For Quick Alerts
ALLOW NOTIFICATIONS  
For Daily Alerts

  ಚಿಕ್ಕ ವಯಸ್ಸಿನಲ್ಲೇ ಶ್ರೀಮಂತರಾಗಲು ಏನು ಮಾಡಬೇಕು?

  |

  ಜಗತ್ತಿನಾದ್ಯಂತ ಹಾಗು ಭಾರತದಲ್ಲಿ ಅತೀ ಚಿಕ್ಕ ವಯಸ್ಸಿನಲ್ಲಿ ಕೋಟ್ಯಾಧಿಪತಿರಾಗಿರುವ ಹಲವು ಯುವಕರ ಸಾಹಸಗಾಥೆಗಳನ್ನು ನೋಡಬಹುದು. ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ಹಣಕಾಸಿನ ಗುರಿಗಳಿರುತ್ತವೆ. ಪ್ರತಿಯೊಬ್ಬರು 30 ರಿಂದ 40 ವರ್ಷ ವಯಸ್ಸಿನೊಳಗೆ ಅರ್ಥಿಕವಾಗಿ ಸುರಕ್ಷಿತವಾಗಿರಲೂ ಬಯಸುತ್ತಾರೆ. ಆದರೆ 20ನೇ ವಯಸ್ಸಿನಲ್ಲಿದ್ದಾಗ ಆ ಕ್ಷಣದ ಪ್ರಸ್ತುತ ಜೀವನವನ್ನು ನಡೆಸುತ್ತೇವೆ ಮತ್ತು ನಮ್ಮ ಭವಿಷ್ಯಕ್ಕಾಗಿ ಉಳಿತಾಯ ಮಾಡುವುದನ್ನು ಮರೆಯುತ್ತೇವೆ. ಅದರೆ ಸಂಪತ್ತನ್ನು ಸೃಷ್ಟಿಸುವುದಕ್ಕೆ ಇದು ಸರಿಯಾದ ಮಾರ್ಗವಲ್ಲ. ಆದ್ದರಿಂದ ನೀವು ಆರ್ಥಿಕವಾಗಿ ಸುರಕ್ಷಿತವಾಗಿದ್ದೀರಾ ಮತ್ತು ನಿಮ್ಮ ಹಣಕಾಸಿನೊಂದಿಗೆ ಸರಿಯಾದ ಮಾರ್ಗದಲ್ಲಿ ಇದ್ದಿರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಮನೆಯಿಂದ ನಡೆಸಬಹುದಾದ 18 ಲಾಭದಾಯಕ ಉದ್ಯಮಗಳು

  ನೀವು 30 ವರ್ಷ ತುಂಬುವ ಮೊದಲು ಶ್ರೀಮಂತರಾಗಲು ಮಾಡಬೇಕಾದ 5 ಪ್ರಮುಖ ಹೂಡಿಕೆಗಳನ್ನು ಇಲ್ಲಿ ನೀಡಲಾಗಿದೆ.

  1. ತೆರಿಗೆ ಉಳಿತಾಯದ ಕಡೆಗೆ ಹೂಡಿಕೆ

  ತೆರಿಗೆ ಹೊಣೆಗಾರಿಕೆಯನ್ನು ನಿರ್ವಹಿಸಲು ಮತ್ತು ಆದಾಯ ತೆರಿಗೆ ಕಾಯಿದೆ ಸೆಕ್ಷನ್ 80ಸಿ ಅಡಿಯಲ್ಲಿ ಲಭ್ಯವಿರುವ ತೆರಿಗೆ ವಿನಾಯಿತಿ ಲಾಭವನ್ನು ಪಡೆಯುವುದು ಮುಖ್ಯವಾಗುತ್ತದೆ. ಸರಿಯಾದ ತೆರಿಗೆ ಯೋಜನೆ ಒಂದರ ಮೂಲಕವೇ ನೀವು ನಿಮ್ಮ ತೆರಿಗೆ ಹೊಣೆಗಾರಿಕೆಯನ್ನು ನಿಭಾಯಿಸಲು ಕಡಿತಗೊಳಿಸಲು ಸಾಧ್ಯವಾಗುವುದಿಲ್ಲ. ಆದ್ದರಿಂದ ನೀವು ನಿಮ್ಮ ಇನ್ನಿತರ ಅರ್ಥಿಕ ಗುರಿಗಳ ಕಡೆಯೂ ಹೂಡಿಕೆ ಮಾಡುವ ಮೂಲಕ ಹೆಚ್ಚಿನ ತೆರಿಗೆಯನ್ನು ಉಳಿಸಬಹುದು. ಇಕ್ವಿಟಿ ಲಿಂಕ್ಡ್ ಸೇವಿಂಗ್ ಸ್ಕೀಮ್ (ಇಎಲ್ಎಸ್ಎಸ್) ಎನ್ನುವುದು ಒಂದು ಉತ್ತಮ ತೆರಿಗೆ ಉಳಿತಾಯ ಸಲಕರಣೆಯಾಗಿದೆ. ಇದೊಂದು ಒಪನ್ ಎಂಡೆಡ್ ಇಕ್ವಿಟಿ ಮ್ಯೂಚುವಲ್ ಫಂಡ್‌ನ ಒಂದು ವಿಧವಾಗಿದೆ. ಹ್ಯಾಪಿನೆಸ್ ಫಾಕ್ಟರಿಯ ಸಂಸ್ಥಾಪಕ ಮತ್ತು ಮುಖ್ಯ ಹ್ಯಾಪಿನೆಸ್ ಅಧಿಕಾರಿ ಅಮರ್ ಪಂಡಿತ್ ಅವರು ಇದರ ಮೂಲಕ ಹೂಡಿಕೆದಾರರು ತಮ್ಮ ಹಣಕಾಸಿನ ವರ್ಷ ಕ್ಕೆ ಸುಮಾರು ರೂ. 1.5 ಲಕ್ಷ ತೆರಿಗೆ ಹಣವನ್ನು ಕಡಿತಗೊಳಿಸಬಹುದು ಎಂದಿದ್ದಾರೆ.

  ಅಲ್ಪಾವಧಿ ಹಣಕಾಸಿನ ಗುರಿಗಳ ಕಡೆಗೆ ಹೂಡಿಕೆ

  ನಮ್ಮ ಜೀವನದಲ್ಲಿ ಪುನರಾವರ್ತಿತವಾಗುವ ಹಲವಾರು ಅಲ್ಪವಧಿಯ ಹಣಕಾಸಿನ ಗುರಿಗಳು ಇರುತ್ತವೆ. ಅವುಗಳೆಂದರೆ ವಾರ್ಷಿಕ ರಜೆಗಳು ಕಳೆಯುವುದು, ಕಾರಿನ ಖರೀದಿ, ಅಲ್ಪಾವಧಿ ಹಣಕಾಸಿನ ಗುರಿಗಳಿಗೆ ಹತ್ತಿರವಾದ ಸ್ವತ್ತುಗಳ ಖರೀದಿ ಮುಂತಾದವು. ಅಂತಹ ಗುರಿಗಳಿಗಾಗಿ ನಿಮ್ಮ ಹಣವನ್ನು ಉಳಿತಾಯ ಖಾತೆಯಲ್ಲಿ ಇಡುವ ಬದಲಾಗಿ ಮಧ್ಯಸ್ಥಿಕೆಯ ಮ್ಯೂಚುವಲ್ ಫಂಡ್‌ನ ಖಾತೆಯಲ್ಲಿ ಹೂಡುವುದು ಉತ್ತಮ. ತೆರಿಗೆಯ ವಿಷಯದಲ್ಲಿ ಮ್ಯೂಚುವಲ್ ಫಂಡುಗಳು ಹೆಚ್ಚು ಪರಿಣಾಮಕಾರಿಯಾದದ್ದಾಗಿದೆ ಮತ್ತು ಇದರಲ್ಲಿ ವಿವಿಧ ರೀತಿಯ ಫಂಡ್ ಹಾಗೂಕಾಲಾವಧಿಯನ್ನು ಹೊಂದಿವೆ.

  ಆರೋಗ್ಯ ಮತ್ತು ಜೀವ ರಕ್ಷಣೆಗೆ ಹೂಡಿಕೆ

  ಜೀವನ ಮತ್ತು ಆರೋಗ್ಯ ವಿಮೆಯನ್ನು ವಿಶಿಷ್ಟವಾಗಿ ಹೂಡಿಕೆಯೆಂದು ಪರಿಗಣಿಸಲಾಗುವುದಿಲ್ಲ. ಹೇಗಾದರೂ ಇದೆರಡೂ ಬಹಳ ಮುಖ್ಯ ಮತ್ತು ಮೂವತ್ತು ವರ್ಷ ತುಂಬುವುದರೊಳಗೆ ತಪ್ಪದೆ ನಾವು ಆದ್ಯತೆ ನೀಡಬೇಕಾದ ಅಂಶವಾಗಿರುತ್ತದೆ. ನಿಮ್ಮ ಮನೆಯವರು ನಿಮ್ಮ ಮೇಲೆ ಅವಲಂಬಿತರಾಗಿದ್ದಲ್ಲಿ, ನೀವು ಸರಿಯಾದ ವಿಮೆಯನ್ನು ಮಾಡಿಸಿಕೊಳ್ಳುವುದು ಒಳ್ಳೆಯದು. ಜೊತೆಗೆ ಇತ್ತೀಚಿನ ದಿನಗಳಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಸೇವೆಗಳು ದುಬಾರಿಯಾಗುತ್ತಿವೆ. ಯಾವುದಾದರೂ ಕಾಯಿಲೆ ಯಾರಿಗಾದರೂ ಬಂದಲ್ಲಿ ನಿಮ್ಮ ಹಣ ವ್ಯರ್ಥವಾಗಿ ಹೋಗುತ್ತದೆ. ಆದ್ದರಿಂದ ಉತ್ತಮ ಆರೋಗ್ಯ ವಿಮೆಯನ್ನು ಮಾಡಿಸಿಕೊಳ್ಳಿ. ಅದೃಷ್ಟವಶಾತ್ ಇಂದು ಉತ್ತಮ ಆರೋಗ್ಯ ವಿಮೆಗಳು ನಮಗೆ ದೊರೆಯುತ್ತಿವೆ. ನಿಮಗೆ ಸರಿಹೊಂದುವ ಹಾಗು ಅಗತ್ಯಕ್ಕೆ ತಕ್ಕಂತಹ ಒಂದು ಆರೋಗ್ಯದ ವಿಮೆಯನ್ನು ಮಾಡಿಸಿಕೊಳ್ಳಿ.

  ತುರ್ತು ನಿಧಿ

  ಜೀವನದಲ್ಲಿ ಎದುರಾಗಬಹುದಾದ ಅಪಘಾತಗಳು, ಅನಾರೋಗ್ಯ ಮತ್ತು ಇತರ ಅನಿರೀಕ್ಷಿತ ಘಟನೆಗಳ ಬಗ್ಗೆ ಎಚ್ಚರಿಕೆ ಹೊಂದಿರಬೇಕು. ಇಂತಹ ಅನಿರಿಕ್ಷಿತ ಘಟನೆಗಳನ್ನು ಎದುರಿಸಲು ತುರ್ತು ನಿಧಿಯಲ್ಲಿ ಹೂಡಬೇಕು. ಉಳಿತಾಯ ಬ್ಯಾಂಕ್ ಖಾತೆಗಳು ಮತ್ತು ಲಿಕ್ವಿಡ್ ಮ್ಯೂಚುವಲ್ ಫಂಡ್ ಗಳು ತುರ್ತು ಕಾರ್ಪಸ್ ಅನ್ನು ಮೀಸಲಿರಿಸುವ ಎರಡು ಆಯ್ಕೆಗಳಾಗಿವೆ. ತುರ್ತು ಪರಿಸ್ಥಿತಿಗಾಗಿ ನಿಮ್ಮ ತುರ್ತು ನಿಧಿ ಸುರಕ್ಷಿತವಾಗಿರಬೇಕು.

  Read more about: money crorepati banking
  English summary

  How to become rich fast at a young age

  Everyone wants to be financially secure and well off by the age of 35-40. However, when we are in our 20’s, we tend to live life in the moment and forget saving for the future.
  Story first published: Saturday, March 2, 2019, 11:18 [IST]
  Company Search
  Enter the first few characters of the company's name or the NSE symbol or BSE code and click 'Go'

  Find IFSC

  Get Latest News alerts from Kannada Goodreturns

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more