For Quick Alerts
ALLOW NOTIFICATIONS  
For Daily Alerts

ಉದ್ಯೋಗಿಗಳಿಗೆ ಗಿಫ್ಟ್: ತೆರಿಗೆ ರಹಿತ ಗ್ರಾಚ್ಯುಟಿ ಮಿತಿ ಏರಿಕೆ!

|

ನರೇಂದ್ರ ಮೋದಿ ನೇತೃತ್ವದ ಕಟ್ಟ ಕಡೆಯ ಬಜೆಟ್ ನಲ್ಲಿ ಮಧ್ಯಮ ವರ್ಗ, ಕಾರ್ಮಿಕರು, ವೃತ್ತಿಪರ ತೆರಿಗೆದಾರರಿಗೆ ಸಂತಸದ ಸುದ್ದಿ ಸಿಕ್ಕಿದೆ. ಹಂಗಾಮಿ ವಿತ್ತ ಸಚಿವ ಪಿಯೂಶ್ ಗೋಯಲ್ ಅವರು ಇಂದು(ಫೆಬ್ರವರಿ 01) ಮಂಡಿಸಿದ ಮಧ್ಯಂತರ ಬಜೆಟ್ ನಲ್ಲಿ ತೆರಿಗೆ ರಹಿತ ಗ್ರ್ಯಾಚುಟಿ ಮಿತಿ ಏರಿಕೆ ಮಾಡಲಾಗಿದೆ.

ಗ್ರಾಚ್ಯುಟಿ ತಿದ್ದುಪಡಿ ಮಸೂದೆ 2017ಕ್ಕೆ ಅಂಗೀಕಾರ ಸಿಗುವ ಸಂಸತ್ತಿನಲ್ಲಿ ಗುರುವಾರ(ಮಾರ್ಚ್ 22)ದಂದು ಅಂಗೀಕಾರ ಸಿಕ್ಕಿರುವುದರಿಂದ ಈ ಘೋಷಣೆ ನಿರೀಕ್ಷಿತವಾಗಿತ್ತು.

ಗ್ರಾಚ್ಯುಟಿ ಎಂದರೇನು? ಗ್ರಾಚ್ಯುಟಿ ಲೆಕ್ಕ ಹಾಕುವುದು ಹೇಗೆ?

ಸದ್ಯ ಐದು ಅಥವಾ ಅದಕ್ಕಿಂತ ಹೆಚ್ಚು ಸೇವಾ ಅವಧಿ ಹೊಂದಿರುವ ಉದ್ಯೋಗಿಗಳು ಉದ್ಯೋಗ ತೊರೆದಾಗ, ನಿವೃತ್ತಿ ಹೊಂದಿದಾಗ 10 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಗ್ರಾಚ್ಯುಟಿ ಗಳಿಸಬಹುದಾಗಿತ್ತು. 7ನೇ ವೇತನ ಆಯೋಗದ ವರದಿಯನ್ನು ಜಾರಿಗೊಳಿಸಿದ ಬಳಿಕ, ಸಂಘಟಿತ ವಲಯದ ಕೇಂದ್ರ ಸರ್ಕಾರಿ ನೌಕರರಿಗೆ ಗ್ರಾಚ್ಯುಟಿ ಮೊತ್ತದ ಮಿತಿಯನ್ನು 30 ಲಕ್ಷ ರೂ.ಗೆ ಏರಿಸಲಾಗಿದೆ.

ಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆಮಧ್ಯಂತರ ಬಜೆಟ್ 2019: ಆದಾಯ ತೆರಿಗೆ ಮಿತಿಯಲ್ಲಿ ಏರಿಕೆ

ಕೇಂದ್ರ ಸರ್ಕಾರಿ ನೌಕರರ ರೀತಿಯಲ್ಲಿಯೇ ಸಂಘಟಿತ ವಲಯದ ಕಾರ್ಮಿಕರಿಗೂ 30 ಲಕ್ಷ ರೂ. ವರೆಗೂ ತೆರಿಗೆ ಮುಕ್ತವಾಗಿ ಸಿಗಲಿದೆ. ಹಣ ಪಡೆಯಲು ಈವರೆಗೆ ಇದ್ದ ಕನಿಷ್ಠ ಐದು ವರ್ಷಗಳ ಸೇವಾವಧಿಯನ್ನು ಮೂರು ವರ್ಷಗಳಿಗೆ ಇಳಿಸಲು ಚಿಂತನೆ ನಡೆಸಿದ್ದು, ಇದರಿಂದ ಲಕ್ಷಾಂತರ ನೌಕರರಿಗೆ ಪ್ರಯೋಜನವಾಗಲಿದೆ. ಆದರೆ, ಈ ಬಗ್ಗೆ ಬಜೆಟ್ ನಲ್ಲಿ ಅಧಿಕೃತ ಘೋಷಣೆಯಾಗಿಲ್ಲ.

ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ

ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ

ನಿಶ್ಚಿತ ಅವಧಿಯ ಗುತ್ತಿಗೆ ನೌಕರರಿಗೆ ಗ್ರಾಚ್ಯುಟಿ ಸೌಲಭ್ಯ ಸಿಗಲಿದೆ. ಆದರೆ, ಇತರೆ ಅಲ್ಪಾವಧಿ ಗುತ್ತಿಗೆ ನೌಕರರಿಗೆ ಈ ಸೌಲಭ್ಯ ಸಿಗುವುದಿಲ್ಲ. ಆದರೆ, ಐದು ವರ್ಷ ಅವಧಿಯ ಉದ್ಯೋಗವನ್ನು ಪೂರ್ಣಗೊಳಿಸಿದ ನೌಕರರಿಗೆ ಗ್ರಾಚ್ಯುಟಿ ಪಾವತಿ ಕಾಯ್ದೆ 1972ರ ಅನ್ವಯ ಗ್ರಾಚ್ಯುಟಿ ಸಿಗಬೇಕಾಗುತ್ತದೆ.

ಎಲ್ಲಾ ವರ್ಗಕ್ಕೂ ಗ್ರ್ಯಾಚ್ಯುಟಿ ನಿಯಮ ಅಳವಡಿಕೆ

ಎಲ್ಲಾ ವರ್ಗಕ್ಕೂ ಗ್ರ್ಯಾಚ್ಯುಟಿ ನಿಯಮ ಅಳವಡಿಕೆ

ಗಣಿ, ತೈಲಕ್ಷೇತ್ರ, ಫ್ಯಾಕ್ಟರಿ, ಬಂದರು, ರೈಲ್ವೇ ಕಂಪನಿಗಳು ಮೊದಲಾದ ಕಡೆಗಳಲ್ಲಿ ಕಾರ್ಯನಿರ್ವಹಿಸುವವರಿಗೆ ಅನುಕೂಲ ಒದಗಿಸಲು ಗ್ರಾಚುಟಿ ಪಾವತಿ ಕಾಯ್ದೆ 1972 ನ್ನು ಜಾರಿಗೆ ತರಲಾಗಿದೆ. ಗ್ರಾಚ್ಯುಟಿ ಅಧಿನಿಯಮ 1972ರ ಪ್ರಕಾರ ಉದ್ಯೋಗಿಯ ಹೆಸರು ಸೇರ್ಪಡೆಗೊಂಡಿದ್ದರೆ, ನಿಮ್ಮ ಔದ್ಯೋಗಿಕ ಅನುಭವದ ಜತೆ ಲೆಕ್ಕ ಹಾಕಿ ಗ್ರಾಚ್ಯುಟಿ ನೀಡಲಾಗುತ್ತದೆ.

ನಿವೃತ್ತಿ ಆದ ಬಳಿಕ ಏನು ಕಥೆ?

ನಿವೃತ್ತಿ ಆದ ಬಳಿಕ ಏನು ಕಥೆ?

ಉದ್ಯೋಗದಾತರಿಂದ ಉದ್ಯೋಗಿಗಳಿಗೆ ಸಿಗುವ ಕೊಡುಗೆಗಳಲ್ಲಿ ಗ್ರ್ಯಾಚುಟಿ ಕೂಡಾ ಒಂದಾಗಿದೆ. ಗ್ರ್ಯಾಚುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ. ಉದ್ಯೋಗಿ ತನ್ನ ವೃತ್ತಿ ಬದುಕಿನಲ್ಲಿ ಹಲವಾರು ಬಾರಿ ಉದ್ಯೋಗ ಬದಲಾಯಿಸಬೇಕಾಗುತ್ತದೆ.

ಕನಿಷ್ಟ 5 ವರ್ಷಗಳ ಸೇವಾ ಅವಧಿ ಇರಬೇಕು

ಕನಿಷ್ಟ 5 ವರ್ಷಗಳ ಸೇವಾ ಅವಧಿ ಇರಬೇಕು

ಗ್ರ್ಯಾಚುಟಿ ಪಡೆದು ಉದ್ಯೋಗ ತೊರೆಯಬಹುದಾಗಿದೆ. ಇದರಂತೆ, 10 ಅಥವಾ ಅದಕ್ಕಿಂತ ಹೆಚ್ಚು ಮಂದಿ ಕೆಲಸ ಮಾಡುವ ಸಂಸ್ಥೆಗಳಲ್ಲಿನ ಕಾರ್ಮಿಕರು ಕನಿಷ್ಟ 5 ವರ್ಷ ಕೆಲಸ ಮಾಡಿದಲ್ಲಿ ಗ್ರ್ಯಾಚುಟಿ ಪಡೆಯಲು ಅರ್ಹರಾಗಿರುತ್ತಾರೆ. ಸೇವೆಯನ್ನು ಮಾಡುವ ಪ್ರತಿ ವರ್ಷಕ್ಕೆ 15 ದಿನಗಳ ವೇತನವನ್ನು ಗ್ರ್ಯಾಚುಟಿ ಎಂದು ಲೆಕ್ಕಹಾಕಲಾಗುವುದು. 2010 ರಲ್ಲಿ ಗ್ರ್ಯಾಚುಟಿ ಗರಿಷ್ಟ ಮೊತ್ತವನ್ನು 10 ಲಕ್ಷ ರೂ. ನಿಗದಿ ಮಾಡಲಾಗಿತ್ತು.

English summary

Union Interim Budget 2019: Govt increases Gratuity limit from Rs 10 lakh to 30 lakh

Union Interim Budget 2019Aacting Finance Minister Piyush Goyal announced some middle class and lower-middle-class friendly sops. The government increased the gratuity limit from Rs 10 lakh to Rs 30 lakh
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X