For Quick Alerts
ALLOW NOTIFICATIONS  
For Daily Alerts

2018 ರಲ್ಲಿನ ಟಾಪ್ 15 ಬೆಸ್ಟ್ ಮ್ಯೂಚುವಲ್ ಫಂಡ್ಸ್ (SIP) ಯಾವುವು ಗೊತ್ತೆ?

ಹಣ ಹೂಡಲು 2018 ರ ಅತ್ಯುತ್ತಮ ಮ್ಯೂಚುವಲ್ ಫಂಡ್ (SIP) ಯಾವುದು? ಯಾವ ಮ್ಯೂಚುವಲ್ ಫಂಡ್ ಒಳ್ಳೆಯ ಲಾಭ ಕೊಡಬಹುದು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ? ಇದೇನು ಬ್ರಹ್ಮವಿದ್ಯೆ ಏನಲ್ಲ ಬಿಡಿ!

|

ಮನುಷ್ಯನ ಅವಶ್ಯಕತೆಗಳಿಗೆ ಕೊನೆಯೇ ಇಲ್ಲ. ನಮ್ಮ ಅವಶ್ಯಕತೆಗಳ ಪೂರೈಕೆಗೆ ಎಷ್ಟು ಸಂಪಾದಿಸಿದರೂ ಸಾಲದು. ಹಣವಿಲ್ಲದೇ ಏನೂ ನಡೆಯೋಲ್ಲ. ಅದಕ್ಕೆ ಅಲ್ಲವೇ ದುಡ್ಡೇ ದೊಡ್ಡಪ್ಪ ಅನ್ನೋದು! ಪ್ರತಿಯೊಬ್ಬರ ಚಿಂತೆ- ದುಡ್ಡು ಮಾಡುವುದು ಹೇಗೆ? ಯಾವ ಮಾರ್ಗ ಸುರಕ್ಷಿತ ಮತ್ತು ಶೀಘ್ರ ಅನ್ನೋದು. "ಇಂದು ನನ್ನನ್ನು ಉಳಿಸಿಕೊ, ನಾಳೆ ನಿನ್ನನ್ನು ಕಾಪಾಡುತ್ತೇನೆ" ಎಂದು ಹಣ ಹೇಳುತ್ತದೆ. ಇದು ಬುದ್ದಿ ಮಾತೂ ಹೌದು. ಇರುವ ಹಣವನ್ನು ಉಳಿಸಿಕೊಳ್ಳುವುದಷ್ಟೇ ಅಲ್ಲದೇ, ಹೆಚ್ಚಿಸಿಸಿಕೊಳ್ಳುವುದೇ ಜಾಣತನ.
ಇದಕ್ಕೆ ಉತ್ತಮ ದಾರಿಯೇ ಮ್ಯೂಚುವಲ್ ಫಂಡ್ (SIP).

 

ಹಾಗಾದರೆ ಹಣ ಹೂಡಲು 2018 ರ ಅತ್ಯುತ್ತಮ ಮ್ಯೂಚುವಲ್ ಫಂಡ್ (SIP) ಯಾವುದು? ಯಾವ ಮ್ಯೂಚುವಲ್ ಫಂಡ್ ಒಳ್ಳೆಯ ಲಾಭ ಕೊಡಬಹುದು? ಇವೆಲ್ಲ ಪ್ರಶ್ನೆಗಳಿಗೆ ಉತ್ತರ ಬೇಕಲ್ಲವೇ? ಇದೇನು ಬ್ರಹ್ಮವಿದ್ಯೆ ಏನಲ್ಲ ಬಿಡಿ! ನೀವು ಸರಿಯಾದ ಮ್ಯೂಚುವಲ್ ಫಂಡ್ ಆಯ್ಕೆ ಮಾಡಿಕೊಳ್ಳುವುದರಲ್ಲಿ ಸಫಲರಾದರೆ, ವಿಫಲತೆಯ ಮಾತೇ ಇಲ್ಲ. ಮ್ಯೂಚುವಲ್ ಫಂಡ್ ಬಗ್ಗೆ ಅರಿತುಕೊಳ್ಳುವುದು ಕ್ಲಿಷ್ಟವೆಂದು ಎಂದಿಗೂ ಭಾವಿಸಬೇಡಿ. ಅದನ್ನು ಅರ್ಥ ಮಾಡಿಕೊಳ್ಳುವುದು ಅಂತಹ ಘನಂದಾರಿ ಕೆಲಸವೇನಲ್ಲ. ಸೂಕ್ತವಾದ ಮಾಹಿತಿಯನ್ನು ಅರಿತು ಸಮರ್ಪಕವಾದ ಯೋಜನೆ ಮಾಡಿದರೆ, ಯಾರು ಬೇಕಾದರೂ ಇದರಿಂದ ಒಳ್ಳೆಯ ಲಾಭ ಪಡೆಯಬಹುದು. ಮ್ಯೂಚುವಲ್ ಫಂಡ್ ಎಂದರೇನು? ಹೂಡಿಕೆಯ ಲಾಭ ಹಾಗು ನಷ್ಟಗಳೇನು?

ಮ್ಯೂಚುಯಲ್ ಫಂಡ್ ಆಯ್ಕೆಯನ್ನು ಸರಳಗೊಳಿಸಲು ಕೆಲವು ಅಂಕಿ ಅಂಶಗಳನ್ನು ಆಧರಿಸಿ ಪಟ್ಟಿ ತಯಾರಿಸಲಾಗಿದೆ.

ಫಂಡ್ ಆಯ್ಕೆ ಮಾಡುವ ಮಾನದಂಡ
 

ಫಂಡ್ ಆಯ್ಕೆ ಮಾಡುವ ಮಾನದಂಡ

1. ಫಂಡ್ ನ ವಿಧಗಳು
ಕಿರುಪಟ್ಟಿ ಮಾಡಲು ಬೇಕಾದ ಮೊದಲ ಅಂಶವೆಂದರೆ, ಫಂಡ್ ನ ವಿಧಗಳು ಅಂದರೆ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್, ಸ್ಮಾಲ್ ಕ್ಯಾಪ್, ELSS ( Equity Linked Savings Scheme), ಸಾಲ (debt), ಬಾಕಿ (balance) ಮುಂತಾದವುಗಳು. ಇಲ್ಲಿ ಹೂಡಿಕೆದಾರನಿಗೆ ಸಂಪೂರ್ಣ ಮಾಹಿತಿ ಸಿಗಲೆಂದು ಎಲ್ಲಾ ವರ್ಗಗಳ ಫಂಡ್ ಬಗ್ಗೆ ಬೇಕಾದ ವಿವರಗಳನ್ನು ಚಿಕ್ಕದಾಗಿ ಕೊಡಲಾಗಿದೆ.

2. ಫಂಡ್ ಗಳ ಕಾರ್ಯ ನಿರ್ವಹಣೆ
ಈ ಚಿಕ್ಕ ಪಟ್ಟಿಗೆ ಬೇಕಾದ 2ನೇ ಅಂಶವೆಂದರೆ ಫಂಡ್ ಗಳ ಕಾರ್ಯ ನಿರ್ವಹಣೆ. ಇಲ್ಲಿ 3-5 ವರ್ಷಗಳ ಉತ್ತಮ ಕಾರ್ಯ ನಿರ್ವಹಣೆಯ ಫಂಡ್ ಗಳನ್ನು ಆರಿಸಿ ತೆಗೆದುಕೊಳ್ಳಲಾಗಿದೆ.

3. ಮೌಲ್ಯಮಾಪನ (ರೇಟಿಂಗ್)
ಮೂರನೇ ಅಂಶವೆಂದರೆ ಫಂಡ್ ರೇಟಿಂಗ್. ಫಂಡ್ ರೇಟಿಂಗ್ ಹೆಚ್ಚಿದಷ್ಟೂ, ಫಂಡ್ ಉತ್ತಮವಾಗಿರುತ್ತದೆ. ಇಲ್ಲಿ CRISIL (Crediting Rating Information Services of India Limited) ಹಾಗೂ ವ್ಯಾಲ್ಯೂ ರಿಸರ್ಚ್ ಕೊಟ್ಟಿರುವ ರೇಟಿಂಗ್ ಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. 3 ಸ್ಟಾರ್ ಗಳಿಗಿಂತಲೂ ಹೆಚ್ಚಿರುವ ರೇಟಿಂಗ್ ಹೆಚ್ಚಿರುವ ಫಂಡ್ ನನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಾಗಿದೆ.

4. ನಿಯಂತ್ರಣಗಳು (Holdings)
ಕಿರುಪಟ್ಟಿ ಮಾಡಲು ಬೇಕಾದ 4ನೇ ಅಂಶವೆಂದರೆ ಫಂಡ್ ಹೋಲ್ಡಿಂಗ್. ಉತ್ತಮ ಬ್ಲೂ ಚಿಪ್ ಸ್ಟಾಕ್ ಗಳು ಅಥವಾ ಭವಿಷ್ಯ ದಲ್ಲಿ ಬೆಲೆ ಹೆಚ್ಚಬಹುದಾದ ಸ್ಟಾಕ್ ಗಳಲ್ಲಿ ಬಂಡವಾಳ ಹೂಡುವುದು.

5. ಖರ್ಚಿನ ಅನುಪಾ ತ(Expense Ratio)
ಖರ್ಚಿನ ಅನುಪಾತ ಕೂಡಾ ಒಂದು ಮುಖ್ಯವಾದ ಅಂಶ. ಇದು ಮ್ಯೂಚುವಲ್ ಫಂಡ್ ನ ಲಾಭದ ಮೇಲೆ ಪರಿಣಾಮ ಬೀರುತ್ತದೆ. ಖರ್ಚಿನ ಅನುಪಾತ ಜಾಸ್ತಿಯಾದರೆ, ಲಾಭ ಕಡಿಮೆ. ಕೆಳಗೆ ಕೊಟ್ಟಿರುವ ಎಲ್ಲಾ ಫಂಡ್ ಗಳೂ ಕಡಿಮೆ ವೆಚ್ಚದ ಅನುಪಾತದಲ್ಲಿವೆ.

6. ಫಂಡ್ ವ್ಯವಸ್ಥಾಪಕರ ನೈಪುಣ್ಯತೆ ಹಾಗೂ ಅನುಭವ
ಮ್ಯೂಚುಯಲ್ ಫಂಡ್ ನಲ್ಲಿ ಸ್ಟಾಕ್ ಕೊಳ್ಳುವುದು, ಮಾರುವುದು, ಸ್ಟಾಕ್ ಹೋಲ್ಡಿಂಗ್ ಮಾಡುವ ನಿರ್ಧಾರ ತೆಗೆದುಕೊಳ್ಳುವವನೇ ಫಂಡ್ ವ್ಯವಸ್ಥಾಪಕ. ಈ ವ್ಯವಸ್ಥಾಪಕನ ನೈಪುಣ್ಯತೆ ಹಾಗೂ ನಿರ್ಧಾರದ ಮೇಲೆ ಫಂಡ್ ನ ಹೂಡಿಕೆಯಲ್ಲಿ ಹೂಡಿದ ಹಣಕ್ಕೆ ತಿರುಗಿ ಪಡೆಯುವ ಆದಾಯ (ರಿಟರ್ನ್ಸ್) ಅವಲಂಬಿಸಿರುತ್ತದೆ.

7. ಯೋಜನೆ ಮತ್ತು ಆಸ್ತಿಯ ಪರಿಮಾಣ (Asset size)
ಉತ್ತಮ ಮ್ಯೂಚುಯಲ್ ಫಂಡ್ ಆಯ್ಕೆ ಮಾಡಲು ಯೋಜನೆ ಮತ್ತು ಆಸ್ತಿಯ ಪರಿಮಾಣ ಇನ್ನೊಂದು ಮುಖ್ಯ ಅಂಶ. ಇಲ್ಲಿರುವ ಎಲ್ಲಾ ಫಂಡ್ ಗಳ ಆಸ್ತಿಯ ಪರಿಮಾಣ ಮೇಲ್ಮಟ್ಟದಲ್ಲಿವೆ. 500 ಕೋಟಿ ಅಥವಾ ಅದಕ್ಕಿಂತ ಹೆಚ್ಚಾಗಿದೆ.

ಮೇಲೆ ಹೇಳಿರುವ ಅಂಶಗಳನ್ನು ಆಧರಿಸಿ 2018ರಲ್ಲಿ ಬಂಡವಾಳ ಹೂಡಲು ಅತ್ಯುತ್ತಮವಾದ ಮ್ಯೂಚುಯಲ್ ಫಂಡ್ ಸಿಪ್ ಗಳನ್ನು ಕೆಳಗೆ ಹೇಳಲಾಗಿದೆ. ಆನ್ಲೈನ್ ಮೂಲಕ ಮ್ಯೂಚುವಲ್ ಫಂಡ್(SIP) ಪ್ರಾರಂಭಿಸುವುದು ಹೇಗೆ?

1. ಫ್ರಾಂಕ್ಲಿನ್ ಇಂಡಿಯಾ ಬ್ಲೂ ಚಿಪ್ ಫಂಡ್

1. ಫ್ರಾಂಕ್ಲಿನ್ ಇಂಡಿಯಾ ಬ್ಲೂ ಚಿಪ್ ಫಂಡ್

ಫ್ರಾಂಕ್ಲಿನ್ ಇಂಡಿಯಾ ಬ್ಲೂ ಚಿಪ್ ಫಂಡ್ ದೊಡ್ಡ ಕ್ಯಾಪ್ ವರ್ಗಕ್ಕೆ ಸೇರಿದ್ದು, ಈ ಫಂಡ್ ನಿಜಕ್ಕೂ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಹೂಡಿಕೆದಾರರಿಗೆ ಕಳೆದ ಆರು ವರ್ಷಗಳಿಂದ ಸತತವಾಗಿ ಖಚಿತವಾದ ಲಾಭ ಕೊಟ್ಟು ಸ್ಥಿರತೆಯನ್ನು ಸರಿದೂಗಿಸಿದೆ. ಆನಂದ್ ರಾಧಾಕೃಷ್ಣನ್ ಎಂಬ ಅನುಭವಿ ವ್ಯವಸ್ಥಾಪಕರು ಈ ಫಂಡ್ ನಿರ್ವಹಿಸುತ್ತಿದ್ದಾರೆ. ಹೆಸರೇ ಹೇಳುವಂತೆ, ಈ ಫಂಡ್ ಹಣವನ್ನು ಹೆಚ್ಚುಕಮ್ಮಿ ಪ್ರತಿ ಬ್ಲೂ ಚಿಪ್ ಸ್ಟಾಕ್ ನೊಂದಿಗೆ ಹೂಡಿದೆ. ಅದೂ ಲಾರೆನ್ಸ್ ಮತ್ತು ಟರ್ಬೋ, ಎಚ್ ಡಿ ಎಫ್ ಸಿ ಬ್ಯಾಂಕ್, ಇನ್ಫೋಸಿಸ್, ಐಸಿಐಸಿಐ ಮುಂತಾದ ಪ್ರತಿಷ್ಠಿತ ಸಂಸ್ಥೆ ಗಳೊಂದಿಗೆ. ಈ ಫಂಡ್ ನ ವೆಚ್ಚದ ಅನುಪಾತ 2.23% ಆಗಿದೆ. ಕಳೆದ ವರ್ಷದ ಈ ಫಂಡ್ ನ ರಿಟರ್ನ್ಸ್ ಮಾನದಂಡದ ಹತ್ತಿರಕ್ಕೆ ಇದೆ. CRISIL ನಿಂದ ಈ ಫಂಡ್ ಗೆ 3 ರೇಟಿಂಗ್ ಸಿಕ್ಕಿದೆ.

2. ಆದಿತ್ಯ ಬಿರ್ಲಾ ಸನ್ ಲೈಫ್ ಫ್ರಂಟ್ ಲೈನ್ ಈಕ್ವಿಟಿ ಫಂಡ್

2. ಆದಿತ್ಯ ಬಿರ್ಲಾ ಸನ್ ಲೈಫ್ ಫ್ರಂಟ್ ಲೈನ್ ಈಕ್ವಿಟಿ ಫಂಡ್

ಆದಿತ್ಯ ಬಿರ್ಲಾ ಸನ್ ಲೈಫ್ ಫ್ರಂಟ್ ಲೈನ್ ಈಕ್ವಿಟಿ ಫಂಡ್ (ಜಿ) ಹಣ ಹೂಡಿಕೆಗೆ ಅತ್ಯುತ್ತಮ ಫಂಡ್. CRISIL ನಿಂದ ಈ ಫಂಡ್ ಗೆ 4 ರೇಟಿಂಗ್ ಸಿಕ್ಕಿದೆ. ಈ ಫಂಡ್ ತುಂಬಾ ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿದೆ. ಈ ಫಂಡ್ ಕಳೆದ ವರ್ಷದ ರಿಟರ್ನ್ಸ್ 24.3% ಆಗಿದೆ. ದೊಡ್ಡ ಕಂಪನಿಗಳಾದ ಮಾರುತಿ, ಇನ್ಫೋಸಿಸ್, ಐಸಿಐಸಿಐ ಬ್ಯಾಂಕ್, ಎಚ್ ಡಿ ಎಫ್ ಸಿ ಬ್ಯಾಂಕ್ ಈ ಫಂಡ್ ನ ಹೋಲ್ಡಿಂಗ್ ನಲ್ಲಿದೆ. BFSI( Banking, Financial Services and Insurence) ದರ್ಜೆಯಲ್ಲಿ ಈ ಫಂಡ್ ನ ಬಹುತೇಕ ಪಾಲು ಹೋಲ್ಡಿಂಗ್ ನಲ್ಲಿದೆ.

3. ಎಸ್ ಬಿ ಐ ಬ್ಲೂ ಚಿಪ್ ಫಂಡ್

3. ಎಸ್ ಬಿ ಐ ಬ್ಲೂ ಚಿಪ್ ಫಂಡ್

ತದನಂತರದ ಉತ್ತಮ ಮ್ಯೂಚುಯಲ್ ಫಂಡ್ ಎಂದರೆ ಎಸ್ ಬಿ ಐ ಬ್ಲೂ ಚಿಪ್ ಫಂಡ್. ಬಹುತೇಕ ವರ್ಷಗಳಿಂದ ಈ ಫಂಡ್ ತುಂಬಾ ಒಳ್ಳೆಯ ರಿಟರ್ನ್ಸ್ ಕೊಡುತ್ತಿದೆ. CRISIL ನಿಂದ ಈ ಫಂಡ್ ಗೆ 4 ರೇಟಿಂಗ್ ಸಿಕ್ಕಿದೆ. ಈ ಫಂಡ್ ನ ಖರ್ಚಿನ ಅನುಪಾತ 1.97% ಆಗಿದ್ದು, ಬಹಳ ಕಡಿಮೆ ಇದೆ. ಇದು ಪ್ರಾರಂಭವಾದಾಗಿನಿಂದಲೂ ರಿಟರ್ನ್ಸ್ ಕಡಿಮೆಯೇ ಆದರೂ ಕಳೆದ ವರ್ಷದ ರಿಟರ್ನ್ಸ್ ಮಾತ್ರ ತುಂಬಾ ಚೆನ್ನಾಗಿದೆ.

4. ಕೋಟಕ್ ಸೆಲೆಕ್ಟ್ ಫೋಕಸ್ ಫಂಡ್

4. ಕೋಟಕ್ ಸೆಲೆಕ್ಟ್ ಫೋಕಸ್ ಫಂಡ್

ಕೋಟಕ್ ಸೆಲೆಕ್ಟ್ ಫೋಕಸ್ ಫಂಡ್ ಹಣ ಹೂಡಲು ಶಿಫಾರಸು ಮಾಡಲೇಬೇಕಾದ ಇನ್ನೊಂದು ಉತ್ತಮ ಫಂಡ್. CRISIL ನಿಂದ ಈ ಫಂಡ್ ಗೆ 4 ರೇಟಿಂಗ್ ದಕ್ಕಿದೆ. ಕಳೆದ ವರ್ಷ ಈ ಫಂಡ್ 28% ರಿಟರ್ನ್ಸ್ ಗಳಿಸಿಕೊಟ್ಟಿದೆ. ಈ ಫಂಡ್ ಕಳೆದ ಐದು ವರ್ಷಗಳಿಂದ ಮಾನದಂಡದ ರಿಟರ್ನ್ಸ್ ಕೂಡಾ ಮೀರಿಸಿ ಬೆಳೆದಿದೆ. ಖರ್ಚಿನ ಅನುಪಾತ 1.97% ಆಗಿದೆ. ಒಟ್ಟಾರೆ ಹೂಡಿಕೆದಾರರಿಗೆ ಇದೊಂದು ಒಳ್ಳೆಯ ಆಯ್ಕೆಯಾಗಿದೆ.

2018ರ ಟಾಪ್ 4 ಉತ್ತಮ ಲಾರ್ಜ್ ಮತ್ತು ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್

2018ರ ಟಾಪ್ 4 ಉತ್ತಮ ಲಾರ್ಜ್ ಮತ್ತು ಮಿಡ್ ಕ್ಯಾಪ್ ಮ್ಯೂಚುಯಲ್ ಫಂಡ್

1. ಫ್ರಾಂಕ್ಲಿನ್ ಇಂಡಿಯಾ ಪ್ರೈಮ ಪ್ಲಸ್ 

ಫ್ರಾಂಕ್ಲಿನ್ ಇಂಡಿಯಾ ಪ್ರೈಮ ಪ್ಲಸ್ ಮಲ್ಟಿ ಕ್ಯಾಪ್ ವರ್ಗಕ್ಕೆ ಸೇರಿದ ಫಂಡ್ ಗಳಲ್ಲಿ ಮೊದಲ ಉತ್ತಮ ಆಯ್ಕೆ. CRISIL ನಿಂದ ಈ ಫಂಡ್ ಗೆ 3 ರೇಟಿಂಗ್ ದಕ್ಕಿದೆ. ಹೂಡಿಕೆದಾರರಿಗೆ ಕಳೆದ 6 ವರ್ಷಗಳಿಂದ ನಿರಂತರವಾಗಿ ಖಚಿತವಾದ ಲಾಭ ಕೊಟ್ಟು ಯಾವ ಏರುಪೇರುಗಳಿಲ್ಲದೆ ಸ್ಥಿರತೆಯನ್ನು ಸರಿದೂಗಿಸಿಕೊಂಡು ಬಂದಿದೆ. ಹಾಗಿದ್ದರೂ ಈ ಫಂಡ್ ಮಾನದಂಡ ಲಾಭವನ್ನು ಹಿಮ್ಮೆಟ್ಟುವುದು ರಲ್ಲಿ ಈ ವರ್ಷ ವಿಫಲವಾಗಿದೆ. ಆದರೂ ಕಳೆದ ಹಲವಾರು ವರ್ಷಗಳಿಂದ ಅದ್ಭುತವಾಗಿ ಕಾರ್ಯನಿರ್ವಹಿಸಿದೆ ಹಾಗೂ ಮಾನದಂಡಕ್ಕೆ ಹೋಲಿಸಿದರೆ ಉತ್ತಮ ಲಾಭ ಕೊಟ್ಟಿದೆ.

2. ಎಸ್ಬಿಐ ಮ್ಯಾಗ್ನಮ್ ಮಲ್ಟಿ ಕ್ಯಾಪ್ ಫಂಡ್

2. ಎಸ್ಬಿಐ ಮ್ಯಾಗ್ನಮ್ ಮಲ್ಟಿ ಕ್ಯಾಪ್ ಫಂಡ್

ಎಸ್ಬಿಐ ಮ್ಯಾಗ್ನಮ್ ಮಲ್ಟಿ ಕ್ಯಾಪ್ ಫಂಡ್ ಮಲ್ಟಿ ಕ್ಯಾಪ್ ವರ್ಗದಲ್ಲಿ ಬರುವ ಇನ್ನೊಂದು ಉತ್ತಮ ಫಂಡ್. CRISIL ನಿಂದ ಈ ಫಂಡ್ ಗೆ 4 ರೇಟಿಂಗ್ ದಕ್ಕಿದೆ. ಈ ಫಂಡ್ ನ ಖರ್ಚಿನ ಅನುಪಾತ ಬಹಳ ಕಡಿಮೆ 2.04%. ನಿರ್ವಹಣೆಯಲ್ಲಿ ಒಳ್ಳೆಯ ಹೆಸರು ಪಡೆದುಕೊಂಡಿದೆ. ಬಹುತೇಕ ಪಾಲಿನ ಫಂಡ್ ಹೋಲ್ಡಿಂಗ್ ಇರುವುದು BFSI ವಿಭಾಗ ದಲ್ಲಿ , ಅದರಲ್ಲಿ ಕೆಲವೆಂದರೆ ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮುಂತಾದವು. ಈ ಫಂಡ್ ನಿರ್ವಹಿಸುತ್ತಿರುವುದು ದಕ್ಷತೆಯುಳ್ಳ, ಅನುಭವಸ್ಥ ವ್ಯವಸ್ಥಾಪಕ.

3. ಎಚ್ ಡಿ ಎಫ್ ಸಿ, ಈಕ್ವಿಟಿ ಫಂಡ್ (ಜಿ)

3. ಎಚ್ ಡಿ ಎಫ್ ಸಿ, ಈಕ್ವಿಟಿ ಫಂಡ್ (ಜಿ)

ಎಚ್ ಡಿ ಎಫ್ ಸಿ ಈಕ್ವಿಟಿ ಫಂಡ್ (ಜಿ) ಮಲ್ಟಿ ಕ್ಯಾಪ್ ವರ್ಗದಲ್ಲಿ ಬರುವ ಇನ್ನೊಂದು ಉತ್ತಮ ಫಂಡ್. CRISIL ನಿಂದ ಈ ಫಂಡ್ ಗೆ 3 ರೇಟಿಂಗ್ ದಕ್ಕಿದೆ. ಕಳೆದ ವರ್ಷ ಈ ಫಂಡ್ ತುಂಬಾ ಉತ್ತಮ ರಿಟರ್ನ್ಸ್ ಕೊಟ್ಟಿದೆ. ಈ ಫಂಡ್ ನ ಖರ್ಚಿನ ಅನುಪಾತ ಬಹಳ ಕಡಿಮೆ. ಈ ಫಂಡ್ ನ ಖಾತೆಯ ನಿಯಂತ್ರಣ ತುಂಬಾ ಉತ್ತಮವಾಗಿದೆ. ಅನುಭವಸ್ಥ ಫಂಡ್ ವ್ಯವಸ್ಥಾಪಕ ಈ ಫಂಡ್ ನಿರ್ವಹಿಸುತ್ತಿದ್ದಾರೆ.

4. ಕೋಟಕ್ ಆಪರ್ಚುನಿಟೀಸ್ ರೆಗ್ಯುಲರ್ ಪ್ಲಾನ್

4. ಕೋಟಕ್ ಆಪರ್ಚುನಿಟೀಸ್ ರೆಗ್ಯುಲರ್ ಪ್ಲಾನ್

ಇದೂ ಒಂದು ಉತ್ತಮ ಫಂಡ್ ಆಗಿದೆ. CRISIL ಹಾಗೂ ವ್ಯಾಲ್ಯೂ ರಿಸರ್ಚ್ ಆನ್ ಲೈನ್ ಈ ಫಂಡ್ ಗೆ 4 ರೇಟಿಂಗ್ ಕೊಟ್ಟಿದೆ. ಈ ಫಂಡ್ ನ YTD (Year To Date) ರಿಟರ್ನ್ಸ್ ತುಂಬಾ ಉತ್ತಮವಾಗಿದೆ.
ಈ ಫಂಡ್ ಮಾನದಂಡದ ರಿಟರ್ನ್ಸ್ ಕೂಡ ಮೀರಿದೆ. ಇದು ಒಂದು ಹಳೆಯ ಫಂಡ್ ಆಗಿದ್ದು ಬಹು ಉತ್ತಮ ನಿರ್ವಹಣೆಯ ಹಿನ್ನಲೆ ಹೊಂದಿದೆ.

2018ರ ಟಾಪ್ 3 ಉತ್ತಮ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್

2018ರ ಟಾಪ್ 3 ಉತ್ತಮ ಮಿಡ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್

1. ಎಚ್ ಡಿ ಎಫ್ ಸಿ ಮಿಡ್ ಕ್ಯಾಪ್ ಆಪರ್ಚುನಿಟಿ ಫಂಡ್

ಗುಣಮಟ್ಟ, ರಿಟರ್ನ್ಸ್ ಮತ್ತು ಖರ್ಚಿನ ಅನುಪಾತ ಗಳು ಹೂಡಿಕೆದಾರರಿಗೆ ಲಾಭದಾಯಕವಾಗಿದೆ. ಹೂಡಿಕೆದಾರರಿಗೆ ಕಳೆದ ವರ್ಷ 30% ರಿಟರ್ನ್ಸ್ ತಂದುಕೊಟ್ಟಿದೆ. ವ್ಯಾಲ್ಯೂ ರಿಸರ್ಚ್ ಇದಕ್ಕೆ 4 ರೇಟಿಂಗ್ ಕೊಟ್ಟಿದೆ. ಖರ್ಚಿನ ಅನುಪಾತ ಕೂಡ ಸಮಂಜಸವಾಗಿದೆ. ದೀರ್ಘಾವಧಿಯ ದೃಷ್ಟಿಕೋನ ಇಟ್ಟುಕೊಂಡು ಹೂಡಿಕೆ ಮಾಡುವವರಿಗೆ ಇದು ಹೇಳಿ ಮಾಡಿಸಿದಂತಿದೆ.

2. ಡಿಎಸ್ಪಿ ಬ್ಲಾಕ್ ರಾಕ್ ಮೈಕ್ರೋ ಕ್ಯಾಪ್ ಫಂಡ್

2. ಡಿಎಸ್ಪಿ ಬ್ಲಾಕ್ ರಾಕ್ ಮೈಕ್ರೋ ಕ್ಯಾಪ್ ಫಂಡ್

ಮಿಡ್ ಮತ್ತು ಸ್ಮಾಲ್ ಕ್ಯಾಪ್ ಮ್ಯೂಚುಯಲ್ ಫಂಡ್ ವಿಭಾಗಕ್ಕೆ ಸೇರಿದ ಇನ್ನೊಂದು ಉತ್ತಮ ಫಂಡ್ ಇದಾಗಿದೆ. CRISIL ನಿಂದ ಈ ಫಂಡ್ ಗೆ 3 ರೇಟಿಂಗ್ ದಕ್ಕಿದೆ. ರಾಸಾಯನಿಕ ಹಾಗೂ ಸರಕು ಬಂಡವಾಳಗಳ ವಿಭಾಗದಲ್ಲಿ ಈ ಫಂಡ್ ನ ಬಹುತೇಕ ಪಾಲಿನ ಹೋಲ್ಡಿಂಗ್ಸ್ ಇದೆ. ವಿನಿತ್ ಸಾಂಬ್ರೆ ಎಂಬ ಸಾಮರ್ಥ್ಯ ಹಾಗೂ ಅನುಭವವಿರುವ ವ್ಯವಸ್ಥಾಪಕರು ಇದರ ಮೇಲ್ವಿಚಾರಣೆ ಹೊತ್ತಿದ್ದಾರೆ.

3. ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್

3. ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್

ಸ್ಮಾಲ್ ಕ್ಯಾಪ್ ವಿಭಾಗದಲ್ಲಿ ರಿಲಯನ್ಸ್ ಸ್ಮಾಲ್ ಕ್ಯಾಪ್ ಫಂಡ್ ಹೂಡಿಕೆದಾರರಿಗೆ ಉತ್ತಮ ಫಂಡ್ ಆಗಿದೆ. ವ್ಯಾಲ್ಯೂ ರಿಸರ್ಚ್ ಈ ಫಂಡ್ ಗೆ 3 ರೇಟಿಂಗ್ ನೀಡಿದೆ. ಕಳೆದ ವರ್ಷ ಇದು ಹೂಡಿಕೆದಾರರಿಗೆ 51.40% ರಿಟರ್ನ್ಸ್ ತಂದುಕೊಟ್ಟಿದೆ. ಈ ಫಂಡ್ ನ ಖರ್ಚಿನ ಅನುಪಾತ ಕಡಿಮೆ ಇದೆ. ಇದು ಹೂಡಿಕೆದಾರರಿಗೆ ತುಂಬಾ ಲಾಭದಾಯಕವಾಗಿದೆ.

ಟಾಪ್ 3 ಉತ್ತಮ ಬ್ಯಾಲೆನ್ಸ್ ಮ್ಯೂಚುಯಲ್ ಫಂಡ್

ಟಾಪ್ 3 ಉತ್ತಮ ಬ್ಯಾಲೆನ್ಸ್ ಮ್ಯೂಚುಯಲ್ ಫಂಡ್

1. ಎಚ್ ಡಿ ಎಫ್ ಸಿ ಬ್ಯಾಲೆನ್ಸ್ ಫಂಡ್ (ಜಿ)

ಇದು ಸರಿದೂಗಿಸುತ್ತಿರುವ ಫಂಡ್ ವಿಭಾಗದಲ್ಲಿ ಮೊದಲ ಉತ್ತಮ ಫಂಡ್. CRISIL ಹಾಗೂ ವ್ಯಾಲ್ಯೂ ರಿಸರ್ಚ್ ಆನ್ ಲೈನ್ ಈ ಫಂಡ್ ಗೆ 4 ರೇಟಿಂಗ್ ಕೊಟ್ಟಿದೆ. ಕಳೆದ ವರ್ಷ ಹೆಸರಾಂತ ಹೂಡಿಕೆದಾರರಿಗೆ ಬಹಳ ಲಾಭ ತಂದುಕೊಟ್ಟಿದೆ. ಖರ್ಚಿನ ಅನುಪಾತ ಬಹಳ ಕಡಿಮೆ. ಇದು ಬಹಳ ಹಳೆಯ ಹಾಗೂ ಹೆಸರಾಂತ ಫಂಡ್ ಗಳಲ್ಲಿ ಒಂದಾಗಿದೆ.

2. ಐಸಿಐಸಿಐ ಪ್ರೋ ಬ್ಯಾಲೆನ್ಸ್ ಫಂಡ್

2. ಐಸಿಐಸಿಐ ಪ್ರೋ ಬ್ಯಾಲೆನ್ಸ್ ಫಂಡ್

ಐಸಿಐಸಿಐ ಪ್ರೋ ಬ್ಯಾಲೆನ್ಸ್ ಫಂಡ್ ಕೂಡ ಸರಿದೂಗಿಸುವ ಫಂಡ್ ವಿಭಾಗದಲ್ಲಿ ಉತ್ತಮವಾಗಿದೆ. ವ್ಯಾಲ್ಯೂ ರಿಸರ್ಚ್ ಆನ್ ಲೈನ್ ಈ ಫಂಡ್ ಗೆ 4 ರೇಟಿಂಗ್ ಕೊಟ್ಟಿದೆ. ಕಳೆದ ವರ್ಷದಲ್ಲಿ ಇದು ಸಮರ್ಪಕವಾಗಿ ಕಾರ್ಯ ನಿರ್ವಹಿಸಿದೆ. ಕಳೆದ ವರ್ಷ 20% ರಿಟರ್ನ್ಸ್ ಹೂಡಿಕೆದಾರರಿಗೆ ತಂದುಕೊಟ್ಟಿದೆ. ಒಟ್ಟಾರೆ ಇದು ಹೂಡಿಕೆಗೆ ಬಹಳ ಪ್ರಯೋಜನಕಾರಿಯಾಗಿದೆ.

3. ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲೆನ್ಸ್ಡ್ ಫಂಡ್

3. ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲೆನ್ಸ್ಡ್ ಫಂಡ್

ಆದಿತ್ಯ ಬಿರ್ಲಾ ಸನ್ ಲೈಫ್ ಬ್ಯಾಲೆನ್ಸ್ಡ್ ಫಂಡ್ 2018ರಲ್ಲಿ ಶಿಫಾರಸು ಮಾಡಬೇಕಾದ ಒಂದು ಉತ್ತಮ ಫಂಡ್ ಎನ್ನುವುದು ಖಚಿತ. ವ್ಯಾಲ್ಯೂ ರಿಸರ್ಚ್ ಆನ್ಲೈನ್ ಈ ಫಂಡ್ ಗೆ 4 ರೇಟಿಂಗ್ ಕೊಟ್ಟಿದೆ. ಈ ಫಂಡ್ 20.5% ರಿಟರ್ನ್ಸ್ ಕೊಟ್ಟಿದೆ. ಎಚ್ ಡಿ ಎಫ್ ಸಿ, ಇನ್ಫೋಸಿಸ್, ಐಟಿಸಿ ಮುಂತಾದ ದೊಡ್ಡ ಕಂಪನಿಗಳ ಶೇರುಗಳನ್ನು ಇಟ್ಟುಕೊಂಡಿದೆ.

English summary

Top 15 Best Mutual Funds SIP to invest in India for 2018

Which is the best mutual fund for investment in 2018? Which mutual funds are likely to give a better return in 2018?
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X