For Quick Alerts
ALLOW NOTIFICATIONS  
For Daily Alerts

ಗೃಹಸಾಲ ಮರುಪಾವತಿ ಮಾಡುವ ಉತ್ತಮ ಆಯ್ಕೆಗಳು ಯಾವುವು?

ಬ್ಯಾಂಕ್ ಮತ್ತು ಮನೆಗಾಗಿ ಫೈನಾನ್ಸ್ ಮಾಡುವ ಸಂಸ್ಥೆಗಳು ಗ್ರಾಹಕರಿಗಾಗಿ ಗ್ರಾಹಕರನ್ನು ಕೇಂದ್ರೀಕರಿಸಿರುವಂತಹ ಮತ್ತು ಸಾಲಗಾರರ ಅವಶ್ಯಕತೆಗಳಿಗೆ ಅನುಕೂಲಕರವಾಗಿರುವಂತಹ ಹಲವು ರೀತಿಯ ಮರುಪಾವತಿ ಆಯ್ಕೆಗಳನ್ನು ನೀಡುತ್ತದೆ.

By Lekhaka
|

ಬ್ಯಾಂಕ್ ಮತ್ತು ಮನೆಗಾಗಿ ಫೈನಾನ್ಸ್ ಮಾಡುವ ಸಂಸ್ಥೆಗಳು ಗ್ರಾಹಕರಿಗಾಗಿ ಗ್ರಾಹಕರನ್ನು ಕೇಂದ್ರೀಕರಿಸಿರುವಂತಹ ಮತ್ತು ಸಾಲಗಾರರ ಅವಶ್ಯಕತೆಗಳಿಗೆ ಅನುಕೂಲಕರವಾಗಿರುವಂತಹ ಹಲವು ರೀತಿಯ ಮರುಪಾವತಿ ಆಯ್ಕೆಗಳನ್ನು ನೀಡುತ್ತದೆ. ಆದರೆ ಇದರಲ್ಲಿ ಹೆಚ್ಚಿನ ಲಾಭವನ್ನು ಪಡೆಯಲು ಮರುಪಾವತಿ ಆಯ್ಕೆಯಲ್ಲಿ ಸಾಲಗಾರರು ಹೆಚ್ಚು ಜಾಗೃತೆಯನ್ನು ವಹಿಸಬೇಕು ಮತ್ತು ತಮ್ಮ ಹಣಕಾಸು ಅವಶ್ಯಕತೆಗಳಿಗೆ ಸರಿಹೊಂದುವ ಆಯ್ಕೆ ಯಾವುದು ಎಂಬ ಬಗ್ಗೆ ಸರಿಯಾದ ವಿಮರ್ಶೆ ಮಾಡಿಕೊಂಡು ನಂತರ ಆಯ್ಕೆ ಮಾಡಿಕೊಳ್ಳಬೇಕು. (Read More: ಗೃಹ ಸಾಲ - Home Loan)

ಸಮಯದಿಂದ ಸಮಯಕ್ಕೆ ಹೆಚ್ಚಳವಾಗುವ ಇಎಂಐ

ಸಮಯದಿಂದ ಸಮಯಕ್ಕೆ ಹೆಚ್ಚಳವಾಗುವ ಇಎಂಐ

ಹೆಚ್ಚೆಚ್ಚು ಸಾಲದಾತರು ಇಎಂಐ ಆಯ್ಕೆಯನ್ನು ಸಾಲಗಾರರಿಗೆ ಅಧಿಕವಾಗಿ ನೀಡುತ್ತಾರೆ. ಇದರಲ್ಲಿ ಗೃಹ ಸಾಲದ ಇಎಂಐ ಮರುಪಾವತಿಯು ನೇರವಾಗಿ ಸಾಲಗಾರರ ಭವಿಷ್ಯದ ಆದಾಯದ ನಿರೀಕ್ಷಿತ ಬೆಳವಣಿಗೆಯನ್ನು ಆಧರಿಸಿರುತ್ತದೆ. ಈ ಮರುಪಾವತಿಯ ಸೌಲಭ್ಯವು ಕೆಲವು ವರ್ಷಗಳ ನಂತರ ಇಎಂಐ ಪ್ರಮಾಣದಲ್ಲಿ ಏರಿಕೆಯನ್ನು ಕಾಣುತ್ತದೆ. ಇದು ಭವಿಷ್ಯದಲ್ಲಿ ಹೆಚ್ಚಳವಾಗುವ ನಿಮ್ಮ ಆದಾಯಕ್ಕೆ ಅನುಗುಣವಾಗಿರುತ್ತದೆ. ನಿಮ್ಮ ಆದಾಯ ಹೆಚ್ಚಳವಾದಂತೆ ಇಎಂಐ ಮೊತ್ತವು ಏರಿಕೆಯಾಗಿರುತ್ತದೆ. ಸಾಲದಾತರು ಸಾಮಾನ್ಯವಾಗಿ ಸಾಲದ ರಚನೆಯನ್ನು ಆದಾಯದ ಬೆಳವಣಿಗೆಯ ದರದ ಪೂರ್ವಯೋಜನೆಯಂತೆ ಊಹಿಸಲ್ಪಟ್ಟಿರುತ್ತಾರೆ. ಉದಾಹರಣೆಗೆ ಅದು 6-8% ವಾರ್ಷಿಕವಾಗಿರುತ್ತದೆ ಮತ್ತು ಇದಕ್ಕೆ ಅನುಗುಣವಾಗಿ ಇಎಂಐ 5 ವರ್ಷಗಳ ಕಾಲ 15 ವರ್ಷಗಳ ಸಾಲಕ್ಕೆ ಹೇಳುವುದಾದರೆ ಒಂದು ಸ್ಲ್ಯಾಬ್ ನಲ್ಲಿ ಹೆಚ್ಚಳವಾಗುತ್ತಿರುತ್ತದೆ.

ಇಂತಹ ಮರುಪಾವತಿಗಳು ಯುವಜನತೆಗೆ ಹೇಳಿಮಾಡಿಸಿದಂತಿರುತ್ತದೆ. ಅವರ ಆದಾಯವು ಖಂಡಿತ ವಾರ್ಷಿಕವಾಗಿ ಏರಿಕೆ ಕಾಣುತ್ತದೆ ಮತ್ತು 30-40 ನೇ ವಯಸ್ಸಿಗೆ ಕಾಲಿಡುವಾಗ ಹೆಚ್ಚು ಸಂಬಳ ಅಥವಾ ಆದಾಯ ಗಳಿಸಲು ಪ್ರಾರಂಭಿಸುತ್ತಾರೆ. ಆದರೆ ಈ ರೀತಿಯ ಇಎಂಐಯನ್ನು ಆಯ್ಕೆ ಮಾಡಿ ಸಾಲ ಮರುಪಾವತಿ ಮಾಡುವುದಾದರೆ ಅದು ನಿಮಗೆ ದಿನದಿಂದ ದಿನಕ್ಕೆ ಕಠಿಣವೆನಿಸಬಹುದು. ಯಾಕೆಂದರೆ ಒಂದು ವೇಳೆ ನಿರೀಕ್ಷಿತ ಮಟ್ಟದಲ್ಲಿ ನಿಮ್ಮ ಆದಾಯವು ಏರಿಕೆ ಆಗದೇ ಇದ್ದಲ್ಲಿ ಮರುಪಾವತಿ ಕಷ್ಟವಾಗುತ್ತದೆ. ಗೃಹ ಸಾಲ ಪಡೆಯುವ ಮುನ್ನ 11 ಸಂಗತಿ ತಪ್ಪದೆ ನೋಡಿ

ಸಮಯದಿಂದ ಸಮಯಕ್ಕೆ ಇಳಿಮುಖವಾಗುವ ಇಎಂಐ /ಹೊಂದಿಕೊಳ್ಳುವ ಪ್ಲಾನ್

ಸಮಯದಿಂದ ಸಮಯಕ್ಕೆ ಇಳಿಮುಖವಾಗುವ ಇಎಂಐ /ಹೊಂದಿಕೊಳ್ಳುವ ಪ್ಲಾನ್

ಮೇಲೆ ತಿಳಿಸಿರುವ ಇಎಂಐ ಮರುಪಾವತಿ ಆಯ್ಕೆಯ ವಿರುದ್ಧವಾಗಿ ಇದು ನಡೆಯುತ್ತದೆ. ಇಲ್ಲಿ ಸಾಲದ ರೂಪುರೇಷವು ಪ್ರಾರಂಭಿಕ ದಿನಗಳಲ್ಲಿನ ಮರುಪಾವತಿಯಲ್ಲಿ ಹೆಚ್ಚಿರುತ್ತದೆ ಮತ್ತು ನಂತರದ ವರ್ಷಗಳಲ್ಲಿ ಇಳಿಮುಖವಾಗುತ್ತಾ ಸಾಗುತ್ತದೆ. ಹೆಚ್ಚಿನ ಇಎಂಐ ಮೊತ್ತವು ಪ್ರಮುಖ ಪಾವತಿಗಳನ್ನು ಸೂಚಿಸುತ್ತದೆ ಮತ್ತು ಸಾಲಗಾರರು ಆದಷ್ಟು ಮರುಪಾವತಿ ಮಾಡಲು ಎಷ್ಟು ಸಾಧ್ಯವೋ ಅಷ್ಟು ಮಾಡುತ್ತಲೇ ಇರಬೇಕಾಗುತ್ತದೆ.ಪೂರ್ವಪಾವತಿಯ ಶುಲ್ಕಗಳು ಯಾವುದಾದಾರೂ ಇದ್ದಲ್ಲಿ ಅದು ಪೂರ್ವಪಾವತಿಯ ಉದ್ದೇಶಕ್ಕೆ ಧಕ್ಕೆ ತರುವುದಿಲ್ಲ ಎಂಬ ಬಗ್ಗೆ ಖಚಿತತೆ ಇರಲಿ. ಈ ರೀತಿಯ ಮರುಪಾವತಿ ಆಯ್ಕೆಯು ಸಾಲವು ಮುಗಿಯುವುದರ ಒಳಗೆ ನಿವೃತ್ತರಾಗುವವರಿಗೆ ಬಹಳವಾಗಿ ಹೊಂದಿಕೆಯಾಗುತ್ತದೆ. ಅಂದರೆ ಈ ರೀತಿಯ ಸಾಲದ ಮರುಪಾತಿಯನ್ನು ನಿವೃತ್ತಿಯ ನಂತರದ ದಿನಗಳಲ್ಲೂ ಕೂಡ ಮಾಡಲು ಸೂಕ್ತವಾಗಿರುತ್ತದೆ ಮತ್ತು ಭಾರವೆನಿಸುವುದಿಲ್ಲ. ಯಾಕೆಂದರೆ ಕೊನೆಯ ಕಂತುಗಳಲ್ಲಿ ದೊಡ್ಡ ಮೊತ್ತದ ಬದಲಾಗಿ ಸಾಲ ಮೊತ್ತ ಇಳಿಕೆಯಾಗಿರುತ್ತದೆ. ಮುಖ್ಯಮಂತ್ರಿ 1 ಲಕ್ಷ ವಸತಿ ಯೋಜನೆಗೆ ಅರ್ಜಿ ಸಲ್ಲಿಕೆ ಮಾಡೋದು ಹೇಗೆ?

ಇಎಂಐ ರಜೆಗಳು (ನಿಷೇಧದ ಅವಧಿ)

ಇಎಂಐ ರಜೆಗಳು (ನಿಷೇಧದ ಅವಧಿ)

ಹಲವಾರು ಬ್ಯಾಂಕ್ ಗಳು ಮತ್ತು ಗೃಹ ನಿರ್ಮಾಣ ಹಣಕಾಸು ಸಂಸ್ಥೆಗಳು ಮೊರೊಟೋರಿಯಂ ಅವಧಿಯ ಆಯ್ಕೆಯನ್ನು ಸಾಲಗಾರರಿಗೆ ಒದಗಿಸುತ್ತದೆ ಅಂದರೆ ಸಾಮಾನ್ಯವಾಗಿ ಇದು 36 ತಿಂಗಳುಗಳಾಗಿರುತ್ತದೆ. ಈ ಅವಧಿಯಲ್ಲಿ ಯಾವುದೇ ಇಎಂಐ ಮರುಪಾವತಿ ಇರುವುದಿಲ್ಲ. ಹಾಗಂದ ಮಾತ್ರಕ್ಕೆ ಬಡ್ಡಿ ಇರುವುದಿಲ್ಲ ಎಂದು ಭಾವಿಸಬೇಡಿ. ಈ ಅವಧಿಯಲ್ಲಿ ಸಾಲ ಮರುಪಾವತಿ ಮಾಡುವ ಇಎಂಐ ಕಂತು ಇಲ್ಲದೇ ಇರಬಹುದೇ ವಿನಃ ಅದರ ಬಡ್ಡಿಯು ನಿಂತಿರುವುದಿಲ್ಲ. ಈ ಅವಧಿ ಮುಗಿದ ನಂತರ ಹಿಂದಿನ ಎಲ್ಲಾ ದಿನಗಳ ಬಡ್ಡಿಯನ್ನು ಅಸಲನ್ನು ಎರಡನ್ನೂ ಪಾವತಿಸಬೇಕಾಗುತ್ತದೆ. ಈ ಅವಧಿಯಲ್ಲಿನ ಸಾಲದ ಬಡ್ಡಿಯನ್ನು ಮುಂದಿನ ದಿನಗಳಲ್ಲಿ ಬರುವ ಇಎಂಐಗಳಲ್ಲಿ ಹೊಂದಾಣಿಕೆ ಮಾಡಿ ಕೊಡಲಾಗುತ್ತದೆ. ಸಾಲಗಾರರಿಗೆ ಈ ಮೊರೊಟೋರಿಯಂ ಅವಧಿಯಲ್ಲಿ ಬೀಳುವ ಬಡ್ಡಿಯನ್ನು ಕಟ್ಟಲು ಅವಕಾಶವಿರುತ್ತದೆ ಆ ಮೂಲಕ ನಿಮ್ಮ ಇಎಂಐ ಬಡ್ಡಿಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗಿರುವ ಗೃಹಸಾಲ

ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗಿರುವ ಗೃಹಸಾಲ

ಕೆಲವು ಸಾಲದಾತರು ಸಾಲಗಾರರ ಬ್ಯಾಂಕ್ ಅಕೌಂಟಿಗೆ ಲಿಂಕ್ ಆಗಿರುವ ಮನೆಸಾಲವನ್ನು ನೀಡಲು ಆರಂಭಿಸಿದ್ದಾರೆ. ಗೃಹಸಾಲದ ಮೇಲಿನ ಬಡ್ಡಿಯನ್ನು ಖಾತೆಯಿಂದ ಮಾಸಿಕ ಸರಾಸರಿ ಬ್ಯಾಲೆನ್ಸ್ ಅನ್ನು ಕಡಿತಗೊಳಿಸಿದ ನಂತರ ಸಾಲದ ಅತ್ಯುತ್ತಮ ಪ್ರಮಾಣದ ಆಧಾರದಲ್ಲಿ ಲೆಕ್ಕಹಾಕಲಾಗುತ್ತದೆ. ಆದರೆ ಸಾಲಗಾರರು ಈ ಅಕೌಂಟಿನಲ್ಲಿ ಹಣವನ್ನು ಠೇವಣಿ ಮಾಡಲು ಅಥವಾ ಖಾತೆಯಿಂದ ಹಣವನ್ನು ತೆಗೆಯಲು ಅವಕಾಶವಿರುತ್ತದೆ. ಅಗತ್ಯಬಿದ್ದಾಗ ಖಾತರಿ ಕೂಡ ಬೇಕಾಗುತ್ತದೆ. ಈ ಖಾತೆಯಲ್ಲಿ ಹೆಚ್ಚು ಉಳಿತಾಯ ಮಾಡಿದ್ದಲ್ಲಿ ಇಎಂಐ ಆಯ್ಕೆಗಳ ಪ್ರಯೋಜನವನ್ನು ಹೆಚ್ಚು ಪಡೆಯಬಹುದಾಗಿದೆ.

ಅನುಕ್ರಮ ಆಧಾರಿತ ಇಎಂಐಗಳು

ಅನುಕ್ರಮ ಆಧಾರಿತ ಇಎಂಐಗಳು

ಸಾಮಾನ್ಯವಾಗಿ ಕಟ್ಟಣ ನಿರ್ಮಾಣದ ಹಂತದಲ್ಲಿರುವ ಆಸ್ತಿಯನ್ನು ಖರೀದಿಸುವುದಾದರೆ ಸಾಲಗಾರರು ಪೂರ್ವ ಇಎಂಐಗಳನ್ನು ಪಾವತಿಸುತ್ತಾರೆ. ಇದರಲ್ಲಿ ಅವರು ಆಸ್ತಿಯನ್ನು ಹೊಂದಿರುವವರೆಗೂ ಕೂಡ ಬಳಸಿದ/ಅವರಿಂದ ವಿತರಿಸಲ್ಪಟ್ಟ ಸಾಲದ ಮೊತ್ತಕ್ಕೆ ಬಡ್ಡಿಯ ಮೊತ್ತವನ್ನು ಮಾತ್ರ ಅವರು ಪಾವತಿಸಬೇಕಾಗುತ್ತದೆ. ಆದರೆ ಅನುಕ್ರಮ ಆಧಾರಿತ ವ್ಯವಸ್ಥೆಯಲ್ಲಿ, ಸಾಲಗಾರರು ಬಡ್ಡಿಯ ಮೊತ್ತವನ್ನು ಕೂಡಲೇ ಪಾವತಿ ಮಾಡಲು ಅವಕಾಶವಿರುತ್ತದೆ. ಅವರ ಇಎಂಐ ಗಳನ್ನು ಹಂಚಿಕೆ ಮಾಡಲಾಗಿರುವ ಸಂಚಿತ ಮೊತ್ತದ ಆಧಾರದಲ್ಲಿ ಲೆಕ್ಕ ಹಾಕಲಾಗುತ್ತದೆ. ಅದರಲ್ಲಿ ಕೇವಲ ಬಡ್ಡಿದರ ಮಾತ್ರವೇ ಅಲ್ಲದೆ ಪ್ರಾರಂಭಿಕ ಸಾಲದ ಮೊತ್ತವೂ ಕೂಡ ಒಳಗೊಂಡಿರುತ್ತದೆ. ಭಾರತದಲ್ಲಿ ಲಭ್ಯವಿರುವ ಅನೇಕ ವಿಧದ ಸಾಲಗಳು ಯಾವುವು?

English summary

Home Loans: How to choose the best repayment option

Banks and housing finance companies offer a number of customer centric home loan repayment options to suit varying loan repayment requirement of borrowers.
Story first published: Thursday, November 29, 2018, 10:41 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X