For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ರಿಟರ್ನ್ 2019: ಐಟಿಆರ್ ಸಲ್ಲಿಸಿದರೆ ಈ 7 ಪ್ರಯೋಜನಗಳು ಲಭ್ಯ

|

ಆದಾಯ ತೆರಿಗೆ ಇಲಾಖೆಯು ತೆರಿಗೆದಾರರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಐಟಿಆರ್ ಸಲ್ಲಿಕೆ ಗಡುವನ್ನು ವಿಸ್ತರಿಸುತ್ತಾ ಬಂದಿದೆ. ಇದೀಗ ಆಗಸ್ಟ್ ೩೧ರ ವರೆಗೆ ಐಟಿಆರ್ ರಿಟರ್ನ್ ಅವಧಿ ವಿಸ್ತರಿಸಲಾಗಿದೆ.

ಐಟಿಆರ್ ಫೈಲಿಂಗ್ 2019: ಆದಾಯ ತೆರಿಗೆ ಕಾಯ್ದೆ 1961 ರ ಸೆಕ್ಷನ್ 139 (1) ರ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಯು ಅಥವಾ ಕಂಪನಿ ಅಥವಾ ಸಂಸ್ಥೆಯ ಹೊರತಾಗಿ ವ್ಯಕ್ತಿ ಇವರ ಒಟ್ಟು ಆದಾಯವು ಆದಾಯ ತೆರಿಗೆಗೆ ಒಳಪಡುತ್ತಿದ್ದರೆ ತನ್ನ ಆದಾಯದ ಲಾಭವನ್ನು ಒದಗಿಸಬೇಕಾಗುತ್ತದೆ.

ನಿಗದಿತ ದಿನಾಂಕಕ್ಕಿಂತ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವುದರಿಂದ ಅನೇಕ ಪ್ರಯೋಜನಗಳಿವೆ. ನೋಡೋಣ ಬನ್ನಿ..

ಸುಲಭ ಸಾಲ ಅನುಮೋದನೆ
 

ಸುಲಭ ಸಾಲ ಅನುಮೋದನೆ

ತೆರಿಗೆದಾರರು ಸಾಲ ಪಡೆಯುವಾಗ ಬಹುಸಂಖ್ಯಾತ ಬ್ಯಾಂಕುಗಳು ಸಾಲವನ್ನು ಮಂಜೂರು ಮಾಡಲು ಸತತ ಮೂರು ವರ್ಷಗಳವರೆಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಿರುವ ನಕಲನ್ನು ಕೇಳುತ್ತವೆ. ಆದ್ದರಿಂದ ನೀವು ಸಾಲ ತೆಗೆದುಕೊಳ್ಳಲು ಯೋಜಿಸುತ್ತಿದ್ದರೆ, ಐಟಿ ರಿಟರ್ನ್ಸ್ ನ್ನು ಒದಗಿಸಿದರೆ ಸಾಲ ಅನುಮೋದನೆ ಸುಲಭವಾಗುತ್ತದೆ.

ಟಿಡಿಎಸ್ ಮರುಪಾವತಿ ಪಡೆಯಲು

ಟಿಡಿಎಸ್ ಮರುಪಾವತಿ ಪಡೆಯಲು

ಒಬ್ಬ ವ್ಯಕ್ತಿಯು ಸ್ಥಿರ ಠೇವಣಿಗಳಲ್ಲಿ ಹೂಡಿಕೆ ಮಾಡಿದ್ದರೆ, ಆದಾಯ ತೆರಿಗೆ ಪಾವತಿಸಲು ಹೊಣೆಗಾರನಾಗಿರುತ್ತಾನೋ ಇಲ್ಲವೋ ಎಂಬುದನ್ನು ಲೆಕ್ಕಿಸದೆ ಬಡ್ಡಿ ಆದಾಯದ ಮೇಲೆ ಶೇ. 10 ದರದಲ್ಲಿ ಟಿಡಿಎಸ್‌ಗೆ ವಿಧಿಸಲಾಗುತ್ತದೆ. ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೂಲಕ ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ ಟಿಡಿಎಸ್ ಕಡಿತಗೊಳಿಸಲಾಗುತ್ತದೆ.

ನಷ್ಟವನ್ನು ಮುಂದಕ್ಕೆ ಹಾಕಿ

ನಷ್ಟವನ್ನು ಮುಂದಕ್ಕೆ ಹಾಕಿ

ಒಂದು ವರ್ಷದಲ್ಲಿ ಯಾರಾದರೂ ನಷ್ಟವನ್ನು ಅನುಭವಿಸಿದರೆ, ಆದಾಯ ತೆರಿಗೆ ರಿಟರ್ನ್ ಸಲ್ಲಿಸುವ ಮೂಲಕ ಮುಂದಿನ ಎಂಟು ವರ್ಷಗಳವರೆಗೆ ಆ ನಷ್ಟವನ್ನು ಭವಿಷ್ಯದ ಆದಾಯದ ಮೂಲಕ ಹೊಂದಿಸಲು ಸಾದ್ಯವಾಗಬಹುದು. ಇದು ಮುಂದಿನ ವರ್ಷಗಳಲ್ಲಿ ನಿಮ್ಮ ತೆರಿಗೆಯ ಹೊರೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ವೀಸಾ ಪ್ರಕ್ರಿಯೆ
 

ವೀಸಾ ಪ್ರಕ್ರಿಯೆ

ನೀವು ವಿದೇಶ ಪ್ರವಾಸ ಮಾಡುತ್ತಿದ್ದರೆ, ವೀಸಾ ವಿಚಾರಣೆ ಸಮಯದಲ್ಲಿ ಕಳೆದ ಕೆಲ ವರ್ಷಗಳ ಐಟಿಆರ್ ರಶೀದಿಗಳನ್ನು ಒದಗಿಸಲು ನಿಮ್ಮನ್ನು ಕೇಳುತ್ತಾರೆ. ಕೆಲವು ರಾಯಭಾರ ಕಚೇರಿಗಳು ಹಿಂದಿನ ಮೂರು ವರ್ಷಗಳ ಐಟಿಆರ್ ರಶೀದಿಗಳನ್ನು ಕೇಳಬಹುದು. ಇನ್ನೂ ಕೆಲವರು ಇತ್ತೀಚಿನ ಪ್ರಮಾಣಪತ್ರವನ್ನು ಕೇಳಬಹುದು.

ಹೆಚ್ಚಿನ ಲೈಫ್ ಕವರ್ ಖರೀದಿಸುವುದು

ಹೆಚ್ಚಿನ ಲೈಫ್ ಕವರ್ ಖರೀದಿಸುವುದು

ನೀವು ರೂ. 50 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ವಿಮೆ ಮೊತ್ತದೊಂದಿಗೆ ಟರ್ಮ್ ಪಾಲಿಸಿಯನ್ನು ಖರೀದಿಸಿದರೆ ಪ್ರಸ್ತುತ ದಿನಗಳಲ್ಲಿ ಜೀವ ವಿಮಾ ಕಂಪನಿಗಳು ಐಟಿಆರ್ ರಶೀದಿಗಳನ್ನು ಕೇಳುತ್ತವೆ.

ಸರ್ಕಾರಿ ಟೆಂಡರ್: ನೀವು ವ್ಯವಹಾರವನ್ನು ಪ್ರಾರಂಭಿಸಲು ಯೋಜಿಸುತ್ತಿದ್ದರೆ ಮತ್ತು ಸರ್ಕಾರಿ ಟೆಂಡರ್ ಅರ್ಜಿ ಭರ್ತಿ ಮಾಡಬೇಕಾದರೆ ಹಿಂದಿನ ವರ್ಷಗಳ ನಿಮ್ಮ ತೆರಿಗೆ ರಿಟರ್ನ್ಸ್ ಅನ್ನು ನೀವು ತೋರಿಸಬೇಕಾಗುತ್ತದೆ. ನಿಮ್ಮ ಹಣಕಾಸಿನ ಸ್ಥಿತಿಯ ಪುರಾವೆಗಳನ್ನು ತೋರಿಸಬೇಕಾಗುತ್ತದೆ. ಅವ್ಯವಹಾರಗಳ ಬಗ್ಗೆ ಕೂಡ ಪರಿಶೀಲಿಸಲಾಗುತ್ತದೆ.

ಸ್ವಯಂ ಉದ್ಯೋಗಿ

ಸ್ವಯಂ ಉದ್ಯೋಗಿ

ಸಂಬಳ ಪಡೆಯುವ ವ್ಯಕ್ತಿಗಳು ತಮ್ಮ ಆದಾಯ ಪುರಾವೆಯಾಗಿ ಫಾರ್ಮ್ 16 ಅನ್ನು ಪಡೆಯುತ್ತಾರೆ. ಆದರೆ ಉದ್ಯಮಿಗಳು, ಸಲಹೆಗಾರರು ಮತ್ತು ಸಂಸ್ಥೆಗಳ ಪಾಲುದಾರರು ಫಾರ್ಮ್ 16 ಅನ್ನು ಪಡೆಯುವುದಿಲ್ಲ. ಆದ್ದರಿಂದ, ಐಟಿಆರ್ ರಶೀದಿಗಳು ಅವರಿಗೆ ಇನ್ನೂ ಪ್ರಮುಖವಾದ ದಾಖಲೆಯಾಗಿ ಪರಿಣಮಿಸುತ್ತದೆ. ಅವರ ವಾರ್ಷಿಕ ಆದಾಯವು ಮೂಲ ವಿನಾಯಿತಿ ಮಿತಿ ರೂ. 2.50 ಲಕ್ಷ. ಎಲ್ಲಾ ರೀತಿಯ ಹಣಕಾಸಿನ ವಹಿವಾಟುಗಳಿಗೆ ಐಟಿಆರ್ ರಶೀದಿಗಳು ಸ್ವಯಂ ಉದ್ಯೋಗಿಗಳಿಗೆ ಆದಾಯ ಮತ್ತು ತೆರಿಗೆ ಪಾವತಿಯ ಏಕೈಕ ಪುರಾವೆಯಾಗಿರುತ್ತದೆ.

ತೆರಿಗೆ ಹೊಣೆಗಾರಿಕೆಯ ಮೇಲಿನ ಬಡ್ಡಿ ತಪ್ಪಿಸಿ

ತೆರಿಗೆ ಹೊಣೆಗಾರಿಕೆಯ ಮೇಲಿನ ಬಡ್ಡಿ ತಪ್ಪಿಸಿ

ನೀವು ಐಟಿಆರ್ ಫೈಲ್ ಮಾಡದಿದ್ದರೆ, ವಿಳಂಬಿತ ತೆರಿಗೆಗೆ ಮಾಸಿಕ ಆಧಾರದ ಮೇಲೆ ಹೆಚ್ಚುವರಿ ಬಡ್ಡಿ ಪಾವತಿಸಬೇಕಾಗಬಹುದು.

ದಂಡಗಳು ಮತ್ತು ಮೌಲ್ಯಮಾಪನಗಳು: ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಣೆಗಾರನಾಗಿರುವ ಯಾವುದೇ ವ್ಯಕ್ತಿಯು ನಿಗದಿತ ದಿನಾಂಕದೊಳಗೆ ರಿಟರ್ನ್ಸ್ ಸಲ್ಲಿಸದಿದ್ದರೆ ರೂ. 10,000 ಗಳವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.

ಆದ್ದರಿಂದ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ನಿಗದಿತ ದಿನಾಂಕದಂದು ಅಥವಾ ಮೊದಲು ಸಲ್ಲಿಸುವುದನ್ನು ಖಚಿತಪಡಿಸಿಕೊಳ್ಳಿ. ಅಂದರೆ, ದಂಡವನ್ನು ತಪ್ಪಿಸಲು ಮತ್ತು ಮೇಲೆ ತಿಳಿಸಿದ ಪ್ರಯೋಜನಗಳನ್ನು ತೆಗೆದುಕೊಳ್ಳಲು ಆಗಸ್ಟ್ 31, 2019 (ಜುಲೈ 31, 2019 ರಿಂದ ಅವಧಿಯನ್ನು ವಿಸ್ತರಿಸಲಾಗಿದೆ).

English summary

Income Tax Return: 7 benefits of filing your income tax return

There are many benefits of filing income tax returns before the due date.
Story first published: Tuesday, August 13, 2019, 12:35 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X