2019 ಹೊಸ ವರ್ಷಕ್ಕೆ ಈ ಹೊಸ ಸ್ಟಾರ್ಟ್ಅಪ್ (ಬಿಸಿನೆಸ್) ಐಡಿಯಾ ನಿಮ್ಮ ಜೀವನ ಬದಲಿಸಬಲ್ಲವು, ಅವು ಯಾವುವು ಗೊತ್ತೆ?

Subscribe to GoodReturns Kannada
For Quick Alerts
ALLOW NOTIFICATIONS  
For Daily Alerts

  ನೂತನವಾಗಿ ಬೆಳವಣಿಗೆ ಹೊಂದುತ್ತಿರುವ ಬಿಸಿನೆಸ್ ಸ್ಟಾರ್ಟ್ಅಪ್ ಐಡಿಯಾಗಳು ಯಾವುವು? ಯಾವ ಹೊಸ ಮಾದರಿಯ ಸ್ಟಾರ್ಟ್ಅಪ್ ಆರಂಭಿಸಿದರೆ ಬೇಗ ವ್ಯವಹಾರದಲ್ಲಿ ಯಶಸ್ಸು ಪಡೆಯಬಹುದು?
  ಸ್ಟಾರ್ಟ್ಅಪ್ ನವೋದ್ಯಮಿಗಳು ಹಾಗೂ ಬಿಸಿನೆಸ್ ಟೈಕೂನ್‌ಗಳು ಈ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಲೇ ಇರುತ್ತಾರೆ.

  ನಾವೀನ್ಯತೆಯಿಂದ ಕೂಡಿದ ಬಿಸಿನೆಸ್ ಐಡಿಯಾ ಹಾಗೂ ಮಾರುಕಟ್ಟೆಯಲ್ಲಿ ಆ ಐಡಿಯಾವನ್ನು ಬಿಸಿನೆಸ್ ರೂಪದಲ್ಲಿ ಚಲಾವಣೆಗೆ ತರಲು ಇರುವ ಅವಕಾಶಗಳ ಮೇಲೆ ಆಯಾ ಸ್ಟಾರ್ಟ್ಅಪ್ನ ಯಶಸ್ಸು ನಿರ್ಧರಿಸಲ್ಪಡುತ್ತದೆ. ಹಾಗಾದರೆ ಬರುವ 2019ನೇ ವರ್ಷದಲ್ಲಿ ಯಾವೆಲ್ಲ ಮಾದರಿಯ ಸ್ಟಾರ್ಟ್ಅಪ್ಗಳು ಮುಂಚೂಣಿಯಲ್ಲಿರಬಹುದು ಎಂಬುದನ್ನು ತಿಳಿದುಕೊಳ್ಳುವ ಕುತೂಹಲವಿದ್ದರೆ ಈ ಅಂಕಣ ಓದಿ. ಅದ್ಬುತ ಮಕ್ಕಳು! ಇವರು 2018ರ ಟಾಪ್ 10 ಭಾರತೀಯ ಯುವ ಉದ್ಯಮಿಗಳು

   

  2019 ರ ಹೊಸ ವರ್ಷಕ್ಕಾಗಿ ಹೊಸ ಮಾದರಿಯ ಬಿಸಿನೆಸ್ ಅಥವಾ ಸ್ಟಾರ್ಟ್ಅಪ್ ಐಡಿಯಾಗಳು:

  ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧರಿತ ಸ್ಟಾರ್ಟ್ಅಪ್

  ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅನ್ನು ಕನ್ನಡದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಎಂದು ಕರೆಯಲಾಗುತ್ತದೆ. ಆರ್ಟಿಫೀಶಿಯಲ್ ಇಂಟೆಲಿಜನ್ಸ್ ಇದು ಇತ್ತೀಚಿನ ವರ್ಷಗಳಲ್ಲಿ ಅತಿ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ಅತ್ಯಾಧುನಿಕ ತಂತ್ರಜ್ಞಾನವಾಗಿದೆ. ಮಾನವನ ಯೋಚನಾ ಶಕ್ತಿಯಂತೆ ಸಾಫ್ಟವೇರ್ ಸಹ ಯೋಚಿಸಿ ಕೆಲಸ ಮಾಡುವಂತೆ ಕಲಿಸುವುದೇ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಗಿದೆ. ಈ ಕ್ಷೇತ್ರದಲ್ಲಿ ಸ್ಟಾರ್ಟಪ್ ಆರಂಭಿಸಲು ಇರುವ ಅವಕಾಶಗಳು:
  - ಟೆಕ್ನಿಕಲ್ ಕನ್ಸಲ್ಟನ್ಸಿ: ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ನಿಮಗೆ ಪರಿಣಿತಿ ಇದ್ದಲ್ಲಿ ಟೆಕ್ನಿಕಲ್ ಕನ್ಸಲ್ಟನ್ಸಿ ಆರಂಭಿಸಬಹುದು. ಹಲವಾರು ಕಂಪನಿಗಳು ಈ ಕ್ಷೇತ್ರದ ತಂತ್ರಜ್ಞರಿಗಾಗಿ ಹುಡುಕಾಟ ನಡೆಸಿರುವುದರಿಂದ ಇದರಲ್ಲಿ ಒಳ್ಳೆಯ ಅವಕಾಶಗಳಿವೆ.

  - ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧರಿತ ಪರ್ಸನಲ್ ಅಸಿಸ್ಟಂಟ್: ನಿರ್ದಿಷ್ಟ ಕಂಪನಿಯೊಂದಕ್ಕೆ, ಗ್ರಾಹಕರೊಂದಿಗೆ ಸಂವಾದ ನಡೆಸಿ ಅವರ ಅಗತ್ಯತೆಗಳನ್ನು ತಿಳಿದುಕೊಂಡು ಅವನ್ನು ಪರಿಹರಿಸುವ ರೀತಿಯಲ್ಲಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಅಭಿವೃದ್ಧಿ ಪಡಿಸುವುದು. ಅಂದರೆ ಗ್ರಾಹಕರ ಸೇವೆಗಾಗಿ ಚಾಟ್ ಬಾಟ್ (ಒಂದು ರೀತಿಯ ರೋಬಾಟ್) ನಿಯೋಜಿಸುವುದು.
  - ಯಂತ್ರಗಳ ರಿಪೇರಿಗಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್: ಸೆನ್ಸರ್ ನೆಟವರ್ಕ ಹಾಗೂ ಆರ್ಟಿಫೀಶಿಯಲ್ ತಂತ್ರಜ್ಞಾನದ ಮೂಲಕ ಕಾರ್ಖಾನೆಗಳ ಯಂತ್ರಗಳಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ಪತ್ತೆ ಹಚ್ಚುವುದು ಹಾಗೂ ಅವುಗಳನ್ನು ದುರಸ್ತಿ ಮಾಡುವುದು. ಈ ರೀತಿಯ ಕೆಲಸ ಇತ್ತೀಚಿನ ದಿನಗಳಲ್ಲಿ ಬಹಳ ಬೇಡಿಕೆ ಪಡೆದುಕೊಳ್ಳುತ್ತಿದೆ. ಆನ್ಲೈನ್ ಮೂಲಕ ಕೆಲಸ ಮಾಡಿ ಪ್ರತಿ ಗಂಟೆಗೆ 3,000 ಸಂಪಾದಿಸುವುದು ಹೇಗೆ

  ವರ್ಚುವಲ್ ರಿಯಾಲಿಟಿ ಆಧರಿತ ಬಿಸಿನೆಸ್ ಐಡಿಯಾ

  ವಿಶಿಷ್ಟ ಎಲೆಕ್ಟ್ರಾನಿಕ್ ಉಪಕರಣಗಳ ಸಹಾಯದಿಂದ ಕಂಪ್ಯೂಟರ್ ಆಧರಿತ 3ಡಿ ಇಮೇಜ್ ಸೃಷಿಸುವುದು ಅಥವಾ 3ಡಿ ಲೋಕದಲ್ಲಿ ಇರುವಂತೆ ಅನುಭವ ನೀಡುವುದು ವರ್ಚುವಲ್ ರಿಯಾಲಿಟಿ (ವಿಆರ್) ಆಗಿದೆ. ಈ ಕ್ಷೇತ್ರದಲ್ಲಿಯೂ ಹಲವಾರು ಅವಕಾಶಗಳಿವೆ:
  - ವಿಆರ್ ಕೆಫೆ: ವಿಆರ್ ಕೆಫೆ ಎಂಬುದು ಎಂಬುದು ಇತ್ತೀಚೆಗೆ ಬಹು ಜನಪ್ರಿಯವಾಗುತ್ತಿರುವ ಬಿಸಿನೆಸ್ ಐಡಿಯಾ ಆಗಿದೆ. ವರ್ಚುವಲ್ ರಿಯಾಲಿಟಿಯನ್ನು ಅನುಭವಿಸಲು ಜನರಿಗೆ ಅವಕಾಶ ನೀಡಿ ಆ ಮೂಲಕ ಸಂಪಾದನೆ ಮಾಡಬಹುದಾಗಿದೆ. 3ಡಿ ಸಿನಿಮಾ ವೀಕ್ಷಣೆ, 3ಡಿ ಗೇಮ್ಸ್ ಆಡುವುದು, ಟೀಂ ಬಿಲ್ಡಿಂಗ್, 3ಡಿ ಪುಸ್ತಕ ಓದುವುದು ಮತ್ತು ಧ್ಯಾನ ಮುಂತಾದುವುಗಳಿಗೆ ವಿಆರ್ ಕೆಫೆನಲ್ಲಿ ಅವಕಾಶ ಕಲ್ಪಿಸಬಹುದು.
  - ಸುರಕ್ಷತಾ ತರಬೇತಿಗಾಗಿ ವಿಆರ್: ವಿಆರ್ ಮೂಲಕ ಸುರಕ್ಷತಾ ತರಬೇತಿ ನೀಡುವುದು ಸಹ ಇತ್ತೀಚೆಗೆ ಬೇಡಿಕೆ ಪಡೆದುಕೊಳ್ಳುತ್ತಿದೆ. ನಿರ್ಮಾಣ ವಲಯ, ಉತ್ಪಾದನಾ ವಲಯ ಮತ್ತು ಫ್ಯಾಕ್ಟರಿಗಳಲ್ಲಿ ಸುರಕ್ಷಿತವಾಗಿ ಕೆಲಸ ಮಾಡುವಂತೆ ತರಬೇತಿ ನೀಡುವುದು ಇದರ ಉದ್ದೇಶವಾಗಿದೆ. Read More: Business

  ರೋಬೊಟಿಕ್ ಅಟೊಮೇಶನ್

  ರೋಬೊಟಿಕ್ ಅಟೊಮೇಶನ್ ತಂತ್ರಜ್ಞಾನವು ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಯಾವುದೇ ಕೆಲಸವನ್ನು ಆರ್ಟಿಫೀಶಿಯಲ್ ತಂತ್ರಜ್ಞಾನ ಬಳಸಿಕೊಂಡು ರೋಬೊಟ್‌ಗಳ ಮೂಲಕ ಮಾಡಿಸುವುದೇ ರೋಬೊಟಿಕ್ ಅಟೊಮೇಶನ್ ಆಗಿದೆ. ಈ ಕ್ಷೇತ್ರದಲ್ಲಿನ ಬಿಸಿನೆಸ್ ಅವಕಾಶಗಳು ಹೀಗಿವೆ:
  - ಅವಶ್ಯಕತೆಗೆ ತಕ್ಕಂತೆ ರೋಬೊಟ್ ತಯಾರಿಸುವುದು: ನಿರ್ದಿಷ್ಟ ಕೆಲಸಗಳನ್ನು ನಿರ್ವಹಿಸುವಂತೆ ರೋಬೊಟ್‌ಗಳನ್ನು ಅಭಿವೃದ್ಧಿ ಪಡಿಸುವ ಕಾರ್ಯಕ್ಕೆ ಸಾಕಷ್ಟು ಬೇಡಿಕೆ ಇದೆ. ಹಲವಾರು ಕಂಪನಿಗಳು ರೋಬೊಟ್‌ಗಳನ್ನು ಕೆಲಸಕ್ಕಾಗಿ ನಿಯೋಜಿಸುತ್ತಿರುವುದರಿಂದ ಈ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಾಗುತ್ತಿವೆ.
  - ಆರ್‌ಪಿಎ ಟೂಲ್ ಡಿಸೈನ್ ಮತ್ತು ತರಬೇತಿ: ರೋಬೊಟಿಕ್ ಪ್ರೊಸೆಸ್ ಅಟೊಮೇಶನ್ ಟೂಲ್ ಡಿಸೈನ್ ಮತ್ತು ತರಬೇತಿ ಕ್ಷೇತ್ರ ವೇಗವಾಗಿ ಅಭಿವೃದ್ಧಿ ಹೊಂದುತ್ತಿದೆ. ಇದರಲ್ಲಿ ಅತಿ ಹೆಚ್ಚು ಸಂಖ್ಯೆಯ ಅವಕಾಶಗಳು ಇರಲಿವೆ ಎಂದು ಅಂದಾಜಿಸಲಾಗಿದೆ.

  ಡ್ರೋನ್ ಆಧರಿತ ಸ್ಟಾರ್ಟಅಪ್ ಐಡಿಯಾಗಳು

  ಡ್ರೋನ್ ಎಂಬುದು ಮಾನವ ರಹಿತ ಹಾರಾಡುವ ವಾಹನವಾಗಿದೆ. ಪೈಲಟ್ ರಹಿತ ಸಣ್ಣ ವಿಮಾನಕ್ಕೆ ಡ್ರೋನ್ ಎಂದು ಕರೆಯಲಾಗುತ್ತದೆ. ಕ್ಯಾಮೆರಾ, ಜಿಪಿಎಸ್, ಬ್ಲ್ಯೂಟೂತ್, ಅಪಘಾತ ತಪ್ಪಿಸುವ ತಂತ್ರಜ್ಞಾನ, ಸಕ್ರಿಯ ಟ್ರ್ಯಾಕಿಂಗ್ ಹೀಗೆ ಹಲವಾರು ಸೌಲಭ್ಯಗಳು ಒಂದು ಡ್ರೋನ್ ವಾಹನದಲ್ಲಿರುತ್ತವೆ. ಹೀಗಾಗಿ ಡ್ರೋನ್ ಬಳಸಿಕೊಂಡು ಹಲವಾರು ಸ್ಟಾರ್ಟಪ್ ಬಿಸಿನೆಸ್ ಆರಂಭಿಸಬಹುದಾಗಿದೆ.
  - ಡ್ರೋನ್ ಮೂಲಕ ಸರಕು ಸಾಗಣೆ: ಡ್ರೋನ್ ಮೂಲಕ ವಸ್ತುಗಳನ್ನು ಸಾಗಿಸುವ ಪ್ರಯೋಗಗಳು ಈಗಾಗಲೇ ಯಶಸ್ವಿಯಾಗಿವೆ. ಮುಂದಿನ ದಿನಗಳಲ್ಲಿ ನೀವು ಆನ್‌ಲೈನ್‌ನಲ್ಲಿ ಆರ್ಡರ್ ಮಾಡಿದ ವಸ್ತು ಡ್ರೋನ್ ಮೂಲಕ ಮನೆ ಬಾಗಿಲಿಗೆ ಬಂದಲ್ಲಿ ಆಶ್ಚರ್ಯ ಪಡಬೇಡಿ. ಈ ವಲಯ ಭವಿಷ್ಯದಲ್ಲಿ ಸಾಕಷ್ಟು ಬೆಳವಣಿಗೆ ಹೊಂದಲಿದ್ದು, ಸಂಪಾದನೆಯ ಅವಕಾಶಗಳಿವೆ.
  - ಫೋಟೊಗ್ರಫಿ: ಡ್ರೋನ್ ಗಳು ಬರುವ ಮುನ್ನ ಆಕಾಶದಿಂದ ಫೋಟೊ ತೆಗೆಯುವುದು ಅಥವಾ ವಿಡಿಯೋ ಮಾಡುವುದು ಬಲು ದುಬಾರಿಯ ಕೆಲಸವಾಗಿತ್ತು. ಈಗ ಡ್ರೋನ್‌ಗಳಲ್ಲಿ ಅಳವಡಿಸಲಾಗಿರುವ ಹೈ ರೆಸಲ್ಯೂಶನ್ ಕ್ಯಾಮೆರಾಗಳನ್ನು ಬಳಸಿ ಉತ್ತಮ ಗುಣಮಟ್ಟದ ಫೋಟೊ ತೆಗೆಯುವುದು ಹಾಗೂ ವಿಡಿಯೋ ಮಾಡುವುದು ಸಾಧ್ಯವಾಗಿದೆ. ಡ್ರೋನ್ ಹಾಗೂ ಫೋಟೊಗ್ರಫಿ ತಂತ್ರಜ್ಞಾನದಲ್ಲಿ ನಿಮಗೆ ಪರಿಣತಿ ಇದ್ದರೆ ಈ ಕ್ಷೇತ್ರದಲ್ಲಿ ಬಿಸಿನೆಸ್ ಆರಂಭಿಸಬಹುದು.

  ಬಿಗ್ ಡೇಟಾ ಅನಾಲಿಟಿಕ್ಸ್ ಕನ್ಸಲ್ಟನ್ಸಿ

  ಬೃಹತ್ ಗಾತ್ರದ ಮಾಹಿತಿಯನ್ನು ಸಂಸ್ಕರಿಸಿ ಅದನ್ನು ಅರ್ಥಪೂರ್ಣವಾಗಿ ಮಂಡಿಸುವ ಅತ್ಯಂತ ಸಂಕೀರ್ಣವಾದ ಪ್ರಕ್ರಿಯೆಯೇ ಬಿಗ್ ಡೇಟಾ ಅನಾಲಿಟಿಕ್ಸ್ ಆಗಿದೆ. ಭವಿಷ್ಯದಲ್ಲಿ ಬಿಗ್ ಡೇಟಾ ಅನಾಲಿಟಿಕ್ಸ್ ತಂತ್ರಜ್ಞರು ಹಾಗೂ ಕನ್ಸಲ್ಟನ್ಸಿಗಳಿಗೆ ದೊಡ್ಡ ಬೇಡಿಕೆ ಉಂಟಾಗಲಿದೆ. ಬಹುತೇಕ ಎಲ್ಲ ದೊಡ್ಡ ಕಂಪನಿಗಳಿಗೂ ಬಿಗ್ ಡೇಟಾ ತಂತ್ರಜ್ಞಾನ ನಿರ್ವಹಿಸುವ ಪರಿಣಿತರ ಅವಶ್ಯಕತೆ ಉಂಟಾಗಲಿದೆ. ಈ ಕ್ಷೇತ್ರದಲ್ಲಿ ನಿಮಗೆ ಜ್ಞಾನವಿದ್ದರೆ ಬಿಸಿನೆಸ್ ಆರಂಭಿಸಿ ಉತ್ತಮವಾಗಿ ಸಂಪಾದಿಸಬಹುದು.

  ವೇರೆಬಲ್ ಟೆಕ್ನಾಲಜಿ ಆಧರಿತ ಸ್ಟಾರ್ಟ್ಅಪ್

  ಮೈಮೇಲಿನ ಬಟ್ಟೆಗಳಲ್ಲಿ ಹುದುಗಿಸಬಹುದಾದ ಅಥವಾ ನೇರವಾಗಿ ಮಾನವ ದೇಹದೊಳಗೆ ತೂರಿಸಬಹುದಾದ, ಅಂದರೆ ಮಾನವ ದೇಹದ ಮೇಲೆ ಧರಿಸಬಹುದಾದ ಗ್ಯಾಜೆಟ್‌ಗಳನ್ನು ವೇರೆಬಲ್ ಡಿವೈಸ್ ಎಂದು ಕರೆಯಲಾಗುತ್ತದೆ. ಭಾರತ ಸೇರಿದಂತೆ ವಿಶ್ವದ ಹಲವಾರು ದೇಶಗಳಲ್ಲಿ ಇಂಥ ತಂತ್ರಜ್ಞಾನಕ್ಕೆ ಸಾಕಷ್ಟು ಬೇಡಿಕೆ ಉಂಟಾಗುತ್ತಿದೆ. ಈ ಕ್ಷೇತ್ರದಲ್ಲಿನ ಕೆಲ ಸ್ಟಾರ್ಟಪ್ ಐಡಿಯಾಗಳು ಹೀಗಿವೆ:
  - ವೇರೆಬಲ್ ಡಿವೈಸ್ ಮಾರಾಟ: ವಿದೇಶದಿಂದ ವೇರೆಬಲ್ ಡಿವೈಸ್‌ಗಳನ್ನು ಆಮದು ಮಾಡಿಕೊಂಡು ಮಾರುವುದು ಉತ್ತಮ ಬಿಸಿನೆಸ್ ಐಡಿಯಾ ಆಗಿದೆ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಇವುಗಳಿಗೆ ಹೆಚ್ಚು ಡಿಮ್ಯಾಂಡ್ ಬರುತ್ತಿದೆ.
  - ವೇರೆಬಲ್ ಆಪ್ ಡಿಸೈನ್ ಮಾಡುವುದು: ವೇರೆಬಲ್ ಡಿವೈಸ್‌ಗಳಿಗಾಗಿ ಆಪ್‌ಗಳನ್ನು ಡಿಸೈನ್ ಮಾಡಬೇಕಾಗುತ್ತದೆ. ಮೊಬೈಲ್ ಆಪ್ ಕ್ಷೇತ್ರದಲ್ಲಿ ನಿಮಗೆ ಜ್ಞಾನವಿದ್ದರೆ ಇದರಲ್ಲಿ ಸ್ಟಾರ್ಟಪ್ ಮಾಡಬಹುದು.

  ಸ್ಮಾರ್ಟ್ ಗ್ಲಾಸ್ ಆಧರಿತ ಬಿಸಿನೆಸ್ ಐಡಿಯಾ

  ಸ್ಮಾಟ್ ಗ್ಲಾಸ್ ಎಂಬುದು ಅತ್ಯಾಧುನಿಕ ತಂತ್ರಜ್ಞಾನದಿಂದ ತಯಾರಿಸಿದ ಉತ್ಪನ್ನವಾಗಿದೆ. ವಿದ್ಯುತ್ ಪ್ರವಹಿಸುತ್ತಿದ್ದಂತೆಯೇ ಸ್ಮಾರ್ಟ್ ಗ್ಲಾಸ್‌ನ ಗುಣ ಲಕ್ಷಣಗಳು ಬದಲಾಗುವುದು ಇದರ ವಿಶೇಷತೆಯಾಗಿದೆ. ಸದ್ಯ ಕೆಲವೇ ಕೆಲವು ಕಂಪನಿಗಳು ಭಾರತದಲ್ಲಿ ಸ್ಮಾರ್ಟ್ ಗ್ಲಾಸ್ ತಯಾರಿಸುತ್ತಿವೆ. ಸ್ಮಾರ್ಟ್ ಗ್ಲಾಸ್ ಮೂಲಕ ರಿಯಲ್ ಟೈಂ ಗೈಡನ್ಸ್, ವರ್ಚುವಲ್ ಮೀಟಿಂಗ್, ರಿಮೋಟ್ ವಿಡಿಯೋ ಕಾನ್ಫರೆನ್ಸಿಂಗ್ ಹೀಗೆ ಹಲವಾರು ಕಾರ್ಯಗಳನ್ನು ಮಾಡಬಹುದಾಗಿದೆ. ಸ್ಮಾರ್ಟ್ ಗ್ಲಾಸ್ ಬಹಳಷ್ಟು ಅವಕಾಶಗಳನ್ನು ತರಲಿರುವ ಭವಿಷ್ಯದ ತಾಂತ್ರಿಕತೆಯಾಗಲಿದೆ.

  ವರ್ಚುವಲ್ 3ಡಿ ತಂತ್ರಜ್ಞಾನ ಆಧರಿತ ಸ್ಟಾರ್ಟಪ್‌

  ಕಂಪ್ಯೂಟರ್ ಮೂಲಕ 3ಡಿ ಜಗತ್ತಿನ ಅನುಭವ ನೀಡುವುದೇ ವರ್ಚುವಲ್ 3ಡಿ ಟೆಕ್ನಾಲಜಿ ಆಗಿದೆ. ಜನ ನೇರವಾಗಿ 3ಡಿ ತಂತ್ರಜ್ಞಾನವನ್ನು ಅನುಭ
  ವಿಸಿ ಅದರೊಂದಿಗೆ ಸಂವಹನ ಸಾಧಿಸಬಲ್ಲರು. 3ಡಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವ ಬಿಸಿನೆಸ್ ಅವಕಾಶಗಳು:
  - ವರ್ಚುವಲ್ ಟೂರ್ ಪ್ರೊಗ್ರಾಂ: ರಿಯಲ್ ಎಸ್ಟೇಟ್, ಹೋಟೆಲ್, ಫ್ಯಾಕ್ಟರಿಗಳು ಅಥವಾ ಅಲ್ಲಿನ ಉತ್ಪನ್ನಗಳ ತಯಾರಿಕೆ ಬಗ್ಗೆ 3ಡಿ ತಂತ್ರಜ್ಞಾನದ ಮೂಲಕ ವರ್ಚುವಲ್ ಪ್ರವಾಸದ ಅನುಭವ ಮಾಡಿಸಬಹುದು. ಆದರೆ ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಲು ಸಾಕಷ್ಟು ಸಮಯ ತಗಲುತ್ತದೆ. ನಿಮ್ಮ ಬಳಿ ಈ ಕ್ಷೇತ್ರದಲ್ಲಿನ ನಿಪುಣರ ತಂಡ ಇದ್ದಲ್ಲಿ ತಂತ್ರಜ್ಞಾನ ಅಭಿವೃದ್ಧಿ ಪಡಿಸಿ ಹಣ ಸಂಪಾದಿಸಬಹುದು.
  - ವರ್ಚುವಲ್ 3ಡಿ ಗೇಮಿಂಗ್: ವರ್ಚುವಲ್ 3ಡಿ ಗೇಮ್ಸ್ ವಲಯ ಬೃಹತ್ತಾಗಿ ಬೆಳೆಯುತ್ತಿದೆ. ಮುಂದಿನ ದಿನಗಳಲ್ಲಿ ಜನ ನಿಜವಾದ ಆಟದ ಬದಲು 3ಡಿ ಆಟಗಳನ್ನು ಆಡುತ್ತಿರುತ್ತಾರೆ. ಹೀಗಾಗಿ ಇದಕ್ಕೆ ಅವಶ್ಯಕವಾದ 3ಡಿ ಆಟದ ಸಾಮಾನುಗಳನ್ನು ಆಮದು ಮಾಡಿಕೊಂಡು ಮಾರುವುದು ಲಾಭದಾಯದ ವ್ಯವಹಾರವಾಗಿದೆ.

  3ಡಿ ಪ್ರಿಂಟಿಂಗ್

  ನೈಜ ವಸ್ತುವಿನಂತೆಯೇ ಕಾಣುವ ಹಾಗೆ ಹಲವಾರು ತೆಳುವಾದ ಪದರುಗಳ ಪ್ರಿಂಟಿಂಗ್ ಮೂಲಕ 3 ಡೈಮೆನ್ಸನ್ ಮಾದರಿಯಲ್ಲಿ ಪ್ರಿಂಟಿಂಗ್ ಮಾಡುವುದೇ 3ಡಿ ಪ್ರಿಂಟಿಂಗ್ ಟೆಕ್ನಾಲಜಿ ಆಗಿದೆ. ಮಾರುಕಟ್ಟೆಯಲ್ಲಿ 3ಡಿ ಪ್ರಿಂಟಿಂಗ್ ತಂತ್ರಜ್ಞಾನಕ್ಕೆ ಸಾಕಷ್ಟು ಬೇಡಿಕೆ ಇದೆ. 3ಡಿ ಪ್ರಿಂಟಿಂಗ್ ಮಾಡುವುದು, 3ಡಿ ಪ್ರಿಂಟಿಂಗ್ ಪ್ರೊಟೊಟೈಪ್ ಮಾಡೆಲ್ ತಯಾರಿಸುವುದು, 3ಡಿ ಸ್ಕ್ಯಾನಿಂಗ್ ಹೀಗೆ ಹಲವಾರು ರೀತಿಯ ಅವಕಾಶಗಳು ಈ ಕ್ಷೇತ್ರದಲ್ಲಿವೆ.

  ಸ್ಮಾರ್ಟ್ ಐಓಟಿ ಆಧರಿತ ಸ್ಟಾರ್ಟಪ್

  ಇಂಟರನೆಟ್ ಆಫ್ ಥಿಂಗ್ಸ ಎಂಬುದನ್ನು ಸಂಕ್ಷಿಪ್ತವಾಗಿ ಐಓಟಿ ಎಂದು ಕರೆಯಲಾಗುತ್ತದೆ. ನಿಮ್ಮ ವಾಹನ, ಮನೆಯಲ್ಲಿನ ಸಲಕರಣೆಗಳು, ಸೆನ್ಸರ್‌ಗಳು ಹೀಗೆ ಅನೇಕ ವಸ್ತುಗಳನ್ನು ಇಂಟರನೆಟ್ ಮೂಲಕ ಪರಸ್ಪರ ಸಂಪರ್ಕ ಕಲ್ಪಿಸಿ, ಅವುಗಳ ಮಧ್ಯೆ ಮಾಹಿತಿ ವಿನಿಮಯವಾಗುವಂತೆ ಮತ್ತು ಅವು ಸೂಕ್ತವಾಗಿ ಕೆಲಸ ಮಾಡುವಂತೆ ಮಾಡುವುದೇ ಇಂಟರನೆಟ್ ಆಫ್ ಥಿಂಗ್ಸ್ ಆಗಿದೆ. ಐಓಟಿ ಆಧರಿತ ಹಲವಾರು ಸ್ಟಾರ್ಟಪ್ ಐಡಿಯಾಗಳು ಚಾಲನೆಗೆ ಬರುತ್ತಿವೆ. ಇಂಡಸ್ಟ್ರಿಯಲ್ ಐಓಟಿ ಕನ್ಸಲ್ಟನ್ಸಿ, ಐಓಟಿ ಡಿವೈಸ್‌ಗಳ ಮಾರಾಟ, ಐಓಟಿ ಡಿವೈಸ್‌ಗಳ ನೆಟವರ್ಕಿಂಗ್ ಹೀಗೆ ಹಲವಾರು ಅವಕಾಶಗಳು ಈ ಕ್ಷೇತ್ರದಲ್ಲಿವೆ.

  ಕೊನೆ ಮಾತು

  ಮೇಲೆ ತಿಳಿಸಲಾದ ಟಾಪ್ 10 ನೂತನ ಸ್ಟಾರ್ಟ್ಅಪ್ ಐಡಿಯಾಗಳ ಬಗ್ಗೆ ಓದಿದ ನಂತರ ನಿಮ್ಮಲ್ಲೂ ಒಂದು ಹೊಸ ಸ್ಟಾರ್ಟ್ಅಪ್ ಹುಮ್ಮಸ್ಸು ಮೂಡಿರಬಹುದು. ಹೊಸ ವರ್ಷ 2019 ಇನ್ನೇನು ಆಗಮಿಸಲಿದ್ದು, ಹೊಸ ವರ್ಷಕ್ಕೆ ಹೊಸ ಬಿಸಿನೆಸ್ ಆರಂಭಿಸಲು ತಯಾರಾಗಿ. ನಿಮ್ಮ ಕನಸುಗಳನ್ನು ಸಾಕಾರಗೊಳಿಸಲು ಇದು ಅತ್ಯುತ್ತಮ ಸಮಯವಾಗಿದೆ.

  English summary

  10 Upcoming Business Startup Ideas for 2019

  Which are upcoming business Startup Ideas? Which startup business ideas are likely to offer quick success?
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more