For Quick Alerts
ALLOW NOTIFICATIONS  
For Daily Alerts

ನಿರುದ್ಯೋಗ ಎನ್ನಬೇಡಿ! ಈ ಬಿಸಿನೆಸ್ ಆರಂಭಿಸಿ ತಿಂಗಳಿಗೆ 40-50 ಸಾವಿರ ಗಳಿಸಿ

ಸ್ವಂತ ಬಿಸಿನೆಸ್ ಆರಂಭಿಸಬೇಕು ಎನ್ನುವವರಿಗೆ ನೂರೆಂಟು ದಾರಿಗಳಿವೆ. ಆದರೆ ಎಲ್ಲವನ್ನು ಮೆಟ್ಟಿ ನಿಂತು ಗೆಲ್ಲುವೆನೆಂಬ ದೃಢ ನಿರ್ಧಾರ ಬೇಕಷ್ಟೆ! ನನ್ನ ಬಳಿ ತುಂಬಾ ಕಡಿಮೆ ಬಂಡವಾಳ ಇದೆ.

|

ಸ್ವಂತ ಬಿಸಿನೆಸ್ ಆರಂಭಿಸಬೇಕು ಎನ್ನುವವರಿಗೆ ನೂರೆಂಟು ದಾರಿಗಳಿವೆ. ಆದರೆ ಎಲ್ಲವನ್ನು ಮೆಟ್ಟಿ ನಿಂತು ಗೆಲ್ಲುವೆನೆಂಬ ದೃಢ ನಿರ್ಧಾರ ಬೇಕಷ್ಟೆ! ನನ್ನ ಬಳಿ ತುಂಬಾ ಕಡಿಮೆ ಬಂಡವಾಳ ಇದೆ. ಆದರೆ ಇಷ್ಟು ಕಡಿಮೆ ಬಂಡವಾಳದಲ್ಲಿ ಉದ್ಯಮ ಆರಂಭಿಸುವುದು ಹೇಗೆ? ಇದು ಸಾಧ್ಯವೇ? ಎಂಬ ಗೊಂದಲ ನಿಮ್ಮಲ್ಲಿದ್ದರೆ ಇಲ್ಲಿ ನೋಡಿ.

 

ಟ್ರಾವೆಲ್ ಬಿಸಿನೆಸ್

ಟ್ರಾವೆಲ್ ಬಿಸಿನೆಸ್

ಉತ್ತಮವಾಗಿರುವ ಸೆಕೆಂಡ್ ಹ್ಯಾಂಡ್ ವಾಹನವನ್ನು ಖರೀದಿಸಿ, ಅದನ್ನು ಬಾಡಿಗೆಗೆ ನೀಡಿ ಕೈತುಂಬಾ ಹಣ ಸಂಪಾದನೆ ಮಾಡಲು ಸಾಕಷ್ಟು ಅವಕಾಶಗಳಿವೆ. ಇಲ್ಲಿ ಕಡಿಮೆ ಬಂಡವಾಳದಲ್ಲಿ ಹೆಚ್ಚು ಸಂಪಾದನೆ ಮಾಡಬಹುದಾಗಿದೆ. ಇದಕ್ಕಾಗಿ ಒಲಾ, ಉಬರ್ ನೊಂದಿಗೆ ಸೇರಿ ನಿಮ್ಮ ಬಿಸಿನೆಸ್ ಅನ್ನು ವಿಸ್ತರಿಸಿಕೊಳ್ಳಬಹುದು. ನೀವು ಒಂದೇರಡಲ್ಲ ನಾಲ್ಕೈದು ಕಾರುಗಳನ್ನು ಕೂಡ ಬಾಡಿಗೆಗೆ ಬಿಡಬಹುದು. ಹೆಚ್ಚೆಚ್ಚು ಕಾರನ್ನು ಬಾಡಿಗೆಗೆ ಬಿಟ್ಟರೆ ಹೆಚ್ಚೆಚ್ಚು ಹಣ ಸಂಪಾದನೆ ಮಾಡಬಹುದಾಗಿದೆ. ಇದಕ್ಕಾಗಿ ಕಂಪನಿ ವಿಶೇಷ ಸೌಲಭ್ಯ ನೀಡುತ್ತದೆ. ಒಂದೇ ಅಪ್ಲಿಕೇಷನ್ ನಲ್ಲಿ ನೀವು ಟ್ಯಾಕ್ಸಿಯ ಗಳಿಕೆ ಹಾಗೂ ಕಾರ್ಯಕ್ಷಮತೆಯನ್ನು ತಿಳಿದುಕೊಳ್ಳಬಹುದು.

ಒಲಾನೊಂದಿಗೆ ಒಪ್ಪಂದ

ಒಲಾನೊಂದಿಗೆ ಒಪ್ಪಂದ

ಸಾರಿಗೆ ವಲಯದ ಪ್ರಮುಖ ಇ-ಕಾಮರ್ಸ್ ಸಂಸ್ಥೆಯಾಗಿರುವ ಒಲಾ ಈ ಬಗ್ಗೆ https://partners.olacabs.com/attach ನಲ್ಲಿ ಹೆಚ್ಚಿನ ಮಾಹಿತಿ ನೀಡಿದೆ. ಇದರ ಮೂಲಕ ನೀವು ಏನೇನು ಮಾಹಿತಿ ನೀಡಬೇಕು ಎನ್ನುವ ಬಗ್ಗೆವಿವರಿಸಲಾಗಿದೆ. ಒಂದು ಕಾರಿಗೆ ಒಂದು ತಿಂಗಳಿಗೆ ರೂ. 35 ಸಾವಿರದವರೆಗೆ ಗಳಿಕೆ ಮಾಡಬಹುದು. ಎಷ್ಟು ಕಾರಿಗಳಿವೆಯೋ ಅದರ ಆಧಾರದ ಮೇಲೆ ಹಣ ಅಕೌಂಟ್ ಸೇರುತ್ತದೆ. ನೀವೇ ಚಾಲಕನನ್ನು ನೇಮಕ ಮಾಡಬೇಕಾದುದರಿಂದ ಚಾಲಕನ ವೇತನ ನೀವೆ ಪಾವತಿಸಬೇಕಾಗುತ್ತದೆ.

ಟ್ರಾವೆಲ್ ಏಜೆನ್ಸಿ
 

ಟ್ರಾವೆಲ್ ಏಜೆನ್ಸಿ

ಟ್ರಾವೆಲ್ ಏಜೆನ್ಸಿ ವ್ಯವಹಾರದಲ್ಲಿ ನಿಮಗೆ ಆಸಕ್ತಿ ಇದ್ದರೆ ಟ್ರಾವೆಲ್ ಏಜೆನ್ಸಿ ಆರಂಭಿಸಬಹುದು. ಭಾರತದಲ್ಲಿ ಇದೊಂದು ಅದ್ಬುತ ಐಡಿಯಾ. ಟ್ಯಾಕ್ಸಿ, ಕ್ಯಾಬ್ ಸರ್ವಿಸ್ ಆರಂಭಿಸಬಹುದು. ಕಡಿಮೆ ಅವಧಿಯಲ್ಲಿ ಉತ್ತಮ ಸೇವೆಯ ಮೂಲಕ ವ್ಯವಹಾರ ವಿಸ್ತರಿಸಬಹುದು. ಒಂದು ಕಾರು, ಬಸ್ ನಿಂದ ದೊಡ್ಡ ಉದ್ಯಮ ಕಟ್ಟಿರುವ ಸಾಕಷ್ಟು ಉದಾಹರಣೆಗಳಿವೆ.

ಅತ್ಯುತ್ತಮ ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್ ಐಡಿಯಾಗಳು ಅತ್ಯುತ್ತಮ ಪ್ರಯಾಣ ಮತ್ತು ಪ್ರವಾಸೋದ್ಯಮ ಬಿಸಿನೆಸ್ ಐಡಿಯಾಗಳು

English summary

Start Travel business and earn 40-50 thousand monthly

Start Travel business with low investment and earn 40-50 thousand monthly.
Story first published: Monday, July 22, 2019, 13:34 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X