For Quick Alerts
ALLOW NOTIFICATIONS  
For Daily Alerts

ಉದ್ಯೋಗ ಭದ್ರತೆ ಎದುರಿಸುತ್ತಿದ್ದಿರಾ? ಬೇರೆ ನೌಕರಿ ಹುಡುಕಾಟದಲ್ಲಿದ್ದಿರಾ? ಇಲ್ಲಿ ನೋಡಿ..

ಪ್ರಸ್ತುತ ಜಗತ್ತಿನಾದ್ಯಂತ ಉದ್ಯೋಗ ಭದ್ರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈಗ ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮುಂದಿನ ವೃತ್ತಿಜೀವನ ಖಚಿತವಿಲ್ಲದಿದ್ದಾಗ ಏನು ಮಾಡಬೇಕು?

|

ಪ್ರಸ್ತುತ ಜಗತ್ತಿನಾದ್ಯಂತ ಉದ್ಯೋಗ ಭದ್ರತೆ ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಈಗ ನೀವು ಕೆಲಸ ಮಾಡುತ್ತಿರುವ ಕಂಪನಿಯಲ್ಲಿ ಮುಂದಿನ ವೃತ್ತಿಜೀವನ ಖಚಿತವಿಲ್ಲದಿದ್ದಾಗ ಏನು ಮಾಡಬೇಕು? ಈಗಿರುವ ಕೆಲಸ ಬಿಟ್ಟು ಹೊಸ ಕೆಲಸಕ್ಕೆ ಸೇರಿಕೊಳ್ಳುವ ಬಯಕೆ ನಿಮ್ಮಲ್ಲಿದ್ದರೂ ಅದನ್ನು ಹೇಗೆ ಕಾರ್ಯಗತಗೊಳಿಸಬೇಕೆಂದು ತಿಳಿಯದೆ ಗೊಂದಲದಲ್ಲಿ ಇರುವಿರಾ? ಅಥವಾ ನೀವು ಈಗ ತಾನೆ ಹೊಸದಾಗಿ ಕೆಲಸ ಸೇರಲು ಇಚ್ಛಿಸಿದ್ದು ಎಲ್ಲಿಂದ ಆರಂಭಿಸಬೇಕು ಎಂಬುದು ಅರ್ಥವಾಗದೆ ಗಲಿಬಿಲಿಗೊಂಡಿರುವಿರಾ? ಎಂಥ ಕೆಲಸಕ್ಕೆ ಸೇರಿಕೊಳ್ಳಬೇಕು ಹಾಗೂ ಅದರ ಬಗೆಗಿನ ದೂರದೃಷ್ಟಿಗಳ ಕೊರತೆಯಿಂದ ಮನಸ್ಸಿನಲ್ಲಿ ಹಲವಾರು ಗೊಂದಲಗಳು ಉಂಟಾಗುತ್ತವೆ.
ಇನ್ನು ಕೆಲವು ಬಾರಿ ಈಗಿರುವ ಕೆಲಸ ಸಾಕಪ್ಪಾ ಸಾಕು ಎನಿಸಿದ್ದರೂ ಬೇರೆ ಕಡೆ ಕೆಲಸ ಮಾಡುವುದು ಇದಕ್ಕೂ ಯಾತನಾದಾಯಕವಾಗಿದ್ದರೆ ಹೇಗೆ ಎಂಬ ಆತಂಕವೂ ಕಾಡುತ್ತದೆ. ಇಂಥ ಅಯೋಮಯ ಸ್ಥಿತಿಯಿಂದ ಹೊರಬಂದು ಹೊಸ ದಿಕ್ಕಿನಲ್ಲಿ ಆಲೋಚನೆ ಮಾಡಲು ಹೊಸ ಮಾಹಿತಿ, ಅನುಭವ ಹಾಗೂ ದೃಷ್ಟಿಕೋನಗಳ ಅವಶ್ಯಕತೆ ಇರುತ್ತದೆ. ಹೊಸದಾಗಿ ಹಾಗೂ ಪರಿಣಾಮಕಾರಿಯಾಗಿ ನಿರ್ಧಾರ ತಳೆಯಲು ಈ ಕೆಳಗೆ ತಿಳಿಸಲಾದ ಅಂಶಗಳತ್ತ ನೀವು ಗಮನ ಹರಿಸುವುದು ಅತ್ಯಗತ್ಯ.
ಹೊಸ ನೌಕರಿ ಹುಡುಕುವ ಮುನ್ನ ಈ ಸಂಗತಿಗಳನ್ನು ಗಮನಿಸಿ:

ಸಮಯಾವಕಾಶದ ಮೇಲೆ ಗಮನ ಕೇಂದ್ರೀಕರಣ

ಸಮಯಾವಕಾಶದ ಮೇಲೆ ಗಮನ ಕೇಂದ್ರೀಕರಣ

ಸೂಕ್ತ ನೌಕರಿಯ ಹುಡುಕಾಟದ ಸಂದರ್ಭದಲ್ಲಿ ಅದಕ್ಕಾಗಿ ಯಾವುದೇ ಸಮಯದ ಗಡುವು ವಿಧಿಸಿಕೊಳ್ಳದಿರುವುದು ಪ್ರಥಮ ಕ್ರಮವಾಗಿದೆ. ಮುಂದಿನ 20 ವರ್ಷಗಳ ಜೀವನದ ಬಗ್ಗೆ ಯೋಜನೆ ರೂಪಿಸುವಾಗ ಎಲ್ಲ ವಿಷಯಗಳ ಬಗ್ಗೆ ಸಿದ್ಧ ಉತ್ತರಗಳು ಸಿಗಲಾರವು. ಹೀಗಾಗಿ ಇಷ್ಟೇ ದಿನಗಳಲ್ಲಿ ಹೊಸ ನೌಕರಿ ಬೇಕು ಎಂಬ ಗಡುವನ್ನು ಮನಸ್ಸಿನಿಂದ ದೂರ ಮಾಡಿದಲ್ಲಿ ವಿಶಾಲ ದೃಷ್ಟಿಕೋನದಿಂದ ವಿಚಾರ ಮಾಡಲು ಸಾಧ್ಯವಾಗುತ್ತದೆ.

ಸ್ವಯಂ ಗಮನ ಕೇಂದ್ರೀಕರಣ

ಸ್ವಯಂ ಗಮನ ಕೇಂದ್ರೀಕರಣ

ಈಗ ನಿಮ್ಮ ಮೇಲೆ ನೀವು ಒಂದಿಷ್ಟು ಗಮನಹರಿಸಿ. ಹೊಸ ನೌಕರಿ ಹುಡುಕುವಾಗ ನನ್ನ ಬಳಿ ಅಷ್ಟೊಂದು ಶಿಕ್ಷಣವಿಲ್ಲ, ಯಾರೂ ಶಿಫಾರಸು ಮಾಡುವರಿಲ್ಲ, ದುಡ್ಡಿಲ್ಲ ಎಂದಾಗಲೀ ಅಥವಾ ಸ್ವಂತದ ಇನ್ನಾವುದೋ ಸಮಸ್ಯೆಗಳನ್ನು ಮುಂದೆ ಮಾಡಿಕೊಂಡು ನಿರಾಶರಾಗಬೇಕಿಲ್ಲ. ಇವೆಲ್ಲ ತಾತ್ಕಾಲಿಕ ಸಮಸ್ಯೆಗಳಾಗಿದ್ದು ಇವುಗಳ ಸುತ್ತಮುತ್ತಲಿನಲ್ಲಿಯೇ ನೀವು ಚಿಂತಿಸುತ್ತಿದ್ದರೆ ವಾಸ್ತವಿಕ ಜೀವನದಲ್ಲಿ ಸಾಧಿಸಬಹುದಾದ ಏನೋ ದೊಡ್ಡದನ್ನು ತಪ್ಪಿಸಿಕೊಳ್ಳುವುದು ಖಂಡಿತ.
ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಮೊದಲಿಗೆ ವಿಶಾಲವಾಗಿ ಚಿಂತನೆ ನಡೆಸಿ ಹಾಗೂ ಹೊಸದೇನನ್ನಾದರೂ ಕಲಿಯಲು ಯತ್ನಿಸಿ. ಹೊಸ ವಿಷಯಗಳ ಕಲಿಕೆಗೆ ಒಂದಿಷ್ಟು ಖರ್ಚು ಮಾಡಿ, ಹೊಸಬರ ಪರಿಚಯ ಮಾಡಿಕೊಳ್ಳಿ ಹಾಗೂ ಹೊಸ ಯೋಜನೆಗಳನ್ನು ರೂಪಿಸಿ ಅವನ್ನು ಕಾರ್ಯಗತಗೊಳಿಸಲು ಯತ್ನಿಸಿ. ಈ ಮುನ್ನ ರಿಸ್ಕ್ ಎನಿಸಿದ ಕಾರಣದಿಂದ ನೀವು ಹಿಂದೆ ಸರಿದ ಅವಕಾಶಗಳನ್ನು ಪುನಃ ಪರಿಶೀಲನೆ ಮಾಡಿ. ಹೆಚ್ಚೆಚ್ಚು ಪ್ರಯಾಣ ಮಾಡುತ್ತ ಅನುಭವ ಹೆಚ್ಚಿಸಿಕೊಳ್ಳಿ. ಹೊಸ ವ್ಯವಹಾರ ಆರಂಭಿಸಲು ಯತ್ನಿಸಿ. ನಿಮಗೆ ಇಷ್ಟವಾದ ಕ್ಷೇತ್ರದಲ್ಲಿ ಎನ್‌ಜಿಓ ಸಂಸ್ಥೆಗಳೊಂದಿಗೆ ಸ್ವಯಂ ಸೇವಾ ಕಾರ್ಯಕರ್ತನಾಗಿ ಕೆಲಸ ಮಾಡುತ್ತ ಅನುಭವ ಹೆಚ್ಚಿಸಿಕೊಳ್ಳಿ.

ಯಾವ ರೀತಿಯ ನೌಕರಿ ನನಗೆ ಬೇಕಿದೆ?

ಯಾವ ರೀತಿಯ ನೌಕರಿ ನನಗೆ ಬೇಕಿದೆ?

ಸಾಮಾನ್ಯವಾಗಿ ಕೆಲಸದಲ್ಲಿ ನೀಡಲಾದ ಹುದ್ದೆಯ ಹೆಸರಿಗೂ ಮಾಡುವ ಕೆಲಸಕ್ಕೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಹೀಗಾಗಿ ಹೊಸ ಕೆಲಸ ಹುಡುಕುವಾಗ ಬರೀ ಹುದ್ದೆಯ ಹೆಸರನ್ನು ಮಾತ್ರ ಪರಿಗಣಿಸಿದಲ್ಲಿ ಕೆಲವೊಮ್ಮೆ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವ ಸಂದರ್ಭಗಳೂ ಬರಬಹುದು.
ಉದಾಹರಣೆಗೆ ನೋಡುವುದಾದರೆ, ಸೇಲ್ಸ್ ಪರ್ಸನ್ ಎಂಬುದು ಅದೆಷ್ಟೋ ಅರ್ಥಗಳನ್ನು ನೀಡುತ್ತದೆ. ಟೆಲಿಫೋನ್ ಮೂಲಕ ಮಾರಾಟ ಮಾಡುವುದು, ನೇರವಾಗಿ ಮಾರಾಟ ಮಾಡುವುದು, ವ್ಯಕ್ತಿಗಳನ್ನು ಭೇಟಿಯಾಗಿ ಮಾರುವುದು, ಕಂಪನಿಗಳಿಗೆ ಹೋಗಿ ಮಾರುವುದು ಹೀಗೆ ಏನಾದರೂ ಇರಬಹುದು. ಹಾಗೆಯೇ ಚಿಕ್ಕ ಪುಟ್ಟ ವಸ್ತುಗಳನ್ನು ಮಾರುವುದಿರಬಹುದು ಅಥವಾ ವರ್ಷಕ್ಕೊಮ್ಮೆ ಅಥವಾ ಎರಡು ಬಾರಿ ದೊಡ್ಡ ಮೊತ್ತದ ವಸ್ತುಗಳನ್ನು ಮಾರಾಟ ಮಾಡುವುದು ಸಹ ಈ ಸೇಲ್ಸ್ ಪರ್ಸನ್ ಹುದ್ದೆ ಒಳಗೊಂಡಿರಬಹುದಾಗಿದೆ. ಹೊಸ ರೀತಿಯ ಜವಾಬ್ದಾರಿಗಳ ಬಗ್ಗೆ ನಿಮಗೆ ಹಿಂಜರಿಕೆ ಇದ್ದಲ್ಲಿ ಈಗಾಗಲೇ ಇಂಥ ಜವಾಬ್ದಾರಿಯುತ ಸ್ಥಾನಗಳಲ್ಲಿ ಇರುವವರ ಬಳಿ ವಿಚಾರಿಸಿ ಅದರ ಬಗ್ಗೆ ತಿಳಿದುಕೊಳ್ಳಿ.

ನಾನೇನು ಮಾಡಬಲ್ಲೆ?

ನಾನೇನು ಮಾಡಬಲ್ಲೆ?

ನಾನು ಯಾವ ರೀತಿಯ ಕೆಲಸ ಮಾಡಬಲ್ಲೆ ಎಂಬುದರ ಮೇಲೆ ನೌಕರಿ ಹುಡುಕುವುದು ಮತ್ತೊಂದು ಉತ್ತಮ ಮಾರ್ಗವಾಗಿದೆ. ಹೊಸ ಕಂಪನಿಗೆ ಸೇರಿ ಆ ಕಂಪನಿಯ ವ್ಯವಹಾರ ವೃದ್ಧಿಗೆ, ಅದರ ಗ್ರಾಹಕರ ಸೇವೆಗೆ, ಅಲ್ಲಿನ ಉದ್ಯೋಗಿಗಳ ಹಿತಕ್ಕಾಗಿ ನೀವು ಏನು ವಿಶೇಷವಾದುದನ್ನು ಮಾಡಬಲ್ಲಿರಿ ಎಂಬುದರ ಬಗ್ಗೆ ಗಮನಹರಿಸಿ. ಹೀಗೆ ನೀವು ಏನು ಮಾಡಬಲ್ಲಿರಿ ಎಂಬುದರ ಬಗ್ಗೆ ಕೇಂದ್ರೀಕೃತರಾದಲ್ಲಿ ನಿಮ್ಮಲ್ಲಿನ ಚೈತನ್ಯ ಹೆಚ್ಚಳಗೊಂಡು ಸೂಕ್ತವಾದ ನೌಕರಿ ಹುಡುಕಾಟದ ಮಾರ್ಗ ಸುಗಮವಾಗುತ್ತದೆ.

ಗುರಿಯ ಮೇಲೆ ಗಮನ ಕೇಂದ್ರೀಕರಿಸುವುದು

ಗುರಿಯ ಮೇಲೆ ಗಮನ ಕೇಂದ್ರೀಕರಿಸುವುದು

ಭವಿಷ್ಯದಲ್ಲಿ ಏನು ಮಾಡುವುದು ಎಂಬ ಬಗ್ಗೆ ನಿಖರತೆ ಇರದಿದ್ದಲ್ಲಿ ಕೌಶಲಗಳ ಬಗ್ಗೆ ವಿಚಾರ ಮಾಡುವುದನ್ನು ಬಿಟ್ಟುಬಿಡಿ. ಇದರ ಬದಲು ಖಚಿತ ಗುರಿಯನ್ನು ನಿಮಗೆ ನೀವೇ ನಿಗದಿ ಮಾಡಿಕೊಳ್ಳಿ. ಬಹುತೇಕ ಸಂದರ್ಭಗಳಲ್ಲಿ ಹಲವಾರು ಕೌಶಲಗಳ ಕಾರಣದಿಂದಲೇ ಯಶಸ್ವಿ ಭವಿಷ್ಯ ಕಟ್ಟಿಕೊಳ್ಳುವುದು ಸಾಧ್ಯವಾಗುತ್ತದೆ. ಒಬ್ಬ ಸಾಫ್ಟವೇರ್ ಎಂಜಿನಿಯರ್ ಕೋಡಿಂಗ್, ಟೀಂ ಕಟ್ಟುವುದು, ಉತ್ಪನ್ನಗಳನ್ನು ಮಾರಾಟ ಮಾಡುವುದು ಹಾಗೂ ಆಧುನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳ್ಳುವುದು ಹೀಗೆ ಹಲವಾರು ವಿಷಯಗಳಲ್ಲಿ ನೈಪುಣ್ಯತೆ ಸಾಧಿಸಿರಬೇಕಾಗುತ್ತದೆ. ಹಾಗೆಯೇ ನವೋದ್ಯಮಿಯೊಬ್ಬ ಯಶಸ್ವಿಯಾಗಬೇಕಾದಲ್ಲಿ ಅದೆಷ್ಟೋ ವರ್ಷಗಳ ಕಾಲ ಹೊಸದನ್ನು ಕಲಿಯುತ್ತಲೇ ಮುಂದೆ ಸಾಗಬೇಕಾಗುತ್ತದೆ.
ಬರುವ ಕೆಲ ವರ್ಷಗಳಲ್ಲಿ ಏನು ಸಾಧಿಸಬೇಕೆಂಬುದನ್ನು ನಿರ್ಧರಿಸಿದಲ್ಲಿ ಭವಿಷ್ಯದಲ್ಲಿ ಏನು ಮಾಡಬೇಕೆಂಬ ಬಗ್ಗೆ ಹಲವಾರು ದಾರಿಗಳು ತಾನಾಗಿಯೇ ತೆರೆದುಕೊಳ್ಳುತ್ತವೆ. ಹೀಗೆ ಒಂದು ಬಾರಿ ಗುರಿಯನ್ನು ನಿರ್ಧರಿಸಿದ ನಂತರ ನಿಮ್ಮ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಮುಂದಾಗಿ. ಒಂದು ಬಾರಿಗೆ ಒಂದು ಕೌಶಲ ವೃದ್ಧಿಗೆ ಮಾತ್ರ ಗಮನಹರಿಸಿ. ಆದರೆ ಗುರಿ ಹಾಕಿಕೊಳ್ಳುವಾಗ ಅದು ಕೆಲಸಕ್ಕೆ ಸಂಬಂಧಿಸಿದ್ದಾಗಿರಬೇಕೆ ಹೊರತು ಕೆಲಸದಿಂದ ಬರುವ ಪ್ರತಿಫಲದ ಮೇಲೆ ಅವಲಂಬಿಸಿರಬಾರದು.

ಯಾರ ಜೊತೆ ಕೆಲಸ ಮಾಡುವುದು?

ಯಾರ ಜೊತೆ ಕೆಲಸ ಮಾಡುವುದು?

ಯಾವ ಕೆಲಸ ಮಾಡುವುದು ಎಂಬುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ಯಾರ ಜೊತೆಗೆ ಕೆಲಸ ಮಾಡುವುದು ಎಂಬ ಬಗ್ಗೆ ಆಲೋಚಿಸುವುದು ಕೂಡ ಹೊಸ ನೌಕರಿಯ ಹುಡುಕಾಟದಲ್ಲಿ ಸಾಕಷ್ಟು ಮಾರ್ಗಗಳನ್ನು ತೋರಬಲ್ಲದು. ನಿಮ್ಮ ವಲಯದಲ್ಲಿಯೇ ಇರುವ ಹೆಸರು ಮಾಡಿರುವ ವ್ಯಕ್ತಿ ಅಥವಾ ಸಮಾಜದಲ್ಲಿ ಮನ್ನಣೆ ಪಡೆದ ವ್ಯಕ್ತಿಗಳೊಂದಿಗೆ ಕೆಲಸ ಮಾಡುವ ಬಗ್ಗೆ ಚಿಂತಿಸಬಹುದು. ಉತ್ತಮ ಹಾಗೂ ಯಶಸ್ವಿ ಬಾಸ್ ನೊಂದಿಗೆ ಕೆಲಸ ಮಾಡುವುದರಿಂದ ನಿಮ್ಮ ಕೌಶಲಗಳು ಅಭಿವೃದ್ಧಿಗೊಳ್ಳುತ್ತವೆ ಹಾಗೂ ಕಡಿಮೆ ಅವಧಿಯಲ್ಲಿಯೇ ಸಾಕಷ್ಟು ಹೊಸ ಸಂಗತಿಗಳನ್ನು ಕಲಿಯಬಹುದಾಗಿದೆ. ಹೀಗೆ ಹೊಸ ಕಲಿಕೆಯನ್ನು ನಿಮ್ಮದಾಗಿಸಿಕೊಂಡಾಗ ಸಹಜವಾಗಿಯೇ ಉತ್ತಮವಾದುದನ್ನು ಸಾಧಿಸಬಹುದಾಗಿದೆ.

ಜೀವನದ ಮೇಲೆ ಗಮನ ಕೇಂದ್ರೀಕರಿಸುವಿಕೆ

ಜೀವನದ ಮೇಲೆ ಗಮನ ಕೇಂದ್ರೀಕರಿಸುವಿಕೆ

ಹೊಸ ನೌಕರಿ ಹುಡುಕುವ ಮುನ್ನ ಒಂದು ಕ್ಷಣ ನಿಮ್ಮ ಜೀವನದ ಇತರ ಭಾಗಗಳತ್ತ ಗಮನಹರಿಸಿ. ಜೀವನದಲ್ಲಿನ ಇತರ ಅಂಶಗಳು ಸಮತೋಲಿತವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನೀವು ಕೇವಲ ಕಂಪನಿಯ ನೌಕರ ಮಾತ್ರವಲ್ಲ ಯಾರಿಗೋ ಗೆಳೆಯನಾಗಿರುವಿರಿ, ಕುಟುಂಬದ ಸದಸ್ಯನಾಗಿರುವಿರಿ ಹಾಗೂ ಸಮಾಜದಲ್ಲಿ ನಿಮ್ಮದೇ ಆದ ಸ್ಥಾನಮಾನವನ್ನೂ ಹೊಂದಿರುವಿರಿ.
ಹೀಗಾಗಿ ಹೊಸ ನೌಕರಿ ಹುಡುಕುವಾಗ ಜೀವನದ ಇತರ ಅಂಶಗಳ ಮೇಲೆ ವ್ಯತಿರಿಕ್ತ ಪರಿಣಾಮವಾಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇತರ ಎಲ್ಲ ವಿಷಯಗಳಲ್ಲಿ ಯಾವಾಗಲೂ ತೊಡಗಿಸಿಕೊಂಡೇ ಹೊಸ ನೌಕರಿಯ ಬಗ್ಗೆ ಪ್ರಯತ್ನಿಸಿ. ನಿಮ್ಮ ಗೆಳೆಯರು, ಸಂಬಂಧಿಕರು ಹಾಗೂ ಸಮಾಜದಲ್ಲಿನ ಪರಿಚಯಸ್ಥರ ಸಹಾಯದಿಂದ ಹೊಸ ನೌಕರಿ ಹುಡುಕಲು ಯತ್ನಿಸಿ. ಹೀಗೆ ಮಾಡಿದಾಗ ಸಾಕಷ್ಟು ಅವಕಾಶಗಳು ತೆರೆದುಕೊಂಡು ಉತ್ತಮವಾದ ದಾರಿಯನ್ನು ಆಯ್ದುಕೊಳ್ಳಲು ಸಾಧ್ಯವಾಗುತ್ತದೆ.

ಆರಂಭಿಸಿದ್ದನ್ನು ಮುಗಿಸುವತ್ತ ಗಮನ ಕೇಂದ್ರೀಕರಿಸುವಿಕೆ

ಆರಂಭಿಸಿದ್ದನ್ನು ಮುಗಿಸುವತ್ತ ಗಮನ ಕೇಂದ್ರೀಕರಿಸುವಿಕೆ

ಹೊಸ ನೌಕರಿಯನ್ನು ಹುಡುಕುವಾಗ ನೀವು ಏನು ಮಾಡಲು ಆರಂಭಿಸಿರುವಿರೋ ಅದನ್ನು ಮುಗಿಸುವತ್ತ ಗಮನಹರಿಸಬೇಕಾಗುತ್ತದೆ. ಉದಾಹರಣೆಗೆ ನೀವು ಒಂದೆರಡು ತಿಂಗಳ ಇಂಟರ್ನಶಿಪ್ ಮಾಡುತ್ತಿದ್ದಲ್ಲಿ ಅದನ್ನು ಮುಗಿಸುವತ್ತ ಗಮನಹರಿಸಿ. ಕಂಪನಿಯಲ್ಲಿ ಸಣ್ಣ ಪ್ರೊಜೆಕ್ಟ್ ಮೇಲೆ ಕೆಲಸ ಮಾಡುತ್ತಿದ್ದಲ್ಲಿ ಅದನ್ನು ಮೊದಲು ಪೂರ್ಣಗೊಳಿಸಿ. ಹಿಡಿದ ಕೆಲಸವನ್ನು ಪೂರ್ಣಗೊಳಿಸಿದಾಗಲೇ ಹೊಸ ಕಲಿಕೆ ನಿಮ್ಮದಾಗಲು ಸಾಧ್ಯವಾಗುತ್ತದೆ. ಹಿಡಿದ ಯೋಜನೆಗಳನ್ನು ಅರ್ಧದಲ್ಲಿಯೇ ಬಿಟ್ಟರೆ ಆತ್ಮವಿಶ್ವಾಸಕ್ಕೆ ಕುಂದು ಬರುವ ಸಾಧ್ಯತೆ ಇರುತ್ತದೆ. ಇದರಿಂದ ಹೊಸ ಭವಿಷ್ಯದ ಹುಡುಕಾಟಕ್ಕೆ ಅಡ್ಡಿಯೂ ಆಗಬಹುದು.

ಕೆಲಸ ಬದಲಾಯಿಸಲು ಕಾರಣಗಳು

ಕೆಲಸ ಬದಲಾಯಿಸಲು ಕಾರಣಗಳು

1. ಬಾಸ್
ಬಹುತೇಕ ಸಂದರ್ಭಗಳಲ್ಲಿ ಇರುವ ಕೆಲಸ ಬಿಟ್ಟು ಹೊಸ ಕೆಲಸ ಹುಡುಕಲು ಕೆಟ್ಟ ಬಾಸ್/ಮ್ಯಾನೆಜರ್ ಕಾರಣಕರ್ತನಾಗಿರುತ್ತಾನೆ. ನಿಮ್ಮದೂ ಇದೇ ಕಾರಣವಿದ್ದರೆ ಮೊದಲು ಹೊಸ ಕಂಪನಿಯ ಬಗ್ಗೆ ಸಾಕಷ್ಟು ರಿಸರ್ಚ್ ಮಾಡಿ ಹಾಗೂ ಅಲ್ಲಿನ ಬಾಸ್, ನೌಕರರ ಬಗ್ಗೆ ತಿಳಿದುಕೊಳ್ಳಿ.

2. ವಾತಾವರಣ

2. ವಾತಾವರಣ

ಕಂಪನಿಯಲ್ಲಿ ಕೆಲಸ ಮಾಡುವ ವಾತಾವರಣ ಸರಿಯಾಗಿಲ್ಲದಿರಬಹುದು. ಯಾವಾಗ ಯಾರು ಏನನ್ನುವರೋ, ಯಾವ ಕ್ಷಣದಲ್ಲಿ ಕೆಲಸ ಹೋಗಬಹುದು ಎಂಬ ಭೀತಿಯಲ್ಲಿ ಎಲ್ಲರೂ ಕೆಲಸ ಮಾಡುತ್ತಿದ್ದಲ್ಲಿ ಆದಷ್ಟು ಬೇಗ ಒಳ್ಳೆಯ ಬಾಸ್ ಇರುವ ಉತ್ತಮ ಕೆಲಸದ ವಾತಾವರಣದ ಕಂಪನಿಯನ್ನು ಹುಡುಕಾಡಲು ಆರಂಭಿಸಿ.

3. ಉದ್ಯಮ

3. ಉದ್ಯಮ

ನೀವು ನಿಮಗೆ ಸರಿಹೊಂದದ ಉದ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವಿರಾ? ಉದಾಹರಣೆಗೆ ನೀವು ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರೂ ನಿಮ್ಮ ಕೌಶಲ್ಯಕ್ಕೆ ತಕ್ಕ ಪ್ರೊಜೆಕ್ಟ್‌ಗಳನ್ನು ಕಂಪನಿಯು ನಿಮಗೆ ನೀಡದೆ ಇರಬಹುದು. ಹೀಗಾದಾಗ ನಿಮ್ಮ ಕೌಶಲ್ಯಕ್ಕೆ ತಕ್ಕುನಾದ ಕಂಪನಿಗಳನ್ನು ಹುಡುಕಿ ಹೊಸ ಕೆಲಸಕ್ಕೆ ಪ್ರಯತ್ನಿಸಿ.

4. ಕಾರ್ಯನಿರ್ವಹಣೆ

4. ಕಾರ್ಯನಿರ್ವಹಣೆ

ಈಗಿರುವ ಸೀಮಿತ ಕೌಶಲ್ಯಗಳಿಂದ ಅತಿಯಾದ ಕೆಲಸದ ಒತ್ತಡ ನಿಮ್ಮ ಮೇಲೆ ಬೀಳುತ್ತಿದೆಯೆ ಎಂಬುದನ್ನು ಗಮನಿಸಿ. ಉದಾಹರಣೆಗೆ ನೀವು ಕಸ್ಟಮರ್ ಕೇರ್ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದು ಅದನ್ನು ಇಷ್ಟ ಪಡದೇ ಇದ್ದಲ್ಲಿ ನಿಮ್ಮ ಸಂವಹನ ಕೌಶಲಗಳನ್ನು ವೃದ್ಧಿಸಿಕೊಳ್ಳಲು ಯತ್ನಿಸಿ. ಅಷ್ಟೇ ಏಕೆ ಸಾಧ್ಯವಾದಲ್ಲಿ ಐಟಿ ಅಥವಾ ಐಟಿ ಸೇಲ್ಸ್ ವಿಭಾಗ ಸೇರಿಕೊಳ್ಳಲು ಬೇಕಾದ ತಯಾರಿ ಆರಂಭಿಸಿ. ಅಂದರೆ ಕ್ಷೇತ್ರ ಬದಲಾಯಿಸಲು ಹಿಂಜರಿಕೆ ಬೇಕಾಗಿಲ್ಲ.

5. ಕಡಿಮೆ ಆದಾಯ

5. ಕಡಿಮೆ ಆದಾಯ

ನೀವು ಮಾಡುತ್ತಿರುವ ಕೆಲಸ ಹಾಗೂ ಕಂಪನಿಯ ಬಗ್ಗೆ ಸಾಕಷ್ಟು ತೃಪ್ತಿ ಇರಬಹುದು. ಆದರೆ ಮಾಡಿದ ಕೆಲಸಕ್ಕೆ ತಿಂಗಳ ಕೊನೆಗೆ ಸಿಗುವ ಸಂಬಳ ತೀರಾ ಕಡಿಮೆಯಾಗುತ್ತಿದೆ ಅನಿಸುತ್ತಿದ್ದರೆ ಬೇರೆ ಕಂಪನಿಯಲ್ಲಿ ಸೇರಲು ಆಲೋಚನೆ ಮಾಡಲೇಬೇಕಾಗುತ್ತದೆ. ಕಡಿಮೆ ಒತ್ತಡ ಹಾಗೂ ಹೆಚ್ಚು ಆದಾಯ ತರುವ ಕೆಲಸಗಳ ಬಗ್ಗೆ ಹುಡುಕಾಟ ಆರಂಭಿಸುವುದು ಸೂಕ್ತ.
(ಲೇಖಕರು Quezx.com ಮತ್ತು Headhonchos.com ಗಳ ಸಂಸ್ಥಾಪಕ ಹಾಗೂ ಸಿಇಓ ಆಗಿದ್ದಾರೆ.)
(ಸೂಚನೆ: ಈ ಅಂಕಣದಲ್ಲಿ ತಿಳಿಸಲಾದ ಅಭಿಪ್ರಾಯಗಳು ಅಂಕಣ ಬರೆದ ಲೇಖಕರ ಅಭಿಪ್ರಾಯಗಳೇ ಆಗಿರುತ್ತವೆ. ಇದರಲ್ಲಿನ ವಸ್ತುನಿಷ್ಠತೆ ಹಾಗೂ ಅಭಿಪ್ರಾಯಗಳಿಗೆ kannada.goodreturns.in ಬಾಧ್ಯಸ್ಥನಾಗಿರುವುದಿಲ್ಲ.)

English summary

How to change jobs? Must know these things before finding a new Job

Are you planning to quit your job but have no clue about your next move? Or are you a fresher with no idea about where to start.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X