For Quick Alerts
ALLOW NOTIFICATIONS  
For Daily Alerts

ನಿರಂತರವಾಗಿ ಕ್ರೆಡಿಟ್ ಸ್ಕೋರ್ ಪರಿಶೀಲನೆ ಮಾಡುವುದರಿಂದ ಸಿಗುವ ಲಾಭಗಳೇನು?

ನೀವು ಹೇಗೆ ಬ್ಯಾಂಕಿಂಗ್ ವ್ಯವಹಾರ ನಡೆಸಿದ್ದೀರಿ ಎಂಬುದರ ಆಧಾರದ ಮೇಲೆ ನಿಮಗೆ ಅಂಕಗಳನ್ನು ನೀಡುವ ಪ್ರಕ್ರಿಯೆಯೇ ಕ್ರೆಡಿಟ್ ಸ್ಕೋರಿಂಗ್ ಅಥವಾ ಕ್ರೆಡಿಟ್ ಅಂಕಪಟ್ಟಿ. ಈ ಅಂಕೆಯು 300 ರಿಂದ 900ರ ವರೆಗೂ ಇರುತ್ತದೆ.

By Siddu Thoravat
|

ನಿಮ್ಮ ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆ ಕಾಯ್ದುಕೊಂಡಾಗ, ಬ್ಯಾಂಕಿಂಗ್ ವ್ಯವಹಾರದಲ್ಲಿ ಪರಿಪೂರ್ಣತೆ ರೂಪಿಸಿಕೊಂಡಾಗ ಮಾತ್ರ ನೀವು ಉತ್ತಮ ವ್ಯವಹಾರಸ್ಥರಾಗುವುದು ಸಾಧ್ಯ. ನಿಮ್ಮ ಪ್ರತಿ ಬ್ಯಾಂಕಿಂಗ್ ವ್ಯವಹಾರವೂ ಕೂಡ ನಿಮಗೆ ಅಂಕಗಳನ್ನು ನೀಡುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಆ ನಿಟ್ಟಿನಲ್ಲಿ ಕ್ರೆಡಿಟ್ ಕೇಂದ್ರ ಗಳು ಕಾರ್ಯ ನಿರ್ವಹಿಸುತ್ತದೆ. ಭಾರತದಲ್ಲಿ ಕ್ರೆಡಿಟ್ ಸ್ಕೋರ್ ಮತ್ತು ಅದರ ವರದಿಯು ನಾಲ್ಕು ಕ್ರೆಡಿಟ್ ಕೇಂದ್ರಗಳಿಂದ ಲಭ್ಯವಾಗುತ್ತದೆ. ಅವುಗಳೆಂದರೆ ಇಕ್ವಿಫ್ಯಾಕ್ಸ್ (Equifax), ಸಿಬಿಲ್ (CIBIL), ಎಕ್ಸ್ ಪೀರಿಯನ್ (Experian) ಮತ್ತು ಸಿಆರ್ ಐಎಫ್ ಹೈ ಮಾರ್ಕ್ (CRIF High Mark).

 

ನೀವು ಹೇಗೆ ಬ್ಯಾಂಕಿಂಗ್ ವ್ಯವಹಾರ ನಡೆಸಿದ್ದೀರಿ ಎಂಬುದರ ಆಧಾರದ ಮೇಲೆ ನಿಮಗೆ ಅಂಕಗಳನ್ನು ನೀಡುವ ಪ್ರಕ್ರಿಯೆಯೇ ಕ್ರೆಡಿಟ್ ಸ್ಕೋರಿಂಗ್ ಅಥವಾ ಕ್ರೆಡಿಟ್ ಅಂಕಪಟ್ಟಿ. ಈ ಅಂಕಗಳು 300 ರಿಂದ 900ರ ವರೆಗೂ ಇರುತ್ತವೆ. ಅಧಿಕ ಅಂಕ ಗಳಿಸಿದ್ದೀರಿ ಎಂದರೆ ನೀವು ಉನ್ನತ ಶ್ರೇಣಿಯ ಅರ್ಹತೆಯನ್ನು ಪಡೆದಿದ್ದೀರಿ ಎಂದರ್ಥ. ಈ ರೀತಿ ಉನ್ನತ ಶ್ರೇಣಿಯನ್ನು ಪಡೆಯಬೇಕು ಎಂದರೆ ಕ್ರೆಡಿಟ್ ಮೌಲ್ಯಮಾಪನ ಬಹಳ ಮುಖ್ಯ. ಮಕ್ಕಳ ಶಾಲೆಯ ಅಂಕಪಟ್ಟಿಯನ್ನು ಪೋಷಕರು ಪರಿಶೀಲನೆ ಮಾಡುವಂತೆ ನಿಮ್ಮ ಕ್ರೆಡಿಟ್ ಸ್ಕೋರರ್ ಅನ್ನು ಸ್ವಯಂ ನೀವೇ ಪರಿಶೀಲನೆ ಮಾಡಿಕೊಳ್ಳುವ ಒಂದು ಪರಿಪಾಠ ರೂಢಿಸಿಕೊಳ್ಳಬೇಕು ಎಂದರೆ ಅತಿಶಯೋಕ್ತಿ ಆಗಲಾರದು. ಹಾಗಾದ್ರೆ ಈ ಕ್ರೆಡಿಟ್ ಸ್ಕೋರ್ ಪರಿಶೀಲನೆಯ ಅಗತ್ಯತೆ ಆದರೂ ಏನು ಎಂಬ ಪ್ರಶ್ನೆಗೆ ಉತ್ತರ ತಿಳಿದುಕೊಳ್ಳಲು ಮುಂದೆ ಓದಿ. ಕ್ರೆಡಿಟ್ ಸ್ಕೋರ್ ಹೆಚ್ಚಿಸುವುದು ಹೇಗೆ? ಇಲ್ಲಿವೆ 6 ಮಾರ್ಗ

ಕ್ರೆಡಿಟ್ ಮೌಲ್ಯಮಾಪನದ ಅರಿವು

ಕ್ರೆಡಿಟ್ ಮೌಲ್ಯಮಾಪನದ ಅರಿವು

ಯೋಗ್ಯವಾದ ಸಾಲವನ್ನು ಪಡೆಯುವ ಮೊದಲ ಹೆಜ್ಜೆಯು ನಿರಂತರ ಮತ್ತು ಸ್ಥಿರ ಸ್ವಯಂ-ಸಾಲದ ಮೌಲ್ಯಮಾಪನವಾಗಿರುತ್ತದೆ. ಕ್ರೆಡಿಟ್ ಮೌಲ್ಯಮಾಪನ ಎಂಬ ಪದವು ಬಹುಶ್ಯ ಕೆಲವರಿಗೆ ತುಂಬಾ ಜಟೀಲವಾದ ಮತ್ತು ವಿದೇಶಿ ಎಂದು ಅನ್ನಿಸಬಹುದು. ಆದರೆ ನಿರಂತರವಾದ ಕ್ರೆಡಿಟ್ ಮೌಲ್ಯಮಾಪನ ಅಂದರೆ ಕೇವಲ ನಿಮ್ಮ ಕ್ರೆಡಿಟ್ ಅಂಕಗಳು ಮತ್ತು ಕ್ರೆಡಿಟ್ ವರದಿಗಳನ್ನು ಆಗಾಗ ಪರಿಶೀಲನೆ ಮಾಡುತ್ತಿರುವುದು ಎಂದರ್ಥ ಅಷ್ಟೇ. ಒಂದಕ್ಕಿಂತ ಹೆಚ್ಚು ಸಂದರ್ಭಗಳಲ್ಲಿ ಈ ಸರಳವಾದ ಪ್ರಕ್ರಿಯೆಯು ನಿಮ್ಮ ನೆರವಿಗೆ ಬರುತ್ತದೆ ಎಂಬುದನ್ನು ನೀವು ಅರ್ಥೈಸಿಕೊಳ್ಳಬೇಕಿದೆ. ನಾವಿಲ್ಲಿ ಪ್ರಮುಖ 5 ಲಾಭಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. ಅವುಗಳನ್ನು ತಿಳಿದುಕೊಳ್ಳಲು ಮುಂದೆ ಓದಿ.. ಸಿಬಿಲ್ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆಷ್ಟು ಗೊತ್ತು?

1. ಕ್ರೆಡಿಟ್ ಸ್ಕೋರ್ ಸ್ಥಿರತೆಯನ್ನು ಪರೀಕ್ಷಿಸಿ
 

1. ಕ್ರೆಡಿಟ್ ಸ್ಕೋರ್ ಸ್ಥಿರತೆಯನ್ನು ಪರೀಕ್ಷಿಸಿ

ಸದ್ಯ ಅನೇಕ ಫೈನ್ ಟೆಕ್ (FinTech) ಕಂಪೆನಿಗಳ ಕಾರಣದಿಂದಾಗಿ ನಿಮ್ ಕ್ರೆಡಿಟ್ ಸ್ಕೋರ್ ನಿಮ್ಮಿಂದ ಮರೆಮಾಚಲಾಗುವುದಿಲ್ಲ. ನೀವು ಬಯಸಿದಾಗೆಲ್ಲ ನಿಮ್ಮ ಕ್ರೆಡಿಟ್ ಸ್ಕೋರ್ ಗಳನ್ನು ನೋಡುವುದಕ್ಕೆ ಇವು ಅವಕಾಶ ಕಲ್ಪಿಸಿಕೊಡುತ್ತವೆ. ಹಿಂದಿನ ಕಾಲಕ್ಕಿಂತ ಈಗ ನೀವು ಹೆಚ್ಚು ಉತ್ತಮ ಸನ್ನಿವೇಶದಲ್ಲಿ ಖಂಡಿತ ಇದ್ದೀರಿ. ಯಾಕೆಂದರೆ ಮೊದಲೆಲ್ಲ ಸಾಲ ಅಥವಾ ಕ್ರೆಡಿಟ್ ಕಾರ್ಡ್ ಗಳಿಗೆ ನೀವು ಅರ್ಜಿ ಸಲ್ಲಿಸಿದಾಗ ಅದನ್ನು ನಿಮಗೆ ಸಾಲ ನೀಡುವ ಸಾಲದಾತ ಮಾತ್ರ ಪರಿಶೀಲನೆ ಮಾಡಲು ಸಾಧ್ಯವಾಗುತ್ತಿತ್ತು. ಈಗ ನಿಮಗೆ ನಿಮ್ಮ ಅಂಕಗಳನ್ನು ನೋಡಲು ಅವಕಾಶವಿರುವುದರಿಂದಾಗಿ, ಒಂದು ವೇಳೆ ಸಮಸ್ಯೆ ಇದ್ದಲ್ಲಿ ಅದನ್ನು ಪರಿಹರಿಸಿಕೊಳ್ಳುವುದಕ್ಕೂ ಮಾರ್ಗ ಸುಲಭವಾಗಿದೆ. ಅದಕ್ಕಾಗಿ ಸಾಕಷ್ಟು ಅವಕಾಶಗಳೂ ಕೂಡ ಇಂದಿನ ದಿನಗಳಲ್ಲಿ ಲಭ್ಯವಿದೆ. ಹಾಗಾಗಿ ಆಗಾಗ ಕ್ರೆಡಿಟ್ ಸ್ಕೋರ್ ಗಳನ್ನು ಪರಿಶೀಲನೆ ಮಾಡಿಕೊಂಡು ಜಮಾವಣೆಯ ಸ್ಥಿರತೆಯನ್ನು ಕಾಪಾಡಿಕೊಳ್ಳಿ. ಕ್ರೆಡಿಟ್ ಕೇಂದ್ರಗಳಿಂದ ಲಭ್ಯವಾಗುವ ಅಂಕವು ನಿಮ್ಮ ಬ್ಯಾಂಕಿಂಗ್ ಕ್ಷೇತ್ರ ವ್ಯವಹಾರದ ಮೇಲೆ ಉತ್ತಮ ಲಾಭಗಳನ್ನು ಕರುಣಿಸಲು ನೆರವು ನೀಡುತ್ತದೆ.

2. ನಿಮ್ಮ ಕ್ರೇಡಿಟ್ ಸ್ಕೋರ್ ನ ದೋಷಗಳನ್ನು ಸರಿಪಡಿಸಿ

2. ನಿಮ್ಮ ಕ್ರೇಡಿಟ್ ಸ್ಕೋರ್ ನ ದೋಷಗಳನ್ನು ಸರಿಪಡಿಸಿ

ನೀವು ಎರವಲು ಪಡೆದ ಸಾಲದಾತರು ಮರುಪಾವತಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳನ್ನು ಕ್ರೆಡಿಟ್ ಬ್ಯೂರೋಗಳಿಗೆ ವರದಿ ಮಾಡಲು ಬದ್ಧರಾಗಿರುತ್ತಾರೆ. ಇದರಲ್ಲಿ ನೀವು ಸಾಲವನ್ನು ನಿಗದಿತ ದಿನಾಂಕಕ್ಕಿಂತ ಮೊದಲೇ ಪಾವತಿ ಮಾಡುವುದು/ತೀರಿಸುವುದು ಕೂಡ ಒಳಗೊಂಡಿರುತ್ತದೆ. ಆದರೆ ಕ್ರೆಡಿಟ್ ಕೇಂದ್ರಗಳಿಗೆ ನೀಡಲಾದ ಮಾಹಿತಿಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ತಿಳಿಯುವುದಕ್ಕೆ ಯಾವುದೇ ಮಾರ್ಗವಿಲ್ಲ ಎಂಬುದು ನಿಮಗೆ ಚೆನ್ನಾಗಿ ತಿಳಿದಿರಲಿ ಅಥವಾ ಸ್ವತಃ ನೀವೇ ನಿಮ್ಮ ಅಂಕಪಟ್ಟಿಯನ್ನು ಇಲ್ಲವೇ ಸ್ಥಾನವನ್ನು ಎಡಿಟ್ ಮಾಡುವುದಕ್ಕೆ ಅವಕಾಶವಿರುವುದಿಲ್ಲ. ಹಾಗಾಗಿ ಇದು ನಿಮ್ಮ ಹೆಗಲ ಮೇಲಿರುವ ದೊಡ್ಡ ಸವಾಲಾಗಿರುತ್ತದೆ. ಇದನ್ನು ಸರಿಪಡಿಸುವುದಕ್ಕೆ ಇರುವ ಏಕಮಾತ್ರ ಮಾರ್ಗವೆಂದರೆ ಅದು ಕ್ರೆಡಿಟ್ ಅಂಕಗಳನ್ನು ಆಗಾಗ ಪರಿಶೀಲನೆ ಮಾಡುವುದು ಮತ್ತು ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ಪರಿಹರಿಸಿಕೊಳ್ಳುವುದು. ಸ್ವಯಂಕೃತ ಅಪರಾಧದಿಂದ ಕ್ರೆಡಿಟ್ ಸ್ಕೋರ್ ಕಡಿಮೆ ಮಾಡಿಕೊಳ್ಳುವುದನ್ನು ಯಾರು ತಾನೆ ಇಚ್ಛಿಸುತ್ತಾರೆ ಅಲ್ಲವೇ?

3. ಜಟೀಲ ವಿಚಾರಣೆಗಳು ಆದಷ್ಟು ಕಡಿಮೆ ಇರಲಿ

3. ಜಟೀಲ ವಿಚಾರಣೆಗಳು ಆದಷ್ಟು ಕಡಿಮೆ ಇರಲಿ

ನೀವು ಪ್ರತಿ ಬಾರಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದಾಗ, ಸಾಲದಾತನು ನಿಮ್ಮ ಕ್ರೆಡಿಟ್ ಮಾಹಿತಿಯನ್ನು ಪಡೆದುಕೊಳ್ಳಲು ಕ್ರೆಡಿಟ್ ಕೇಂದ್ರಗಳನ್ನು ಸಂಪರ್ಕಿಸುತ್ತಾರೆ. ಈ ರೀತಿ ಪರಿಶೀಲನೆ ಮಾಡುವ ಪ್ರಕ್ರಿಯೆಯನ್ನು ಹಾರ್ಡ್ ಎನ್ಕೈರಿ ಅಥವಾ ಜಟೀಲ ವಿಚಾರಣೆಗಳು ಎಂದು ಕರೆಯಲಾಗುತ್ತದೆ. ಇಂತಹ ಪ್ರತಿ ವಿಚಾರಣೆಯೂ ಕೂಡ ನಿಮ್ಮ ಖಾತೆಗೆ ಸೇರುತ್ತದೆ. ಅಂದರೆ ಇದು ನಿಮ್ಮ ಕ್ರೆಡಿಟ್ ಸ್ಕೋರ್ ಖಾತೆಯಲ್ಲಿ ಗೋಚರಿಸುತ್ತದೆ. ಪದೇ ಪದೇ ನಡೆಯುವ ಜಟೀಲ ವಿಚಾರಣೆಗಳು ಮತ್ತು ಅದು ತಿರಸ್ಕರಿಸಲ್ಪಟ್ಟಿದ್ದರೆ ನಿಮ್ಮ ಒಟ್ಟಾರೆ ಕ್ರೆಡಿಟ್ ಅಂಕಗಳ ಮೇಲೆ ಋಣಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತದೆ. ಇಂತಹ ವ್ಯಕ್ತಿಯನ್ನು ಸಾಲದ ಹಸಿವೆ ಇರುವವ ಎಂದು ಬ್ಯಾಂಕುಗಳು ಪರಿಗಣಿಸುತ್ತವೆ.
ನಿಮ್ಮ ಕ್ರೆಡಿಟ್ ಅಂಕಗಳನ್ನು ನೋಡಿದಾಗ ಅದು "ಮೃದು ವಿಚಾರಣೆ" ಎಂದು ಪರಿಗಣಿಸಲ್ಪಟ್ಟರೆ ಆಗ ನೀವು ಸಾಲಕ್ಕೆ ಅರ್ಜಿ ಸಲ್ಲಿಸುವುದು ಬಹಳ ಒಳ್ಳೆಯದು. ಆದರೆ ಇದು ಸಾಧ್ಯವಾಗುವುದು ನೀವು ಆಗಾಗ ನಿಮ್ಮ ಕ್ರೆಡಿಟ್ ಅಂಕಗಳನ್ನು ನಿರಂತರವಾಗಿ ಪರಿಶೀಲನೆ ಮಾಡಿದಾಗ ಮಾತ್ರ.

4. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಸಹಕಾರಿ

4. ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಲು ಸಹಕಾರಿ

ಪ್ರತಿಯೊಬ್ಬ ಸಾಲ ಪಡೆಯುವವನೂ ತಾನು ಕಡಿಮೆ ಬಡ್ಡಿದರದಲ್ಲಿ ಲಭ್ಯವಾಗುವ ಸಾಲವನ್ನು ಪಡೆಯಬೇಕು ಎಂದು ಇಚ್ಛಿಸುತ್ತಾನೆ. ಆದರೆ ಅದನ್ನು ಪಡೆಯುವುದು ಹೇಗೆ? ಇದು ಸಾಧ್ಯವಾಗುವುದು ನೀವೊಬ್ಬ ಉತ್ತಮ ಸಾಲಗಾರನಾಗಿದ್ದಾಗ ಮಾತ್ರ. ಉತ್ತಮ ಸಾಲಗಾರನಾಗುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ನೀವು ಕ್ರೆಡಿಟ್ ಅಂಕಗಳನ್ನು ಉತ್ತಮವಾಗಿರಬೇಕು. ಈಗಾಗಲೇ ಕೆಲವು ಬ್ಯಾಂಕುಗಳು ಕ್ರೆಡಿಟ್ ಸ್ಕೋರ್ 760 ಹೊಂದಿರುವ ಗ್ರಾಹಕರಿಗೆ ಗೃಹ ಸಾಲದಲ್ಲಿ ಉತ್ತಮ ಬಡ್ಡಿದರವನ್ನು ನಿಗದಿಗೊಳಿಸುವ ಕೆಲಸವನ್ನು ಮಾಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದೊಂದು ಉದ್ಯಮ-ವ್ಯಾಪಕ ಅಭ್ಯಾಸವಾಗಿ ರೂಢಿಯಾಗುವುದರಲ್ಲಿ ಆಶ್ಚರ್ಯವಿಲ್ಲ. ನಿಮ್ಮ ಕ್ರೆಡಿಟ್ ಸ್ಕೋರ್ ಬಗ್ಗೆ ನಿಮಗೆ ತಿಳಿದಿದ್ದರೆ ಸಾಲದಾತನ ಬಳಿ ಬಡ್ಡಿದರವನ್ನು ಕಡಿಮೆ ಮಾಡುವಂತೆ ಕೇಳಿಕೊಳ್ಳುವುದಕ್ಕೆ ಅವಕಾಶವಿರುತ್ತದೆ.

5. ಪೂರ್ವ ಅನುಮೋದಿತ ಕೊಡುಗೆಗಳನ್ನು ಪಡೆದುಕೊಳ್ಳಿ

5. ಪೂರ್ವ ಅನುಮೋದಿತ ಕೊಡುಗೆಗಳನ್ನು ಪಡೆದುಕೊಳ್ಳಿ

ಫೈನ್ ಟೆಕ್ ಕಂಪೆನಿಗಳು ಉಚಿತವಾಗಿ ನಿಮ್ಮ ಕ್ರೆಡಿಟ್ ಅಂಕಗಳನ್ನು ಪರಿಶೀಲಿಸುವುದಕ್ಕೆ ಮಾತ್ರ ಬಿಡುವುದಿಲ್ಲ. ಇದರ ಜೊತೆಗೆ ಬೇರೆ ಬೇರೆ ಅಂಕಗಳ ಆಧಾರದಲ್ಲಿ ಕ್ರೆಡಿಟ್ ವಸ್ತುಗಳಿಗೆ ಕೆಲವು ಆಫರ್ ಗಳನ್ನು ಕೂಡ ಇವು ನೀಡುತ್ತವೆ. ಯಾಕೆಂದರೆ ಇಂತಹ ಸಾಲದಾತರು ಹಲವು ಕಂಪೆನಿಗಳ ಜೊತೆ ಕೈ ಜೋಡಿಸಿರುತ್ತಾರೆ.
ಕ್ರೆಡಿಟ್ ಅಂಕಗಳ ಪರಿಶೀಲನೆಯನ್ನು ಆಗಾಗ ಮಾಡುತ್ತಿರುವುದರಿಂದಾಗಿ ನೀವು ಮಾರುಕಟ್ಟೆಯಲ್ಲಿ ಅತ್ಯುತ್ತಮ ಆಫರ್ ಗಳನ್ನು ಹೋಲಿಕೆ ಮಾಡಿ ನೋಡಬಹುದು ಹಾಗು ಉತ್ತಮ ಆಫರ್ ಗಳನ್ನು ಆಯ್ಕೆ ಮಾಡಿಕೊಳ್ಳಲು ನಿಮಗೆ ಅವಕಾಶವಿರುತ್ತದೆ. ಆರೋಗ್ಯದ ವಿಚಾರದಲ್ಲಿ ಎಲ್ಲರೂ ಹೇಳುವಂತೆ, ಕಾಯಿಲೆ ಬಂದಾಗ ಔಷಧಿ ತೆಗೆದುಕೊಳ್ಳುವುದಕ್ಕಿಂತ ಕಾಯಿಲೆ ಬರದಂತೆ ಹೇಗೆ ತಡೆಗಟ್ಟುವುದು ಎಂದು ಯೋಚಿಸುವುದು ಒಳ್ಳೆಯದು. ಹಾಗೆಯೇ ಅದು ಬ್ಯಾಂಕಿಂಗ್ ಕ್ಷೇತ್ರಕ್ಕೂ ಅನ್ವಯಿಸುತ್ತದೆ. ನಿಮ್ಮ ಕ್ರೆಡಿಟ್ ಆರೋಗ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿಕೊಂಡಲ್ಲಿ ಲಾಭವೂ ಅಧಿಕವಾಗಿರುತ್ತದೆ. ಯಾವಾಗಲೂ ನಿಮ್ಮ ಸಾಲದ ಮರುಪಾವತಿಯನ್ನು ಸರಿಯಾದ ಸಮಯಕ್ಕೆ ಮಾಡುವುದನ್ನು ಮರೆಯಬೇಡಿ. ಆಗಾಗ ನಿಮ್ಮ ಕ್ರೆಡಿಟ್ ಸ್ಕ್ರೋರ್ ನ್ನು ಪರಿಶೀಲಿಸಿಕೊಳ್ಳುವುದೂ ಕೂಡ ಅಷ್ಟೇ ಮುಖ್ಯ. ಆಗ ನೀವು ನಿಮ್ಮ ವ್ಯವಹಾರದಲ್ಲಿ ಉತ್ತಮವಾಗಿದ್ದೀರಿ ಎಂಬ ಗೌರವ ನಿಮಗೆ ಲಭ್ಯವಾಗುತ್ತದೆ ಎಂಬುದನ್ನು ಮರೆಯಬೇಡಿ.

English summary

What Are the Benefits of checking your Credit Score regularly

Credit score is a numerical representation of past credit behavior and an indication of your creditworthiness to the lenders. The number ranges between 300 and 900.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X