ದಿನದಿಂದ ದಿನಕ್ಕೆ ಷೇರುಪೇಟೆಯ ಆಕರ್ಷಣೆಗೆ ಒಳಪಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯಾವ ಷೇರು ಕೊಂಡರೆ ಲಾಭ? ಯಾವುದು ಕೊಂಡರೆ ನಷ್ಟ? ಮಾರುಕಟ್ಟೆ ನಡೆಯೇನು? ಇನ್ನು ಮುಂತಾದ ವಿಚಾರಗಳ ಕುರಿತು ಅನೇಕ ಚರ್ಚೆಗಳು/ವರದಿಗಳು ಬರುತ್ತಲೇ ಇರುತ್ತವೆ. ಆದರೆ ಹೊಸ ವ್ಯಕ್ತಿಯೊಬ್ಬ ಮಾರುಕಟ್ಟೆ ಪ್ರವೇಶಿಸಿದರೆ ಅಥವಾ ಪ್ರವೇಶಿಸಬೇಕು ಅಂದುಕೊಡಿದ್ದರೆ ಆತ ಯಾವ ಯಾವ ಸಂಗತಿಗಳ ಮೇಲೆ ಗಮನ ಇಟ್ಟಿರಬೇಕು ಎಂದು ಯಾರೂ ಹೇಳಿ ಕೊಡಲ್ಲ. ಹೊಸದಾಗಿ ಷೇರು ಮಾರುಕಟ್ಟೆಗೆ ಕಾಲಿಡುತ್ತಿರುವವನು ಯಾವ ಅಂಶಗಳನ್ನು ಅರಿತುಕೊಂಡಿರಬೇಕು. ಅವನಿಗೆ ಅಗತ್ಯವಾಗಿರುವ ಟಿಪ್ಸ್ ಗಳೇನು ಎಂಬುದರ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಇಲ್ಲಿದೆ. ಜೀವನದಲ್ಲಿ ಸಿಕ್ಕಾಪಟ್ಟೆ ದುಡ್ಡು ಮಾಡಬೇಕು ಅಂತಿರಾ? ಈ 10 ಸಂಗತಿ ಮರಿಬೇಡಿ..

1. ವದಂತಿಗೆ ಕಿವಿಗೊಡಬೇಡಿ
ಮಾರುಕಟ್ಟೆಯ ಅರಿವಿಲ್ಲದೇ ವದಂತಿಗೆ ಕಿವಿಗೊಟ್ಟು ಷೇರು ಖರೀದಿಸಿದರೆ ನಷ್ಟ ಮಾಡಿಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಕಂಪನಿಯ ಒಳಗಿನ ಆಡಳಿತ ಮಂಡಳಿಯೇ ಸುಳ್ಳು ವದಂತಿಯನ್ನು ಹಬ್ಬಿಸಿರುತ್ತದೆ. ಇದೊಂದು ರೀತಿಯ ವ್ಯಾಪಾರಿ ತಂತ್ರವೂ ಹೌದು.

2. ತಜ್ಞರ ಅಭಿಪ್ರಾಯ ಪಡೆಯಿರಿ
ಹಣ ಹೂಡಿಕೆಗೆ ಮುಂದಾಗುವ ಮೊದಲು ಮಾರುಕಟ್ಟೆ ತಜ್ಞರ ಅಭಿಪ್ರಾಯ ಮತ್ತು ಸಲಹೆ ಪಡೆಯುವುದು ಉತ್ತಮ. ನಿಮಗೆ ಅಡ್ವೈಸರ್ ಮಾತಿನ ಮೇಲೆ ನಂಬಿಕೆ ಬರದಿದ್ದರೆ ಅನುಭವವಿರುವ ಒಂದೆರಡು ಜನರ ಸಲಹೆ ಪಡೆದುಕೊಳ್ಳುವುದು ಉತ್ತಮ.

3. ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿ
ಷೇರು ಮಾರುಕಟ್ಟೆ ಬಗ್ಗೆ ತಿಳುವಳಿಕೆಯಿಲ್ಲದೇ ಹಣ ಹೂಡಿಕೆ ಮಾಡಲು ಹೋಗಬೇಡಿ. ಹಾಗೊಂದು ವೇಳೆ ಹಣ ತೊಡಗಿಸಬೇಕು ಅಂಥಿದ್ದರೆ ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡೋದು ಉತ್ತಮ. ಹಣ ಕಳೆದುಕೊಳ್ಳುವ ಅಪಾಯ ಇಲ್ಲಿರುವುದಿಲ್ಲ.

4. ಲಾರ್ಜ್ ಕ್ಯಾಪ್ ಷೇರುಗಳತ್ತ ಗಮನವಿರಲಿ
ನಿಮ್ಮ ಸ್ವಂತ ಹಣವನ್ನು ಹೂಡಿಕೆ ಮಾಡಲು ನಿರ್ಧರಿಸಿದ್ದರೆ ಸೆನ್ಸೆಕ್ಸ್ ಮತ್ತು ನಿಫ್ಟಿಯ ಲಾರ್ಜ್ ಕ್ಯಾಪ್ ಷೇರುಗಳನ್ನೇ ಖರೀದಿಸುವುದು ಉತ್ತಮ. ಇದು ಸೆನ್ಸೆಕ್ಸ್ ನ 30 ಮತ್ತು ನಿಫ್ಟಿಯ 50 ಷೇರುಗಳನ್ನು ಒಳಗೊಂಡಿರುತ್ತದೆ. ಇವು ತಮ್ಮ ಬೆಲೆಯನ್ನು ಏಕಾಏಕಿ ಕಳೆದುಕೊಳ್ಳುವುದು ಬಹಳ ಅಪರೂಪ. ಅಲ್ಲದೇ ಉತ್ತಮ ರಿಟರ್ನ್ಸ್ ನ್ನು ತಂದುಕೊಡುತ್ತವೆ.

5. ಮಾರುಕಟ್ಟೆ ಅರಿಯಲು ಸಮಯ ಮೀಸಲಿಡಿ
ಬೇರೆಯವರಿಂದ ಎಷ್ಟೇ ಸಲಹೆ ಪಡೆದರೂ ಕೂಡ ಸ್ವತಹ ಹೂಡಿಕೆದಾರರಿಗೆ ಷೇರುಪೇಟೆಯ ಜ್ಞಾನ ಇರಲೇಬೇಕಾಗುತ್ತದೆ. ಷೇರು ಮಾರುಕಟ್ಟೆಯ ಮೂಲ ತತ್ವವೇನು? ಯಾವ ಕಾರಣಗಳು ಇಳಿಕೆ ಮತ್ತು ಏರಿಕೆ ಮೇಲೆ ಪರಿಣಾಮ ಉಂಟುಮಾಡುತ್ತವೆ? ಎಂಬುದನ್ನು ಅರಿಯಲು ಪ್ರತಿದಿನ ನಿರ್ದಿಷ್ಟ ಸಮಯ ಮೀಸಲಿಡಿ. ಇಪಿಎಸ್, ಪಿಇ, ಬುಕ್ ವ್ಯಾಲ್ಯೂ ಎಂಬ ಶಬ್ದಗಳ ಅರ್ಥ ತಿಳಿದುಕೊಳ್ಳಿ.

6. ಟಿಪ್ಸ್ ನೀಡುವ ಕಂನಿಗಳಿಂದ ದೂರವಿರಿ
ಕೆಲವೊಂದು ಕಂಪನಿಗಳು ನಾವು ಷೇರು ಮಾರುಕಟ್ಟೆ ಟಿಪ್ಸ್ ನೀಡುತ್ತೇವೆ ಎಂದು ಹೇಳಿ ಸದಸ್ಯರಾಗುವಂತೆ ಒತ್ತಾಯಿಸುತ್ತವೆ. ಪ್ರತಿ ತಿಂಗಳು ಒಂದಿಷ್ಟು ಹಣವನ್ನು ನಿಮ್ಮಿಂದ ಪಡೆದುಕೊಳ್ಳುತ್ತವೆ. ಆದರೆ ಯಾವ ಕಾರಣಕ್ಕೂ ಇದರ ಬೆನ್ನ ಹಿಂದೆ ಬೀಳಬೇಡಿ. ಇವು ನೀಡುವ ಸಲಹೆ ಆಧರಿಸಿ ಖರೀದಿಸಿದ ಷೇರುಗಳು ಪಾತಾಳ ಸೇರಿದರೆ ನಾವೇ ಹೊಣೆಗಾರರಾಗಬೇಕಾಗುತ್ತದೆ.

7. ಹೆಚ್ಚಿನ ಅವಧಿಗೆ ಹಣ ತೊಡಗಿಸುವುದು ಉತ್ತಮ
ಒಂದು ವೇಳೆ ನಿಮಗೆ ಮಾರುಕಟ್ಟೆಯ ಬಗ್ಗೆ ಏನೂ ಗೊತ್ತಿಲ್ಲದಿದ್ದರೂ ಹೆಚ್ಚಿನ ಅವಧಿ ಲೆಕ್ಕದಲ್ಲಿ ಹಣ ತೊಡಗಿಸಬಹುದು. ಅದು 3-5 ವರ್ಷದ ಅವಧಿ ಇರಬಹುದು. ಇವು ನಿಮ್ಮ ಹಣವನ್ನು ನಷ್ಟವಾಗದಂತೆ ನೋಡಿಕೊಳ್ಳುತ್ತವೆ.
ಷೇರು ಮಾರುಕಟ್ಟೆಯಲ್ಲಿ ಹಣ ಮಾಡಲು ಯಾವುದೇ ನಿರ್ದಿಷ್ಟ ಮಂತ್ರಗಳಿಲ್ಲ. ಅಂದಿನ ಟ್ರೆಂಡ್ ಗಳಿಗೆ ಅನುಗುಣವಾಗಿ ಮಾರುಕಟ್ಟೆ ಬದಲಾಗುತ್ತಿರುತ್ತದೆ. ನೀವು ಮ್ಯೂಚುವಲ್ ಫಂಡ್ ಅಥವಾ ದೀರ್ಘ ಅವಧಿನ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರದಿದ್ದರೂ ನಷ್ಟವೇನೂ ಆಗುವುದಿಲ್ಲ.