For Quick Alerts
ALLOW NOTIFICATIONS  
For Daily Alerts

ಕರ್ನಾಟಕ ರೇರಾ (RERA) ಪ್ರಾಧಿಕಾರದಿಂದ ನೋಟಿಸ್ ಜಾರಿ

ಕರ್ನಾಟಕ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ನೀಡಿದ ನಿಗದಿತ ಗಡುವು ಮುಗಿದು ಒಂದು ತಿಂಗಳು ಕಳೆದರೂ ಇನ್ನೂ ನೋಂದಾಯಿಸದ 62 ಯೋಜನೆಗಳ ಪ್ರವರ್ತಕರಿಗೆ ರೇರಾ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.

By Siddu
|

ಕರ್ನಾಟಕ ರಾಜ್ಯ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ನೀಡಿದ ನಿಗದಿತ ಗಡುವು ಮುಗಿದು ಒಂದು ತಿಂಗಳು ಕಳೆದರೂ ಇನ್ನೂ ನೋಂದಾಯಿಸದ 62 ಯೋಜನೆಗಳ ಪ್ರವರ್ತಕರಿಗೆ ರೇರಾ ಪ್ರಾಧಿಕಾರ ನೋಟಿಸ್ ಜಾರಿ ಮಾಡಿದೆ.

 

ಫ್ಲಾಟ್, ಅಪಾರ್ಟ್‌ಮೆಂಟ್ ಅಥವಾ ಕಟ್ಟಡ ಖರೀದಿ ಮಾಡುವಂತೆ ಪ್ರಮೋಟರ್ಸ್ ಯಾವ ವ್ಯಕ್ತಿಗಳಿಗೂ ಅಹ್ವಾನಿಸಬಾರದು ಅಥವಾ ಜಾಹೀರಾತು ನೀಡಬಾರದು. ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರದ ಅಡಿಯಲ್ಲಿ ಅಪಾರ್ಟ್‌ಮೆಂಟ್‌ ಅಥವಾ ವಸತಿ ಬಡಾವಣೆ ಯೋಜನೆಗಳ ಸಮಗ್ರ ವಿವರ ನೀಡಿ ನೋಂದಣಿ ಮಾಡಿಸಬೇಕು. ಹೀಗಾಗಿ ಪ್ರತಿ ಜಾಹೀರಾತು ಈ RERA ನೋಂದಣಿ ಸಂಖ್ಯೆಯನ್ನು ಬಳಸಬೇಕು. ರೇರಾ(RERA) ಕಾಯಿದೆ: ಗ್ರಾಹಕನೆ ರಾಜ, ಮನೆ ಖರೀದಿ ವ್ಯವಹಾರ ಈಗ ಸುಲಭ!

ಶಿಕ್ಷಾರ್ಹ ಅಪರಾಧ

ಶಿಕ್ಷಾರ್ಹ ಅಪರಾಧ

ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಅನುಮೋದನೆ ಪಡೆಯದೆ ಜಾಹೀರಾತು ನೀಡುವುದು, ಮಾರಾಟ ಅಥವಾ ಮುಂಗಡ ಬುಕ್ಕಿಂಗ್ ಮಾಡುವುದು ಶಿಕ್ಷಾರ್ಹ ಅಪರಾಧವಾಗುತ್ತದೆ. ರೇರಾ ಅಡಿ ನೋಂದಣಿ ಮಾಡದೇ ಜಾಹೀರಾತು ನೀಡಿ, ಪ್ಲಾಟ್, ಸೈಟ್ ಬುಕ್ಕಿಂಗ್ ಮಾಡಿಕೊಳ್ಳುತ್ತಿರುವುದರ ಬಗ್ಗೆ ದೂರುಗಳು ಬಂದಿವೆ ಎಂದು ರೇರಾ ನೀಡಿದ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಮೇ 1ರಿಂದ ರೇರಾ ಜಾರಿ

ಮೇ 1ರಿಂದ ರೇರಾ ಜಾರಿ

ಕರ್ನಾಟಕದಲ್ಲಿ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ(ರೇರಾ) ಮೇ 1ರಿಂದ ಅಸ್ತಿತ್ವ ಕ್ಕೆ ಬಂದಿದೆ. ಯೋಜನೆ ಪೂರ್ಣಗೊಂಡ ಪ್ರಮಾಣ ಪತ್ರ (ಸಿ.ಸಿ) ಪಡೆಯದ ಎಲ್ಲಾ ಯೋಜನೆಗಳನ್ನು ರೇರಾ ಪ್ರಾಧಿಕಾರದಲ್ಲಿ ನೋಂದಣಿ ಮಾಡುವುದು ಕಡ್ಡಾಯವಾಗಿದೆ.

ರೇರಾ ಯಾರಿಗೆ ಅನ್ವಯ
 

ರೇರಾ ಯಾರಿಗೆ ಅನ್ವಯ

ಕರ್ನಾಟಕ ರಾಜ್ಯ ಸರ್ಕಾರ ಎರಡು ಪ್ರಮುಖ ಬದಲಾವಣೆಗಳೊಂದಿಗೆ ಹೊಸ ನಿಯಮ ರೂಪಿಸಿದೆ. ಈಗಾಗಲೇ ಚಾಲ್ತಿಯಲ್ಲಿರುವ ಯೋಜನೆಗಳಲ್ಲಿ ಶೇ. 60ರಷ್ಟು ಫ್ಲ್ಯಾಟ್, ನಿವೇಶನ/ವಿಲ್ಲಾಗಳ ಖರೀದಿದಾರರಿಗೆ ಕ್ರಯಪತ್ರ ಮಾಡಿಕೊಟ್ಟಿರುವ ರಿಯಲ್ ಎಸ್ಟೇಟ್ ಸಂಸ್ಥೆ, ಖಾಸಗಿ ಗೃಹ ನಿರ್ಮಾಣ ಸಂಸ್ಥೆಗಳು, ಗೃಹ ನಿರ್ಮಾಣ ಸಹಕಾರ ಸಂಘ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ(ಬಿಡಿಎ), ಕರ್ನಾಟಕ ಗೃಹ ಮಂಡಳಿ, ನಗರಾಭಿವೃದ್ಧಿ ಪ್ರಾಧಿಕಾರಗಳ ಯೋಜನೆಗಳಿಗೆ ರೇರಾ ನಿಯಮ ಅನ್ವಯಿಸುವುದಿಲ್ಲ.

ಡೆವೆಲಪರ್ಸ್/ಬಿಲ್ಡರ್ಸ್, ಏಜೆಂಟ್ ಗಳು ಏನು ಮಾಡಬೇಕು?

ಡೆವೆಲಪರ್ಸ್/ಬಿಲ್ಡರ್ಸ್, ಏಜೆಂಟ್ ಗಳು ಏನು ಮಾಡಬೇಕು?

1. ಡೆವೆಲಪರ್ಸ್/ಬಿಲ್ಡರ್ಸ್, ಪ್ರಮೋಟರ್ಸ್ ತಮ್ಮ ಹಿನ್ನೆಲೆಯ ವಿವರಗಳನ್ನು ನೀಡಬೇಕು.
2. ಪ್ರಾಜೆಕ್ಟ್ ಗಳನ್ನು ನೋಂದಣಿ ಮಾಡಿಸಿ ನೋಂದಣಿ ಸಂಖ್ಯೆ ಪಡೆಯಬೇಕು.
3. ಪ್ರಮೋಟರ್ಸ್ ಲಾಂಚ್ ಮಾಡುವ ಯೋಜನೆಯ ಅಂದರೆ ಕಳೆದ ಐದು ವರ್ಷಗಳಲ್ಲಿ ಪರಿಪೂರ್ಣವಾದ ಇಲ್ಲವೇ ಅಭಿವೃದ್ಧಿ ಪಡಿಸುತ್ತಿರುವ ಯೋಜನೆಗಳ ಸಂಪೂರ್ಣ ವಿವರ ನೀಡಬೇಕು.
4. ಯೋಜನೆಗಳ ಪ್ರಸ್ತುತ ಸ್ಥಿತಿ, ಪೂರ್ಣಗೊಳ್ಳುವಲ್ಲಿನ ವಿಳಂಬ, ಬಾಕಿ ಉಳಿದಿರುವ ಪ್ರಕರಣಗಳು, ಭೂಮಿ ಪ್ರಕಾರ ಮತ್ತು ಬಾಕಿ ಉಳಿದಿರುವ ಪಾವತಿ ವಿವರಗಳನ್ನು ಸಹ ಹಂಚಿಕೊಳ್ಳಬೇಕು.
5. ಅನುಮೋದನೆ ಮತ್ತು ಪ್ರಾರಂಭ ಪ್ರಮಾಣಪತ್ರಗಳ ಅಧಿಕೃತ ಪ್ರತಿಯನ್ನು ಪ್ರಾಧಿಕಾರದಿಂದ ಪಡೆಯಬೇಕು.
6. ಮಂಜೂರು ಯೋಜನೆ, ಬಡಾವಣೆ ಯೋಜನೆ ಮತ್ತು ಪ್ರಾಜೆಕ್ಟ್ ನಿರ್ಧಿಷ್ಟ ಉದ್ದೇಶ ಅಥವಾ ನಿರ್ದಿಷ್ಟ ಪ್ರಾಧಿಕಾರದಿಂದ ಮಂಜೂರಾದ ಸಂಪೂರ್ಣ ಯೋಜನೆಯ ವಿವರ.
7. ಹಂಚಿಕೆ ಪತ್ರದ ಪ್ರಸ್ತಾವನೆ, ಮಾರಾಟ ಒಪ್ಪಂದ, ಮತ್ತು ಎಲ್ಲರ ಸಹಿ ಹೊಂದಿರುವ ಸಂವಹನ ಪತ್ರ ಹೊಂದಬೇಕು.
8. ಮಾರಾಟ ಮಾಡಲ್ಪಡುವ ಅಪಾರ್ಟ್‌ಮೆಂಟಿನ ಸಂಪೂರ್ಣ ವಿವರ ಒಳಗೊಂಡಂತೆ ಸಂಖ್ಯೆ, ವಿಧ, ಕಾರ್ಪೆಟ್ ಏರಿಯಾ, ಬಾಲ್ಕನಿ, ವರಾಂಡಾ, ತೆರೆದ ಪ್ರದೇಶ ಇತ್ಯಾದಿ ವಿವರ ಇರಬೇಕು.
9. ಪ್ರಾಜೆಕ್ಟ್ ನಲ್ಲಿ ಮಾರಾಟ ಮಾಡಲ್ಪಡುವ ಗ್ಯಾರೆಜ್ ಸಂಖ್ಯೆ ಮತ್ತು ಪ್ರದೇಶದ ವಿವರ.
10. ಗುತ್ತಿಗೆದಾರರು, ವಾಸ್ತುಶಿಲ್ಪಿ, ಎಂಜಿನೀಯರ್ ಮತ್ತು ಪ್ರಸ್ತಾವಿತ ಯೋಜನೆಯ ಅಭಿವೃದ್ಧಿಗೆ ಸಂಬಂಧಿಸಿದ ಯಾವುದೇ ಇತರ ವ್ಯಕ್ತಿಗಳಿದ್ದಲ್ಲಿ ಅವರೆಲ್ಲರ ಹೆಸರು ಮತ್ತು ವಿಳಾಸ ಒದಗಿಸಬೇಕು.
11. ಪ್ರಮೋಟರ್ಸ್ ಅಥವಾ ಇತರ ಅಥಾರಿಟಿ ವ್ಯಕ್ತಿಗಳಿಂದ ಡಿಕ್ಲರೇಷನ್(ಘೋಷಣೆ) ಇರುವ ಅಫಿಡವಿಟ್ ಮಾಡಿಸಬೇಕು ಅದರ ಅವರ ಸಹಿ ಕೂಡ ಇರಬೇಕು.
12. ಏಜೆಂಟ್​ಗಳು ಪ್ರಾಧಿಕಾರದಲ್ಲಿ ಮೂರು ತಿಂಗL ಒಳಗಾಗಿ ನೋಂದಣಿ ಮಾಡಿಕೊಂಡಿರಬೇಕು.

ಸಲ್ಲಿಕೆಯಾದ ಅರ್ಜಿಗಳೇಷ್ಟು?

ಸಲ್ಲಿಕೆಯಾದ ಅರ್ಜಿಗಳೇಷ್ಟು?

ರಾಜ್ಯದಲ್ಲಿ ರೇರಾ ಪ್ರಾಧಿಕಾರ ಅಸ್ತಿತ್ವಕ್ಕೆ ಬಂದ ಮೇಲೆ ಚಾಲ್ತಿಯಲ್ಲಿದ್ದ ಹಾಗೂ ಉದ್ದೇಶಿತ ಯೋಜನೆಗಳ ಪ್ರವರ್ತಕರು ಜುಲೈ 31ರೊಳಗೆ ನೋಂದಣಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿತ್ತು. ಅದರಂತೆ ಸೆಪ್ಟೆಂಬರ್ 7ರವರೆಗೆ 1,449 ಅರ್ಜಿಗಳು ಸಲ್ಲಿಕೆಯಾಗಿವೆ ಪ್ರಾಧಿಕಾರ ತಿಳಿಸಿದೆ.

English summary

Karnataka Real Estate Regulation Act (RERA) notice

The Karnataka government on Wednesday passed the Real Estate (Regulation and Development) Act 2016 or RERA, an Act described as customer-centric which aims to protect home-buyers and encourage genuine private players in the fast growing sector.
Story first published: Monday, September 11, 2017, 16:51 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X