒದಗಿಸುವ ಮತ್ತು ದೇಶದಾದ್ಯಂತ ಜೀವ ವಿಮೆಯನ್ನು ಹೆಚ್ಚು ವ್ಯಾಪಕವಾಗಿ ತಲುಪುವ ಉದ್ದೇಶ ಎಲ್ಐಸಿ ಹೊಂದಿತ್ತು.

ಎಲ್ಐಸಿ ಕಚೇರಿಗಳು

ಎಲ್ಐಸಿ ತನ್ನ 1956ರ ಸಾಂಸ್ಥಿಕ ಕಚೇರಿಯನ್ನು ಹೊರತುಪಡಿಸಿ 5 ವಲಯ ಕಚೇರಿ, 33 ವಿಭಾಗೀಯ ಕಚೇರಿ, 212 ಶಾಖೆಗಳನ್ನು ಹೊಂದಿದೆ.

ಮಾರುಕಟ್ಟೆ ವಿಸ್ತರಣೆ

ಎಲ್ಐಸಿ ಪ್ರಾರಂಭವಾಗಿ ಕೆಲವೆ ವರ್ಷಗಳಲ್ಲಿ ಹಲವು ಹೊಸ ಕಚೇರಿ ಶಾಖೆಗಳನ್ನು ತೆರೆಯಿತು. 1957ರಲ್ಲಿ ಎರಡು ನೂರು ಕೋಟಿಯೊಂದಿಗೆ ಪ್ರಾರಂಭವಾದ ಹೊಸ ವಹಿವಾಟು ಕೇವಲ 1969-70ರ ಸಾಲಿನಲ್ಲಿ 1000 ಕೋಟಿ ಗಡಿ ದಾಟಿತು. ತದನಂತರದಲ್ಲಿ 2000 ಕೋಟಿ ಗಡಿ ದಾಟಲು 10 ವರ್ಷಗಳನ್ನು ತೆಗೆದುಕೊಂಡಿತು.

ವ್ಯಾಪಕ ಅಂತರ್ಜಾಲ

ಸ್ತುತ ಎಲ್ಐಸಿ ಸಂಸ್ಥೆ 2048 ಸಂಪೂರ್ಣ ಕಂಪ್ಯೂಟರೀಕೃತ ಶಾಖಾ ಕಚೇರಿಗಳು, 113 ವಿಭಾಗೀಯ ಕಚೇರಿಗಳು, 8 ವಲಯ ಕಚೇರಿಗಳು, 1381 ಸ್ಯಾಟಲೈಟ್ ಕಚೇರಿಗಳು ಮತ್ತು ಮುಖ್ಯ ಕಾರ್ಪೊರೇಟ್ ಕಚೇರಿ ಹೊಂದಿದೆ. 113 ವಿಭಾಗೀಯ ಕಚೇರಿಗಳನ್ನು ಎಲ್ಐಸಿಯ ವೈಡ್ ಏರಿಯಾ ನೆಟ್ವರ್ಕ್ ಆವರಿಸಿದೆ. ಜತೆಗೆ ಮೆಟ್ರೊ ಏರಿಯಾ ನೆಟ್ವರ್ಕ್ ಮೂಲಕ ಎಲ್ಲಾ ಶಾಖೆಗಳನ್ನು ಸಂಪರ್ಕಿಸುತ್ತದೆ.

ಸ್ಥಿರ ಬೆಳವಣಿಗೆ ದರ

ಜಾಗತೀಕರಣ ಮತ್ತು ಉದಾರೀಕರಣ ಸನ್ನಿವೇಶದಲ್ಲೂ ಎಲ್ಐಸಿ ಭಾರತದ ಉನ್ನತ ವಿಮಾ ಸಂಸ್ಥೆಯಾಗಿ ಮುಂದುವರೆದಿದೆ. ತುಂವಾ ವೇಗವಾಗಿ ಬೆಳೆಯುವ ವಿಮಾ ಸಂಸ್ಥೆಗಳಲ್ಲಿ ಮೂಂಚೂಣಿಯ ಸ್ಥಾನದಲ್ಲಿದೆ. ಪ್ರಸಕ್ತ ವರ್ಷದಲ್ಲಿ ಒಂದು ಕೋಟಿ ಪಾಲಿಸಿಗಳನ್ನು ಮಾಡಿಸಿದೆ.

ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್

ಐವತ್ತು ವರ್ಷಗಳ ನೆನಪಿನಾರ್ಥ 2006ರಲ್ಲಿ 'ಗೋಲ್ಡನ್ ಜುಬಿಲಿ ಫೌಂಡೇಶನ್' ಹೆಸರಿನಲ್ಲಿ ಚಾರಿಟಿ ಸಂಸ್ಥೆ ಸ್ಥಾಪಿಸಲಾಯಿತು. ಶಿಕ್ಷಣಕ್ಕೆ ಉತ್ತೇಜನ, ಬಡತನ ನಿವಾರಣೆ ಮತ್ತು ಉತ್ತಮ ಜೀವನ ಮಟ್ಟ ಒದಗಿಸುವುದು ಇದರ ಉದ್ದೇಶ. ಗೋಲ್ಡನ್ ಜುಬಿಲಿ ಸ್ಕಾಲರ್ಶಿಪ್ ಕಾರ್ಯಕ್ರಮ ಪ್ರಾರಂಭಿಸಿದೆ. ಪ್ರತಿವರ್ಷ 12ನೇ ತರಗತಿಯಲ್ಲಿ ಉತ್ತಮ ಸಾಧನೆ ಮಾಡಿ, ಅಧ್ಯಯನ ಮುಂದುವರೆಸಲು ಬಯಸುವ ವಿದ್ಯಾರ್ಥಿಗಳಿಗೆ ನೀಡಲಾಗುತ್ತದೆ. ಪೋಷಕರ ಆದಾಯ ಒಂದು ಲಕ್ಷಕ್ಕಿಂತ ಕಡಿಮೆ ಇರಬೇಕಾಗುತ್ತದೆ.

ಸಾಗಬೇಕಾದ ದಾರಿ

ಇಷ್ಟೇಲ್ಲಾ ಯಶಸ್ವಿ ಸಾಧನೆ ಮಾಡಿದರೂ ಸಾಗಬೇಕಾದ ದಾರಿ, ಮುಟ್ಟಬೇಕಾದ ಗುರಿಗಳು ತುಂಬಾ ಇವೆ. ಭಾರತೀಯ ಲೈಫ್ ಇನ್ಸೂರೆನ್ಸ್ ರಂಗದಲ್ಲಿ ಗಮನಾರ್ಹ ಪ್ರದರ್ಶನದ ಮೂಲಕ ಮಾರುಕಟ್ಟೆಯಲ್ಲಿ ಪ್ರಾಬಲ್ಯತೆ ಸಾಧಿಸಬೇಕಾಗಿದೆ. ಎಲ್ಐಸಿ ಪಾಲಿಸಿ: 10 ಉತ್ತಮ ಪಾಲಿಸಿ ಮತ್ತು ಪ್ರಯೋಜನಗಳು

English summary

LIC(1957-2017) success story: Must know these things

Life insurance policy by Lic of India provides safety, security and reparation or compensation to the nominee or family members on the demise of an insured individual. More often the not, the liability of the family lies on the shoulders of one person.
Please Wait while comments are loading...
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC