For Quick Alerts
ALLOW NOTIFICATIONS  
For Daily Alerts

ಸ್ವಂತ ಮನೆ ಖರೀದಿಗೆ ಇದು ಸುಸಮಯ, ಯಾಕೆ ಗೊತ್ತೆ?

Owning a house of your own is a feeling that nothing else can match. Your own house is your domain where you can be yourself, relax, leave your worries behind and spend time with your family.

|

ಅಂದದ ಚೆಂದದ ಸ್ವಂತ ಮನೆ ಹೊಂದುವುದು ಪ್ರತಿಯೊಬ್ಬರ ಕನಸು. ಮನೆ ಕಟ್ಟುವುದು, ಮದುವೆ ಮಾಡುವುದು ಜೀವನದಲ್ಲಿ ಒಂದು ಬಾರಿಯಾಗಿರುವುದರಿಂದ ಮನುಷ್ಯ ಇದರ ಬಗ್ಗೆ ಸಾಕಷ್ಟು ಕನಸಿನ ಗೊಪುರಗಳನ್ನು ಕಟ್ಟಿರುತ್ತಾನೆ. ಬಾಡಿಗೆ ಮನೆಯಲ್ಲಿ ಯಾರು ತಾನೆ ಇರಲು ಇಷ್ಟಪಡ್ತಾರೆ. ಸ್ವಂತ ಮನೆ ಇದ್ದರೆ ನೆಮ್ಮದಿಯಿಂದ, ಖುಷಿಯಿಂದ ಕುಟುಂಬದ ಜತೆ ಇರಬಹುದೆನ್ನುವುದು ಹೆಚ್ಚಿನವರ ಅಭಿಪ್ರಾಯ.

ಭಾರತದಲ್ಲಿ ಪ್ರಸ್ತುತ ಸಂದರ್ಭದಲ್ಲಿ ಸ್ವಂತ ಮನೆ ಹೊಂದುವುದು ಮೊದಲಿಗಿಂತಲೂ ತುಂಬಾ ಸರಳವಾಗಿದ್ದು, ಪ್ರಸಕ್ತ ಸಂದರ್ಭದಲ್ಲಿರುವ ಆರ್ಥಿಕ ಪರಿಸ್ಥಿತಿ ಜನಸಾಮಾನ್ಯರು ಮನೆ ಖರೀದಿಸಲು ಇನ್ನೂ ಸುಲಭ ಮತ್ತು ಅನುಕೂಲಕರವಾಗಿದೆ.

1. ಬಡ್ಡಿದರ

1. ಬಡ್ಡಿದರ

ಗೃಹಸಾಲದ ಮೇಲಿರುವ ಬಡ್ಡಿದರವನ್ನು ಇಳಿಕೆ ಮಾಡಲಾಗಿದೆ. ಮರುಪಾವತಿ ಮಾಡುವ ಅವಧಿ ಮತ್ತು ವಿಧಾನಗಳು ಇನ್ನೂ ಸರಳಗೊಂಡಿವೆ. ಅಂದರೆ ನಿಮ್ಮ ಆದಾಯ ಮತ್ತು ಹಣಕಾಸಿನ ಸಂದರ್ಭಗಳಿಗೆ ಅನುಸಾರವಾಗಿ ಅಲ್ಪಾವಧಿ ಅಥವಾ ದೀರ್ಘಾವಧಿಗಳನ್ನು ಆಯ್ಕೆ ಮಾಡಬಹುದು. 

2. ಸರಳ ಸಾಲ ಪ್ರಕ್ರಿಯೆ

2. ಸರಳ ಸಾಲ ಪ್ರಕ್ರಿಯೆ

ಪ್ರಸ್ತುತ ಸಾಲ ಪಡೆಯುವ ಪ್ರಕ್ರಿಯೆ ತುಂಬಾ ವೇಗವಾಗಿದೆ. ನಿಮ್ಮ ಕನಸಿನ ಮನೆಯ ಸಾಲದ ಅನುಮೋದನೆ ಪಡೆಯುವುದಕ್ಕಾಗಿ ಹೆಚ್ಚು ಕಾಲ ಕಾಯಬೇಕಾಗಿಲ್ಲ. ಹೊಸ ನಿಯಮಾನುಗಳಸಾರ ಶೀಘ್ರದಲ್ಲೇ ಸಾಲಗಳನ್ನು ಅನುಮೋದಿಸುವ ನಿಯಮಗಳನ್ನು ಜಾರಿ ತರಲಾಗುತ್ತಿದೆ.

3. ಕಡಿಮೆ ಅಡಮಾನ ದರ

3. ಕಡಿಮೆ ಅಡಮಾನ ದರ

ಪ್ರಸ್ತುತ ಸಂದರ್ಭದಲ್ಲಿ ಅಡಮಾನ ದರಗಳು ಕೂಡ ಕಡಿಮೆಯಾಗಿವೆ. ಹೀಗಾಗಿ ಅಡಮಾನ ದರ ಹೆಚ್ಚಾಗುವ ಮೊದಲು ಇದರ ಸದುಪಯೋಗಪಡಿಸಿಕೊಳ್ಳುವುದು ಉತ್ತಮ ಎನ್ನುವುದು ತಜ್ಞರ ಸಲಹೆ. ಕಳೆದ 2-3 ವರ್ಷಗಳಲ್ಲಿ ಬಡ್ಡಿದರ ಭಾಗಶಹ ಕಡಿತ ಕಂಡಿದ್ದು, ಇದು ಮುಂದಿನ ಕೆಲ ದಿನಗಳವರೆಗೂ ಮುಂದುವರೆಯುವ ಸಾಧ್ಯತೆ ಇದೆ. ಬ್ಯಾಂಕುಗಳ ಸಾಲದ ಹರಿವು ಕೂಡ ಹೆಚ್ಚಾಗಿದೆ.

4. ಪ್ರಧಾನಮಂತ್ರಿ ಅವಾಸ್ ಯೋಜನೆ

4. ಪ್ರಧಾನಮಂತ್ರಿ ಅವಾಸ್ ಯೋಜನೆ

2022ರ ಒಳಗಾಗಿ ದೇಶದ ಪ್ರತಿಯೊಬ್ಬರಿಗೂ ಮನೆ ಸಿಗಬೇಕೆನ್ನುವುದು ಕೇಂದ್ರದ ಪಿಎಂಎವೈ ಯೋಜನೆಯ ಉದ್ದೇಶ. ವಾರ್ಷಿಕವಾಗಿ ಆದಾಯ ರೂ. 6 ಲಕ್ಷ ಇರುವವರು ಪ್ರಸ್ತುತ ಈ ಸಬ್ಸಿಡಿಯ ಲಾಭವನ್ನು ಪಡೆಯುತ್ತಿದ್ದಾರೆ. ಆದರೆ ಈಗ ಇದರ ಮಿತಿಯನ್ನು 6 ಲಕ್ಷದಿಂದ 18 ಲಕ್ಷಕ್ಕೆ ಹೆಚ್ಚಿಸಲಾಗಿದೆ. ಅಂದರೆ ಈ ಸಬ್ಸಿಡಿ ಪರಿಮಿತಿಯಲ್ಲಿ ಇದೀಗ ರೂ. 18 ಲಕ್ಷದವರೆಗೆ ಆದಾಯ ಗಳಿಸುವವರು ಫಲಾನುಭವಿಗಳು ಆಗಲಿದ್ದಾರೆ. ವಾರ್ಷಿಕವಾಗಿ ರೂ. 12 ಲಕ್ಷ ಆದಾಯ ಗಳಿಸುತ್ತಿರುವವರು ಮೂಲ ಅಸಲು ರೂ. 9 ಲಕ್ಷದ ಮೇಲೆ ಶೇ. 4ರಷ್ಟು ಬಡ್ಡಿ ಸಬ್ಸಿಡಿ ಪಡೆಯಲಿದ್ದಾರೆ. ಒಂದು ವೇಳೆ ನಿಮ್ಮ ಆದಾಯ ವಾರ್ಷಿಕವಾಗಿ ರೂ. 18 ಲಕ್ಷ ಇದ್ದರೆ ಮೂಲ ಅಸಲು ರೂ. 12 ಲಕ್ಷದ ಮೇಲೆ ಶೇ. 3ರಷ್ಟು ಸಬ್ಸಿಡಿ ಪಡೆಯಬಹುದು. 2೦ ವರ್ಷಗಳ ಕಾಲಾವಧಿ ಸಾಲದ ಮೇಲೆ ಶೇ. 9ರ ಬಡ್ಡಿದರದಲ್ಲಿ ಶೇ. 3ರ ಸಬ್ಸಿಡಿ ದರದಲ್ಲಿ ಒಟ್ಟು ರೂ. 2.4 ಲಕ್ಷ ಸಬ್ಸಿಡಿ ಗಳಿಸಬಹುದು. ಅಂದರೆ ಪ್ರತಿ ತಿಂಗಳ ಕಂತುಗಳಲ್ಲಿ ಸರಾಸರಿ ರೂ. 2,200ರವರೆಗೆ ಕಡಿತವಾಗುತ್ತದೆ. ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

5. ಮಧ್ಯಮ ವರ್ಗದ ಸಬ್ಸಿಡಿ ಯೋಜನೆ

5. ಮಧ್ಯಮ ವರ್ಗದ ಸಬ್ಸಿಡಿ ಯೋಜನೆ

ಪ್ರಧಾನಿ ಮೋದಿಯವರು ಡಿಸೆಂಬರ್ 31, 2016ರಂದು ಎರಡು ನೂತನ ಕ್ರೆಡಿಟ್ ಸಬ್ಸಿಡಿ ಸ್ಕಿಮ್ ಗಳನ್ನು ಮಧ್ಯಮ ವರ್ಗದವರಿಗಾಗಿ ಘೋಷಿಸಿದ್ದಾರೆ. ರೂ. 12 ಲಕ್ಷ ವಾರ್ಷಿಕ ಆದಾಯ ಹೊಂದಿರುವವರು ಶೇ. 4ರಷ್ಟು ಹೌಸಿಂಗ್ ಸಬ್ಸಿಡಿ ಪಡೆಯಲಿದ್ದಾರೆ. ರೂ. 18 ಲಕ್ಷ ವಾರ್ಷಿಕ ಆದಾಯ ಹೊಂದಿರುವವರಿಗೆ ಶೇ. 3ರಷ್ಟು ಸಬ್ಸಿಡಿ ಸೌಲಭ್ಯ ಸಿಗಲಿದೆ.

6. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕಿಮ್(CLSS)

6. ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕಿಮ್(CLSS)

2022ರ ವೇಳೆಗೆ ಪ್ರತಿ ಭಾರತೀಯ ಕುಟುಂಬಕ್ಕೆ ಪ್ರಧಾನಮಂತ್ರಿ ದೃಷ್ಟಿಕೋನದ ವಾಸಯೋಗ್ಯ ಮನೆಗಾಗಿ ಹಣಕಾಸು ಸೌಲಭ್ಯ ಒದಗಿಸುವುದು ವಸತಿ ಸಚಿವಾಲಯದ ಪ್ರಯತ್ನವಾಗಿದೆ. ಹೀಗಾಗಿ ಸಬ್ಸಿಡಿ ನಿರ್ಬಂಧಗಳ ವ್ಯಾಪ್ತಿಯನ್ನು ಸಡಿಲಿಸಲಾಗಿದೆ. ಸಿಎಲ್ಎಸ್ಎಸ್ ಹಿಂದಿನ ಬಜೆಟ್ ನಲ್ಲಿ ಶೇ. 6.5ರಷ್ಟು ಬಡ್ಡಿ ಸಬ್ಸಿಡಿಯನ್ನು ಘೋಷಿಸಿತ್ತು.

7. ರೇರಾ ಕಾಯಿದೆ(RERA ACT)

7. ರೇರಾ ಕಾಯಿದೆ(RERA ACT)

ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(RERA) ಈಗಾಗಲೇ ಮೇ 1ರಿಂದ ಜಾರಿಗೆ ಬಂದಿದೆ. 2017ರ ಮೇ 1ರಿಂದ ಕಾಯಿದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕಾದ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಒಂದೊಂದು ನಿಯಂತ್ರಣಾ ಪ್ರಾಧಿಕಾರ ಮತ್ತು ಮೇಲ್ಮನವಿಗೆ ಸಂಬಂಧಿಸಿದ ನ್ಯಾಯಾಧಿಕರಣ ರೂಪಿಸುವುದಕ್ಕೆ ಸೂಚಿಸಲಾಗಿದೆ. ರೇರಾ ಕಾಯಿದೆ ಗ್ರಾಹಕರಿಗೆ ಹೊಸ ಆಶಾಕಿರಣ ಹಾಗೂ ಗ್ರಾಹಕ ಸ್ನೇಹಿಯಾಗಿದ್ದು, ಹೊಸ ಮನೆ ಖರೀದಿ ಮಾಡಬಯಸುವರಿಗೆ ಹಲವಾರು ಪ್ರಯೋಜನಗಳು ಸಿಗುವುದರಲ್ಲಿ ಯಾವುದೇ ಸಂಶಯಗಳಿಲ್ಲ.
ರೆಸಿಡೆನ್ಶಿಯಲ್ ಪ್ರಾಜೆಕ್ಟ್​ಗಳ ವಿಳಂಬ ತಡೆಯುವುದು. ಗ್ರಾಹಕರಿಗೆ ತಡವಾಗಿ ಮನೆಗಳು ಲಭ್ಯವಾಗುತ್ತಿರುವುದನ್ನು ತಪ್ಪಿಸಿ ನಿಗದಿತ ಅವಧಿಯೊಳಗೆ ಸಿಗುವಂತೆ ಮಾಡುವುದು. ಗ್ರಾಹಕರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳನ್ನು ತಡೆಯುವುದು. ಒಟ್ಟಿನಲ್ಲಿ ಮನೆ ಖರೀದಿದಾರರನ್ನು ಡೆವೆಲಪರ್ಸ್ ಗಳಿಂದ, ವಂಚನೆಗಳಿಂದ ರಕ್ಷಿಸುವುದು ಇದರ ಮುಖ್ಯ ಉದ್ದೇಶ.
ಈ ಹೊಸ ರೇರಾ ಕಾಯಿದೆ ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಹೊಸ ಪ್ರಾಜೆಕ್ಟ್ ಗಳಿಗೆ ಅನ್ವಯವಾಗಲಿದೆ. ಕನಿಷ್ಠ 500 ಚದರ ಮೀಟರ್ ವಿಸ್ತೀರ್ಣ ಅಥವಾ 8 ಫ್ಲ್ಯಾಟ್ ಹೊಂದಿರುವ ಎಲ್ಲ ರೆಸಿಡೆನ್ಶಿಯಲ್ ಯೋಜನೆಗಳಿಗೆ ಇದು ಅನ್ವಯಿಸುತ್ತದೆ. ಡೆವಲಪರ್​ಗಳು ತಮ್ಮ ಯೋಜನೆಗಳನ್ನು ನಿಯಂತ್ರಣಾ ಪ್ರಾಧಿಕಾರದಲ್ಲಿ ನೋಂದಣಿ ಮಾಡದ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ. ಆಕಸ್ಮಾತ್ ರೇರಾ ಕಾಯಿದೆ ನಿಯಮಗಳನ್ನು ಡೆವಲಪರ್ ಗಳು ಉಲ್ಲಂಘನೆ ಮಾಡಿದಲ್ಲಿ ನೋಂದಣಿಯನ್ನು ರದ್ದುಪಡಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ. ಜತೆಗೆ ರದ್ದುಪಡಿಸಲ್ಪಡುವ ಪ್ರಾಜೆಕ್ಟ್​ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನೂ ನಿಷ್ಕ್ರಿಯಗೊಳಿಸಿ, ಖಾತೆಯಲ್ಲಿರುವ ಮೊತ್ತವನ್ನು ಯೋಜನೆ ಪೂರ್ಣಗೊಳಿಸಲು ಬಳಸಲಾಗುತ್ತದೆ. ರೇರಾ(RERA) ಕಾಯಿದೆ: ಗ್ರಾಹಕನೆ ರಾಜ, ಮನೆ ಖರೀದಿ ವ್ಯವಹಾರ ಈಗ ಸುಲಭ!

8. ಕೈಗೆಟಕುವ ದರ

8. ಕೈಗೆಟಕುವ ದರ

ಪೂರ್ವಂಕರ ನಂತಹ ಕಂಪನಿಗಳು ಅತ್ಯುತ್ತಮ ಯೋಜನೆಗಳೊಂದಿಗೆ ತಮಿಳುನಾಡಿನ ಚೆನ್ನೈ ಮತ್ತು ಕೊಯಮತ್ತೂರ ನಂತಹ ನಗರಗಳಲ್ಲಿ ಕಾರ್ಯಪ್ರವೃತ್ತವಾಗಿವೆ. ಕೈಗೆಟಕುವ ದರದಲ್ಲಿ ಜನರು ಉತ್ತಮ ಸೌಕರ್ಯಗಳನ್ನು ಪಡೆಯಬಹುದಾಗಿದೆ. ಜತೆಗೆ ಉತ್ತಮ ಈಜುಕೊಳ, ಜಿಮ್, ಕ್ಲಬ್ ಹೌಸ್ ನಂತಹ ಉನ್ನತ ಸೌಲಭ್ಯಗಳನ್ನು ಒದಗಿಸುತ್ತಿದೆ. 

English summary

Why 2019 is best time to get your own house

Owning a house of your own is a feeling that nothing else can match. Your own house is your domain where you can be yourself, relax, leave your worries behind and spend time with your family.Read more at: http://www.oneindia.com/india/why-this-is-the-best-time-to-get-your-own-house-2448959.html
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X