For Quick Alerts
ALLOW NOTIFICATIONS  
For Daily Alerts

15 ವರ್ಷಗಳಲ್ಲಿ ಕರೋಡ್ ಪತಿ ಆಗುವ ಆಸೆ ಇದೆಯೆ?

ಸಂತೋಷದಾಯಕವಾದ ಜೀವನವನ್ನು ನಡೆಸಲು ಮತ್ತು ಆರ್ಥಿಕವಾಗಿ ಸುರಕ್ಷಿತ ಭವಿಷ್ಯವನ್ನು ಪಡೆಯಲು ನೀವು ಆರ್ಥಿಕ ಶಿಸ್ತುಗಳನ್ನು ಪಾಲಿಸುವುದರ ಜೊತೆಗೆ ಉತ್ತಮವಾದ ಆರ್ಥಿಕ ತಂತ್ರಗಳನ್ನು ಹೊಂದಿರಬೇಕು.

|

ಸಂತೋಷದಾಯಕವಾದ ಜೀವನವನ್ನು ನಡೆಸಲು ಮತ್ತು ಆರ್ಥಿಕವಾಗಿ ಸುರಕ್ಷಿತ ಭವಿಷ್ಯವನ್ನು ಪಡೆಯಲು ನೀವು ಆರ್ಥಿಕ ಶಿಸ್ತುಗಳನ್ನು ಪಾಲಿಸುವುದರ ಜೊತೆಗೆ ಉತ್ತಮವಾದ ಆರ್ಥಿಕ ತಂತ್ರಗಳನ್ನು ಹೊಂದಿರಬೇಕು. ಇದರಲ್ಲಿ ಹೆಚ್ಚಿನ ಹಣ ಉಳಿತಾಯ ಮಾಡುವುದು, ಹೂಡಿಕೆ ಮಾಡುವುದು ಮತ್ತು ನಿಮ್ಮ ಖರ್ಚುಗಳನ್ನು ಕಡಿತಗೊಳಿಸುವುದು ಮುಖ್ಯವಾದುದ್ದಾಗಿದೆ. ಆದರೆ ನಿಮ್ಮ ಹಣಕಾಸಿನ ಭವಿದ ಬಗ್ಗೆ ಯೋಜಿಸುತ್ತಿರುವಾಗ ಹಣದುಬ್ಬರ ಕೂಡ ಪ್ರಮುಖ ಪಾತ್ರವಹಿಸುತ್ತದೆ.
ಏನೇ ಆಗಲಿ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೋಟ್ಯಾಧಿಪತಿ ಆಗಬೇಕೆಂಬ ಅದಮ್ಯ ಕನಸಿರುತ್ತದೆ. ಅದಕ್ಕಾಗಿ ನೂರಾರು ಮಾರ್ಗಗಳಿವೆ. ಹಾಗಿದ್ದರೆ 15 ವರ್ಷಗಳಲ್ಲಿ ಕರೋಡ್ ಆಗಬಹುದೆ? ಆಗಬಹುದಾದರೆ ಅದು ಹೇಗೆ ಸಾಧ್ಯ ಎಂಬುದನನ್ಉ ನೋಡೋಣ ಬನ್ನಿ...

15 ವರ್ಷಗಳಲ್ಲಿ ಕರೋಡ್ ಪತಿ ಆಗಲು ಸಾಧ್ಯವೇ?

15 ವರ್ಷಗಳಲ್ಲಿ ಕರೋಡ್ ಪತಿ ಆಗಲು ಸಾಧ್ಯವೇ?

15 ವರ್ಷಗಳಲ್ಲಿ ಕರೋಡ್ ಪತಿ ಆಗುವ ಪ್ರಯಾಣ ಸುಲಭವಾದದ್ದು ಅಲ್ಲ. ಆದರೆ ಅದು ಅಸಾಧ್ಯವೂ ಅಲ್ಲ. ಈ ಗುರಿ ಸಾಧನೆಗಾಗಿ ವ್ಯಕ್ತಿಯ ಶಿಸ್ತುಬದ್ದತೆ ಮತ್ತು ನಿರಂತರ ವಿಧಾನ ಅಗತ್ಯವಾಗಿರುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹಣವನ್ನು ನಿಷ್ಕ್ರಿಯವಾಗಿ ಇಟ್ಟುಕೊಳ್ಳುವುದು ನಿಮ್ಮ ಉದ್ದೇಶವನ್ನು ಪೂರೈಸಲು ಆಗುವುದಿಲ್ಲ. ಏಕೆಂದರೆ ಹಣದ ನೈಜ ಮೌಲ್ಯವು ಕಾಲಾನಂತರದಲ್ಲಿ ಕಡಿಮೆಯಾಗಲಿದೆ. ನೀವು 'ಕಾನ್ ಬನೇಗಾ ಕರೋಡ್ ಪತಿ' ಎಂಬ ಶೋ ನಲ್ಲಿ ಪಾಲ್ಗೊಳ್ಳಲು ಯೋಜಿಸದಿದ್ದಲ್ಲಿ! ನೀವು ಹೆಚ್ಚಿನ ಆದಾಯವನ್ನು ನೀಡುವ ಹೂಡಿಕೆಯಲ್ಲಿ ಹೂಡಿಕೆ ಮಾಡುವುದರ ಮೂಲಕ ಸಂಪತ್ತು ಸೃಷ್ಟಿಗೆ ಒತ್ತು ನೀಡಬೇಕು. ನಿಮ್ಮ ಗಮನವು ಸಂಪತ್ತು ಸೃಷ್ಟಿ ಮಾಡುವುದಾಗಲಿ, ಏಕೆಂದರೆ ಸಮಯಕ್ಕೆ ತಕ್ಕಂತೆ ನಿಮ್ಮ ವೆಚ್ಚಗಳು ಕೂಡ ಹೆಚ್ಚಾಗುತ್ತವೆ.

15 ವರ್ಷಗಳಲ್ಲಿ ಕರೋಡ್ ಪತಿ ಆಗುವುದು ಹೇಗೆ?

15 ವರ್ಷಗಳಲ್ಲಿ ಕರೋಡ್ ಪತಿ ಆಗುವುದು ಹೇಗೆ?

ನಿಮ್ಮ ವಯಸ್ಸು 30 ವರ್ಷ ಮತ್ತು ನಿಮ್ಮ ಮಾಸಿಕ ಸಂಬಳ ರೂ. 100,000 ಎಂದಿಟ್ಟುಕೊಳ್ಳೋಣ. ನಿಮ್ಮ ಮಾಸಿಕ ಸಂಬಳದಲ್ಲಿ ಸುಮಾರು 60% ಮೊತ್ತ ಮಾಸಿಕ ಖರ್ಚುಗಳಿಗಾಗಿ ವ್ಯಯಿಸುತ್ತಿರಿ. ಇದರಲ್ಲಿ ಉಳಿದ ರೂ. 40,000 ಮೊತ್ತವನ್ನು ಹೇಗೆ ಬಳಸಬೇಕು ಎಂಬ ಯೋಜನೆ ಈಗ ಮುಖ್ಯವಾಗುತ್ತದೆ. ನಿಮ್ಮ ಬ್ಯಾಂಕ್ ಖಾತೆಯಲ್ಲಿ ತುರ್ತು ಫಂಡ್ ಗಾಗಿ ರೂ. 15,000 ಮತ್ತು ರೂ. 25,000 ಹೂಡಿಕೆ ಮಾಡಿ.
ನೀವು 15 ವರ್ಷಗಳ ಅವಧಿಗೆ ಹೂಡಿಕೆ ಯೋಜನೆ ಹೊಂದಿದ್ದು, ನಿಮ್ಮ ಹೂಡಿಕೆಯ ಮೇಲಿನ ನಿರೀಕ್ಷಿತ ದರವು 10% ಆಗಿದ್ದರೆ ನಿಮ್ಮ 45 ವರ್ಷ ವಯಸ್ಸಿನ ಹದಿನೈದು ವರ್ಷಗಳ ಅವಧಿಯಲ್ಲಿ ರೂ. 1.02 ಕೋಟಿ ಮೊತ್ತ ಹೊಂದಬಹುದು.
ಆದ್ದರಿಂದ, ಮೇಲಿನ ಉದಾಹರಣೆ ಅನುಸಾರ ನೀವು ಗುರಿಯನ್ನು ಸಾಧಿಸಲು ಮುಂದಿನ 15 ವರ್ಷಗಳಲ್ಲಿ ಪ್ರತಿ ತಿಂಗಳ ರೂ. 25,000 ಹೂಡಿಕೆ ಮಾಡುತ್ತಾ ಹೋಗಬೇಕು.
ಈ ಸಮಯದಲ್ಲಿ ಬಡ್ಡಿದರ ಹೆಚ್ಚುಕಡಿಮೆ ಆಗುವುದರಿಮದ ನಿಮ್ಮ ಆದಾಯ ಕೂಡ ಬದಲಾಗಬಹುದು. ನಿಮ್ಮ ಆದಾಯ ಸಮಯಕ್ಕೆ ತಕ್ಕಂತೆ ಹೆಚ್ಚಾಗುತ್ತದೆ ಎಂದು ಭಾವಿಸುವುದು ಸುರಕ್ಷಿತವಾಗಿರುತ್ತದೆ. ಆದ್ದರಿಂದ, ನಿರೀಕ್ಷೆಗಿಂತ ಶೀಘ್ರವಾಗಿ ಈ ಗುರಿಯನ್ನು ಸಾಧಿಸಬಹುದು.

15 ವರ್ಷಗಳಲ್ಲಿ ಕೋಟ್ಯಾಧಿಪತಿ ಆಗಲು ಯೋಜನೆ ಅಭಿವೃದ್ಧಿಪಡಿಸುವುದು ಹೇಗೆ?

15 ವರ್ಷಗಳಲ್ಲಿ ಕೋಟ್ಯಾಧಿಪತಿ ಆಗಲು ಯೋಜನೆ ಅಭಿವೃದ್ಧಿಪಡಿಸುವುದು ಹೇಗೆ?

15 ವರ್ಷಗಳ ಅವಧಿಯಲ್ಲಿ ಕರೋಡ್ ಪತಿ ಆಗುವ ಕನಸು ನಿಮ್ಮದಾದರೆ, ನಿಮ್ಮ ಹೂಡಿಕೆಯಿಂದ 1 ಕೋಟಿ ರೂಪಾಯಿ ಹಣಕಾಸು ಯೋಜನೆಯನ್ನು ಅಭಿವೃದ್ಧಿಪಡಿಸಲು ಇಚ್ಛಿಸಿದರೆ ನೀವು ಪರಿಗಣಿಸಬೇಕಾದ ಕೆಲವು ಪ್ರಮುಖ ಅಂಶಗಳು ಇಲ್ಲಿವೆ.

ನಿಮ್ಮ ಖರ್ಚುಗಳನ್ನು ನಿರ್ವಹಿಸಿ
ನಿಮ್ಮ ಪ್ರಸ್ತುತ ಹಣಕಾಸಿನ ಬದ್ಧತೆಗಳನ್ನು ನಿರ್ವಹಿಸಲು ಮತ್ತು ಭವಿಷ್ಯಕ್ಕಾಗಿ ಹಣ ಉಳಿಸಲು ನಿಮಗೆ ಇದು ಮಹತ್ವದ್ದಾಗಿದೆ. ಆದ್ದರಿಂದ ನೀವು ಅನಗತ್ಯ ಖರ್ಚುಗಳನ್ನು ಕಡಿತಗೊಳಿಸಬೇಕು ಮತ್ತು ಸಾಧ್ಯವಾದಷ್ಟು ಹಣವನ್ನು ಉಳಿಸಲು ಪ್ರಯತ್ನಿಸಲೇಬೇಕು. ವ್ಯರ್ಥವಾದ ಖರ್ಚುಗಳನ್ನು ಕಡಿತಗೊಳಿಸುವುದರಿಂದ ನೀವು ಹೂಡಿಕೆಗಾಗಿ ಹೆಚ್ಚು ಹಣವನ್ನು ಉಳಿಸಿಕೊಳ್ಳುವ ಅವಕಾಶ ನಿಮ್ಮದಾಗುತ್ತದೆ.

ವೃತ್ತಿಪರರ ಸಹಾಯ ತೆಗೆದುಕೊಳ್ಳಿ

ವೃತ್ತಿಪರರ ಸಹಾಯ ತೆಗೆದುಕೊಳ್ಳಿ

ಹಣಕಾಸು ಮತ್ತು ಬಂಡವಾಳದ ಬಗ್ಗೆ ಎಲ್ಲರಿಗೂ ತಿಳಿದಿರಲು ಸಾಧ್ಯವಿಲ್ಲ. ಆದ್ದರಿಂದ, ನಿಮ್ಮ ಭವಿಷ್ಯದ ನಿರೀಕ್ಷೆಗಳನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ಧಾರಿ. ಅಲ್ಲದೆ ನಿಮ್ಮ ಪ್ರಸ್ತುತ ಖರ್ಚುಗಳನ್ನು ಕೂಡಾ ವ್ಯವಸ್ಥಿತವಾಗಿ ಪೂರೈಸುವುದು ಕೂಡ ಅತ್ಯಗತ್ಯ. ಆದರಿಂದ ಸುಸಂಗತವಾದ ಆರ್ಥಿಕ ಯೋಜನೆಯನ್ನು ಅಭಿವೃದ್ಧಿಪಡಿಸಲು ಹಣಕಾಸು ಯೋಜಕರ ಸಹಾಯವನ್ನು ನೀವು ತೆಗೆದುಕೊಳ್ಳಬೇಕು.

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿ

ಮ್ಯೂಚುವಲ್ ಫಂಡ್ ಗಳಲ್ಲಿ ಹೂಡಿ

ಅತ್ಯುತ್ತಮವಾದ ಮತ್ತು ಹೆಚ್ಚು ಆದಾಯ ಒದಗಿಸುವ ವಿಧಾನಗಳಲ್ಲಿ ಮ್ಯೂಚುವಲ್ ಫಂಡ್ ಗಳು ಮೊದಲ ಸ್ಥಾನದಲ್ಲಿವೆ. ಮಾರುಕಟ್ಟೆಯಲ್ಲಿ ಅತ್ಯಂತ ಹೆಚ್ಚಿನ ಆದಾಯದಲ್ಲಿ ನೀಡುವ ವಿಧಾನಗಳಲ್ಲಿ ಒಂದಾಗಿದೆ. ಹಿಂದಿನ ಕಾರ್ಯಕ್ಷಮತೆ ಮತ್ತು ನಿಮ್ಮ ಹಣಕಾಸಿನ ಪ್ರೊಫೈಲ್ ಪ್ರಕಾರ ನೀವು ಹೆಚ್ಚು ಸೂಕ್ತ ಮ್ಯೂಚುವಲ್ ಫಂಡ್ ಸ್ಕೀಮ್ ಆಯ್ಕೆ ಮಾಡಬೇಕು.

ನಿಮ್ಮ ಹೂಡಿಕೆಗಳನ್ನು ವೈವಿಧ್ಯಕರಿಸಿ

ನಿಮ್ಮ ಹೂಡಿಕೆಗಳನ್ನು ವೈವಿಧ್ಯಕರಿಸಿ

ಸಂಪ್ರದಾಯವಾದಿ ಬುದ್ಧಿವಂತಿಕೆಯಯವರು ಸ್ಥಿರವಾದ ಠೇವಣಿ (ಎಫ್ಡಿ) ಸುರಕ್ಷಿತ ಹೂಡಿಕೆ ಮಾರ್ಗವಾಗಿದೆ ಎಂದು ಹೇಳಬಹುದು. ಆದರೆ ಇದು ಕಡಿಮೆ ಲಾಭದಾಯಕ ಇಳುವರಿ ಕೊಡುವ ವಿಧಾನ. ಆದ್ದರಿಂದ, ವಿಭಿನ್ನ ಅಪಾಯಕಾರಿ ಅಂಶಗಳನ್ನು ಹೊಂದಿರುವ ಬಂಡವಾಳ ಹೂಡಿಕೆಯನ್ನು ನೀವು ವೈವಿಧ್ಯಗೊಳಿಸಬೇಕಾಗಿದೆ. ಇದು ಎದುರಾಗಬಹುದಾದ ಅಪಾಯವನ್ನು ತಗ್ಗಿಸಲು ಸಹಾಯ ಮಾಡುತ್ತದೆ. ಜೊತೆಗೆ ನಿಮ್ಮ ಹೂಡಿಕೆಯ ಮೇಲೆ ಹೆಚ್ಚಿನ ಲಾಭವನ್ನು ಗಳಿಸುತ್ತದೆ.

ತೆರಿಗೆ ಉಳಿತಾಯ ಹೂಡಿಕೆ

ತೆರಿಗೆ ಉಳಿತಾಯ ಹೂಡಿಕೆ

ಹಲವಾರು ಹೂಡಿಕೆ ಯೋಜನೆಗಳು ನಿಮ್ಮ 1.5 ಲಕ್ಷ ಆದಾಯದ ಮೇಲೆ ತೆರಿಗೆ ಉಳಿತಾಯ ಪ್ರಯೋಜನ ನೀಡುತ್ತದೆ. ಅವುಗಳಲ್ಲಿ ELSS, PPF, NPS, NSC, ತೆರಿಗೆ-ಉಳಿತಾಯ ಎಫ್ಡಿ ಇವುಗಳು ಕೆಲವು ಸ್ಥಿರವಾದ ಆದಾಯವನ್ನು ನೀಡುತ್ತವೆ. ಅಲ್ಲದೇ ನಿಮ್ಮ ತೆರಿಗೆ ಹೊಣೆಗಾರಿಕೆಗಳನ್ನು ಕಡಿಮೆ ಮಾಡುತ್ತವೆ.

ತಾಳ್ಮೆ ಯಶಸ್ಸಿನ ಕೀಲಿಕೈ

ತಾಳ್ಮೆ ಯಶಸ್ಸಿನ ಕೀಲಿಕೈ

ಹೆಚ್ಚಿನ ಆದಾಯವನ್ನು ಉತ್ಪಾದಿಸಲು ಬಯಸುವವರು ದೀರ್ಘಾವಧಿಯ ಹೂಡಿಕೆಗೆ ಬಂಡವಾಳವನ್ನು ಹೊಂದಿರಬೇಕು. ಸಂಪತ್ತು ಸೃಷ್ಟಿಸಲು ಶಿಸ್ತಿನ ಮತ್ತು ಕೇಂದ್ರೀಕೃತ ಹಣಕಾಸಿನ ವಿಧಾನದ ಅಗತ್ಯವಿದೆ. ನಿಮ್ಮ ಹೂಡಿಕೆಗಳನ್ನು ಬೆಳೆಸಿಕೊಳ್ಳುವುದು ಒಂದು ಸಮಯ ತೆಗೆದುಕೊಳ್ಳುವ ಪ್ರಕ್ರಿಯೆಯಾಗಿದೆ. ಆದರಿಂದ ನಿಮ್ಮ ಹಣಕಾಸಿನ ಗುರಿಗಳನ್ನು ಸಾಧಿಸಲು ನೀವು ತಾಳ್ಮೆಯನ್ನು ಹೊಂದಿರಬೇಕಾಗುತ್ತದೆ.
ಎಚ್ಚರಿಕೆಯ ಆರ್ಥಿಕ ವಿಧಾನ ಮತ್ತು ಉತ್ತಮ ಅಭಿವೃದ್ಧಿ ಹೊಂದಿದ ಆರ್ಥಿಕ ಯೋಜನೆಯೊಂದಿಗೆ ತುಂಬಾ ಜನ ಹೂಡಿಕೆದಾರರು ಈ ಸಾಧ್ಯತೆಯನ್ನು ಸಾಧಿಸಿದ್ದಾರೆ. ನೀವು ಕರೋಡ್ ಪತಿ ಆಗುವ ಶೋನಲ್ಲಿ ಆಟ ಆಡುತ್ತಿರಾ?

ಕೋಟ್ಯಾಧಿಪತಿಯಾಗಲು ಹೆಚ್ಚಿನ ಮಾಹಿತಿ

ಕೋಟ್ಯಾಧಿಪತಿಯಾಗಲು ಹೆಚ್ಚಿನ ಮಾಹಿತಿ

ಈ ಕೆಳಗಿನ ಲೇಖನಗಳ ಮೂಲಕ ಹೆಚ್ಚಿನ ಮಾಹಿತಿ ನೀಡಲಾಗಿದೆ. ಲಿಂಕ್ ಮೇಲೆ ಕ್ಲಿಕ್ ಮಾಡಿ.

ಕೇವಲ 10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಹೇಗೆ? ಕೇವಲ 10 ವರ್ಷಗಳಲ್ಲಿ ಕೋಟ್ಯಾಧಿಪತಿಯಾಗುವುದು ಹೇಗೆ?

ಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿಪ್ರತಿದಿನ 100 ಹೂಡಿಕೆ ಮಾಡಿ ಕೋಟ್ಯಾಧಿಪತಿ ಆಗೋದು ಹೇಗೆ? ತಪ್ಪದೆ ಓದಿ

ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ? ಕೋಟ್ಯಾಧಿಪತಿ ಆಗುವುದು ಹೇಗೆ ಗೊತ್ತೆ?

ಕೋಟ್ಯಾಧಿಪತಿಯಾಗುವುದು ಹೇಗೆ? ಇಂಥ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಹವ್ಯಾಸ ಬಿಟ್ಟುಬಿಡಿ.. ಕೋಟ್ಯಾಧಿಪತಿಯಾಗುವುದು ಹೇಗೆ? ಇಂಥ ಪ್ರಶ್ನೆ ನಿಮ್ಮಲ್ಲಿದ್ದರೆ ಈ ಹವ್ಯಾಸ ಬಿಟ್ಟುಬಿಡಿ..

ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ.. ತಿಂಗಳಿಗೊಮ್ಮೆ ಈ 7 ಕೆಲಸ ಮಾಡದಿದ್ದರೆ ಕೋಟ್ಯಾಧಿಶರಾಗಬಹುದು! ಆಶ್ಚರ್ಯವಾಯಿತಾ? ಮುಂದೆ ಓದಿ..

ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..? ಶ್ರೀಮಂತರಾಗುವವರಲ್ಲಿ ಈ ಲಕ್ಷಣಗಳು ಇರುತ್ತವೆ, ನಿಮ್ಮಲ್ಲಿ ಇವೆಯೆ ನೋಡಿ..?

English summary

How to become a Crorepati in 15 years?

The journey of becoming a ‘Crorepati’ in 15 years is not an easy one but is not impossible either. It requires a disciplined and persistent approach on your part to achieve this target.
Story first published: Friday, May 3, 2019, 10:42 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X