For Quick Alerts
ALLOW NOTIFICATIONS  
For Daily Alerts

ದೀರ್ಘಾವಧಿಗಾಗಿ ಪ್ರತಿ ತಿಂಗಳು 5 ಸಾವಿರ ಹೂಡಿಕೆ ಮಾಡುವ ವಿಧಾನ ಹೇಗೆ?

ದೀರ್ಘಾವಧಿಯಯಲ್ಲಿ ಹೂಡಿಕೆ ಮಾಡುವುದಾದಲ್ಲಿ ಶಿಸ್ತುಬದ್ಧವಾಗಿ ಕಾರ್ಯಯೋಜನೆಯ ಪ್ರಕಾರ ಹೂಡಿಕೆ ಮಾಡಬೇಕಾಗುತ್ತದೆ. ರಿಸ್ಕ್ ಅಥವಾ ಅಪಾಯವನ್ನು ತಡೆದುಕೊಳ್ಳುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಫಂಡ್‌ಗಳನ್ನು ಆಯ್ದುಕೊಳ್ಳಬೇಕು.

|

ನಮ್ಮಲ್ಲಿ ಹೆಚ್ಚಿನ ಜನರು ತಮ್ಮ ತಮ್ಮ ವಯಸ್ಸು, ಆದಾಯ, ಸಂಬಳಕ್ಕೆ ಅನುಗುಣವಾಗಿ ಪ್ರತಿತಿಂಗಳು ಒಂದಿಷ್ಟು ಮೊತ್ತವನ್ನು ಉಳಿತಾಯ ಮಾಡಲು ಇಲ್ಲವೇ ಹೂಡಿಕೆ ಮಾಡಲು ಬಯಸುತ್ತಾರೆ.
ನೀವು 29 ವರ್ಷ ವಯಸ್ಸಿನವರಾಗಿದ್ದು ಪ್ರತಿ ತಿಂಗಳು ರೂ. 5 ಸಾವಿರಗಳಂತೆ ದೀರ್ಘಾವಧಿಯವರೆಗೆ ಹೂಡಿಕೆ ಮಾಡಲು ಬಯಸಿದಲ್ಲಿ ಅದನ್ನು ಹೇಗೆ ಸಾಧಿಸುವುದು?
ದೀರ್ಘಾವಧಿಯಯಲ್ಲಿ ಹೂಡಿಕೆ ಮಾಡುವುದಾದಲ್ಲಿ ಶಿಸ್ತುಬದ್ಧವಾಗಿ ಕಾರ್ಯಯೋಜನೆಯ ಪ್ರಕಾರ ಹೂಡಿಕೆ ಮಾಡಬೇಕಾಗುತ್ತದೆ. ರಿಸ್ಕ್ ಅಥವಾ ಅಪಾಯವನ್ನು ತಡೆದುಕೊಳ್ಳುವ ವ್ಯಕ್ತಿಯ ಸಾಮರ್ಥ್ಯದ ಮೇಲೆ ಫಂಡ್‌ಗಳನ್ನು ಆಯ್ದುಕೊಳ್ಳಬೇಕು. ಒಟ್ಟಾರೆ ಹೂಡಿಕೆಯನ್ನು ಮಲ್ಟಿ ಕ್ಯಾಪ್ ಸ್ಕೀಂ ಹಾಗೂ ಲಾರ್ಜ್ ಕ್ಯಾಪ್ ಸ್ಕೀಂ ಗಳ ಮಧ್ಯೆ ಸರಿಯಾಗಿ ಬ್ಯಾಲೆನ್ಸ್ ಮಾಡಬೇಕು.

 

ಈ ಕೆಳಗಿನ ಸ್ಕೀಂಗಳ ಬಗ್ಗೆ ತಿಳಿಯಿರಿ

ಈ ಕೆಳಗಿನ ಸ್ಕೀಂಗಳ ಬಗ್ಗೆ ತಿಳಿಯಿರಿ

- ಮಹೀಂದ್ರಾ ಮ್ಯೂಚುವಲ್ ಫಂಡ್ ಬಢತ್ ಯೋಜನಾ
- ಮೋತಿಲಾಲ್ ಓಸ್ವಾಲ್ ಮಲ್ಟಿಕ್ಯಾಪ್ 35
- ಡಿಎಸ್‌ಪಿ ಮಿಡ್ ಕ್ಯಾಪ್
- ರಿಲಯನ್ಸ್ ಲಾರ್ಜ್ ಕ್ಯಾಪ್
- ಮಿರಾ ಅಸೆಟ್ ಲಾರ್ಜ್ ಕ್ಯಾಪ್
ಆರಂಭಿಕವಾಗಿ 5 ಸಾವಿರ ರೂ.ಗಳ ಹೂಡಿಕೆಯು ಸೂಕ್ತವಾಗಿದ್ದು, ಪ್ರತಿವರ್ಷ ಅದನ್ನು ಶೇ. 10 ರಷ್ಟು ಹೆಚ್ಚಿಸುತ್ತ ಹೋಗಬೇಕು. ವರ್ಷಕ್ಕೊಮ್ಮೆ ನೀವು ಆಯ್ದುಕೊಂಡ ಫಂಡ್‌ಗಳು ಯಾವ ರೀತಿ ಪ್ರತಿಫಲ ನೀಡುತ್ತಿವೆ ಎಂಬುದನ್ನು ಪರಿಶೀಲಿಸಬೇಕು ಹಾಗೂ ಅವಧಿ ಕೊನೆಯಾಗುತ್ತ ಬರುವಾಗ ಅವಶ್ಯಕತೆ ಕಂಡಲ್ಲಿ ಹೂಡಿಕೆಯನ್ನು ಇಕ್ವಿಟಿಯಿಂದ ಡೆಬ್ಟ್ ಗೆ ವರ್ಗಾಯಿಸಬೇಕಾಗುತ್ತದೆ ಎಂದು ಮೈ ಮನೀ ಮಂತ್ರಾ ಡಾಟ್ ಕಾಂ ಸಂಸ್ಥಾಪಕ ಹಾಗೂ ಎಂಡಿ ರಾಜ ಖೋಸ್ಲಾ ಹೇಳುತ್ತಾರೆ.

ಹೂಡಿಕೆಯ ಮತ್ತಷ್ಟು ವಿಧಾನಗಳು
 

ಹೂಡಿಕೆಯ ಮತ್ತಷ್ಟು ವಿಧಾನಗಳು

27 ವರ್ಷದ ವ್ಯಕ್ತಿಯೊಬ್ಬ ತಾನು 50 ವರ್ಷ ವಯಸ್ಸಿಗೆ ತಲುಪುವ ಸಂದರ್ಭದಲ್ಲಿ ರೂ. 5 ಕೋಟಿ ಸಂಗ್ರಹಿಸಬೇಕೆಂದು ಗುರಿ ಹಾಕಿಕೊಂಡಿದ್ದಲ್ಲಿ ಅದರ ಸಾಧ್ಯತೆಗಳನ್ನು ನೋಡೋಣ. 27 ವರ್ಷದ ವ್ಯಕ್ತಿಯು ಮಾಸಿಕ ಸಿಪ್ ಯೋಜನೆಯಡಿ ಎಲ್ ಆಂಡ್ ಟಿ ಮಿಡ್ ಕ್ಯಾಪ್, ಮಿರಾ ಅಸೆಟ್ ಇಂಡಿಯಾ ಇಕ್ವಿಟಿ ಹಾಗೂ ಎಸ್‌ಬಿಐ ಬ್ಲ್ಯೂ ಚಿಪ್ ಫಂಡ್‌ಗಳಲ್ಲಿ ತಲಾ 10 ಸಾವಿರಗಳಂತೆ ಮತ್ತು ರಿಲಯನ್ಸ್ ಟ್ಯಾಕ್ಸ್ ಸೇವರ್, ಫ್ರಾಂಕ್ಲಿನ್ ಇಂಡಿಯಾ ಟ್ಯಾಕ್ಸ್ ಶೀಲ್ಡ್, ಡಿಎಸ್‌ಪಿ ಬ್ಲ್ಯಾಕ್ ರಾಕ್ ಟ್ಯಾಕ್ಸ್ ಸೇವರ್, ಎಲ್ ಆಂಡ್ ಟಿ ಅಡ್ವಾಂಟೇಜ್, ಆದಿತ್ಯ ಬಿರ್ಲಾ ಎಸ್‌ಎಲ್ ಟ್ಯಾಕ್ಸ್ ರಿಲೀಫ್ 96, ಆದಿತ್ಯ ಬಿರ್ಲಾ ಎಸ್ ಎಲ್ ಇಕ್ವಿಟಿ ಹಾಗೂ ಸುಂದರಂ ಮಿಡ್ ಕ್ಯಾಪ್‌ಗಳಲ್ಲಿ ತಲಾ 2,500 ರೂಪಾಯಿಗಳಂತೆ ಹೂಡಿಕೆ ಮಾಡುತ್ತಿದ್ದಲ್ಲಿ ಗಳಿಸಬಹುದಾದ ಮೊತ್ತ ಎಷ್ಟು ಎಂಬುದನ್ನು ತಿಳಿದುಕೊಳ್ಳೋಣ.
ದೀರ್ಘಾವಧಿ ಹೂಡಿಕೆ ಯೋಜನೆಯಲ್ಲಿ ವಾರ್ಷಿಕ ಶೇ. 12 ರಷ್ಟು ಪ್ರತಿಫಲದ ನಿರೀಕ್ಷೆ ಇಟ್ಟುಕೊಂಡಲ್ಲಿ 5 ಕೋಟಿ ರೂ. ಮೊತ್ತ ಸಂಗ್ರಹಿಸಲು ಮಾಸಿಕವಾಗಿ 35 ಸಾವಿರ ಹೂಡಿಕೆಯು ಸಾಕಾಗುತ್ತದೆ. ಆದರೆ ಮೇಲಿನ ಉದಾಹರಣೆಯಲ್ಲಿ ಈಗಾಗಲೇ ಮಾಸಿಕವಾಗಿ 47,500 ರೂ.ಗಳನ್ನು ಮಾಸಿಕವಾಗಿ ಹೂಡಿಕೆ ಮಾಡಲಾಗುತ್ತಿದ್ದು ಅದರಲ್ಲಿ 12,500 ರೂ.ಗಳನ್ನು 5 ಟ್ಯಾಕ್ಸ್ ಸೇವಿಂಗ್ ಫಂಡ್‌ಗಳಲ್ಲಿ ಹೂಡಲಾಗುತ್ತಿದೆ. ಇದು ವಾರ್ಷಿಕವಾಗಿ 1.5 ಲಕ್ಷ ರೂ.ಗಳಾಗುತ್ತದೆ. ಇದನ್ನು ಸೂಕ್ಷ್ಮವಾಗಿ ಅಭ್ಯಾಸ ಮಾಡಿದಲ್ಲಿ ಮೇಲಿನ ಪೋರ್ಟಫೋಲಿಯೋದಲ್ಲಿ 10 ಸ್ಕೀಂಗಳ ಅವಶ್ಯಕತೆ ಕಂಡು ಬರುವುದಿಲ್ಲ. 2 ಲಾರ್ಜ್ ಕ್ಯಾಪ್ ಫಂಡ್, 2 ಮಿಡ್ ಕ್ಯಾಪ್ ಫಂಡ್, 5 ಇಎಲ್‌ಎಸ್‌ಎಸ್ ಹಾಗೂ 1 ಮಲ್ಟಿ ಕ್ಯಾಪ್ ಫಂಡ್‌ಗಳ ಬದಲಾಗಿ ಲಾರ್ಜ್ ಕ್ಯಾಪ್, ಮಿಡ್ ಕ್ಯಾಪ್ ಹಾಗೂ ಮಲ್ಟಿ ಕ್ಯಾಪ್ ವರ್ಗದ ಒಂದು ಫಂಡ್ ಆಯ್ದುಕೊಳ್ಳುವುದು ಸೂಕ್ತ. ಇವುಗಳ ಜೊತೆಗೆ ಒಂದು ಸ್ಮಾಲ್ ಕ್ಯಾಪ್ ಫಂಡ್ ಆಯ್ದುಕೊಂಡಲ್ಲಿ ನಿಮ್ಮ ಗುರಿಯನ್ನು ಸಾಧಿಸಬಹುದಾಗಿದೆ. ಒಂದೇ ವರ್ಗದಲ್ಲಿ ಅನೇಕ ಫಂಡ್‌ಗಳನ್ನು ಆಯ್ದುಕೊಳ್ಳುವುದರಿಂದ ಹೂಡಿಕೆಯ ಉದ್ದೇಶ ಈಡೇರುವುದಿಲ್ಲ ಹಾಗೂ ಹೂಡಿಕೆಗೆ ಅಗತ್ಯವಾದ ವಿಭಿನ್ನತೆ ಇರುವುದಿಲ್ಲ.

ಉದಾಹರಣೆ ಮೂಲಕ

ಉದಾಹರಣೆ ಮೂಲಕ

ಉದಾಹರಣೆಗೆ ನೋಡುವುದಾದರೆ, ಮೇಲಿನ ಪೋರ್ಟಫೋಲಿಯೊದಲ್ಲಿ ಎರಡು ಲಾರ್ಜ್ ಕ್ಯಾಪ್ ಫಂಡ್‌ಗಳಲ್ಲಿನ 10 ರಲ್ಲಿನ 9 ಹೂಡಿಕೆಗಳು ಒಂದೇ ತೆರನಾಗಿವೆ. ತೆರಿಗೆ ಉಳಿತಾಯಕ್ಕಾಗಿ ಇಎಲ್‌ಎಸ್‌ಎಸ್ ಫಂಡ್ ಬದಲಾಗಿ 12,500 ರೂ.ಗಳಷ್ಟು ಮೊತ್ತವನ್ನು ಪಿಪಿಎಫ್‌ನಲ್ಲಿ ಹೂಡಿಕೆ ಮಾಡಬಹುದು. ಇದರಿಂದ ಆದಾಯ ತೆರಿಗೆ ಕಾಯ್ದೆ 80ಸಿ ಪ್ರಕಾರ ತೆರಿಗೆ ಉಳಿತಾಯ ಮಾಡಬಹುದು. ಆದಾಗ್ಯೂ ಇಎಲ್‌ಎಸ್‌ಎಸ್ ಫಂಡ್‌ನಲ್ಲಿ ಹೂಡಿಕೆ ಮುಂದುವರಿಸಲು ಬಯಸಿದಲ್ಲಿ ಸ್ಕೀಂಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಳ್ಳುವುದು ಸೂಕ್ತ. ಪ್ರತಿವರ್ಷ ನಿಮ್ಮ ಫಂಡ್‌ಗಳ ಬಗ್ಗೆ ಅಧ್ಯಯನ ಮಾಡಬೇಕು ಹಾಗೂ ಯಾವುದೇ ಕಾರಣಕ್ಕೂ ಅಲ್ಪಕಾಲದಲ್ಲಿ ಗಳಿಸಲಾದ ಆದಾಯವನ್ನು ಹಿಂಪಡೆಯಕೂಡದು ಎಂದು ಫಿನ್ ಫ್ಲಿಕ್ಸ್ ರಿಸರ್ಚ್ ಆಂಡ್ ಅನಾಲಿಟಿಕ್ಸ್ ಸಂಸ್ಥೆಯ ಸಂಸ್ಥಾಪಕ, ಎಂಡಿ ಪ್ರಬ್ಲೀನ್ ಬಾಜ್ಪಾಯಿ ಸಲಹೆ ನೀಡುತ್ತಾರೆ.

ಸೂಚನೆ

ಸೂಚನೆ

ಈ ಅಂಕಣದಲ್ಲಿ ತಿಳಿಸಲಾದ ಅಭಿಪ್ರಾಯಗಳು ಅಂಕಣ ಬರೆದ ಲೇಖಕರ ಅಭಿಪ್ರಾಯಗಳೇ ಆಗಿರುತ್ತವೆ. ಇದರಲ್ಲಿನ ವಸ್ತುನಿಷ್ಠತೆ ಹಾಗೂ ಅಭಿಪ್ರಾಯಗಳಿಗೆ kannada.goodreturns.in ಬಾಧ್ಯಸ್ಥನಾಗಿರುವುದಿಲ್ಲ.

English summary

Long Term Investment: How to invest Rs. 5000 per month

You should divide your investment between a multi-cap scheme and a large-cap scheme.
Story first published: Saturday, July 27, 2019, 10:59 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X