For Quick Alerts
ALLOW NOTIFICATIONS  
For Daily Alerts

ಈ ಬಿಸಿನೆಸ್ ಆರಂಭಿಸಿ ವರ್ಷಕ್ಕೆ 4-5 ಲಕ್ಷಕ್ಕಿಂತ ಹೆಚ್ಚು ಹಣ ಗಳಿಸಿ.. 2ನೇ ವರ್ಷದಿಂದ ದುಪ್ಪಟ್ಟು ಆದಾಯ

ಸದಾ ಬೇಡಿಕೆಯ ಜೊತೆಗೆ ನಿರಂತರ ಆದಾಯ ಕೊಡುವಂತಹ ಶಾಲಾ ಬ್ಯಾಗ್ ತಯಾರಿ ಘಟಕ ಶುರು ಮಾಡಿದರೆ ಉತ್ತಮ ಲಾಭ ಕಟ್ಟಿಟ್ಟ ಬುತ್ತಿ. ಬ್ಯಾಗ್, ಶಾಲಾ ಬ್ಯಾಗ್ ಗಳಿಗೆ ಬೇಡಿಕೆ ಎಂದೂ ಕಡಿಮೆಯಾಗುವುದಿಲ್ಲ.

|

ನಮ್ಮಲ್ಲಿ ಹೆಚ್ಚಿನ ಉತ್ಸಾಹಿ ಜನರು ಸ್ವಂತ ವ್ಯವಹಾರ ಶುರು ಮಾಡಬೇಕು ಅಂತಿರುತ್ತಾರೆ. ಹೊಸ ಉದ್ಯಮ ಆರಂಭಿಸುವ ಇರಾದೆ ನಿಮ್ಮದಾಗಿದ್ದರೆ ಈ ಬಿಸಿನೆಸ್ ಅನ್ನು ಕೂಡ ಆರಂಭಿಸಬಹುದು. ಪ್ರಸ್ತುತ ಮಾರುಕಟ್ಟೆಯಲ್ಲಿ ಸದಾ ಬೇಡಿಕೆಯಲ್ಲಿರುವ ಉತ್ಪನ್ನಗಳನ್ನು ಅಭ್ಯಸಿಸಿ ಅದಕ್ಕೆ ತಕ್ಕಂತೆ ಬೆಸ್ಟ್ ಐಡಿಯಾ ಆಯ್ಕೆ ಮಾಡಿ ಮುನ್ನಡೆಯುವುದು ಹಾಗು ನಿರಂತರ ಆದಾಯ ಗಳಿಸುವುದು ಜಾಣತನ.
ಹಾಗಿದ್ದರೆ ಸದಾ ಬೇಡಿಕೆಯ ಜೊತೆಗೆ ನಿರಂತರ ಆದಾಯ ಕೊಡುವಂತಹ ಶಾಲಾ ಬ್ಯಾಗ್ ತಯಾರಿ ಘಟಕ ಶುರು ಮಾಡಿದರೆ ಉತ್ತಮ ಲಾಭ ಕಟ್ಟಿಟ್ಟ ಬುತ್ತಿ. ಬ್ಯಾಗ್, ಶಾಲಾ ಬ್ಯಾಗ್ ಗಳಿಗೆ ಬೇಡಿಕೆ ಎಂದೂ ಕಡಿಮೆಯಾಗುವುದಿಲ್ಲ. ಜೊತೆಗೆ ಈ ಉದ್ಯಮದಲ್ಲಿ ನಷ್ಟ ಬಹಳ ಕಡಿಮೆ. ಅಲ್ಲದೇ ಒಮ್ಮೆ ನಿಮ್ಮ ಉದ್ಯಮ ಕ್ಲಿಕ್ ಆದರೆ ಉತ್ತಮ ಆದಾಯ ನಿಮ್ಮದಾಗಿಸಬಹುದು. ಹಾಗಿದ್ದರೆ ಬನ್ನಿ ಹೊಸ ಉದ್ಯಮದ ಬಗ್ಗೆ ತಿಳಿಯೋಣ..

 

ಬಂಡವಾಳ

ಬಂಡವಾಳ

ಬ್ಯಾಗ್ ತಯಾರಿಕಾ ಘಟಕ ಆರಂಭಿಸಲು ಅಷ್ಟೊಂದು ಹೆಚ್ಚಿನ ಬಂಡವಾಳ ಕೂ ಬೇಕಿಲ್ಲ. ನಿಮ್ಮ ಬಳಿ 10 ರಿಂದ 12 ಲಕ್ಷ ರೂಪಾಯಿ ಬಂಡವಾಳ ಇದ್ದರೆ ಸಾಕು. ಒಂದು ವೇಳೆ ಇಷ್ಟು ಹಣ ನಿಮ್ಮ ಬಳಿ ಇಲ್ಲದಿದ್ದರೆ ಸರ್ಕಾರಿ ಯೋಜನೆಗಳಡಿಯಲ್ಲಿ (ಮುದ್ರಾ, ಉದ್ಯೋಗಿನಿ, ಸ್ವಯಂ ಉದ್ಯೋಗ) ಸಾಲ ಪಡೆದು ಉದ್ಯಮ ಶುರು ಮಾಡಬಹುದು.

ಬ್ಯಾಗ್ ತಯಾರಿಕಾ ಘಟಕ

ಬ್ಯಾಗ್ ತಯಾರಿಕಾ ಘಟಕ

ಕೇಂದ್ರ ಸರ್ಕಾರದ ಅಧೀನ ಸಂಸ್ಥೆಯಾದ ರಾಷ್ಟ್ರೀಯ ಸಣ್ಣ ಕೈಗಾರಿಕಾ ನಿಗಮ (ಎನ್‌ಎಸ್‌ಐಸಿ) ಸಿದ್ಧಪಡಿಸಿದ ಯೋಜನಾ ವರದಿಯ ಪ್ರಕಾರ, ಒಂದು ವರ್ಷದಲ್ಲಿ 15 ಸಾವಿರ ಬ್ಯಾಗ್ ಗಳನ್ನು ತಯಾರಿಸುವ ಘಟಕ ಶುರು ಮಾಡಲು ಬಯಸಿದರೆ ಯಂತ್ರೋಪಕರಣಗಳು ಮತ್ತು ಉಪಕರಣಗಳು, ಮೂರು ತಿಂಗಳ ಕಾರ್ಯ ಬಂಡವಾಳ, ಕಚ್ಚಾ ವಸ್ತು, ಇನ್ನಿತರೆ ಉಪಯುಕ್ತ ವಸ್ತುಗಳು ಸೇರಿದಂತೆ ಸುಮಾರು 11 ಲಕ್ಷ 55 ಸಾವಿರ ರೂಪಾಯಿ ಬಂಡವಾಳದ ಅಗತ್ಯವಿದೆ.

ಸ್ಥಳಾವಕಾಶ
 

ಸ್ಥಳಾವಕಾಶ

ಎನ್‌ಎಸ್‌ಐಸಿ ಯೋಜನಾ ವರದಿಯ ಪ್ರಕಾರ, ವಾರ್ಷಿಕವಾಗಿ 15 ಸಾವಿರ ಬ್ಯಾಗ್ ಗಳನ್ನು ಉತ್ಪಾದಿಸುವ ಘಟಕಕ್ಕೆ ಸುಮಾರು 120 ಚದರ ಮೀಟರ್ ಸ್ಥಳಾವಕಾಶ ಬೇಕಾಗುತ್ತದೆ. ನೀರಿನ ಸಾಧಾರಣ ಸಂಪರ್ಕದಿಂದ ಕೆಲಸ ನಡೆಯುವಂತಿದ್ದರೆ ವಿದ್ಯುತ್ ಸಾಮರ್ಥ್ಯ 1 ಕಿ. ವ್ಯಾಟ್ ನಿಂದ 5 ಕಿ.ವ್ಯಾಟ್ ವರೆಗೆ ಇರಬೇಕಾಗುತ್ತದೆ.

ಶೇ. 70-80ರಷ್ಟು ಸಾಲ

ಶೇ. 70-80ರಷ್ಟು ಸಾಲ

ನಿಮ್ಮ ಬಳಿ ಘಟಕ ಸ್ಥಾಪನೆಗೆ ಸಾಕಷ್ಟು ಹಣ ಇಲ್ಲದಿದ್ದರೆ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸಾಲ ಪಡೆಯಬಹುದು. ಇದಕ್ಕಾಗಿ ಪ್ರತ್ಯೇಕ ಪ್ರಾಜೆಕ್ಟ್ ತಯಾರಿಸುವ ಅಗತ್ಯವಿಲ್ಲ. ನೀವು ಈ ಪ್ರಾಜೆಕ್ಟ್ ನ್ನು ಬ್ಯಾಂಕುಗಳಿಗೆ ಸಲ್ಲಿಸಿ ಸಾಲಕ್ಕಾಗಿ ಅರ್ಜಿ ಸಲ್ಲಿಸಬಹುದು. ಸರ್ಕಾರ/ಬ್ಯಾಂಕುಗಳು ಶೇ. 70 ರಿಂದ 80ರಷ್ಟು ಸಾಲವನ್ನು ನೀಡಬಹುದು. ಬೇರೆ ಬೇರೆ ಗಾತ್ರದ ಬ್ಯಾಗ್ ಗೆ ಬೇರೆ ಬೇರೆ ಬೆಲೆ ನಿಗದಿಪಡಿಸಬಹುದು. ಮುದ್ರಾ ಯೋಜನೆಯಡಿ ಸಾಲ ಪಡೆಯುವುದು ಉತ್ತಮ ಆಯ್ಕೆಯಾಗಬಲ್ಲದು.

ಯಂತ್ರೋಪಕರಣ ಮತ್ತು ಕಚ್ಚಾ ವಸ್ತುಗಳು

ಯಂತ್ರೋಪಕರಣ ಮತ್ತು ಕಚ್ಚಾ ವಸ್ತುಗಳು

ಬೆಡ್ ಹೊಲಿಗೆ ಯಂತ್ರ, ಸ್ಕ್ರೀನ್ ಪ್ರಿಂಟಿಂಗ್ ಉಪಕರಣ, ವಿನ್ಯಾಸಗೊಳಿಸಿರುವ ಕಚ್ಚಾ ಬಟ್ಟೆ, ಮುದ್ರಣ ಉಪಕರಣಗಳು, ನೈಲಾನ್ ಪಟ್ಟಿಗಳು, ಡಿ-ರಿಂಗ್, ಜಿಪ್, ಹತ್ತಿ ಟೇಪ್, ಬಕಲ್, ಬೀಗಗಳು, ನೂಲು, ಅಂಟು, ಪ್ಯಾಕಿಂಗ್ ವಸ್ತುಗಳು ಅಗತ್ಯವಿರುತ್ತದೆ.

ಎಷ್ಟು ಆದಾಯ ಗಳಿಸಬಹುದು?

ಎಷ್ಟು ಆದಾಯ ಗಳಿಸಬಹುದು?

100 ರೂಪಾಯಿಗೆ 15 ಸಾವಿರ ಬ್ಯಾಗ್ ಮಾರಾಟ ಮಾಡಿದ್ರೂ 15 ಲಕ್ಷ ರೂಪಾಯಿಯಾಗುತ್ತದೆ. ಬಂಡವಾಳ 11 ಲಕ್ಷದ 55 ಸಾವಿರ. ಅಂದ್ರೆ ಆರಂಭದ ವರ್ಷದಲ್ಲಿಯೇ ನಿಮಗೆ 3 ಲಕ್ಷ 45 ಸಾವಿರ ಲಾಭವಾಗುತ್ತದೆ. ಮುಂದಿನ ದಿನಗಳಲ್ಲಿ ಖರ್ಚು ಕಡಿಮೆಯಾಗಲಿದ್ದು, ಲಾಭ ಹೆಚ್ಚಾಗಲಿದೆ.
ವಿಭಿನ್ನ ಗಾತ್ರದ ಬ್ಯಾಗ್ ಗಳಿಗೆ ಪ್ರತ್ಯೇಕವಾಗಿ ಬೆಲೆಯನ್ನು ನಿಗದಿಪಡಿಸಬಹುದು. ಆದರೆ ಒಂದು ಬ್ಯಾಗ್ ಸರಾಸರಿ ಬೆಲೆಯನ್ನು ರೂ. 100 ಇಟ್ಟರೆ, 15 ಸಾವಿರ ಚೀಲಗಳ ಬೆಲೆ ಸುಮಾರು 15 ಲಕ್ಷ ಆಗುತ್ತದೆ. ಆರಂಭಿಕ ವರ್ಷದಲ್ಲಿ ನಿಮ್ಮ ಹೂಡಿಕೆ 10-11 ಲಕ್ಷ ಆಗಿರುತ್ತದೆ. ಅಂದರೆ, ನೀವು ಮೊದಲ ವರ್ಷದಲ್ಲಿ ಸುಮಾರು 4-5 ಲಕ್ಷ ಆದಾಯ ಗಳಿಸುತ್ತೀರಿ. ಎರಡನೇ ವರ್ಷದಿಂದ ಯಂತ್ರೋಪಕರಣ ಮತ್ತು ಘಟಕ ಸ್ಥಾಪನಾ ಇರುವುದಿಲ್ಲ. ಹೀಗಾಗಿ ಗಳಿಕೆ ಪ್ರಮಾಣ ದುಪ್ಪಟ್ಟು ಮಾಡುತ್ತಾ ಹೋಗಬಹುದು.

2 ಲಕ್ಷದಲ್ಲಿ ಈ ಬಿಸಿನೆಸ್ ಆರಂಭಿಸಿ, ಪ್ರತಿ ತಿಂಗಳು 25 ಸಾವಿರ ಗಳಿಸಿ..2 ಲಕ್ಷದಲ್ಲಿ ಈ ಬಿಸಿನೆಸ್ ಆರಂಭಿಸಿ, ಪ್ರತಿ ತಿಂಗಳು 25 ಸಾವಿರ ಗಳಿಸಿ..

English summary

Start Bag manufacturing business, earn more than 4-5 lakh in a year

Start Bag manufacturing business, earn more than 4-5 lakh in a year. after second year you can earn double income.
Story first published: Monday, July 1, 2019, 10:28 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X