For Quick Alerts
ALLOW NOTIFICATIONS  
For Daily Alerts

ಇವು ಅತಿಹೆಚ್ಚು ಬಡ್ಡಿದರ ನೀಡುವ ಪೋಸ್ಟ್ ಆಫೀಸ್ ಉಳಿತಾಯ ಯೋಜನೆಗಳು

ಭಾರತೀಯ ಅಂಚೆ ಇಲಾಖೆ ದೇಶದ ನಾಗರಿಕರಿಗಾಗಿ ಹಲವಾರು ಹಣಕಾಸು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯೊಂದಿಗೆ ಒಳ್ಳೆಯ ಬಡ್ಡಿ ದರ ಹಾಗೂ ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಈ ಉಳಿತಾಯ ಯೋಜನೆಗಳು ಹೊಂದಿವೆ.

By Siddu
|

ಭಾರತೀಯ ಅಂಚೆ ಇಲಾಖೆ ದೇಶದ ನಾಗರಿಕರಿಗಾಗಿ ಹಲವಾರು ಹಣಕಾಸು ಉಳಿತಾಯ ಯೋಜನೆಗಳನ್ನು ಜಾರಿಗೆ ತಂದಿದೆ. ನಿಮ್ಮ ಹಣಕ್ಕೆ ಸಂಪೂರ್ಣ ಸುರಕ್ಷತೆಯೊಂದಿಗೆ ಒಳ್ಳೆಯ ಬಡ್ಡಿ ದರ ಹಾಗೂ ಇನ್ನೂ ಹಲವಾರು ವೈಶಿಷ್ಟ್ಯತೆಗಳನ್ನು ಈ ಉಳಿತಾಯ ಯೋಜನೆಗಳು ಹೊಂದಿವೆ.

ಪೋಸ್ಟ್ ಆಫೀಸ್ ಮಾಸಿಕ ಆದಾಯ ಖಾತೆ, ೫ ವರ್ಷದ ರೆಕರಿಂಗ್ ಡಿಪಾಸಿಟ್ ಖಾತೆ, ಹಿರಿಯ ನಾಗರಿಕರ ಉಳಿತಾಯ ಯೋಜನೆ, ೧೫ ವರ್ಷಗಳ ಸಾರ್ವಜನಿಕ ಭವಿಷ್ಯ ನಿಧಿ ಖಾತೆ ಮತ್ತು ಸುಕನ್ಯಾ ಸಮೃದ್ಧಿ ಯೋಜನೆ ಇವು ಅಂಚೆ ಇಲಾಖೆಯ ಉತ್ತಮ ಬಡ್ಡಿದರ ಹಾಗೂ ಹಲವಾರು ಪ್ರಯೋಜನಗಳನ್ನು ನೀಡುವ ಪ್ರಮುಖ ೫ ಯೋಜನೆಗಳಾಗಿವೆ. ಈ ಎಲ್ಲ ಉಳಿತಾಯ ಯೋಜನೆಗಳು ಅಂಚೆ ಇಲಾಖೆಯ ವೆಬ್ಸೈಟ್ indiapost.gov.in. ನಲ್ಲಿ ಇವೆ. ಈ ಯಾವುದೇ ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸುವಿರಾದರೆ ನಿಮಗಾಗಿ ಅವುಗಳ ಮಾಹಿತಿ ಹಾಗೂ ವಿವರಗಳನ್ನು ನೀಡಲಾಗಿದೆ. ಪೋಸ್ಟ್ ಆಫೀಸ್ ನಲ್ಲಿ ನಿಮ್ಮ ಖಾತೆ ಇದೆಯೇ? ಇಲ್ಲಿ ನೋಡಿ...

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (Post Office Monthly Income Scheme Account- MIS)

ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ ಖಾತೆ (Post Office Monthly Income Scheme Account- MIS)

ಈ ಮಾಸಿಕ ಆದಾಯ ಯೋಜನೆಯಲ್ಲಿ ೧೫೦೦ ರೂಪಾಯಿ ಅಥವಾ ಅದರ ದ್ವಿಗುಣಗಳಲ್ಲಿ ಹೂಡಿಕೆ ಮಾಡಬಹುದು. ಏಕ ವ್ಯಕ್ತಿಯ ಹೆಸರಿನ ಖಾತೆಯಲ್ಲಿ ಗರಿಷ್ಠ ೪.೫ ಲಕ್ಷ ರೂಪಾಯಿ ಹಾಗೂ ಜಂಟಿ ಖಾತೆಯಲ್ಲಿ ಗರಿಷ್ಠ ೯ ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು.

ಬಡ್ಡಿ ದರ
ಈ ಖಾತೆಯಲ್ಲಿ ವಾರ್ಷಿಕ ಶೇ. ೭.೫ರಷ್ಟು ಬಡ್ಡಿ ನೀಡಲಾಗುತ್ತಿದ್ದು, ಬಡ್ಡಿಯನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಹೂಡಿದ ಮೊತ್ತವನ್ನು ಒಂದು ವರ್ಷದ ನಂತರ ಹಾಗೂ ೩ ವರ್ಷಗಳ ಮೊದಲು ಹೂಡಿಕೆಯ ಶೇ. ೨ ರಷ್ಟು ಡಿಸ್ಕೌಂಟ್ ನೊಂದಿಗೆ ಹಾಗೂ ೩ ವರ್ಷಗಳ ನಂತರ ಶೇ. ೧ರಷ್ಟು ಡಿಸ್ಕೌಂಟ್ ನೊಂದಿಗೆ ಅವಧಿಗೆ ಮುನ್ನ ಹಿಂಪಡೆಯಬಹುದು. (ಹೂಡಿಕೆಯ ಮೊತ್ತದಲ್ಲಿ ಹಣದ ಕಡಿತವೇ ಡಿಸ್ಕೌಂಟ್ ಆಗಿದೆ.)

ಅಂಚೆ ಇಲಾಖೆಯ ಈ ಉಳಿತಾಯ ಯೋಜನೆಗಳಲ್ಲಿ ಶೇ. 8ಕ್ಕಿಂತ ಹೆಚ್ಚು ಬಡ್ಡಿದರ ಸಿಗುತ್ತದೆ..ಅಂಚೆ ಇಲಾಖೆಯ ಈ ಉಳಿತಾಯ ಯೋಜನೆಗಳಲ್ಲಿ ಶೇ. 8ಕ್ಕಿಂತ ಹೆಚ್ಚು ಬಡ್ಡಿದರ ಸಿಗುತ್ತದೆ..

೫ ವರ್ಷಗಳ ಅಂಚೆ ಕಚೇರಿ ರೆಕರಿಂಗ್ ಡಿಪಾಸಿಟ್ ಸ್ಕೀಮ್
 

೫ ವರ್ಷಗಳ ಅಂಚೆ ಕಚೇರಿ ರೆಕರಿಂಗ್ ಡಿಪಾಸಿಟ್ ಸ್ಕೀಮ್

ತಿಂಗಳಿಗೆ ಕನಿಷ್ಠ ೧೦ ರೂಪಾಯಿ ಅಥವಾ ೫ ರೂಪಾಯಿಯ ದ್ವಿಗುಣಗಳಲ್ಲಿ ಯಾವುದೇ ಮೊತ್ತವನ್ನು ಪಾವತಿಸುವ ಮೂಲಕ ರೆಕರಿಂಗ್ ಡಿಪಾಸಿಟ್ ಖಾತೆ ಆರಂಭಿಸಬಹುದು. ಈ ಖಾತೆಗೆ ಜಮೆ ಮಾಡಬಹುದಾದ ಮೊತ್ತಕ್ಕೆ ಗರಿಷ್ಠ ಮಿತಿಯನ್ನು ವಿಧಿಸಲಾಗಿಲ್ಲ. ಮಾಸಿಕವಾಗಿ ೧೦ ರೂಪಾಯಿ ಪಾವತಿಸುವ ಖಾತೆಯು ಪಕ್ವತಾ ದಿನಾಂಕದಂದು ೭೧೭.೪೩ ರೂಪಾಯಿಗಳನ್ನು ನಿಮಗೆ ನೀಡುತ್ತದೆ. ಪ್ರತಿ ಬಾರಿ ಒಂದು ವರ್ಷದಂತೆ ಮತ್ತೆ ೫ ವರ್ಷಗಳವರೆಗೆ ಖಾತೆಯನ್ನು ವಿಸ್ತರಿಸುವ ಅವಕಾಶವಿದೆ.

ಬಡ್ಡಿ ದರ
ಈ ಖಾತೆಗೆ ವಾರ್ಷಿಕ ಶೇ. 6.9 ಬಡ್ಡಿ ದರ ನಿಗದಿಪಡಿಸಲಾಗಿದೆ. ಕ್ಯಾಲೆಂಡರ್ ತಿಂಗಳಿನ ೧೫ನೇ ತಾರೀಕಿನವರೆಗೆ ತೆರೆಯಲಾದ ಆರ್ ಡಿ ಖಾತೆಯಲ್ಲಿ ಆಯಾ ತಿಂಗಳಿನ ೧೫ ನೇ ತಾರೀಕಿನವರೆಗೆ ಹಾಗೂ ೧೬ರ ನಂತರ ತೆರೆಯಲಾದ ಖಾತೆಯಲ್ಲಿ ಆಯಾ ತಿಂಗಳಿನ ಕೊನೆಯ ದಿನಾಂಕದವರೆಗೆ ಮಾಸಿಕ ಕಂತು ಪಾವತಿಸಬಹುದು.
ನಿಗದಿತ ದಿನಾಂಕದೊಳಗೆ ಕಂತು ಕಟ್ಟದಿದ್ದಲ್ಲಿ ಪ್ರತಿ ೫ ರೂಪಾಯಿಗೆ ೫ ಪೈಸೆ ದಂಡ ಶುಲ್ಕ ವಿಧಿಸಲಾಗುತ್ತದೆ. ಸತತವಾಗಿ ೪ ಬಾರಿ ಕಂತು ತಪ್ಪಿಸಿದಲ್ಲಿ ಖಾತೆಯನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಆದರೂ ಎರಡು ತಿಂಗಳ ಒಳಗಾಗಿ ಖಾತೆಯನ್ನು ಪುನಾರಂಭಿಸಬಹುದು. ಒಂದು ವೇಳೆ ಎರಡು ತಿಂಗಳೊಳಗಾಗಿ ಖಾತೆಯನ್ನು ನವೀಕರಣಗೊಳಿಸದಿದ್ದಲ್ಲಿ ನಂತರ ಖಾತೆಗೆ ಯಾವುದೇ ಕಂತು ಪಾವತಿಸಲು ಸಾಧ್ಯವಿಲ್ಲ.

ಹಿರಿಯ ನಾಗರಿಕರ ಉಳಿತಾಯ ಯೋಜನೆ

ಹಿರಿಯ ನಾಗರಿಕರ ಉಳಿತಾಯ ಯೋಜನೆ

೫೫ ವರ್ಷ ಅಥವಾ ಅದಕ್ಕೂ ಮೇಲ್ಪಟ್ಟ ಹಾಗೂ ೬೦ ವರ್ಷದೊಳಗಿನ ವ್ಯಕ್ತಿಗಳು ಈ ಖಾತೆ ತೆರೆಯಬಹುದು. ಈ ವಯೋಮಾನದಲ್ಲಿರುವ ಸೇವಾ ಅವಧಿ ವಿಸ್ತರಣೆಗೊಂಡ ನಿವೃತ್ತರು ಅಥವಾ ವಿಆರ್‌ಎಸ್ ಪಡೆದವರು ಸಹ ಖಾತೆ ಆರಂಭಿಸಬಹುದು. ನಿವೃತ್ತಿ ನಂತರದ ಸೌಲಭ್ಯಗಳನ್ನು ಪಡೆದ ಒಂದು ತಿಂಗಳೊಳಗೆ ಖಾತೆ ತೆರೆಯಬೇಕು ಹಾಗೂ ಖಾತೆಯಲ್ಲಿನ ಹೂಡಿಕೆ ಮೊತ್ತ ನಿವೃತ್ತಿಯ ನಂತರ ಪಡೆದ ಒಟ್ಟು ಮೊತ್ತವನ್ನು ಮೀರುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ.
ಈ ಖಾತೆಗೆ ಒಂದು ಬಾರಿ ಮಾತ್ರ ಸಾವಿರ ರೂಪಾಯಿಯ ದ್ವಿಗುಣಗಳಲ್ಲಿ ೧೫ ಲಕ್ಷ ರೂಪಾಯಿ ಮೀರದಂತೆ ಹೂಡಿಕೆ ಮಾಡಬಹುದು. ಖಾತೆಯ ಪಕ್ವತಾ ಅವಧಿ ಐದು ವರ್ಷಗಳಾಗಿರುತ್ತದೆ.
ಖಾತೆ ಆರಂಭಿಸಿದ ಒಂದು ವರ್ಷದ ನಂತರ ಹೂಡಿಕೆಯ ಶೇ. ೧.೫ ರಷ್ಟು ಕಡಿತ ಹಾಗೂ ೨ ವರ್ಷದ ನಂತರ ಶೇ. ೧ ರಷ್ಟು ಕಡಿತದೊಂದಿಗೆ ಅವಧಿಪೂರ್ವವಾಗಿ ಹಣ ಮರಳಿ ಪಡೆಯುವ ಅವಕಾಶವಿದೆ.

ಬಡ್ಡಿ ದರ
ಇದರಲ್ಲಿ ವಾರ್ಷಿಕ ಶೇ. ೮.೩ ರಷ್ಟು ಬಡ್ಡಿ ದರ ನೀಡಲಾಗುತ್ತದೆ. ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ದಿನಾಂಕದ ನಂತರ ಪ್ರಥಮವಾಗಿ ಬರುವ ಮಾರ್ಚ್ ೩೧/ ಸೆಪ್ಟೆಂಬರ್ ೩೦/ ಡಿಸೆಂಬರ್ ೩೧ ದಿನಾಂಕಗಳಂದು ಹಾಗೂ ತದನಂತರದಲ್ಲಿ ಮಾರ್ಚ್ ೩೧, ಜೂನ್ ೩೦, ಸೆಪ್ಟೆಂಬರ್ ೩೦ ಮತ್ತು ಡಿಸೆಂಬರ್ ೩೧ ರಂದು ಅನ್ವಯವಾಗುವಂತೆ ಬಡ್ಡಿ ಪಾವತಿಸಲಾಗುತ್ತದೆ.

ಸಾರ್ವಜನಿಕ ಭವಿಷ್ಯ ನಿಧಿ ಖಾತೆ

ಸಾರ್ವಜನಿಕ ಭವಿಷ್ಯ ನಿಧಿ ಖಾತೆ

೧೫ ವರ್ಷ ಕಾಲಾವಧಿಗೆ ಈ ಖಾತೆಯಲ್ಲಿ ನಿರ್ದಿಷ್ಟ ಆರ್ಥಿಕ ವರ್ಷದಲ್ಲಿ ಕನಿಷ್ಠ ೫೦೦ ರೂಪಾಯಿ ಹಾಗೂ ಗರಿಷ್ಠ ೧.೫ ಲಕ್ಷ ರೂಪಾಯಿ ಹೂಡಿಕೆ ಮಾಡಬಹುದು. ಏಕ ಗಂಟಿನಲ್ಲಿ ಅಥವಾ ೧೨ ಕಂತುಗಳ ರೂಪದಲ್ಲಿ ಹಣವನ್ನು ಪಾವತಿಸಲು ಅವಕಾಶವಿದೆ.
ಈ ಯೋಜನೆಯ ಪಕ್ವತಾ ಅವಧಿ ೧೫ ವರ್ಷಗಳಾಗಿದೆ. ಪಕ್ವತಾ ಅವಧಿ ನಂತರದ ಒಂದು ವರ್ಷದೊಳಗೆ ಯೋಜನೆಯನ್ನು ಮತ್ತೆ ಐದು ವರ್ಷಗಳವರೆಗೆ ವಿಸ್ತರಿಸಿಕೊಳ್ಳಲು ಅವಕಾಶವಿದೆ. ೧೫ ವರ್ಷಗಳ ಮುಂಚೆ ಈ ಖಾತೆಯನ್ನು ಮುಕ್ತಾಯಗೊಳಿಸುವ ಅವಕಾಶವಿಲ್ಲ. ಈ ಯೋಜನೆಯಲ್ಲಿ ತೊಡಗಿಸುವ ಮೊತ್ತವು ಆದಾಯ ತೆರಿಗೆ ಕಾಯ್ದೆ ೮೦ ಸಿ ಪ್ರಕಾರ ವಿನಾಯಿತಿಗೆ ಒಳಪಟ್ಟಿರುತ್ತದೆ.

ಬಡ್ಡಿ ದರ
ಈ ಯೋಜನೆಯಲ್ಲಿ ವಾರ್ಷಿಕ ಶೇ. ೭.೬ರಷ್ಟು ಬಡ್ಡಿ ದರ (ವಾರ್ಷಿಕವಾಗಿ ಸೇರ್ಪಡೆ) ನಿಗದಿಪಡಿಸಲಾಗಿದೆ. ಬಡ್ಡಿಗೆ ಯಾವುದೇ ತೆರಿಗೆ ಇರುವುದಿಲ್ಲ.

ಸುಕನ್ಯಾ ಸಮೃದ್ಧಿ ಖಾತೆ

ಸುಕನ್ಯಾ ಸಮೃದ್ಧಿ ಖಾತೆ

ಹೆಣ್ಣು ಮಗುವಿನ ಪಾಲಕರು ಅಥವಾ ಕಾನೂನು ಬದ್ಧ ಪೋಷಕರು ಹೆಣ್ಣು ಮಗುವಿನ ಹೆಸರಲ್ಲಿ ಈ ಖಾತೆ ಆರಂಭಿಸಬಹುದು. ಪ್ರತಿ ಆರ್ಥಿಕ ವರ್ಷದಲ್ಲಿ ಈ ಖಾತೆಗೆ ಕನಿಷ್ಠ ೧೦೦೦ ರೂಪಾಯಿ ಹಾಗೂ ಗರಿಷ್ಠ ೧.೫ ಲಕ್ಷ ರೂಪಾಯಿಗಳನ್ನು ಜಮಾ ಮಾಡಬಹುದು. ನಂತರ ನೂರು ರೂಪಾಯಿಯ ದ್ವಿಗುಣಗಳಲ್ಲಿ ಮೊತ್ತವನ್ನು ಪಾವತಿಸಬಹುದು.
ಹಿಂದಿನ ಆರ್ಥಿಕ ವರ್ಷದ ಕೊನೆಯಲ್ಲಿ ಖಾತೆದಾರರ ೧೮ನೇ ವಯಸ್ಸಿನಲ್ಲಿ ಜಮೆಯಾಗಿರುವ ಒಟ್ಟು ಮೊತ್ತದ ಶೇ. ೫೦ ರಷ್ಟನ್ನು ಹಿಂಪಡೆಯಲು ಅವಕಾಶವಿದೆ. ಹೆಣ್ಣು ಮಗುವಿಗೆ ೨೧ ವರ್ಷವಾದ ನಂತರ ಖಾತೆ ಮುಕ್ತಾಯಗೊಳಿಸಬಹುದು.

ಬಡ್ಡಿ ದರ
ಇದರಲ್ಲಿ ವಾರ್ಷಿಕ ೮.೧ ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. (೦೧-೦೧-೨೦೧೮ ರಿಂದ).

 

English summary

Post Office Saving Schemes: These will give you high interest

Post Office Savings Schemes: Post Offices across India offer multiple savings schemes, some of which offer high interest to the customers.
Story first published: Wednesday, August 8, 2018, 10:24 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X