For Quick Alerts
ALLOW NOTIFICATIONS  
For Daily Alerts

ಮನೆ/ಆಸ್ತಿ ಖರೀದಿಸುವಿರಾ? 2019ರಲ್ಲಿ ಭಾರತೀಯ ಹೌಸಿಂಗ್, ರಿಯಲ್ ಎಸ್ಟೇಟ್ ಮಾರುಕಟ್ಟೆ ಹೇಗಿದೆ?

ಸುಂದರವಾದ ಮನೆ ಪ್ರತಿಯೊಬ್ಬರ ಕನಸು ಹಾಗು ಮೂಲಭೂತ ಅಗತ್ಯತೆ. ಮನೆ ಕಟ್ಟಿ ನೋಡು ಒಮ್ಮೆ, ಮದುವೆ ಮಾಡಿ ನೋಡು ಅಂತಾರೆ! ಜೀವನ ಪರ್ಯಥಂತ ಬಾಡಿಗೆ ಮನೆಯಲ್ಲಿ ಇರಲು ಯಾರು ತಾನೆ ಇಷ್ಟ ಪಡುತ್ತಾರೆ? ಅದೇ ಸ್ವಂತದ ಮನೆಯೊಂದು ಇದ್ದರೆ ಆ ಖುಷಿಯೇ ಬೇರೆ!

|

ಸುಂದರವಾದ ಮನೆ ಪ್ರತಿಯೊಬ್ಬರ ಕನಸು ಹಾಗು ಮೂಲಭೂತ ಅಗತ್ಯತೆ. ಮನೆ ಕಟ್ಟಿ ನೋಡು ಒಮ್ಮೆ, ಮದುವೆ ಮಾಡಿ ನೋಡು ಅಂತಾರೆ! ಜೀವನ ಪರ್ಯಥಂತ ಬಾಡಿಗೆ ಮನೆಯಲ್ಲಿ ಇರಲು ಯಾರು ತಾನೆ ಇಷ್ಟ ಪಡುತ್ತಾರೆ? ಅದೇ ಸ್ವಂತದ ಮನೆಯೊಂದು ಇದ್ದರೆ ಆ ಖುಷಿಯೇ ಬೇರೆ!
ಭಾರತದಲ್ಲಿ ಪ್ರಸ್ತುತ ಹೌಸಿಂಗ್ ಮಾರುಕಟ್ಟೆ ಟ್ರೆಂಡ್ ಹೇಗಿದೆ? ಯಾವ ನಗರಗಳಲ್ಲಿ ಪ್ರಾಪರ್ಟಿ ಅಗ್ಗದ ಬೆಲೆಗೆ ಸಿಗುತ್ತದೆ? ಯಾವ ಬ್ಯಾಂಕು ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲ ನೀಡುತ್ತಿದೆ? ಎಲ್ಲಿ ಮನೆ/ಆಸ್ತಿ/ಸೈಟ್ ಖರೀದಿಸಿದರೆ ಸೂಕ್ತ? ರಿಯಲ್ ಎಸ್ಟೇ ಪ್ರಸ್ತುತ ಟ್ರೆಂಡ್ ಗಳೇನು? ಇತ್ಯಾದಿ ಪ್ರಶ್ನೆಗಳು ಮನೆ ಖರೀದಿಸುವ ಕನಸು ಹೊಂದಿರುವವರಲ್ಲಿ ಇರೋದು ಸಹಜ. ಹಾಗಿದ್ದರೆ 2019ರ ಹೌಸಿಂಗ್ ಮಾರುಕಟ್ಟೆಯ ಟ್ರೆಂಡ್ ಗಳನ್ನು ನೋಡೋಣ ಬನ್ನಿ..

ಮನೆಗಳು ಅಗ್ಗ

ಮನೆಗಳು ಅಗ್ಗ

ಕಳೆದ ಒಂದೆರಡು ವರ್ಷಗಳಲ್ಲಿ ಕೈಗೆಟಕುವ ವಸತಿ ವಹಿವಾಟು ನಡೆಯುತ್ತಿದ್ದು, 2019ರಲ್ಲೂ ಮುಂದುವರೆಯುವ ಸಾಧ್ಯತೆ ಇದೆ. ದೇಶದ ಅನೇಕ ನಗರಗಳಲ್ಲಿ ಬೆಲೆ ಕುಸಿತ ಕಂಡಿದೆ. ಇತರ ಸಂಗತಿಗಳಲ್ಲಿ ಗ್ರಾಹಕ ಬೆಲೆ ಹಣದುಬ್ಬರವು ಬೆಲೆಗಳ ಏರಿಕೆಗಿಂತ ಕಡಿಮೆಯಿತ್ತು. ಹೈದರಾಬಾದ್ ಹೊರತುಪಡಿಸಿ, ಭಾರತದಾದ್ಯಂತ ಬೆಲೆಗಳು ನೈಜವಾಗಿ ಕಡಿಮೆಯಾಗಿದೆ.

ಕಡಿಮೆ ಜಿಎಸ್ಟಿ ದರ

ಕಡಿಮೆ ಜಿಎಸ್ಟಿ ದರ

ಕೈಗೆಟುಕುವ ವಸತಿಗಾಗಿ ಜಿಎಸ್ಟಿ ದರವನ್ನು ಶೇ. 1 ಮತ್ತು ಇತರರಿಗೆ ಶೇ. 5ಕ್ಕೆ ಇಳಿಸಲಾಗಿದೆ. ಇದು ಖರೀದಿದಾರರ ಖರೀದಿಯ ಚಿಂತನೆಯನ್ನು ಸುಧಾರಿಸಲು ಸಹಾಯ ಮಾಡಿತು. ಆದರೆ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ನಷ್ಟವನ್ನು ಸರಿದೂಗಿಸಲು ಬಿಲ್ಡರ್ ಗಳು ಬೆಲೆಗಳನ್ನು ಹೆಚ್ಚಿಸಿದ್ದಾರೆ. ಗೃಹ ಸಾಲದ ಮೇಲಿನ ಬಡ್ಡಿದರವನ್ನು ಇಳಿಕೆ ಮಾಡಲಾಗಿದೆ. ಸಾಲ ಮರುಪಾವತಿಯ ವಿಧಾನ ಮತ್ತು ಅವಧಿ ಸರಳಗೊಂಡಿವೆ.

ದರ ಕಡಿತದ ಪರಿಣಾಮ

ದರ ಕಡಿತದ ಪರಿಣಾಮ

ಕಳೆದ ಕೆಲ ದ್ವೈಮಾಸಿಕ ಹಣಕಾಸು ನೀತಿಯಲ್ಲಿ ಆರ್‌ಬಿಐ ದರ ಕಡಿತ ಮಾಡಿರುವುದು ಸಹಾಯ ಮಾಡಿದೆ. ರೆಪೊ ದರವನ್ನು 75 ಬಿಪಿಎಸ್ ಪಾಯಿಂಟ್ ಕಡಿತಗೊಳಿಸಲಾಯಿತು. ಆದರೆ ಕೇವಲ 35 ಬಿಪಿಎಸ್ ಮಾತ್ರ ಸಾಲಗಾರರಿಗೆ ರವಾನೆಯಾಯಿತು. ಆರ್ಬಿಐ ಕಡಿತಗೊಳಿಸಿದ ಪ್ರಮಾಣದ ಲಾಭವನ್ನು ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ವರ್ಗಾಯಿಸಿದರೆ ಹೆಚ್ಚು ಲಾಭ.

ಊಹಾಪೋಹಗಳಿಗೆ ಬ್ರೇಕ್

ಊಹಾಪೋಹಗಳಿಗೆ ಬ್ರೇಕ್

ಬಂಡವಾಳದ ಹೆಚ್ಚಿನ ವೆಚ್ಚ ಮತ್ತು ಬೆಲೆಗಳ ನಿಧಾನಗತಿಯ ಹೆಚ್ಚಳದಂತಹ ಐಹೆಗಳಿಂದಾಗಿ ರಿಯಲ್ ಎಸ್ಟೇಟ್ ನಿಂದ ದೂರವಿರುತ್ತಾರೆ. ಖರೀದಿ ಮಾಡುವವರು ನಿರ್ಮಾಣಗೊಂಡಿರುವ ಸಿದ್ದ ಆಸ್ತಿಗಿಂತ ಪ್ರಾಪರ್ಟಿಗಳನ್ನು ಖರೀದಿಸಲು ಬಯಸುತ್ತಾರೆ.

ಬಿಲ್ಡರ್ ಗಳ ಸುರಕ್ಷಿತ ಕಾರ್ಯ

ಬಿಲ್ಡರ್ ಗಳ ಸುರಕ್ಷಿತ ಕಾರ್ಯ

ರೇರಾದ ಕಾಯಿದೆ ಬಂದ ನಂತರ, ಬಿಲ್ಡರ್ ಗಳು ಸುರಕ್ಷಿತವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ಹೊಸ ಯೋಜನೆಗಳನ್ನು ಪ್ರಾರಂಭಿಸಲು ಸಾಧ್ಯವಾಗಿಲ್ಲ. ಬದಲಾಗಿ, ಬಿಲ್ಡರ್ ಗಳು ತಮ್ಮ ಚಾಲ್ತಿಯಲ್ಲಿರುವ ಯೋಜನೆಗಳನ್ನು ಪೂರ್ಣಗೊಳಿಸುವತ್ತ ಗಮನ ಹರಿಸುತ್ತಿದ್ದಾರೆ.

ಸುಲಭ ಸಾಲ ಪ್ರಕ್ರಿಯೆ

ಸುಲಭ ಸಾಲ ಪ್ರಕ್ರಿಯೆ

ಪ್ರಸ್ತುತ ಸಾಲ ಪಡೆಯುವ ಪ್ರಕ್ರಿಯೆ ಸುಲಭವಾಗಿದೆ ಹಾಗು ವೇಗವಾಗಿದೆ. ಹೊಸ ನಿಯಮಗಳ ಅನ್ವಯ ಶೀಘ್ರದಲ್ಲೇ ಸಾಲ ಅನುಮೋದನೆ ಮಾಡುವ ನಿಯಮಗಳನ್ನು ಜಾರಿ ತರಲಾಗುತ್ತಿದೆ. ಇದಕ್ಕಾಗಿ ಹೆಚ್ಚು ಸಮಯದವರೆಗೆ ಕಾಯಬೇಕಾಗಿಲ್ಲ.

ಅಗ್ಗದ ಅಡಮಾನ ದರ

ಅಗ್ಗದ ಅಡಮಾನ ದರ

ಒಂದೇಡೆ ರೇರಾ ಕಾಯಿದೆ ರಿಯಲ್ ಎಸ್ಟೇಟ್ ವಲಯದ ಅವ್ಯವಹಾರ, ದಬ್ಬಾಳಿಕೆಯನ್ನು ನಿಯಂತ್ರಣದಲ್ಲಿರಿಸಿದೆ. ಪ್ರಸ್ತುತ ಅಡಮಾನ ದರಗಳು ಕಡಿಮೆಯಾಗಿದ್ದು, ಆರ್ಬಿಐ ದರವನ್ನು ಕಡಿಮೆಗೊಳಿಸಿರುವುದು ಮನೆ ಖರೀದಿಸುವ ಗ್ರಾಹಕರಿಗೆ ಸಿಹಿಸುದ್ದಿಯಾಗಿದೆ. ಕಳೆದ ಎರಡು-ಮೂರು ವರ್ಷಗಳಲ್ಲಿ ಬಡ್ಡಿದರ ಭಾಗಶಹ ಕಡಿತಗೊಂಡಿದೆ.

ಕೋ ವರ್ಕಿಂಗ್ ಸ್ಪೇಸಸ್

ಕೋ ವರ್ಕಿಂಗ್ ಸ್ಪೇಸಸ್

ವಾಣಿಜ್ಯ ರಿಯಲ್ ಎಸ್ಟೇಟ್ ಗೆ ಸಂಬಂಧಿಸಿದಂತೆ, ಕೋ ವರ್ಕಿಂಗ್ ಸ್ಪೇಸಸ್ 2019 ರಲ್ಲಿ ತಮ್ಮ ಸ್ಥಾನವನ್ನು ಬಲಪಡಿಸುವ ನಿರೀಕ್ಷೆಯಿದೆ. ಇದು ಒಂದು ದಶಕದ ಹಿಂದೆ ಭಾರತದಲ್ಲಿ ಹೊಸ ಪರಿಕಲ್ಪನೆಯಾಗಿತ್ತು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಕೋ ವರ್ಕಿಂಗ್ ಸ್ಪೇಸಸ್ ಸಾಕಷ್ಟು ಸೆಳೆತ ಮತ್ತು ಸ್ವೀಕಾರಾರ್ಹತೆಗೆ ಸಾಕ್ಷಿಯಾಗಿವೆ. ಮುಂಚಿನ ಸಣ್ಣ ಉದ್ಯಮಗಳು ಮತ್ತು ವೈಯಕ್ತಿಕ ವೃತ್ತಿಪರರು ಮಾತ್ರ ಇದನ್ನು ಆರಿಸಿಕೊಂಡಿದ್ದರು. ಈಗ ದೊಡ್ಡ ಕಂಪನಿಗಳು ಕೋ ವರ್ಕಿಂಗ್ ಸ್ಪೇಸಸ್ ಆಕ್ರಮಿಸಿಕೊಂಡಿವೆ.

Read more about: real estate housing home loan money
English summary

Indian housing and real estate market for home buyers in 2019

Many cities saw prices fall. In others, the rise in prices was lower than the consumer price inflation. Except in Hyderabad, prices are down in real terms across India.
Story first published: Saturday, August 17, 2019, 9:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X