For Quick Alerts
ALLOW NOTIFICATIONS  
For Daily Alerts

  50 ದಾಟಿದೆಯೇ? ಈ 12 ಕಂಪನಿಗಳು ನೇಮಕಾತಿ ಮಾಡಿಕೊಳ್ಳುತ್ತವೆ..

  By Siddu
  |

  ವ್ಯಕ್ತಿಯ ಜೀವನದಲ್ಲಿ 50ನೇ ವಯಸ್ಸನ್ನು ಹೊಸ 30ರ ವಯಸ್ಸು ಎಂದು ಹೇಳಲಾಗುತ್ತದೆ. ವಯಸ್ಸು ಐವತ್ತಾಗುತ್ತಲೇ ವ್ಯಕ್ತಿಯ ಆತ್ಮವಿಶ್ವಾಸ, ಸಂಬಂಧಗಳು ಹಾಗೂ ಆನಂದದ ಭಾವನೆಗಳು ಮತ್ತೆ ಹೊಸದಾಗಿ ಚಿಗುರುತ್ತವೆ. ಇದು ಆಯಾ ವ್ಯಕ್ತಿಯ ವೃತ್ತಿ ಜೀವನಕ್ಕೂ ಅನ್ವಯಿಸುತ್ತದೆ. ಕೆಲ ಸಮಯದ ಬಿಡುವಿನ ನಂತರ ಮತ್ತೆ ವೃತ್ತಿಗೆ ಮರಳುವುದು ಅಥವಾ ಹೊಸದೇನನ್ನಾದರೂ ಮಾಡುವುದಕ್ಕೆ ೫೦ನೇ ವಯಸ್ಸು ಹೇಳಿ ಮಾಡಿಸಿದಂತಿದೆ.

  ಸಾಮಾನ್ಯವಾಗಿ 50 ವರ್ಷ ವಯೋಮಾನದ ವೃತ್ತಿಪರರು ಆಗಲೇ ತಮ್ಮ ವೃತ್ತಿಯಲ್ಲಿ ಅಗಾಧ ಅನುಭವ ಪಡೆದಿರುತ್ತಾರೆ ಹಾಗೂ ಅದರಲ್ಲಿ ಪರಿಣಿತಿಯನ್ನು ಸಾಧಿಸಿರುತ್ತಾರೆ. ಹಾಗಾಗಿಯೇ ಅನೇಕ ಕಂಪನಿಗಳು ೫೦ ದಾಟಿದವರನ್ನು ಕೆಲಸಕ್ಕೆ ತೆಗೆದುಕೊಂಡು ಅವರ ವೃತ್ತಿ ಅನುಭವದಿಂದ ತಮ್ಮ ಕಂಪನಿಗೆ ಪ್ರಯೋಜನ ಪಡೆಯಲು ಮುಂದಾಗುತ್ತವೆ. ಇನ್ನು ಕೆಲ ಕಂಪನಿಗಳು ಯುವ ಉದ್ಯೋಗಿಗಳ ಮಧ್ಯೆ ಅನುಭವಿಕರೂ ಇರಲಿ ಎಂಬ ಕಾರಣಕ್ಕೂ ಹಿರಿಯರನ್ನು ನೇಮಕ ಮಾಡಿಕೊಳ್ಳುತ್ತವೆ. ಮನೆಯಿಂದ ಕೆಲಸ ಮಾಡಲು ಬಯಸುವಿರಾ? ಈ 17 ಕಂಪನಿಗಳು ನೇಮಕಾತಿ ಮಾಡುತ್ತವೆ..

   

  ಈಗಿನ ಕಾಲದಲ್ಲಿ ವಯಸ್ಸು ಐವತ್ತಾಯಿತು ಎಂದು ನಿರಾಸೆ ಪಡುವ ಅಗತ್ಯವಿಲ್ಲ. ವೃತ್ತಿಯಲ್ಲಿ ಪರಿಣತಿ ಇದ್ದರೆ ಮತ್ತೊಮ್ಮೆ ಇನ್ನಿಂಗ್ಸ್ ಆರಂಭಿಸಲು ಯಾವುದೇ ಸಮಸ್ಯೆಯಿಲ್ಲ. ಅಮೆರಿಕದಲ್ಲಿ 50 ವರ್ಷ ದಾಟಿದ ವ್ಯಕ್ತಿಗಳಿಗಾಗಿಯೇ ಎಎಆರ್‌ಪಿ (American Association of Retired Persons-AARP) ಎಂಬ ಸಂಸ್ಥೆಯೊಂದನ್ನು ಹುಟ್ಟು ಹಾಕಲಾಗಿದೆ. ವಯಸ್ಸಾದವರ ಜೀವನ ಸುಧಾರಿಸುವುದೇ ಈ ಸಂಸ್ಥೆಯ ಗುರಿಯಾಗಿದೆ.

  ಈ ಸಂಸ್ಥೆಯ ಉದ್ದೇಶಕ್ಕೆ ಈಗಾಗಲೇ ಹಲವಾರು ಪ್ರತಿಷ್ಠಿತ ಕಂಪನಿಗಳು ಕೈ ಜೋಡಿಸಿದ್ದು, ಬೇರೆ ಬೇರೆ ವಯೋಮಾನದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿಕೊಳ್ಳಲು ಮುಂದಾಗಿವೆ. ಇಂಥ ಪ್ರಮುಖ 12 ಕಂಪನಿಗಳು ಹಾಗೂ ಅವುಗಳಲ್ಲಿನ ಹುದ್ದೆಗಳ ಮಾಹಿತಿ ತಿಳಿದುಕೊಳ್ಳೋಣ.

  50 ವಯೋಮಾನ ದಾಟಿದ ವ್ಯಕ್ತಿಗಳನ್ನು ನೇಮಿಸಿಕೊಳ್ಳುತ್ತಿರುವ ಪ್ರಮುಖ 12 ಕಂಪನಿಗಳು:

  1. ಕೆಪಿಎಂಜಿ (KPMG)

  ಕಂಪನಿ ರೇಟಿಂಗ್: 3.8
  ನೇಮಕಾತಿಯ ಸ್ಥಳ: ಚಿಕಾಗೊ, ಡಲ್ಲಾಸ್, ನಾಕ್ಸ್‌ವಿಲೆ, ಲಾಸ್ ಎಂಜೆಲೀಸ್, ಮಾಂಟ್ ವೇಲ್, ನ್ಯೂಯಾರ್ಕ ಇತ್ಯಾದಿ.
  ಹುದ್ದೆಗಳು: ಪೀಪಲ್ ಆಂಡ್ ಚೇಂಜ್ ಮ್ಯಾನೇಜರ, ಸೀನಿಯರ ಅಸೋಸಿಯೇಟ್ ಅಥವಾ ಐಟಿ ಅಶ್ಯುರನ್ಸ್, ಡೈರೆಕ್ಟರ ಆಫ್ ಆಯಿಲ್ ಆಂಡ್ ಗ್ಯಾಸ ಸ್ಟ್ರಾಟೆಜಿ, ಕಾರ್ಪೊರೇಟ್ ಟ್ಯಾಕ್ಸ್ ಸೀನಿಯರ್ ಅಸೋಸಿಯೇಟ್, ಆಡಿಟ್ ಸೀನಿಯರ ಅಸೋಸಿಯೇಟ್ ಮುಂತಾದುವು.
  ಉದ್ಯೋಗಿಗಳ ಅಭಿಪ್ರಾಯ: ಈ ಸಂಸ್ಥೆಯಲ್ಲಿ ಹೊಸ ಅನುಭವ ಪಡೆದು ಉನ್ನತಿಗೇರಲು ಸಾಕಷ್ಟು ಅವಕಾಶಗಳಿವೆ. ಬದ್ಧತೆಯಿಂದ ಕೆಲಸ ಮಾಡಿದರೆ ಬೇಗ ಏಳಿಗೆ ಸಾಧಿಸಬಹುದಾಗಿದೆ. ಡಿಗ್ರಿ (Degree) ಇಲ್ಲದಿದ್ದರೂ ಈ 15 ಕಂಪನಿಗಳಲ್ಲಿ ನೌಕರಿ ಪಡೆಯಬಹುದು

  2. ಬಕನೆಲ್ ಯುನಿವರ್ಸಿಟಿ (Bucknell University)

  ಕಂಪನಿ ರೇಟಿಂಗ್: ೪.೩
  ನೇಮಕಾತಿಯ ಸ್ಥಳ: ಲೆವಿಸ್ ಬರ್ಗ್
  ಹುದ್ದೆಗಳು: ಪ್ರಾಜೆಕ್ಟ್ ಎಂಜಿನಿಯರ, ಕಸ್ಟೋಡಿಯಲ್ ಸೆಕ್ಷನ ಸುಪರವೈಸರ, ಕಮ್ಯುನಿಟಿ ಡೈರೆಕ್ಟರ, ಐಡಿ ಮಾನಿಟರ, ಫೈನಾನ್ಸಿಯಲ್ ಸರ್ವಿಸಸ್ ಆಫೀಸ ಸ್ಪೆಶಲಿಸ್ಟ್, ವಿಸಿಟಿಂಗ ಅಸಿಸ್ಟಂಟ ಪ್ರೊಫೆಸರ ಆಫ್ ಇಟಾಲಿಯನ್ ಸ್ಟಡೀಸ್, ವಿಸಿಟಿಂಗ ಅಸಿಸ್ಟಂಟ ಪ್ರೊಫೆಸರ ಆಫ್ ಅರೇಬಿಕ್ ಇತ್ಯಾದಿ.

  3. ಜನರಲ್ ಮಿಲ್ಸ್ (General Mills)

  ಕಂಪನಿ ರೇಟಿಂಗ್ : ೩.೭
  ನೇಮಕಾತಿ ಸ್ಥಳ: ಫಿಲಡೆಲ್ಫಿಯಾ, ಹ್ಯಾನ್ನಿಬಾಲ್, ಮಿನೆಯಾಪೊಲೀಸ್, ಮಿನೆಟೊಂಕಾ ಇತ್ಯಾದಿ.
  ಹುದ್ದೆಗಳು: ಗ್ಲೋಬಲ್ ಇ-ಕಾಮರ್ಸ್ ಎಕ್ಸಪೀರಿಯನ್ಸ್ ಮ್ಯಾನೇಜರ, ಸಂಶೋಧನಾ ತಂತ್ರಜ್ಞ, ಸಪ್ಲೈ ಚೇನ್ ಡೆವಲಪಮೆಂಟ್ ಅನಾಲಿಸ್ಟ್, ಫಿಕ್ಸೆಡ್ ಅಸೆಟ್ ಅನಾಲಿಸ್ಟ್, ಕಂಪೆನ್ಸೇಶನ್ ಡೈರೆಕ್ಟರ್, ಲಾಜಿಸ್ಟಿಕ್ಸ್ ಸಪ್ಲೈ ಪ್ಲ್ಯಾನರ್, ಕ್ರೆಡಿಟ್ ಅನಾಲಿಸ್ಟ್, ಮಿಡ್ ವೆಸ್ಟ ಫೀಲ್ಡ ಮಾರ್ಕೆಟಿಂಗ ಮ್ಯಾನೇಜರ ಇತ್ಯಾದಿ.

  4. ಫಿಜರ್ (Pfizer)

  ಕಂಪನಿ ರೇಟಿಂಗ್ : ೩.೯
  ನೇಮಕಾತಿ ಸ್ಥಳ: ಅಂಡೋವರ, ಪೀಪ್ಯಾಕ್, ಸೇಂಟ ಲೂಯಿಸ, ಸ್ಯಾನ ಡಿಯೆಗೊ, ಕಲಾಮಾಜೊ, ಗ್ರೊಟನ್, ಕಾಲೇಜವಿಲ್ಲೆ, ಬೋಸ್ಟನ್, ನ್ಯೂಯಾರ್ಕ ಇತ್ಯಾದಿ.
  ಹುದ್ದೆಗಳು: ಡೈರೆಕ್ಟರ ಪ್ರಾಜೆಕ್ಟ ಮ್ಯಾನೇಜಮೆಂಟ, ಸೀನಿಯರ ಸೈಂಟಿಸ್ಟ್ ಪ್ರೊಟೀನ ಎಂಜಿನಿಯರಿಂಗ, ಆಡಳಿತ ಸಹಾಯಕ, ಸೀನಿಯರ ಡೈರೆಕ್ಟರ / ಟೀಂ ಲೀಡ, ಕ್ಲಿನಿಕಲ್ ಪ್ರಾಜೆಕ್ಟ್ ಮ್ಯಾನೇಜರ ಆಫ್ ವ್ಯಾಕ್ಸೀನ್ಸ್, ಬಿಸಿನೆಸ್ ಆಪರೇಶನ್ಸ್ ಸ್ಪೆಶಲಿಸ್ಟ್ ಮುಂತಾದುವು.

  5. ರೋವರ ಡಾಟ್ ಕಾಂ (Rover.com)

  ಕಂಪನಿ ರೇಟಿಂಗ್ : ೪.೫
  ನೇಮಕಾತಿ ಸ್ಥಳ: ಸಿಯಾಟಲ್, ಸ್ಪೊಕೇನ್
  ಹುದ್ದೆಗಳು: ಸೀನಿಯರ ಬಿಸಿನೆಸ್ ಅನಾಲಿಸ್ಟ್, ವರ್ಕಫೋರ್ಸ್ ಸ್ಟ್ರಾಟೆಜಿ ಹಾಗೂ ಪ್ಲ್ಯಾನಿಂಗ ಮ್ಯಾನೇಜರ, ಪಾಡಕ್ಟ ಮ್ಯಾನೇಜಮೆಂಟ ವೈಸ್ ಪ್ರೆಸಿಡೆಂಟ್, ಪ್ರೊಕುರಮೆಂಟ ಮ್ಯಾನೇಜರ, ಚೀಫ ಆಫ್ ಸ್ಟಾಫ್ ಟು ಸಿಇಒ, ಎಸ್‌ಎಎಂ ಮ್ಯಾನೇಜರ, ಕಂಟ್ರಿ ಲಾಂಚ ಮ್ಯಾನೇಜರ ಮುಂತಾದುವು.

  6. ಬಾಯಿಸ್ ಕ್ಯಾಸ್ಕೇಡ (Boise Cascade)

  ಕಂಪನಿ ರೇಟಿಂಗ್ : ೩.೬
  ನೇಮಕಾತಿ ಸ್ಥಳ: ಲೆನಾ, ಸಾಲ್ಟ ಲೇಕ ಸಿಟಿ, ಗ್ರ್ಯಾಂಡೆ, ಚೆಸ್ಟರ, ಫ್ಲೋರಿಯನ್, ಮೆಡಫೋರ್ಡ್, ವೆಸ್ಟಫೀಲ್ಡ ಇತ್ಯಾದಿ.
  ಹುದ್ದೆಗಳು: ಇನಸೈಡ ಸೇಲ್ಸ್ ರಿಪ್ರಸೆಂಟೇಟಿವ್, ಸೇಫ್ಟಿ ಸ್ಪೆಶಲಿಸ್ಟ್, ಮಟೀರಿಯಲ ಹ್ಯಾಂಡ್ಲರ, ಇಂಡಸ್ಟ್ರಿಯಲ್ ಎಂಜಿನಿಯರ, ಸೇಫ್ಟಿ ಕೊ ಆರ್ಡಿನೇಟರ, ಕಮಾಡಿಟಿ ಪ್ರಾಡಕ್ಟ ಮ್ಯಾನೇಜರ, ಕೌನ್ಸೆಲ್, ಶಿಫ್ಟ ಸುಪರವೈಸರ, ಶಿಪ್ಪಿಂಗ ಟೆಕ್ನಿಶಿಯನ ಮುಂತಾದುವು.

  7. ಕ್ಯಾಬೆಲ್ ಹಂಟಿಂಗಟನ್ ಹಾಸ್ಪಿಟಲ್ (Cabell Huntington Hospital)

  ಕಂಪನಿ ರೇಟಿಂಗ್ : ೩.೯
  ನೇಮಕಾತಿ ಸ್ಥಳ: ಹಂಟಿಂಗಟನ್
  ಹುದ್ದೆಗಳು: ಆರ್‌ಎನ್, ಇನ್ಫೆಕ್ಷನ್ ಪ್ರಿವೆನ್ಷನಿಸ್ಟ್, ಮೆಡಿಕಲ ಅಸಿಸ್ಟಂಟ, ಕ್ಲಿನಿಕ್ ಎಲ್‌ಪಿಎನ್, ಫಿಸಿಶಿಯನ ಅಸಿಸ್ಟಂಟ, ಕ್ಲಿನಿಕಲ್ ಕೊ ಆರ್ಡಿನೇಟರ, ಅನಸ್ಥೆಸಿಯಾ ಟೆಕ್ನಿಶಿಯನ್, ಓಆರ್ ಅಟೆಂಡೆಂಟ್, ಫಾರ್ಮಸಿ ಟೆಕ್ನಿಶಿಯನ್ ಮುಂತಾದುವು.

  ೮. ಕಿಂಬರ್ಲಿ - ಕ್ಲಾರ್ಕ (Kimberly-Clark)

  ಕಂಪನಿ ರೇಟಿಂಗ್ : ೩.೬
  ನೇಮಕಾತಿ ಸ್ಥಳ : ನೀನಾಹ, ನ್ಯೂ ಮಿಲ್ಫರ್ಡ, ಕೊರಿಂಥ, ಅಟ್ಲಾಂಟಾ, ಮೌಮೆಲ್ಲೆ ಇತ್ಯಾದಿ.
  ಹುದ್ದೆಗಳು : ಸ್ಟ್ರಾಟೆಜಿಕ್ ಅನಾಲಿಸ್ಟ್, ಎಕ್ಸೆಕ್ಯುಟಿವ್ ಅಸಿಸ್ಟಂಟ, ಬಿಸಿನೆಸ್ ಡೆವಲಪಮೆಂಟ ಮ್ಯಾನೇಜರ, ಕ್ಯಾಟೆಗರಿ ಡೆವಲಪಮೆಂಟ ಮ್ಯಾನೇಜರ, ಆಪರೇಶನ್ಸ್ ಸುಪರವೈಸರ, ಸೀನಿಯರ ಮ್ಯಾನೇಜರ ಪ್ರಾಡಕ್ಟ ಸೇಫ್ಟಿ, ಡಿಸ್ಟ್ರಿಬ್ಯೂಶನ್ ಕನ್ಸಲ್ಟಂಟ, ಪ್ಲ್ಯಾಂಟ ಆಪರೇಶನಲ್ ಎಕ್ಸಲೆನ್ಸ ಲೀಡರ ಮುಂತಾದುವು.

  9. ಮೈಂಡಬಾಡಿ ಇಂಕ್. (Mindbody Inc.)

  ಕಂಪನಿ ರೇಟಿಂಗ್ : ೩.೫
  ನೇಮಕಾತಿ ಸ್ಥಳ: ಅಟ್ಲಾಂಟಾ, ಆಸ್ಟಿನ್, ಸ್ಯಾನ ಲೂಯಿಸ ಒಬಿಸ್ಪೊ, ಸ್ಕಾಟ್ಸ್‌ಡೇಲ್, ಸೌಥಾಂಪ್ಟನ್ ಇತ್ಯಾದಿ.
  ಹುದ್ದೆಗಳು: ಸೀನಿಯರ ರೀಜನಲ್ ಮಾರ್ಕೆಟಿಂಗ್ ಸ್ಪೆಶಲಿಸ್ಟ್, ಸಾಫ್ಟವೇರ ಇಂಪ್ಲಿಮೆಂಟೇಶನ ಸ್ಪೆಶಲಿಸ್ಟ, ಮಾರುಕಟ್ಟೆ ಅಭಿವೃದ್ಧಿ ಪ್ರತಿನಿಧಿ, ಗ್ರಾಹಕ ಸೇವಾ ಸಹಾಯಕ, ಮಾಧ್ಯಮ ಹಾಗೂ ಸಂಪರ್ಕ ಪರಿಣಿತ, ತರಬೇತಿ ಪರಿಣಿತ, ಸೀನಿಯರ ಡೇಟಾ ರಿಪೋರ್ಟಿಂಗ ಸ್ಪೆಶಲಿಸ್ಟ್ ಮುಂತಾದುವು.

  10. ಯುನೈಟೆಡ್ ವೇ (United Way)

  ಕಂಪನಿ ರೇಟಿಂಗ್ : ೩.೬
  ನೇಮಕಾತಿ ಸ್ಥಳ: ಅಲೆಕ್ಸಾಂಡ್ರಿಯಾ, ಚಾರ್ಲ್ಸಟನ್, ಮಿಸೋಲಾ, ರಿಚ್ಮಂಡ, ಸೇಂಟ ಲೂಯಿಸ ಇತ್ಯಾದಿ.
  ಹುದ್ದೆಗಳು: ಪಾಲಿಸಿ ಅನಾಲಿಸ್ಟ್, ಕಂಟೆಂಟ ಮ್ಯಾನೇಜರ, ಕ್ಯಾಂಪೇನ ಎಕ್ಸೆಕ್ಯುಟಿವ್-ರಿಸೋರ್ಸ ಡೆವಲಪಮೆಂಟ್, ಫೆಸಿಲಿಟೀಸ ಸ್ಪೆಶಲಿಸ್ಟ, ಹಣಕಾಸು ತರಬೇತಿದಾರ, ಎಸ್‌ವಿಪಿ ಹಾಗೂ ಮುಖ್ಯ ಅಭಿವೃದ್ಧಿ ಅಧಿಕಾರಿ, ಡೈರೆಕ್ಟರ ಕಾರ್ಪೊರೇಟ್ ಎಂಗೇಜಮೆಂಟ, ಮಾರಾಟ ಅಧಿಕಾರಿ ಮುಂತಾದುವು.

  11. ಡೊಮಿನಿಯನ ರಿಸೋರ್ಸಸ್ (Dominion Resources)

  ಕಂಪನಿ ರೇಟಿಂಗ್ : ೪.೦
  ನೇಮಕಾತಿ ಸ್ಥಳ: ಕೊಲಂಬಿಯಾ, ಲುಸ್ಬಿ, ರಿಚ್ಮಂಡ, ವಾಟರಫೋರ್ಡ ಇತ್ಯಾದಿ.
  ಹುದ್ದೆಗಳು: ಎಂಜಿನಿಯರ, ಕಸ್ಟಮರ ಪ್ರಾಜೆಕ್ಟ ಡಿಸೈನರ, ನ್ಯೂಕ್ಲಿಯರ ಎಂಜಿನಿಯರ, ಸುಪರವೈಸರ ಆಫ್ ಗ್ಯಾಸ ಆಪರೇಶನ್ಸ-ಟ್ರಾನ್ಸಮಿಶನ್ಸ, ಬಿಸಿನೆಸ್ ಸಿಸ್ಟಂ ಅನಾಲಿಸ್ಟ ಮುಂತಾದುವು.

  12. ಅಟ್ಲಾಂಟಿಕ್ ಹೆಲ್ಥ್ (Atlantic Health)

  ಕಂಪನಿ ರೇಟಿಂಗ್ : ೩.೫
  ನೇಮಕಾತಿ ಸ್ಥಳ : ಫ್ಲೊರಹ್ಯಾಂ ಪಾರ್ಕ, ಮಾರಿಸ್ ಟೌನ್, ನ್ಯೂಟನ್ ಇತ್ಯಾದಿ.
  ಹುದ್ದೆಗಳು : ರಜಿಸ್ಟ್ರಾರ, ಶೆಡುಲರ್, ಮೆಡಿಕೇಡ ಅಕೌಂಟ್ ಪ್ರತಿನಿಧಿ, ಅಡೋಲಸೆಂಟ ಸೈಕಿಯಾಟ್ರಿಸ್ಟ, ವ್ಯವಹಾರ ಸಂಯೋಜಕ, ಮ್ಯಾನೇಜರ, ಮಾನಸಿಕ ಆರೋಗ್ಯ ಸಹಾಯಕ, ರೆಗ್ಯುಲೇಟರಿ ಕಂಪ್ಲಾಯನ್ಸ ಅಸೋಸಿಯೇಟ, ಪಿಡಿ ಸೆಕ್ಯುರಿಟಿ ಅಧಿಕಾರಿ, ಪಿಡಿ ಟ್ರಾನ್ಸಪೋರ್ಟರ ಮುಂತಾದುವು.

  Read more about: jobs employment money finance news
  English summary

  Over 50? Here Are 12 Incredible Companies Hiring Now!

  As the saying goes, 50 is the new 30. Things like your confidence, relationships and happiness all seem to spike when you hit the big five-oh.
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more