ರೇರಾ(RERA) ಕಾಯಿದೆ: ಗ್ರಾಹಕನೆ ರಾಜ, ಮನೆ ಖರೀದಿ ವ್ಯವಹಾರ ಈಗ ಸುಲಭ!

By Siddu
Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ಪ್ರತಿಯೊಬ್ಬರಿಗೂ ಕನಸಿನ ಮನೆ, ಫ್ಲ್ಯಾಟ್, ನಿವೇಶನ ಖರೀದಿಸುವ ಆಸೆ ಇರುತ್ತದೆ. ಆದರೆ ರಿಯಲ್ ಎಸ್ಟೇಟ್ ಉದ್ಯಮದಲ್ಲಿನ ಅನಿಯಂತ್ರಿತ ವಂಚನೆ ಪ್ರಕರಣಗಳಿಂದಾಗಿ ವ್ಯವಹಾರ ಅಷ್ಟೊಂದು ಸುಲಭದ್ದಾಗಿರಲಿಲ್ಲ. ಅದೊಂದು ಸವಾಲಿನ ಕೆಲಸವೇ ಆಗಿತ್ತು. ಅನೇಕ ಅಮಾಯಕರು ವಂಚನೆ, ಮೋಸಕ್ಕೆ ಒಳಗಾದ ಉದಾಹರಣೆಗಳು ಇವೆ.

  ಹೀಗಾಗಿ ಯಾವುದೇ ಲಗಾಮುಗಳಿಲ್ಲದೇ ಅನಿಯಂತ್ರಿತವಾಗಿರುವ ರಿಯಲ್ ಎಸ್ಟೇಟ್ ಉದ್ಯಮದ ಕುರಿತಾದ ಸಾರ್ವಜನಿಕರ ದೂರು, ನೋವುಗಳನ್ನು ಅರಿತುಕೊಂಡು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅಂಕುಶ ಹಾಕಿ ಹೊಸ ಕಾಯಿದೆ ಜಾರಿ ತರಬೇಕೆಂದು ಕೇಂದ್ರ ಸರ್ಕಾರ ನಿರ್ಧರಿಸಿ, ಈಗ ಅನುಷ್ಠಾನಕ್ಕೆ ಮುಂದಾಗಿದೆ.

  ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(ಆರ್​ಇಆರ್​ಎ) 2016 ಮಾರ್ಚ್​ನಲ್ಲಿ ಸಂಸತ್ತಿನಲ್ಲಿ ಅನುಮೋದನೆ ಪಡೆದುಕೊಂಡಿತ್ತು. ಆದರೆ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ಬರದೆ ಇದ್ದುದ್ದರ ಕುರಿತು ಜನರಲ್ಲಿ ಅಸಮಧಾನ ಕೇಳಿ ಬಂದಿತ್ತು.
  ಕಾನೂನು ಜಾರಿಯಾದರೂ ಪರಿಣಾಮಕಾರಿಯಾಗಿ ಅಳವಡಿಕೆಯಾಗಬೇಕಿದೆ. ಅದೇನೆ ಇರಲಿ ಈ ರೇರಾ ಕಾಯಿದೆ ಗ್ರಾಹಕರಿಗೆ ಹೊಸ ಆಶಾಕಿರಣ ಹಾಗೂ ಗ್ರಾಹಕ ಸ್ನೇಹಿಯಾಗಿದ್ದು, ಇದರಿಂದ ಹಲವಾರು ಪ್ರಯೋಜನಗಳು ಸಿಗುವುದರಲ್ಲಿ ಯಾವುದೇ ಸಂಶಯಗಳಿಲ್ಲ. ಹಾಗಿದ್ದರೆ ಏನಿದು ಕಾಯಿದೆ, ಏನೇನು ಅಂಶಗಳನ್ನು ಒಳಗೊಂಡಿದೆ, ಇದು ಯಾರಿಗೆ ಉಪಯೋಗ, ಕಾಯಿದೆ ಮಾನದಂಡಗಳೇನು ಹೀಗೆ ನಿಮ್ಮಲ್ಲಿನ ಹಲವಾರು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ...

  ರೇರಾ ಜಾರಿ ಯಾವಾಗ?

  ರಿಯಲ್ ಎಸ್ಟೇಟ್ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ(RERA) ಈಗಾಗಲೇ ಮೇ 1ರಿಂದ ಜಾರಿಗೆ ಬಂದಿದೆ. 2017ರ ಮೇ 1ರಿಂದ ಕಾಯಿದೆ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಬೇಕಾದ ಹಿನ್ನೆಲೆಯಲ್ಲಿ ಎಲ್ಲಾ ರಾಜ್ಯಗಳಲ್ಲೂ ಒಂದೊಂದು ನಿಯಂತ್ರಣಾ ಪ್ರಾಧಿಕಾರ ಮತ್ತು ಮೇಲ್ಮನವಿಗೆ ಸಂಬಂಧಿಸಿದ ನ್ಯಾಯಾಧಿಕರಣ ರೂಪಿಸುವುದಕ್ಕೆ ಸೂಚಿಸಲಾಗಿತ್ತು. ಆದರೆ ಎಲ್ಲಾ ರಾಜ್ಯಗಳಲ್ಲಿ ಈ ಪ್ರಾಧಿಕಾರ ರಚನಾ ಪ್ರಕ್ರಿಯೆ ಮುಗಿದಿಲ್ಲ. ಮಧ್ಯಪ್ರದೇಶದಲ್ಲಿ ಮಾತ್ರ ಪ್ರಕ್ರಿಯೆ ಮುಗಿದಿದೆ.

  ರೇರಾ ಕಾಯಿದೆ ಅಗತ್ಯವೇನು?

  ಲಯಾಸೆಸ್ ಫೋರಸ್ ಕೈಗೊಂಡ ಸಮೀಕ್ಷೆ ಪ್ರಕಾರ ಶೇ. 80ರಷ್ಟು ರೆಸಿಡೆನ್ಶಿಯಲ್ ಪ್ರಾಜೆಕ್ಟ್​ಗಳು ನಿಗದಿತ ಸಮಯದೊಳಗೆ ಪೂರ್ಣಗೊಂಡಿಲ್ಲ. ಮಿಗಿಲಾಗಿ ಶೇ. 25ರಷ್ಟು ಯೋಜನೆಗಳು ನಿಗದಿತ ಸಮಯಕ್ಕಿಂತ ನಾಲ್ಕು ವರ್ಷಗಳಷ್ಟು ತಡವಾಗಿ ಮುಗಿದಿವೆ.
  1. ರೆಸಿಡೆನ್ಶಿಯಲ್ ಪ್ರಾಜೆಕ್ಟ್​ಗಳ ವಿಳಂಬ ತಡೆಯುವುದು.
  2. ಗ್ರಾಹಕರಿಗೆ ತಡವಾಗಿ ಮನೆಗಳು ಲಭ್ಯವಾಗುತ್ತಿರುವುದನ್ನು ತಪ್ಪಿಸಿ ನಿಗದಿತ ಅವಧಿಯೊಳಗೆ ಸಿಗುವಂತೆ ಮಾಡುವುದು.
  3. ಗ್ರಾಹಕರಿಂದ ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಹಣ ಪಡೆದು ವಂಚಿಸುತ್ತಿರುವ ಪ್ರಕರಣಗಳನ್ನು ತಡೆಯುವುದು.
  4. ಒಟ್ಟಿನಲ್ಲಿ ಮನೆ ಖರೀದಿದಾರರನ್ನು ಡೆವೆಲಪರ್ಸ್ ಗಳಿಂದ, ವಂಚನೆಗಳಿಂದ ರಕ್ಷಿಸುವುದು.

  ಡೆವೆಲಪರ್ಸ್/ಬಿಲ್ಡರ್ಸ್, ಏಜೆಂಟ್ ಗಳು ಏನು ಮಾಡಬೇಕು?

  1. ಡೆವೆಲಪರ್ಸ್/ಬಿಲ್ಡರ್ಸ್, ಪ್ರಮೋಟರ್ಸ್ ತಮ್ಮ ಹಿನ್ನೆಲೆಯ ವಿವರಗಳನ್ನು ನೀಡಬೇಕು.
  2. ಪ್ರಾಜೆಕ್ಟ್ ಗಳನ್ನು ನೋಂದಣಿ ಮಾಡಿಸಿ ನೋಂದಣಿ ಸಂಖ್ಯೆ ಪಡೆಯಬೇಕು.
  3. ಪ್ರಮೋಟರ್ಸ್ ಲಾಂಚ್ ಮಾಡುವ ಯೋಜನೆಯ ಅಂದರೆ ಕಳೆದ ಐದು ವರ್ಷಗಳಲ್ಲಿ ಪರಿಪೂರ್ಣವಾದ ಇಲ್ಲವೇ ಅಭಿವೃದ್ಧಿ ಪಡಿಸುತ್ತಿರುವ ಯೋಜನೆಗಳ ಸಂಪೂರ್ಣ ವಿವರ ನೀಡಬೇಕು.
  4. ಯೋಜನೆಗಳ ಪ್ರಸ್ತುತ ಸ್ಥಿತಿ, ಪೂರ್ಣಗೊಳ್ಳುವಲ್ಲಿನ ವಿಳಂಬ, ಬಾಕಿ ಉಳಿದಿರುವ ಪ್ರಕರಣಗಳು, ಭೂಮಿ ಪ್ರಕಾರ ಮತ್ತು ಬಾಕಿ ಉಳಿದಿರುವ ಪಾವತಿ ವಿವರಗಳನ್ನು ಸಹ ಹಂಚಿಕೊಳ್ಳಬೇಕು.
  5. ಅನುಮೋದನೆ ಮತ್ತು ಪ್ರಾರಂಭ ಪ್ರಮಾಣಪತ್ರಗಳ ಅಧಿಕೃತ ಪ್ರತಿಯನ್ನು ಪ್ರಾಧಿಕಾರದಿಂದ ಪಡೆಯಬೇಕು.
  6. ಮಂಜೂರು ಯೋಜನೆ, ಬಡಾವಣೆ ಯೋಜನೆ ಮತ್ತು ಪ್ರಾಜೆಕ್ಟ್ ನಿರ್ಧಿಷ್ಟ ಉದ್ದೇಶ ಅಥವಾ ನಿರ್ದಿಷ್ಟ ಪ್ರಾಧಿಕಾರದಿಂದ ಮಂಜೂರಾದ ಸಂಪೂರ್ಣ ಯೋಜನೆಯ ವಿವರ.
  7. ಹಂಚಿಕೆ ಪತ್ರದ ಪ್ರಸ್ತಾವನೆ, ಮಾರಾಟ ಒಪ್ಪಂದ, ಮತ್ತು ಎಲ್ಲರ ಸಹಿ ಹೊಂದಿರುವ ಸಂವಹನ ಪತ್ರ ಹೊಂದಬೇಕು.
  8. ಮಾರಾಟ ಮಾಡಲ್ಪಡುವ ಅಪಾರ್ಟ್‌ಮೆಂಟಿನ ಸಂಪೂರ್ಣ ವಿವರ ಒಳಗೊಂಡಂತೆ ಸಂಖ್ಯೆ, ವಿಧ, ಕಾರ್ಪೆಟ್ ಏರಿಯಾ, ಬಾಲ್ಕನಿ, ವರಾಂಡಾ, ತೆರೆದ ಪ್ರದೇಶ ಇತ್ಯಾದಿ ವಿವರ ಇರಬೇಕು.
  9. ಪ್ರಾಜೆಕ್ಟ್ ನಲ್ಲಿ ಮಾರಾಟ ಮಾಡಲ್ಪಡುವ ಗ್ಯಾರೆಜ್ ಸಂಖ್ಯೆ ಮತ್ತು ಪ್ರದೇಶದ ವಿವರ.
  10. ಗುತ್ತಿಗೆದಾರರು, ವಾಸ್ತುಶಿಲ್ಪಿ, ಎಂಜಿನೀಯರ್ ಮತ್ತು ಪ್ರಸ್ತಾವಿತ ಯೋಜನೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಇತರ ವ್ಯಕ್ತಿಗಳಿದ್ದಲ್ಲಿ ಅವರೆಲ್ಲರ ಹೆಸರು ಮತ್ತು ವಿಳಾಸ ಒದಗಿಸಬೇಕು.
  11. ಪ್ರಮೋಟರ್ಸ್ ಅಥವಾ ಇತರ ಅಥಾರಿಟಿ ವ್ಯಕ್ತಿಗಳಿಂದ ಡಿಕ್ಲರೇಷನ್(ಘೋಷಣೆ) ಇರುವ ಅಫಿಡವಿಟ್ ಮಾಡಿಸಬೇಕು ಅದರ ಅವರ ಸಹಿ ಕೂಡ ಇರಬೇಕು.
  12. ಏಜೆಂಟ್​ಗಳು ಪ್ರಾಧಿಕಾರದಲ್ಲಿ ಮೂರು ತಿಂಗL ಒಳಗಾಗಿ ನೋಂದಣಿ ಮಾಡಿಕೊಂಡಿರಬೇಕು.

  ಗ್ರಾಹಕರಿಗೆ ಪ್ರಯೋಜನ

  ಈ ಹೊಸ ರೇರಾ ಕಾಯಿದೆ ಪ್ರಸ್ತುತ ಚಾಲ್ತಿಯಲ್ಲಿರುವ ಮತ್ತು ಹೊಸ ಪ್ರಾಜೆಕ್ಟ್ ಗಳಿಗೆ ಅನ್ವಯವಾಗಲಿದೆ. ಕನಿಷ್ಠ 500 ಚದರ ಮೀಟರ್ ವಿಸ್ತೀರ್ಣ ಅಥವಾ 8 ಫ್ಲ್ಯಾಟ್ ಹೊಂದಿರುವ ಎಲ್ಲ ರೆಸಿಡೆನ್ಶಿಯಲ್ ಯೋಜನೆಗಳಿಗೆ ಇದು ಅನ್ವಯಿಸುತ್ತದೆ.
  ಡೆವಲಪರ್​ಗಳು ತಮ್ಮ ಯೋಜನೆಗಳನ್ನು ನಿಯಂತ್ರಣಾ ಪ್ರಾಧಿಕಾರದಲ್ಲಿ ನೋಂದಣಿ ಮಾಡದ ಹೊರತು ಮಾರಾಟ ಮಾಡಲು ಸಾಧ್ಯವಿಲ್ಲ. ಆಕಸ್ಮಾತ್ ರೇರಾ ಕಾಯಿದೆ ನಿಯಮಗಳನ್ನು ಡೆವಲಪರ್ ಗಳು ಉಲ್ಲಂಘನೆ ಮಾಡಿದಲ್ಲಿ ನೋಂದಣಿಯನ್ನು ರದ್ದುಪಡಿಸುವ ಅಧಿಕಾರ ಪ್ರಾಧಿಕಾರಕ್ಕೆ ಇರುತ್ತದೆ. ಜತೆಗೆ ರದ್ದುಪಡಿಸಲ್ಪಡುವ ಪ್ರಾಜೆಕ್ಟ್​ಗೆ ಸಂಬಂಧಿಸಿದ ಬ್ಯಾಂಕ್ ಖಾತೆಯನ್ನೂ ನಿಷ್ಕ್ರಿಯಗೊಳಿಸಿ, ಖಾತೆಯಲ್ಲಿರುವ ಮೊತ್ತವನ್ನು ಯೋಜನೆ ಪೂರ್ಣಗೊಳಿಸಲು ಬಳಸಲಾಗುತ್ತದೆ.

  ಆನ್ಲೈನ್, ವೆಬ್ಸೈಟ್ ಮಾಹಿತಿ

  ಪ್ರಾಧಿಕಾರದೊಂದಿಗೆ ನೋಂದಣಿಯಾದ ನಂತರ ಬಿಲ್ಡರ್ಸ್ ಗಳಿಗೆ ಪ್ರಾಜೆಕ್ಟ್ ಗೆ ಸಂಬಂಧಿತ ವಿವರಗಳನ್ನು ಒದಗಿಸಲು ವೆಬ್ಸೈಟ್ ಕ್ರಿಯೆಟ್ ಮಾಡಲು ಅವಕಾಶ ನೀಡಲಾಗುತ್ತದೆ. ಇದು ಯಾವ ವಿಧದ ಅಪಾರ್ಟ್ಮೆಂಟ್ ಅಥವಾ ಪ್ಲಾಟ್ ಗಳ ಸಂಖ್ಯೆ ಮತ್ತು ತ್ರೈಮಾಸಿಕಕ್ಕೆ ಅನುಗುಣವಾಗಿ ಯೋಜನೆ ಮತ್ತು ಇನ್ನಿತರ ವಿವರಗಳನ್ನು ಅಪ್ಡೇಟ್ ವಿವರ ಮಾಡಬೇಕು. ಒಂದು ವೇಳೆ ಅಪ್ಡೇಟ್ ಮಾಡದಿದಲ್ಲಿ ಡೆವಲಪರ್​ಗಳಿಗೆ ಯೋಜನೆಯ ಒಟ್ಟು ಮೊತ್ತದ ಶೇ. 10ರಷ್ಟು ದಂಡ ವಿಧಿಸಲಾಗುತ್ತದೆ. ಮತ್ತೆ ಮತ್ತೆ ತಪ್ಪುಗಳು ಸಂಭವಿಸಿದಲ್ಲಿ ಹೆಚ್ಚುವರಿ ಶೇ. 10ರಷ್ಟು ದಂಡ ವಿಧಿಸಲಾಗುತ್ತದೆ.

  ಏಜೆಂಟ್​ ಮತ್ತು ಬ್ರೋಕರ್ ನೋಂದಣಿ

  ರಿಯಲ್ ಎಸ್ಟೇಟ್ ಡೆವಲಪರ್ಸ್, ಬಿಲ್ಡರ್ಸ್ ಗಳಷ್ಟೇ ಅಲ್ಲ ಏಜೆಂಟ್​ ಮತ್ತು ಬ್ರೋಕರ್​ಗಳು ಕೂಡ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದಲ್ಲಿ ನೋಂದಣಿ ಮಾಡಿರಬೇಕು. ಇಲ್ಲದಿದ್ದಲ್ಲಿ ಇಬ್ಬರಿಗೂ ಅಪಾರ್ಟ್​ವೆುಂಟ್​ನ ಮೊತ್ತದ ಶೇ. 10ರಷ್ಟು ದಂಡ ವಿಧಿಸಬಹುದಾಗಿದೆ. ಅಥವಾ ಒಂದು ವರ್ಷದ ಜೈಲು ಶಿಕ್ಷೆ ವಿಧಿಸಬಹುದಾಗಿದೆ.

  ಮನೆ ಖರೀದಿ ಜಾಹೀರಾತು

  ಫ್ಲಾಟ್, ಅಪಾರ್ಟ್‌ಮೆಂಟ್ ಅಥವಾ ಕಟ್ಟಡ ಖರೀದಿ ಮಾಡುವಂತೆ ಪ್ರಮೋಟರ್ಸ್ ಯಾವ ವ್ಯಕ್ತಿಗಳಿಗೂ ಅಹ್ವಾನಿಸಬಾರದು ಅಥವಾ ಜಾಹೀರಾತು ನೀಡಬಾರದು. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ ಪ್ರಾಜೆಕ್ಟ್ ನೋಂದಣಿ ಮಾಡಿಸಬೇಕು. ಹೀಗಾಗಿ ಪ್ರತಿ ಜಾಹೀರಾತು ಈ RERA ನೋಂದಣಿ ಸಂಖ್ಯೆಯನ್ನು ಬಳಸಬೇಕು.

  ಗುಣಮಟ್ಟದ ನಿರ್ಮಾಣ

  ಗುಣಮಟ್ಟದ ನಿರ್ಮಾಣ ಕೂಡ ಬಿಲ್ಡರ್ಸ್ ಗಳ ಮುಂದಿರುವ ಸವಾಲು. ಏಕೆಂದರೆ ಈಗಾಗಲೇ ಕಳಪೆ ಗುಣಮಟ್ಟದ ಕಟ್ಟಡಗಳಿಂದಾಗಿ ಹಲವಾರು ಅನಾಹುತಗಳು ಸಂಭವಿಸಿವೆ. ರೇರಾ ಕಾಯಿದೆ ಇದಕ್ಕಾಗಿ ರಕ್ಷಣೆ ನೀಡುತ್ತದೆ. ಸೇಲ್ ಅಗ್ರಿಮೆಂಟ್ ಪ್ರಕಾರ ಕಟ್ಟಡ ರಚನಾತ್ಮಕ ದೋಷ ಅಥವಾ ಕೆಲಸದ ಯಾವುದೇ ದೋಷ, ಸೇವೆಗಳ ಗುಣಮಟ್ಟ ಅಥವಾ ನಿಬಂಧನೆ ಅಥವಾ ಮಾರಾಟದ ಒಪ್ಪಂದ ಇತ್ಯಾದಿಗಳಲ್ಲಿ ಯಾವುದೇ ದೋಷಗಳು ಕಂಡುಬಂದಲ್ಲಿ ಐದು ವರ್ಷಗಳ ಒಳಗಾಗಿ ಪ್ರವರ್ತಕರ ಗಮನಕ್ಕೆ ತಂದು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಬೇಕು. ಯಾವುದೇ ಶುಲ್ಕ ತೆಗೆದುಕೊಳ್ಳದೆ 30 ದಿನಗಳ ಒಳಗಾಗಿ ಪ್ರಮೋಟರ್ಸ್ ಈ ಸಮಸ್ಯೆಗಳನ್ನು ಸರಿಪಡಿಸಬೇಕು.

  ತಡ ಪರಿಹಾರ

  ಅಗ್ರಿಮೆಂಟ್ ಪ್ರಕಾರ ನಿಗದಿತ ಸಮಯದೊಳಗೆ ಕಾರ್ಯ ಪೂರ್ಣಗೊಳಿಸಲು ಅಥವಾ ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳಲು ವಿಫಲರಾದರೆ ಒಪ್ಪಂದದಲ್ಲಿ ನಮೂದಿಸಿದಂತೆ ಸಂಪೂರ್ಣ ಮೊತ್ತವನ್ನು ಬಡ್ಡಿ ಸೇರಿದಂತೆ ಹಿಂದಿರುಗಿಸಬೇಕು. ಇಲ್ಲದಿದ್ದರೆ ರೇರಾ ಪ್ರಕಾರ ಕಾನೂನು ಕ್ರಮ ಎದುರಿಸಬೇಕಾಗುತ್ತದೆ.

  ಎಂ. ವೆಂಕಯ್ಯ ನಾಯ್ಡು

  ರೇರಾ ಕಾಯಿದೆ ಕರ್ನಾಕಟದಲ್ಲೂ ಜಾರಿಯಾಗುವುದರಿಂದ ಬಿಲ್ಡರ್, ಡೆವಲಪರ್ಸ್ ಗಳು ಖರೀದಿದಾರರಿಗೆ ಭರವಸೆ ನೀಡಿದಂತೆ ನಿಗದಿತ ಕಾಲಾವಧಿಯಲ್ಲಿ ಫ್ಲಾಟ್, ನಿವೇಶನ, ಮನೆಗಳನ್ನು ನಿರ್ಮಿಸಿಕೊಡಬೇಕಾಗುತ್ತದೆ. ಒಪ್ಪಂದದ ನಿಯಮಗಳ ಪಾಲನೆ ಕಡ್ಡಾಯವಾಗಿರುತ್ತದೆ. ರೇರಾ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ ಶೀಘ್ರದಲ್ಲೆ ಕರ್ನಾಟಕದಲ್ಲಿ ಅಸ್ತಿತ್ವಕ್ಕೆ ಬರಲಿದೆ ಎಂದು ಕೇಂದ್ರ ನಗರಾಭಿವೃದ್ಧಿ ಸಚಿವರಾದ ವೆಂಕಯ್ಯ ನಾಯ್ಡು ಹೇಳಿದ್ದಾರೆ.

  English summary

  What is the Real Estate Regulation Act(RERA) and how it will help buyers

  What is the Real Estate Regulation Act (RERA)? how it will Home Buyers Main objective of RERA is to protect the interest of consumers in the real estate sector and to establish a mechanism for speedy dispute.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more