For Quick Alerts
ALLOW NOTIFICATIONS  
For Daily Alerts

ಸುಲಭವಾಗಿ ನಡೆಸಬಹುದಾದ ಟಾಪ್ 10 ಬಿಸಿನೆಸ್ ಐಡಿಯಾ

ಸೋಷಿಯಲ್ ಎಂಟರ್ಪ್ರೈಸ್ ಉದ್ಯಮ ಐಡಿಯಾ ಅನ್ನೋದು ಸಾಂಪ್ರದಾಯಿಕ ವ್ಯಾಪಾರ ಕಲ್ಪನೆಗಳಂತೆ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಹೆಬ್ಬಯಕೆಯೊಂದಿಗೆ ಸೋಷಿಯಲ್ ಎಂಟರ್ಪ್ರೈಸ್ ವಿಚಾರಗಳು ಹುಟ್ಟಿಕೊಳ್ಳುತ್ತವೆ.

|

ಸೋಷಿಯಲ್ ಎಂಟರ್ಪ್ರೈಸ್ ಬಿಸಿನೆಸ್ ಐಡಿಯಾ ಅನ್ನೋದು ಸಾಂಪ್ರದಾಯಿಕ ವ್ಯಾಪಾರ ಕಲ್ಪನೆಗಳಂತೆ. ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ಹೆಬ್ಬಯಕೆಯೊಂದಿಗೆ ಸೋಷಿಯಲ್ ಎಂಟರ್ಪ್ರೈಸ್ ವಿಚಾರಗಳು ಹುಟ್ಟಿಕೊಳ್ಳುತ್ತವೆ. ಸೋಷಿಯಲ್ ಎಂಟರ್ಪ್ರೈಸ್ ಉದ್ಯಮ ಅನ್ನೋದು ಈ ಪ್ರಕೃತಿಯಲ್ಲಿನ ನವೀನ ಕಲ್ಪನೆಯಾಗಿದೆ. ಸಾಮಾಜಿಕ ವಾಣಿಜ್ಯೋದ್ಯಮಿಯಾಗಿ, ನೀವು ಹೆಚ್ಚು ಹಣ ಸಂಪಾದಿಸಬಾರದು. ಆದರೆ ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವ ತೃಪ್ತಿಯ ಅರ್ಥವನ್ನು ಈ ಉದ್ಯಮಗಳು ನೀಡುತ್ತವೆ. ತುಂಬಾ ಜನರು ಸಾಮಾಜಿಕ ಉದ್ಯಮಶೀಲತೆಯ ಸಾಮರ್ಥ್ಯವನ್ನು ಅರಿತು ಸಾಮಾಜಿಕ ವ್ಯವಹಾರಗಳಲ್ಲಿ ತೊಡಗಿಕೊಳ್ಳುತ್ತಾರೆ. ಸಾಮಾಜಿಕ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಜೊತೆಗೆ ಹಣ ಸಂಪಾದಿಸುವುದು ಸೋಷಿಯಲ್ ಎಂಟರ್ಪ್ರೈಸ್ ಉದ್ಯಮದ ಶ್ರೇಷ್ಠತೆಯಾಗಿದೆ.

ಸಾಮಾಜಿಕ ಉದ್ಯಮ ವ್ಯವಹಾರ ಕಲ್ಪನೆಗಳು ಅನನ್ಯವಾಗಿದ್ದು, ಈ ರೀತಿಯ ವ್ಯಾಪಾರದಲ್ಲಿ ನಿಮಗೆ ಸ್ಪರ್ಧೆ ಇರುವುದಿಲ್ಲ. ಸೋಷಿಯಲ್ ಎಂಟರ್ಪ್ರೈಸ್ ಐಡಿಯಾಗಳನ್ನು ಹುಡುಕುತ್ತಿದ್ದರೆ, ಇಲ್ಲಿ 10 ಅತ್ಯಂತ ನವೀನ ಮತ್ತು ಲಾಭದಾಯಕ ಸಾಮಾಜಿಕ ಉದ್ಯಮ ವ್ಯವಹಾರಗಳ ಪಟ್ಟಿ ಮಾಡಲಾಗಿದೆ.

ಸೋಷಿಯಲ್ ಸೂಪರ್ ಮಾರ್ಕೆಟ್

ಸೋಷಿಯಲ್ ಸೂಪರ್ ಮಾರ್ಕೆಟ್

 ಕರ್ನಾಟಕದಲ್ಲಿ ಆರಂಭಿಸಬಹುದಾದ ಟಾಪ್ 10 ಲಾಭದಾಯಕ ಬಿಸಿನೆಸ್ ಐಡಿಯಾ ಕರ್ನಾಟಕದಲ್ಲಿ ಆರಂಭಿಸಬಹುದಾದ ಟಾಪ್ 10 ಲಾಭದಾಯಕ ಬಿಸಿನೆಸ್ ಐಡಿಯಾ

ಉದ್ಯೋಗ ಮತ್ತು ಕೌಶಲ್ಯ ತರಬೇತಿ

ಉದ್ಯೋಗ ಮತ್ತು ಕೌಶಲ್ಯ ತರಬೇತಿ

ಎರಡನೇ ಸಾಮಾಜಿಕ ವ್ಯವಹಾರ ಕಲ್ಪನೆ ಉದ್ಯೋಗ ಮತ್ತು ಕೌಶಲ್ಯ ತರಬೇತಿ ಕೇಂದ್ರವನ್ನು ಸ್ಥಾಪಿಸುವುದು. ಈ ಕೇಂದ್ರದಲ್ಲಿ ನೀವು ಅಗತ್ಯವಿರುವವರಿಗೆ ತರಬೇತಿ ನೀಡಬೇಕು. ತರಬೇತಿಯು ಉತ್ತಮ ಉದ್ಯೋಗಿಯಾಗಲು ಸಹಾಯ ಮಾಡುವ ವಿಷಯಗಳಿಗೆ ಸಂಬಂಧಿಸಿರುತ್ತದೆ. ಉದಾ: ಕಂಪ್ಯೂಟರ್ ತರಬೇತಿ, ಮರಗೆಲಸ, ಕೊಳಾಯಿ, ಬೆಸುಗೆ ಮುಂತಾದವುಗಳು ಕೆಲವು ಉದಾಹರಣೆಗಳಾಗಿವೆ. ಈ ತರಬೇತಿಗೆ ನಾಮಮಾತ್ರ ಶುಲ್ಕ ವಿಧಿಸಬಹುದು.

ಉಪಯೋಗಿಸಿದ ಪಠ್ಯಪುಸ್ತಕಗಳು
 

ಉಪಯೋಗಿಸಿದ ಪಠ್ಯಪುಸ್ತಕಗಳು

ಬಡ ಮತ್ತು ಅಗತ್ಯವಿರುವ ಮಕ್ಕಳು ಯಾವಾಗಲೂ ಅಧ್ಯಯನಕ್ಕಾಗಿ ಪಠ್ಯಪುಸ್ತಕಗಳನ್ನು ಹುಡುಕುತ್ತಿರುತ್ತಾರೆ. ನೀವು ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳೊಂದಿಗೆ ಸಭೆ ಆಯೋಜಿಸಿ, ಸಾಮಾಜಿಕ ಉದ್ದೇಶಕ್ಕಾಗಿ ಉಪಯೋಗಿಸಿದ ಪುಸ್ತಕಗಳನ್ನು ದಾನ ಮಾಡಲು ಹೇಳಿ.. ಉಪಯೋಗಿಸಿದ ಪುಸ್ತಕಗಳನ್ನು ಸಂಗ್ರಹಿಸುವ ಮತ್ತು ವಿತರಿಸುವಲ್ಲಿ ನೀವು ವಿದ್ಯಾರ್ಥಿಗಳನ್ನು ನೇಮಿಸಬಹುದು. ಬಳಸಿದ ಪಠ್ಯಪುಸ್ತಕಗಳಿಗೆ ನಾಮ ಮಾತ್ರ ಶುಲ್ಕವನ್ನು ನೀವು ವಿಧಿಸಬಹುದು.

ನೀರಿನ ಶುದ್ಧೀಕರಣ

ನೀರಿನ ಶುದ್ಧೀಕರಣ

ಅಭಿವೃದ್ಧಿಶೀಲ ದೇಶಗಳಲ್ಲಿನ ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅಗತ್ಯವಿರುವವರಿಗೆ ಮಾರಾಟ ಮಾಡುವ ಸಲುವಾಗಿ ಕಡಿಮೆ ವೆಚ್ಚದ ಸಣ್ಣ ನೀರಿನ ಶುದ್ಧೀಕರಣ ಘಟಕವನ್ನು ನೀವು ಸ್ಥಾಪಿಸಬಹುದು. ಈ ಸಾಮಾಜಿಕ ಕಾರಣಕ್ಕಾಗಿ ಬೇರೆ ಸ್ಥಳದಲ್ಲಿ ವಾಟರ್ ಸ್ಟೇಷನ್ ಅನ್ನು ಆಯ್ಕೆ ಮಾಡಬಹುದು.

ಸಾಮಾಜಿಕ ಸರಕುಗಳ ಮಾರುಕಟ್ಟೆ ಸ್ಥಳ

ಸಾಮಾಜಿಕ ಸರಕುಗಳ ಮಾರುಕಟ್ಟೆ ಸ್ಥಳ

ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಜನರು ತಮ್ಮ ಕೈಯಿಂದ ಮಾಡಿದ ವಸ್ತುಗಳು, ಕಲೆ, ರತ್ನಗಂಬಳಿಗಳು, ಶಾಲುಗಳು ಇತ್ಯಾದಿಗಳನ್ನು ಮಾರಾಟ ಮಾಡುವ ವೇದಿಕೆಗಾಗಿ ಹುಡುಕುತ್ತಿದ್ದಾರೆ. ನೀವು ಅವುಗಳಿಗೆ ಆನ್ಲೈನ್ ​​ಅಥವಾ ಆಫ್ಲೈನ್ ನಲ್ಲಿ ವೇದಿಕೆಯನ್ನು ಒದಗಿಸಬಹುದು. ಅವರ ಉತ್ಪನ್ನಗಳನ್ನು ಮಾರಾಟ ಮಾಡುವ ಬಗ್ಗೆ ಅವರಿಗೆ ಮಾರ್ಗದರ್ಶನ ನೀಡಬಹುದು.

ಮೈಕ್ರೋ ಲೆಂಡಿಂಗ್

ಮೈಕ್ರೋ ಲೆಂಡಿಂಗ್

ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಅನೇಕ ಜನರು ಸಾಲ ಪಡೆಯುತ್ತಾರೆ. ಸ್ವಂತ ವ್ಯವಹಾರವನ್ನು ಪ್ರಾರಂಭಿಸಲು ಸಿದ್ಧರಿರುವ ವ್ಯಕ್ತಿಗಳಿಗೆ ವೈಯಕ್ತಿಕ ಮತ್ತು ಸಂಸ್ಥೆಗಳಿಗೆ ಸಾಲಗಳನ್ನು ನೀಡುವ ವೇದಿಕೆಯನ್ನು ರಚಿಸಬಹುದು. ನೀವು ಪ್ರತಿ ಸಾಲದ ಮೇಲೆ ಸಣ್ಣ ಕಮಿಷನ್ ಸಂಗ್ರಹಿಸಬಹುದು.

ಸಾಮಾಜಿಕ ಕಾರ್ಯಕ್ಕಾಗಿ ಅಡುಗೆ

ಸಾಮಾಜಿಕ ಕಾರ್ಯಕ್ಕಾಗಿ ಅಡುಗೆ

ಕಮ್ಯೂನಿಟಿ ಕಿಚನ್ ಅಥವಾ ಸೋಷಿಯಲ್ ಕಿಚನ್ ಪ್ರಾರಂಭಿಸುವುದು ಇನ್ನೊಂದು ವಿಧದ ಸಾಮಾಜಿಕ ವ್ಯವಹಾರವಾಗಿದೆ. ನಿರಾಶ್ರಿತರು ಮತ್ತು ಅಗತ್ಯವಿರುವ ಜನರು ಕಡಿಮೆ ದರದಲ್ಲಿ ಆಹಾರವನ್ನು ಹುಡುಕುತ್ತಿರುತ್ತಾರೆ. ಸ್ವಯಂಸೇವಕರ ಮತ್ತು ಜನರ ಸಹಾಯದಿಂದ ನೀವು ಈ ಪ್ರಕಾರದ ಯೋಜನೆಯನ್ನು ಆರಂಭಿಸಬಹುದು.

ಸೌರ ಉತ್ಪನ್ನಗಳು ಮತ್ತು ಸ್ಟೌವ್

ಸೌರ ಉತ್ಪನ್ನಗಳು ಮತ್ತು ಸ್ಟೌವ್

ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ವಿದ್ಯುಚ್ಛಕ್ತಿಯ ಲಭ್ಯತೆ ಮತ್ತು ಸೌದೆ ಒಲೆ ಇವುಗಳು ಪ್ರಮುಖ ಸವಾಲುಗಳಾಗಿವೆ. ನೀವು ಸೌರ ಉತ್ಪನ್ನಗಳನ್ನು ಅಥವಾ ಕಡಿಮೆ ವೆಚ್ಚದ ಸ್ಟೌವ್ ಗಳನ್ನು ತಯಾರಿಸುವ ಬಗ್ಗೆ ಯೋಚಿಸಬಹುದು. ಅವುಗಳನ್ನು ಪಡೆಯಲು ಸಾಧ್ಯವಾಗದವರಿಗೆ ರಿಯಾಯಿತಿ ದರದಲ್ಲಿ ಮಾರಾಟ ಮಾಡಿ.

ಮೈಕ್ರೊ ಪವರ್ ಜನರೇಷನ್

ಮೈಕ್ರೊ ಪವರ್ ಜನರೇಷನ್

ವಿದ್ಯುಚ್ಛಕ್ತಿಯ ಕೊರತೆ ಗ್ರಾಮ ಪ್ರದೇಶದಲ್ಲಿ ಪ್ರಮುಖ ಸವಾಲಾಗಿರುವುದು ನಮಗೆಲ್ಲ ತಿಳಿದಿದೆ. ಹೀಗಾಗಿ ಕಡಿಮೆ ವೆಚ್ಚದಲ್ಲಿ ವಿದ್ಯುತ್ ಉತ್ಪಾದನೆಯ ಕೆಲವು ಪರ್ಯಾಯ ಮೂಲವನ್ನು ಅಭಿವೃದ್ಧಿಪಡಿಸಬಹುದು. ಅಕ್ಕಾಗಿ ಬಯೋಮಾಸ್ ಮತ್ತು ತ್ಯಾಜ್ಯ ಉತ್ಪನ್ನಗಳನ್ನು ಬಳಸಬಹುದು. ಈ ವಿಧಾನದಿಂದ ತಯಾರಿಸಿದ ವಿದ್ಯುಚ್ಛಕ್ತಿಯನ್ನು ತರಗತಿ ಕೊಠಡಿಗಳಿಗೆ ಮತ್ತು ಆಸ್ಪತ್ರೆಗಳಿಗೆ ಒದಗಿಸಲು ಬಳಸಲಾಗುತ್ತದೆ.

ಲೋಕೋಪಕಾರ

ಲೋಕೋಪಕಾರ

ಜನಕಲ್ಯಾಣ ಅಥವಾ ಲೋಕೋಪಕಾರಕ್ಕಾಗಿ ಒಂದು ವೇದಿಕೆಯನ್ನು ಸಂಘಟಿಸಿ ಆ ಮೂಲಕ ಬಡವರ ಕಲ್ಯಾಣಕ್ಕಾಗಿ ದೇಣಿಗೆಯ ಮೊತ್ತವನ್ನು ಬಳಸಬಹುದು. ಇದು ಅತ್ಯುತ್ತಮ ಸಾಮಾಜಿಕ ವ್ಯವಹಾರಗಳಲ್ಲಿ ಒಂದಾಗಿದೆ. ಆದಾಗ್ಯೂ, ಇದನ್ನು ಮಾಡುವುದರ ಮೂಲಕ ನೀವು ಹಣ ಸಂಪಾದಿಸಲು ಸಾಧ್ಯವಿಲ್ಲ. ಇದು ನಿವೃತ್ತಿ ಹೊಂದಿರುವ ಜನರಿಗೆ ಸೂಕ್ತವಾಗಿದೆ.

English summary

Top 10 Social Enterprise Business Ideas

social enterprise ideas are born with a desire to solve social problems. Social Enterprise Business Ideas are innovative in nature.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X