For Quick Alerts
ALLOW NOTIFICATIONS  
For Daily Alerts

ಡಿಜಿಟಲ್ ಮಾರ್ಕೆಟಿಂಗ್ ನ್ನು ವೃತ್ತಿಯಾಗಿ ಯಾಕೆ ಆಯ್ಕೆ ಮಾಡಿಕೊಳ್ಳಬೇಕು?

ವಿಶ್ವಾದ್ಯಂತ ಅಂತರ್ಜಾಲ ಬಳಕೆದಾರರ ಸಂಖ್ಯೆ ಕೋಟಿ ಕೋಟಿ ಪ್ರಮಾಣದಲ್ಲಿದ್ದು, ದಿನೇ ದಿನೇ ಅದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಭಾರತದ ಹಳ್ಳಿಗಳಲ್ಲಿಯೂ ಕೂಡ ಅಂತರ್ಜಾಲದ ಬಳಕೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿದೆ.

By Siddu
|

ವಿಶ್ವಾದ್ಯಂತ ಅಂತರ್ಜಾಲ ಬಳಕೆದಾರರ ಸಂಖ್ಯೆ ಕೋಟಿ ಕೋಟಿ ಪ್ರಮಾಣದಲ್ಲಿದ್ದು, ದಿನೇ ದಿನೇ ಅದರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಪ್ರಮುಖವಾಗಿ, ಭಾರತದ ಹಳ್ಳಿಗಳಲ್ಲಿಯೂ ಕೂಡ ಅಂತರ್ಜಾಲದ ಬಳಕೆಯು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಚಾಲ್ತಿಯಲ್ಲಿರುವುದರಿಂದ ಇಂಟರ್ನೆಟ್ ಬಳಸುವವರ ಸಂಖ್ಯೆಯಲ್ಲಿ ಮಹತ್ತರ ಹೆಚ್ಚಳ ಕಂಡು ಬರುತ್ತಿದೆ.

 

2015ರ ಕೊನೆಯಲ್ಲಿ ಇಂಟರ್ನೆಟ್ ಬಳಕೆದಾರರ ಸಂಖ್ಯೆಯು 350 ಮಿಲಿಯನ್ ಇದ್ದರೆ, 2020ರ ಹೊತ್ತಿಗೆ ಅಂತರ್ಜಾಲ ಬಳಕೆದಾರರ ಸಂಖ್ಯೆ ಎರಡು ಪಟ್ಟು ಹೆಚ್ಚಳ ಅಂದರೆ 730 ಮಿಲಿಯನ್ ಗಳಷ್ಟು ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ. ಇಂಟರ್ನೆಟ್ ಮತ್ತು ಅವುಗಳಿಗೆ ಸಂಬಂಧಪಟ್ಟ ವಿಷಯಗಳು ಜನರ ಮೇಲೆ ಎಷ್ಟರಮಟ್ಟಿಗೆ ಪ್ರಭಾವ ಬೀರುತ್ತಿವೆ ಎಂಬುದಕ್ಕೆ ಇದು ಉದಾಹರಣೆಯಷ್ಟೇ. ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಕಳೆದ ಕೆಲವು ವರ್ಷಗಳಲ್ಲಿ ಇಂಟರ್ನೆಟ್ ಬಳಕೆಯ ಹೆಚ್ಚಳದಿಂದ ಭಾರತದಲ್ಲಿ ಡಿಜಿಟಲ್ ಮತ್ತು ಸಾಮಾಜಿಕ ಮಾಧ್ಯಮಗಳ ಬಳಕೆಯಲ್ಲಿ ವಿಪರೀತ ಬದಲಾವಣೆ ಕಂಡುಬಂದಿದೆ. ಅವುಗಳಲ್ಲಿ ಸುಮಾರು ಶೇ. 87ರಷ್ಟು ಬ್ರ್ಯಾಂಡುಗಳ ಸೇವೆಗಳನ್ನು ಡಿಜಿಟಲ್ ವ್ಯವಸ್ಥೆಯ ಮೂಲಕ ನಿಯಂತ್ರಿಸಲಾಗುತ್ತದೆ ಮತ್ತು ಶೇ. 38ರಷ್ಟು ಸಂಸ್ಥೆಗಳ ಬ್ರ್ಯಾಂಡುಗಳು ತಮ್ಮ ವಾರ್ಷಿಕ ಬಜೆಟ್ ನ 1/3 ನೇ ಭಾಗವನ್ನು ಡಿಜಿಟಲ್ ಮಾರ್ಕೆಟಿಂಗ್ ಗಾಗಿ ನಿಯೋಜಿಸುತ್ತವೆ.

ಡಿಜಿಟಲ್ ಸೇವೆಯ ಮೂಲಕ ತಮ್ಮ ವ್ಯವಹಾರಗಳನ್ನು ವಿಸ್ತರಿಸಿ, ಆ ಮೂಲಕ ತಮ್ಮ ಗ್ರಾಹಕರನ್ನು ಆಕರ್ಷಿಸಲು, ಅವರ ಜೊತೆ ತಮ್ಮನ್ನು ತೊಡಗಿಸಿಕೊಳ್ಳಲು ಮತ್ತು ವ್ಯವಹರಿಸಲು ಅಳವಡಿಸಿಕೊಳ್ಳಲಾಗುತ್ತಿದೆ ಮತ್ತು ಉತ್ತಮ ಇಂಟರ್ನೆಟ್ ಸಂಪರ್ಕದ ಮೂಲಕ ಮತ್ತು ಸಾಮಾಜಿಕ ತಾಣಗಳ ಬಳಕೆಯ ಮೂಲಕ ಒಟ್ಟಾರೆ ಈ ಉದ್ಯಮದಲ್ಲಿ ಹೂಡಿಕೆಯನ್ನು ಹೆಚ್ಚಿಸುವಲ್ಲಿ ಇದು ನೆರವಾಗುತ್ತದೆ. ಸ್ವಂತ ಉದ್ಯಮ(ಕಂಪನಿ) ಪ್ರಾರಂಭಿಸುವುದು ಹೇಗೆ?

ಡಿಜಿಟಲ್ ಮಾರ್ಕೆಟಿಂಗ್ ಉತ್ಸಾಹಕ್ಕೆ/ಬೇಡಿಕೆಗೆ ಕಾರಣಗಳು

ಡಿಜಿಟಲ್ ಮಾರ್ಕೆಟಿಂಗ್ ಉತ್ಸಾಹಕ್ಕೆ/ಬೇಡಿಕೆಗೆ ಕಾರಣಗಳು

ಡಿಜಿಟಲ್ ಮಾರ್ಕೆಟಿಂಗ್ ಬಳಕೆ, ಅತ್ಯಂತ ಕಡಿಮೆ ವೆಚ್ಚದಲ್ಲಿ ತಲುಪಿಸಬೇಕಾದಂತಹ ಸಂದೇಶಗಳನ್ನು ಮತ್ತು ಗ್ರಾಹಕರ ನಿರ್ದಿಷ್ಟ ನೆಲೆಯನ್ನು ಪರಿಣಾಮಕಾರಿ ನಿರ್ಮಿಸಲು ಹೆಚ್ಚು ಕಾರ್ಯಸಾಧ್ಯ ಮಾಡಬಹುದಾದ ವಿಧಾನವಾಗಿದೆ.
ಇದರಿಂದ ಜನರ ಹಣಕ್ಕೆ ಕೇವಲ ಉತಮ ಮೌಲ್ಯ ಮಾತ್ರವಲ್ಲದೆ ಸಾಂಪ್ರದಾಯಿಕ ಮಾಧ್ಯಮಗಳಿಗೆ ಹೋಲಿಸಿದರೆ ಇದರಲ್ಲಿ ಪ್ರವೇಶಿಸುವ ಮತ್ತು ಅಳೆಯುವ ತಡೆಗೋಡೆಗಳು ಕಡಿಮೆಯಾಗಿರುತ್ತದೆ. ಇದನ್ನು, ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ದೊಡ್ಡ ಮತ್ತು ಸಣ್ಣ ಕಂಪನಿಗಳ ನಡುವೆ ಇರುವ ಸೀಮಿತ ಬಜೆಟ್ ನಲ್ಲಿ ಪರಿಣಾಮಕಾರಿಯಾಗಿ ಇದನ್ನು ಬಳಸಬಹುದಾಗಿದೆ. ಇದರಿಂದಾಗಿ ಯಾವುದೇ ಹೆಚ್ಚಿನ ಹೊರೆಯಿಲ್ಲದೆ, ದೊಡ್ಡ ಕಂಪನಿಗಳೊಂದಿಗೆ ಸ್ಪರ್ಧಿಸಲು ಮತ್ತು ಹೊಸ ಪ್ರತಿಭೆಗಳಿಗೆ ಅವಕಾಶವನ್ನು ನೀಡಬಹುದಾಗಿದೆ.

ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ?ಮನೆಯಿಂದ ಕೆಲಸ ಮಾಡಿ ಹಣ ಗಳಿಸಬೇಕೆ?

1. ನೀವು ಹೆಚ್ಚಿನ ಬೇಡಿಕೆಯಲ್ಲಿರುತ್ತೀರಿ
 

1. ನೀವು ಹೆಚ್ಚಿನ ಬೇಡಿಕೆಯಲ್ಲಿರುತ್ತೀರಿ

ನೀವು ಯಾವ ವ್ಯಾವಹಾರಿಕ ಕ್ಷೇತ್ರದಲ್ಲಿದ್ದರೂ ಮಾರ್ಕೆಟಿಂಗ್ ಅನ್ನುವುದು ಎಲ್ಲಾ ಕ್ಷೇತ್ರಗಳಲ್ಲೂ ಪ್ರಮುಖವಾಗಿರುವಂತದ್ದು ಮತ್ತು ಇದು ನಿರ್ಣಾಯಕ ಅಂಶ ಕೂಡಾ. ತಮ್ಮ ಉತ್ಪನ್ನಗಳು ಹೆಚ್ಚಿಗೆ ಮಾರಾಟವಾಗಬೇಕು ಎನ್ನುವುದು ಸರಿಯಾದ ವಿಚಾರ. ಆದರೆ, ಗ್ರಾಹಕರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಲಾಗದಿದ್ದಲ್ಲಿ, ಅಂತಹ ಉತ್ಪನ್ನಗಳ ಪ್ರಯೋಜನಗಳನ್ನು ಗ್ರಾಹಕರಿಗೆ ಮನವರಿಕೆ ಮಾಡಲು ಮತ್ತು ಗ್ರಾಹಕರೊಂದಿಗೆ ಸಂಪರ್ಕ ಮಾಡಲು ಆಗದಿದ್ದಲ್ಲಿ, ಆ ಉತ್ಪನ್ನಗಳನ್ನು ಮಾರಾಟ ಮಾಡಲು ಹೇಗೆ ಸಾಧ್ಯ? ಮಾರ್ಕೆಟಿಂಗ್ ಮತ್ತು ಸೇಲ್ಸ್ (ಮಾರಾಟ) ಎಂಬುದು ವ್ಯವಹಾರದಲ್ಲಿನ ಒಂದು ಮುಖ್ಯವಾದ ಅಂಶವಾಗಿದೆ ಇದನ್ನು ಅಳೆಯಲು ಪ್ರಮುಖವಾದ ಆರ್ಓಐ ಯನ್ನು ಒದಗಿಸಿಕೊಡುತ್ತದೆ. 

ವರದಿಯ ಪ್ರಕಾರ ಶೇ. 85 ರಷ್ಟು ಮಾರಾಟಗಾರರು ಡಿಜಿಟಲ್ ವ್ಯವಸ್ಥೆಯ ಮೂಲಕ ಆದಾಯವನ್ನು ಗಳಿಸುತ್ತಿದ್ದಾರೆ. ಅದರಲ್ಲಿ ಶೇ. 50 ರಷ್ಟು ಮಾರಾಟಗಾರರು ತಾವು ಗಳಿಸುತ್ತಿರುವ ಆದಾಯ ಶೇ.10ರಷ್ಟು ಇ-ಮಾರ್ಕೆಟಿಂಗ್ ಚಟುವಟಿಕೆಗಳಿಂದಾಗಿ ಎಂದು ವರದಿಯೊಂದು ಹೇಳುತ್ತದೆ.
ಡಿಜಿಟಲ್ ಮಾರ್ಕೆಟಿಂಗ್ ಬೆಳವಣಿಗೆ ಅವಶ್ಯಕತೆ ಎಷ್ಟಿದೆಯೆಂದು ಇದರ ಮೂಲಕ ತಿಳಿಯಬಹುದಾಗಿದೆ. ಕೆಲವು ವರ್ಷಗಳ ಹಿಂದೆ ವ್ಯಾಪಾರ ಈ ರೀತಿಯಿರಲಿಲ್ಲ, ವ್ಯವಹಾರಗಳು ಲಾಭದಾಯಕ ಉತ್ಪನ್ನಗಳನ್ನು ನಿರ್ಮಿಸಲು ನಿರತವಾಗಿದ್ದವು. ಆದರೆ ಇಂದು, ಹೊರಗುತ್ತಿಗೆ ಮತ್ತು ಉತ್ತಮ ತಂತ್ರಜ್ಞಾನಗಳೊಂದಿಗೆ ಉತ್ಪನ್ನಗಳ ಅಭಿವೃದ್ಧಿ ಸುಲಭ ಮತ್ತು ವೇಗವಾಗಿ ಮಾಡಲ್ಪಡುತ್ತದೆ.
ಕಂಪನಿಗಳು ಮಾತ್ರವಲ್ಲದೆ ರಾಜಕೀಯ ನಾಯಕರು ತಮ್ಮ ಪ್ರಭಾವವನ್ನು ಹೆಚ್ಚಿಸಲು ಡಿಜಿಟಲ್ ಮಾರ್ಕೆಟಿಂಗ್ ಅನ್ನು ಹೆಚ್ಚು ಅವಲಂಬಿಸಿರುತ್ತಾರೆ. ಡಿಜಿಟಲ್ ವ್ಯಾಪಾರೋದ್ಯಮದ ಕಾಣದ ಕೈ ನರೇಂದ್ರ ಮೋದಿ ಅಥವಾ ಡೊನಾಲ್ಡ್ ಟ್ರಂಪ್ ಅವರಲ್ಲಿಯು ಪ್ರಚಾರದ ಸಂವೇದನೆಯನ್ನು ಮೂಡಿಸಿದೆ. ಉತ್ತಮ ಗುಣಮಟ್ಟದ ಪ್ರಚಾರಗಳನ್ನು ನಡೆಸುವ ಉತ್ತಮ ಡಿಜಿಟಲ್ ಮಾರಾಟಗಾರರು ಮೊದಲಿನಿಂದ ಬ್ರ್ಯಾಂಡ್ ಗಳನ್ನು ನಿರ್ಮಿಸಲು ಸಹಾಯ ಮಾಡುತ್ತಾರೆ.
ಇಮೇಲ್, ಸಾಮಾಜಿಕ ಮತ್ತು ಮೊಬೈಲ್ ನಲ್ಲಿ ಸಂಯೋಜಿತ ಪ್ರಚಾರಗಳ ಪರಿವರ್ತನೆ ದರದ ಗಮನಾರ್ಹ ಏರಿಕೆಗೆ ಕಾರಣವಾಗಬಹುದು ಎಂದು ಶೇ. 8 ಭಾರತೀಯ ಮಾರಾಟಗಾರರು ನಂಬುತ್ತಾರೆ. ಸ್ಮಾರ್ಟ್ ಫೋನ್ ಗಳ ಹಠಾತ್ ಬಳಕೆ, ಕೈಯಿಂದ ಹಿಡಿಯಲಾಗುವಂತಹ ಸಾಧನಗಳು ಮತ್ತು ಉತ್ತಮ ಸ್ಪೀಡ್ ಇಂಟರ್ನೆಟ್ ಬಳಕೆ ಇತ್ಯಾದಿಗಳಿಂದ ಮಾಧ್ಯಮವನ್ನು ಹೇಗೆ ಬಳಸಬಹುದು ಎಂಬುದನ್ನು ತಿಳಿಸುತ್ತದೆ.
ಮಾರುಕಟ್ಟೆಯಲ್ಲಿ ಸಾಕಷ್ಟು ಹೆಚ್ಚು ಪ್ರವೀಣ ಡಿಜಿಟಲ್ ಮಾರುಕಟ್ಟೆದಾರರು ಇಲ್ಲವಾದ ಕಾರಣ ಅಪಾರ ಕೊರತೆಯು ಡಿಜಿಟಲ್ ಮಾರ್ಕೆಟಿಂಗ್ ಬೇಡಿಕೆಯನ್ನು ಸೃಷ್ಟಿಸಿದೆ. ನೆಮ್ಮದಿಯ ಜೀವನಕ್ಕಾಗಿ ಈ ಹವ್ಯಾಸಗಳನ್ನು ತಪ್ಪದೇ ಅಳವಡಿಸಿಕೊಳ್ಳಿ..

2. ಲಾಭದಾಯಕ ಉದ್ಯೋಗ ಅವಕಾಶಗಳು

2. ಲಾಭದಾಯಕ ಉದ್ಯೋಗ ಅವಕಾಶಗಳು

ಇದು ಹೇಗೆ ಸಾಧ್ಯ ಎಂದು ಯಾರಾದರೂ ಊಹಿಸುವಿರಾ? ಯಾವುದೇ ವಸ್ತುಗಳು ಸರಬರಾಜು ಕಡಿಮೆ ಇದ್ದಾಗ ಅದರ ಬೇಡಿಕೆಯು ಹೆಚ್ಚಾಗುತ್ತದೆ. ಆಗ, ಡಿಜಿಟಲ್ ಉದ್ಯಮಿಯೊಬ್ಬ ದೊಡ್ಡ ಹೊಡೆತ ಎದುರಿಸಬೇಕಾಗುತ್ತಾದೆ. ಇದರಿಂದ ನೀವು ಲಾಭದ ಗಣಿಕೆಯಲ್ಲಿ ಏರಿಕೆಯನ್ನು ಕಾಣಬಹುದು ಮತ್ತು ನಿಮ್ಮ ವೇತನದ ಪ್ರಮಾಣವೂ ಹೆಚ್ಚಾಗುವುದು.

3. ಉದ್ಯಮಿಯಾಗಲು ಸಹಾಯ ಮಾಡುತ್ತದೆ

3. ಉದ್ಯಮಿಯಾಗಲು ಸಹಾಯ ಮಾಡುತ್ತದೆ

ಕೆಲವು ಉತ್ಪನ್ನಗಳ ಉದ್ಯಮಗಳು ಪ್ರಾರಂಭದಿಂದಲೇ ಉಳಿತಾಯದಿಂದಾಗಿ ಬಂಡವಾಳವನ್ನು ಹೆಚ್ಚಿಸಿಕೊಂಡು ಹೋಗುತ್ತವೆ. ಉತ್ಪನ್ನಗಳನ್ನು ಮಾರಾಟ ಮಾಡುವ ವಿದ್ಯೆ ತಿಳಿದಿಲ್ಲವೆಂದಾದಲ್ಲಿ ವ್ಯಾಪಾರ ಮಾಡುವುದು ಕಷ್ಟ. ಉತ್ಪನ್ನಗಳ ಮಾರ್ಕೆಟಿಂಗ್ ಸರಿಯಾದ ರೀತಿಯಲ್ಲಿ ಆದಲ್ಲಿ ವ್ಯವಹಾರ ನಡೆಸುವುದು ಸುಲಭ.
ಡಿಜಿಟಲ್ ಮಾರ್ಕೆಟಿಂಗ್ ನ ಅನುಭವವು ನಿಮಗೆ ಉತ್ತಮ ಉದ್ಯೋಗ ಅವಕಾಶವನ್ನು ಕಲ್ಪಿಸುವುದು ಮಾತ್ರವಲ್ಲದೆ ಮುಂಬರುವ ದಿನಗಳಲ್ಲಿ ಒಂದು ಉತ್ತಮ ಉದ್ಯಮಿ ಆಗಲು ಸಹಾಯ ಮಾಡುತ್ತದೆ. ನೀವು ನಿಮ್ಮ ಗ್ರಾಹಕರ ಅಗತ್ಯತೆಗಳನ್ನು ಅರ್ಥಮಾಡಿಕೊಳ್ಳುವಿರಿ. ಮಾರುಕಟ್ಟೆಯ ಆಗು ಹೋಗುಗಳು, ಮೌಲ್ಯ ಮಾಪನ ಮತ್ತು ಬೇಡಿಕೆಗಳನ್ನು ತಿಳಿದುಕೊಳ್ಳಬಹುದು. ಗ್ರಾಹಕರ ಬದಲಾಗುವ ಅಗತ್ಯತೆ, ಆದ್ಯತೆ ಮತ್ತು ಗ್ರಹಿಕೆಗಳ ಸೂಕ್ಷ್ಮತೆಯನ್ನು ನೀವು ಪಡೆಯಬಹುದಾಗಿದೆ.

4. ಇದೊಂದು ಸವಾಲಿನ ಕೆಲಸವಾದರೂ, ಆಹ್ಲಾದಕರದಿಂದ ಕೂಡಿರುತ್ತದೆ

4. ಇದೊಂದು ಸವಾಲಿನ ಕೆಲಸವಾದರೂ, ಆಹ್ಲಾದಕರದಿಂದ ಕೂಡಿರುತ್ತದೆ

ಡಿಜಿಟಲ್ ಮಾರ್ಕೆಟಿಂಗ್ ಎಲ್ಲರಿಗಾಗಿ ಅಲ್ಲವೇ ಅಲ್ಲ. ಸೂಕ್ಷ್ಮ ದುರ್ಬಲ ಮನಸ್ಸಿನವರಾಗಿದ್ದರೆ, ಮಾರ್ಕೆಟಿಂಗ್ ವಿಭಾಗದಲ್ಲಿನ ಏರು ಪೇರುಗಳನ್ನು ಸಹಿಸಲು ಸಾಧ್ಯವಾಗುವುದಿಲ್ಲ. ಹೊಸ ಆನ್ಲೈನ್ ​​ಪ್ರಚಾರಗಳೊಂದಿಗೆ ಯಶಸ್ವಿಯಾಗಬಹುದು ಅಥವಾ ಉದ್ಯಮದಲ್ಲಿ ಹಿನ್ನಡೆಯನ್ನೂ ಅನುಭವಿಸಬಹುದು. ಇದನ್ನೆಲ್ಲಾ ಅನುಭವವಾಗಿ ಇಟ್ಟುಕೊಂಡು ಈ ಕ್ಷೇತ್ರದಲ್ಲಿ ಯಾವುದು ಉಪಯೋಗವಾಗುತ್ತದೆ ಎನ್ನುವುದನ್ನು ಲೆಕ್ಕಾಚಾರ ಮಾಡಿಕೊಳ್ಳಬಹುದು.
ಆದಾಗ್ಯೂ, ಇತರ ಆಸಕ್ತಿದಾಯಕ ಅಂಶವೆಂದರೆ ಅಂತರ್ಜಾಲದ ಸುತ್ತ ಕೆಲಸ ಮಾಡುತ್ತಿರುವುದರಿಂದ, ಸವಾಲುಗಳು ಇದ್ದೇ ಇರುತ್ತವೆ. ಕೆಲಸದಲ್ಲಿ ಯಶಸ್ಸು ಸಾಧಿಸುವವರೆಗೂ ಮುನ್ನಡೆಯುತ್ತಿರಬೇಕು.

5. ನಿಮ್ಮ ಆಸಕ್ತಿಯ ವಲಯ ಆಯ್ಕೆ ಮಾಡಿ

5. ನಿಮ್ಮ ಆಸಕ್ತಿಯ ವಲಯ ಆಯ್ಕೆ ಮಾಡಿ

ಡಿಜಿಟಲ್ ವ್ಯಾಪಾರೋದ್ಯಮವು ಒಂದು ದೊಡ್ಡ ಉದ್ಯಮವಾಗಿದ್ದು, ಒಂದೇ ಆಶ್ರಯದಡಿಯಲ್ಲಿ ಸಾಕಷ್ಟು ವ್ಯವಹಾರಗಳು ನಡೆಯುತ್ತವೆ. ವಿವಿಧ ರೀತಿಯ ವಿನ್ಯಾಸ ಮತ್ತು ಕೌಶಲ್ಯಗಳಿಗಾಗಿ ಡಿಜಿಟಲ್ ವ್ಯಾಪಾರೋದ್ಯಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಬಹುದಾಗಿದೆ.
ಕಂಟೆಂಟ್ ಅಥವಾ ಇಮೇಲ್ ಮಾರ್ಕೆಟರ್, ಸಾಮಾಜಿಕ ಮಾಧ್ಯಮ ಅಥವಾ ಮೊಬೈಲ್ ಮಾರ್ಕೆಟರ್, ಇ-ವಾಣಿಜ್ಯ ಕಾರ್ಯನಿರ್ವಾಹಕ, ಒಳಬರುವ ವ್ಯಾಪಾರೋದ್ಯಮಿ, ಎಸ್ಇಒ ಅಥವಾ ಪಿಪಿಸಿ ಕಾರ್ಯಕಾರಿ ಆಗಬಹುದು ಅಥವಾ ನೀವು ಆನ್ಲೈನ್ ಪಿಆರ್ ತಜ್ಞರಾಗಬಹುದು. ಹೀಗೆ ನಿಮ್ಮ ಆಸಕ್ತಿಯ ವಲಯ ಆಯ್ಕೆ ಮಾಡುವುದು ಒಳ್ಳೆಯದು.

6. ನಿರ್ದಿಷ್ಟ ಶೈಕ್ಷಣಿಕ ಹಿನ್ನೆಲೆ ಇಲ್ಲ

6. ನಿರ್ದಿಷ್ಟ ಶೈಕ್ಷಣಿಕ ಹಿನ್ನೆಲೆ ಇಲ್ಲ

ಡಿಜಿಟಲ್ ಮಾರ್ಕೆಟಿಂಗ್ ಅನ್ನು ಮುಂದುವರೆಸಲು ನಿಮಗೆ ನಿರ್ದಿಷ್ಟವಾದ ಶೈಕ್ಷಣಿಕ ಅರ್ಹತೆಯ ಅಗತ್ಯವಿರುವುದಿಲ್ಲ. ಇಲ್ಲಿ ನಿಮ್ಮ ಉತ್ಸಾಹ, ಪ್ಯಾಸನ್ ಮುಖ್ಯವೇ ಹೊರತು ಅರ್ಹತೆಯಲ್ಲ. ವ್ಯವಹಾರದಲ್ಲಿ ನೀವು ದೊಡ್ಡದನ್ನು ಮಾಡಲು ಬಯಸಿದರೆ ನಿಮ್ಮ ವೃತ್ತಿ ಜೀವನವನ್ನು ಮೊದಲಿನಿಂದ ಪ್ರಾರಂಭಿಸಬೇಕಾಗಿಲ್ಲ. ಇವೆಲ್ಲದಕ್ಕೂ ಡಿಜಿಟಲ್ ಮಾರ್ಕೆಟಿಂಗ್ ಕುರಿತು ಹುಚ್ಚು/ಉತ್ಸಾಹವೊಂದೇ ಬೇಕಾಗಿರುವುದು.

ಕೊನೆ ಮಾತು

ಕೊನೆ ಮಾತು

ಸ್ವಾಮಿ ವಿವೇಕಾನಂದರವರ ಒಂದು ಮಾತು ಈ ಸಂದರ್ಭದಲ್ಲಿ ಉಲ್ಲೇಖಿಸುವುದು ಸೂಕ್ತವೆನಿಸುತ್ತದೆ. "ಎದ್ದು ನಿಲ್ಲಿ ಧೈರ್ಯವಾಗಿರಿ, ಬಲಶಾಲಿಯಾಗಿರಿ, ಎಲ್ಲಾ ಜವಾಬ್ದಾರಿಗಳನ್ನು ನಿಮ್ಮ ಹೆಗಲ ಮೇಲೆ ತೆಗೆದುಕೊಳ್ಳಿ ಮತ್ತು ನಿಮ್ಮ ಭವಿಷ್ಯತ್ತಿನ ಸೃಷ್ಟಿಕರ್ತ ನೀವೆ ಎಂಬುದನ್ನು ತಿಳಿಯಿರಿ.
ನೀವು ನಿಜವಾಗಿ ಇದನ್ನು ಪಾಲಿಸುವವರಾಗಿದ್ದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಯಲ್ಲಿ ಅದ್ಭುತಗಳನ್ನು ಮಾಡಬಹುದು. ಇದು ಕ್ರಿಯಾತ್ಮಕ, ಪ್ರಗತಿಶೀಲ, ಉತ್ತಮ-ಗಳಿಕೆಯ ಮತ್ತು ಉದ್ಯಮದ ನಿರ್ಣಾಯಕ ಭಾಗವಾಗಿದೆ.

English summary

Why did you Choose Digital Marketing as a Career?

The reason for this enthusiasm for digital marketing is simple: digital marketing is perhaps the only cost-effective and most viable method to get your message out and build a solid consumer base. It is not only great value for your money, but also, the barrier to enter and scale up are miniscule compared to traditional media.
Story first published: Wednesday, November 22, 2017, 14:49 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X