ನರೇಂದ್ರ ಮೋದಿ ನೇತೃತ್ವದ ಎನ್ ಡಿಎ ಸರ್ಕಾರದ 2019ನೇ ಸಾಲಿನ ಮಧ್ಯಂತರ ಬಜೆಟ್ ಮಂಡಿಸಿದ ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಸಂಬಳದಾರರಿಗೆ ಏನು ನೀಡಿದರು? ಜೇಟ್ಲಿ ಮರು ಪರಿಚಯಿಸಿದ್ದ ಸ್ಟಾಂಡರ್ಡ್ ಡಿಡಕ್ಷನ್ ಮಿತಿ ಏರಿಕೆ ಮಾಡಿದ್ದರಿಂದ ಏನು ಲಾಭ? ಸಂಬಳದಾರರು ಎಷ್ಟು ಮೊತ್ತ ಉಳಿಸಬಹುದು? ಈ ಬಗ್ಗೆ ವಿವರಣೆ ಇಲ್ಲಿದೆ.
ಈ ಬಾರಿ ಬಜೆಟ್ ನಲ್ಲಿ ತೆರಿಗೆ ಪಾವತಿ ಮಿತಿ ಬದಲಾಯಿಸಿಲ್ಲ. ಆದರೆ, 2005ರ ಬಜೆಟ್ ನಂತರ ತೆಗೆದು ಹಾಕಲಾದ standard deduction ಕಳೆದ ಬಾರಿ ಮರು ಪರಿಚಯಿಸಲಾಗಿದ್ದು, ಈ ಬಾರಿಯೂ ಉಳಿಸಿಕೊಳ್ಳಲಾಗಿದೆ 2018-19ನೇ ಸಾಲಿನ ಬಜೆಟ್ ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ಮಿತಿಯನ್ನು 30 ಸಾವಿರ ರುಪಾಯಿ ಅಥವಾ (ಸಂಬಳದ ಶೇ40 ರಷ್ಟು- 5 ಲಕ್ಷ ರು ಸಂಬಳ ಮಿತಿ ತನಕ)ಯಿಂದ 40 ಸಾವಿರ ರುಪಾಯಿಗೆ ಏರಿಸಲಾಗಿತ್ತು. ಈ ಬಾರಿ ಈ ಮಿತಿಯನ್ನು 50,000 ರು ಗಳಿಗೆ ಏರಿಕೆ ಮಾಡಲಾಗಿದೆ.

ಆದರೆ, ಇದರಲ್ಲಿ ಸಾರಿಗೆ ಭತ್ಯೆ 19,200 ಹಾಗೂ ವೈದ್ಯಕೀಯ ಮರುಪಾವತಿ ಭತ್ಯೆ(medical reimbursement) 15,000 ರು ಸೇರಿಸಲಾಗಿಲ್ಲ. standard deduction ಜಾರಿಗೆ ತಂದ ಬಳಿಕ 5 ಲಕ್ಷ ರು ಗೂ ಅಧಿಕ ಗಳಿಕೆಯುಳ್ಳವರ ಆದಾಯಕ್ಕೆ ಎಷ್ಟು ತೆರಿಗೆ ಬೀಳಲಿದೆ ಹಾಗೂ 7.75 ಲಕ್ಷ ರು ಆದಾಯಯುಳ್ಳವರಿಗೆ ಎಷ್ಟು ತೆರಿಗೆ ಹೊರೆ ಬೀಳಲಿದೆ. ಎಂಬುದಕ್ಕೆ ಕೆಳಗೆ ಉದಾಹರಣೆ ಇದೆ ನೋಡಿ... 5 ಲಕ್ಷ ಆದಾಯದ ತನಕ ತೆರಿಗೆ ಕಟ್ಟುವಂತಿಲ್ಲ. ಹೀಗಾಗಿ ಅಂಥ ವ್ಯಕ್ತಿ 2018-19 ಆರ್ಥಿಕ ವರ್ಷಕ್ಕೆ ಹೋಲಿಸಿದರೆ ಕನಿಷ್ಟ 15,080 ರು ಉಳಿಸಬಲ್ಲರು. 2019-20ರ ಆರ್ಥಿಕ ವರ್ಷಕ್ಕೆ ನಿಮ್ಮ ಒಟ್ಟು ಆದಾಯ 7.75 ಲಕ್ಷ ರು ಎಂದು ಕೊಳ್ಳೋಣ.
* ಸ್ಟಾಂಡರ್ಡ್ ಡಿಡಕ್ಷನ್ ಅಡಿಯಲ್ಲಿ 2019-20ರ ಆರ್ಥಿಕ ವರ್ಷದಲ್ಲಿ 50,000ರು ತನಕ ಕಡಿತಗೊಳ್ಳಲಿದೆ.
* ಸೆಕ್ಷನ್ 80ಸಿ ಅಡಿಯಲ್ಲಿ ಪಿಪಿಎಫ್, ಇಪಿಎಫ್. ಇತ್ಯಾದಿ ಅಥವಾ ಮಕ್ಕಳ ಟ್ಯೂಷನ್ ಫೀ ಮೂಲಕ 1.5 ಲಕ್ಷ ರು ತನಕ ಹೂಡಿಕೆ ತೋರಿಸಬಹುದು.(ಮೊತ್ತ 6.25 ಲಕ್ಷ ರು ಆಗಲಿದೆ)
* ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್ ಪಿಎಸ್) ಅಡಿಯಲ್ಲಿ 80ಸಿಸಿಡಿ(1ಬಿ)ಸೆಕ್ಷನ್ ಅನ್ವಯ 50,000 ರು ಹೂಡಿಕೆ ತೋರಿಸಬಹುದು.
* ಮೆಡಿಕಲ್ ವಿಮೆ ಯೋಜನೆ 25,000 ರು ಪ್ರೀಮಿಯಂ ಇದು 80ಡಿ ಸೆಕ್ಷನ್ ಮೂಲಕ ತೋರಿಸಬಹುದು. ಹಿರಿಯ ನಾಗರಿಕರ ಆರೋಗ್ಯ ವಿಮೆ ಕಟ್ಟುತ್ತಿದ್ದರೆ ಈ ಮೊತ್ತ ಇನ್ನು ಹೆಚ್ಚಳವಾಗಲಿದೆ.
| 7.75 ಲಕ್ಷ ತೆರಿಗೆಗೆ ಒಳಪಡುವ ಸಂಬಳವುಳ್ಳವರಿಗೆ (ವಾರ್ಷಿಕ ಲೆಕ್ಕ ಎಲ್ಲವೂ ರುಪಾಯಿಯಂತೆ) | ||
|---|---|---|
| ಅಂಶಗಳು | ಹಾಲಿ ಲೆಕ್ಕಾಚಾರ | ಬಜೆಟ್ 2019 ನಂತರ |
| ಒಟ್ಟಾರೆ ಸಂಬಳ(Gross Salary) | 7,75,000 | 7,75,000 |
________________________________
| Standard Deduction- 50,000 ರು | ||
|---|---|---|
| Standard deduction | 40,000 | 50,000 |
| ನಿವ್ವಳ ಸಂಬಳ | 7,35,000 | 7,25,000 |
| ಇತರೆ ಮೂಲಗಳ ಆದಾಯ | 10,000 | 10,000 |
| ರಿಬೇಟ್ ನಂತರ ಪಾವತಿಸಬೇಕಾದ ಒಟ್ಟಾರೆ ಆದಾಯ | 7,45,000 | 7,35,000 |
| 80ಸಿ ಕಡಿತ | 1,50,000 | 1,50,000 |
| 80ಸಿಸಿಡಿ(1ಬಿ) | 50,000 | 50,000 |
| 80(ಡಿ) | 25,000 | 25,000 |
| 80ಟಿಟಿಎ | 10,000 | 10,000 |
| Income under head salary | 5,10,000 | 5,00,000 |
| ಆದಾಯ ತೆರಿಗೆ | 14,500 | 12,500 |
| 87ಎ ಅಡಿಯಲ್ಲಿ ರಿಬೇಟ್ | 12,500 | |
| ರಿಬೇಟ್ ನಂತರ ಪಾವತಿಸಬೇಕಾದ ಒಟ್ಟಾರೆ ತೆರಿಗೆ | 14,500 | - |
| ಸರ್ ಚಾರ್ಜ್ 10%/15% | - | - |
| ಸರ್ ಚಾರ್ಜ್ ನಂತರ ಪಾವತಿಸಬೇಕಾದ ತೆರಿಗೆ | 14,500 | - |
| ಶಿಕ್ಷಣ ಸೆಸ್ | 580 | - |
| ಸೆಸ್, ಸರ್ ಚಾರ್ಜ್ ಸೇರಿಸಿ ಒಟ್ಟಾರೆ ತೆರಿಗೆ | 15,080 | 12,500 |
| 80ಸಿ, 80ಡಿ, 80ಸಿಸಿಡಿ(1ಬಿ) ಅಡಿಯಲ್ಲಿ ಕ್ಲೆಮ್ ಮಾಡಿದರೆ 7.75 ಲಕ್ಷ ಸಂಬಳ ಹೊಂದಿದವರು 15,080 ತೆರಿಗೆ ಉಳಿಸಬಹುದು. ತೆರಿಗೆ ಪಾವತಿದಾರರಿಗೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಪರಿಣಾಮಕಾರಿಯಾಗಿದೆ. | ||


Click it and Unblock the Notifications