Englishहिन्दी മലയാളം தமிழ் తెలుగు

ಪ್ರಧಾನಮಂತ್ರಿ ಅವಾಸ್ ಯೋಜನೆ ಅಡಿ 24 ಲಕ್ಷ ಮನೆ ನಿರ್ಮಾಣ, 11,412 ಕೋಟಿ ಬಿಡುಗಡೆ

Written By: Siddu
Subscribe to GoodReturns Kannada

ಮನೆಗಳನ್ನು ಹೊಂದುವುದು ಪ್ರತಿಯೊಬ್ಬ ಭಾರತೀಯನ ಕನಿಷ್ಟ ಮೂಲಭೂತ ಅಗತ್ಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕೆನ್ನುವುದು ಪ್ರಧಾನಿ ಮೋದಿಯವರ ಕನಸು. ಈ ಆಶಯದ ಸಾಕಾರಕ್ಕಾಗಿ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಅವಾಸ್ ಯೋಜನೆ ಆರಂಭಿಸಿದೆ. ಪ್ರಧಾನಮಂತ್ರಿ ಅವಾಸ ಯೋಜನೆ (PMAY) ಅಡಿ ದೇಶದ ಬಡವರು, ನಿರ್ಗತಿಕರು, ಅತಿ ಕೆಳವರ್ಗದವರು, ಮಧ್ಯಮ ವರ್ಗದವರು, ಕಡಿಮೆ ಆದಾಯ ಇರುವವರು, ನೌಕರರು ಹೀಗೆ ಎಲ್ಲರೂ ಒಳಗೊಂಡಿದ್ದಾರೆ. 

ಪ್ರಧಾನಮಂತ್ರಿ ಅವಾಸ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ?

24 ಲಕ್ಷ ಮನೆ ಮಂಜೂರು

ಪ್ರಧಾನಮಂತ್ರಿ ಅವಾಸ್ ಯೋಜನೆ (ನಗರ) ಅಡಿಯಲ್ಲಿ 24 ಲಕ್ಷ ಕೈಗೆಟಕುವ ದರದ ಮನೆಗಳನ್ನು ಮಂಜೂರಾತಿ ಮಾಡಲಾಗಿದೆ. ಇದಕ್ಕಾಗಿ ಸರ್ಕಾರ 11,412 ಕೋಟಿ ರೂ. ಬಿಡುಗಡೆ ಮಾಡಿದೆ ಎಂದು ಸಚಿವಾಲಯ ಮೂಲಗಳು ತಿಳಿಸಿವೆ.

2.99 ಲಕ್ಷ ಮನೆ ನಿರ್ಮಾಣ ಪೂರ್ಣ

ಪಿಎಂಎವೈ(ನಗರ) ಯೋಜನೆ ಲಾಂಚ್ ಆದ ನಂತರದ ಕಳೆದ ಎರಡು ವರ್ಷಗಳಲ್ಲಿ 2.99 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ. ಹಿಂದಿನ JNNURM (Jawaharlal Nehru National Urban Renewal Mission) ಯೋಜನೆಗಿಂತ ತುಂಬಾ ವೇಗವಾಗಿ ನಿರ್ಮಾಣ ಕಾರ್ಯ ಸಾಧಿಸಿದೆ ಎಂದು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಹೇಳಿದೆ.

ಕೇಂದ್ರದ ನೆರವು

ಕಳೆದ ಎರಡು ವರ್ಷಗಳಲ್ಲಿ ಕೇಂದ್ರ ಸರ್ಕಾರ ರೂ. 37,233 ಕೋಟಿ ನೆರವಿನೊಂದಿಗೆ ಸುಮಾರು 24 ಲಕ್ಷ ವಸತಿ ಘಟಕಗಳನ್ನು ಮಂಜೂರು ಮಾಡಲಾಗಿದೆ. ಹಿಂದಿನ JNNURM ಯೋಜನೆಗೆ ಹೋಲಿಸಿದರೆ ನೆರವಿನ ಮೊತ್ತ ಹಾಗೂ ಒಟ್ಟು ಮನೆಗಳ ಸಂಖ್ಯೆ ದುಪ್ಪಟ್ಟು ಹೆಚ್ಚಿದೆ ಎಂದು ಸಚಿವಾಲಯ ಹೇಳಿದೆ.

ಕರ್ನಾಟಕದಲ್ಲಿ ಎಷ್ಟು?

ಕರ್ನಾಟಕದಲ್ಲಿ ಕೇವಲ 2 ಲಕ್ಷ ಮನೆಗಳನ್ನು ಮಂಜೂರು ಮಾಡಲಾಗಿದೆ. ಬೇಡಿಕೆಗಳಿಗೆ ಅನುಗುಣವಾಗಿ ಕರ್ನಾಟಕ, ಉತ್ತರಪ್ರದೇಶ, ಮಹಾರಾಷ್ಟ್ರ, ಬಿಹಾರ, ಗುಜರಾತ್ ಮತ್ತು ರಾಜಸ್ಥಾನ ಹೆಚ್ಚಿನ ಪ್ರಸ್ತಾಪಗಳನ್ನು ಕೇಂದ್ರದ ಮುಂದೆ ಇಡಬೇಕಿದೆ. ಈ ರಾಜ್ಯಗಳಲ್ಲಿ ಶೇ. 50ಕ್ಕಿಂತಲೂ ಹೆಚ್ಚು ವಸತಿ ಬೇಡಿಕೆ ಇದೆ.

ನಿಧಾನಗತಿಗೆ ಕಾರಣ?

ಪಿಎಂಎವೈ(ನಗರ) ಯೋಜನೆ ಅಡಿ ಮನೆ ನಿರ್ಮಾಣ ಕಾರ್ಯ ಕೊಂಚ ಮಂದಗತಿಯಿಂದ ಸಾಗಿದೆ. ಮನೆ ನಿರ್ಮಾಣದ ದುರ್ಬಲವಾದ ಅನುಷ್ಠಾನಕ್ಕೆ ಮತ್ತು ನಿಧಾನಗತಿಗೆ ಭೂ ಸ್ವಾಧೀನ ವಿಳಂಬ ಪ್ರಮುಖ ಕಾರಣವಾಗಿದೆ ಎನ್ನಲಾಗಿದೆ.

ಇಂಪ್ಲಿಮೆಂಟ್ ಮಾಡುವವರು ಯಾರು?

ಕೇಂದ್ರ ಸರ್ಕಾರದ ಈ ಯೋಜನೆಯನ್ನು ನ್ಯಾಷನಲ್ ಹೌಸಿಂಗ್ ಬ್ಯಾಂಕ್(NHB), BLC(beneficiary led construction) ಘಟಕ ಮತ್ತು ಹುಡ್ಕೊ(HUDCO) ಸಂಸ್ಥೆಗಳು ಕಾರ್ಯಗತಗೊಳಿಸಲಿವೆ. ಮೊದಲ ಬಾರಿ ಮನೆ ಖರೀದಿಸುತ್ತಿದ್ದಿರಾ? ಹಾಗಿದ್ದರೆ 2.4 ಲಕ್ಷ ಸಬ್ಸಿಡಿ ಪಡೆಯಿರಿ

English summary

PMAY(U) under center releases Rs 11,412 crore for about 24 lakh affordable houses

As many as 24 lakh affordable houses have so far been sanctioned under the Pradhan Mantri Awas Yojana (Urban) for which the government has released an amount of over Rs 11,412 crore, ministry sources say.
Company Search
Enter the first few characters of the company's name or the NSE symbol or BSE code and click 'Go'
Thousands of Goodreturn readers receive our evening newsletter.
Have you subscribed?

Find IFSC

Get Latest News alerts from Kannada Goodreturns