For Quick Alerts
ALLOW NOTIFICATIONS  
For Daily Alerts

ಮುಂದಿನ ಒಂದು ವರ್ಷದಲ್ಲಿ ಶೇ. 22-38 ಆದಾಯ ಪಡೆಯಲು ಈ 5 ಸ್ಟಾಕ್ ಆಯ್ಕೆ ಮಾಡಿ

|

ದೇಶೀಯ ಷೇರು ಮಾರುಕಟ್ಟೆಯು ಮುಂದಿನ ಒಂದು ವರ್ಷದಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಎದುರಿಸುವ ಸಾಧ್ಯತೆ ಇದೆ. ಸಾರ್ವತ್ರಿಕ ಚುನಾವಣೆ ಮತ್ತು ಕೇಂದ್ರ ಬಜೆಟ್ ಮಂಡನೆ ಆಗಿರುವುದರಿಂದ ಮುಂದಿನ ದಿನಗಳಲ್ಲಿ ಚಂಚಲತೆ ಕಡಿಮೆಯಾಗುತ್ತದೆ ಎಂದು ನಿರೀಕ್ಷಿಸಬಹುದು. ಆದಾಗ್ಯೂ, ದೇಶೀಯ ಹಣಕಾಸು ವಲಯವು ದ್ರವ್ಯತೆ ಬಿಕ್ಕಟ್ಟನ್ನು ಎದುರಿಸುತ್ತಿದೆ. ಆಮದು ಮಾಡಿದ ಸರಕುಗಳ ಮೇಲಿನ ಸುಂಕ, ಕಚ್ಚಾ ತೈಲ ಬೆಲೆಗಳು ಮತ್ತು ಮುಂಬರುವ ಹಬ್ಬದ ಸೀಸನ್, ಯುಎಸ್ ಮತ್ತು ಚೀನಾ ಉದ್ವಿಗ್ನತೆ ಈ ಎಲ್ಲಾ ಅಂಶಗಳ ಆಧಾರದ ಮೇಲೆ ಭಾರತೀಯ ಷೇರು ಮಾರುಕಟ್ಟೆ ಮುಂದಿನ ವರ್ಷಕ್ಕೆ ನೆಗೆಯಲು ಸಜ್ಜಾಗಿದೆ!

ಇಂದಿನ ಮಾರುಕಟ್ಟೆ ಮೇಲೆ ಮುಂದಿನ ಭವಿಷ್ಯತ್ತು!
 

ಇಂದಿನ ಮಾರುಕಟ್ಟೆ ಮೇಲೆ ಮುಂದಿನ ಭವಿಷ್ಯತ್ತು!

ಕಳೆದ ಒಂದೂವರೆ ವರ್ಷದಿಂದ ಸ್ಮಾಲ್‌ಕ್ಯಾಪ್‌ ಮತ್ತು ಮಿಡ್‌ಕ್ಯಾಪ್‌ಗಳು ಉತ್ತಮ ಸಾಧನೆ ತೋರಿವೆ. ಐತಿಹಾಸಿಕವಾಗಿ, ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕವು ಸತತ ಎರಡು ವರ್ಷಗಳಿಂದ ನಕಾರಾತ್ಮಕ ಆದಾಯವನ್ನು ನೀಡಿಲ್ಲ. ಆದ್ದರಿಂದ ಚೇತರಿಸಿಕೊಳ್ಳಲು ಉತ್ತಮ ಅವಕಾಶವಿದೆ.

ತಾಂತ್ರಿಕವಾಗಿ, ನಿಫ್ಟಿ ಸೂಚ್ಯಂಕ ಹಾಗು ಸೆನ್ಸೆಕ್ಸ್ ಸೂಚ್ಯಂಕಗಳು ಕಳೆದ ಕೆಲ ದಿನಗಳಿಂದ ಕೆಳಮುಖವಾಗಿ ಚಲಿಸಿವೆ. ಮುಂದಿನ ದಿನಗಳಲ್ಲಿ ಸಕಾರಾತ್ಮಕ ಬೆಳವಣಿಗೆಯ ಮುನ್ಸೂಚನೆ ಎಂದು ವಿಶ್ಲೇಷಕರು ಹೇಳುತ್ತಾರೆ. ಹೀಗಾಗಿ ಮುಂದಿನ ಒಂದು ವರ್ಷದ ಅವಧಿಗಾಗಿ ಈ ಕೆಳಗಿನ ಷೇರುಗಳನ್ನು ನೀವು ಆಯ್ಕೆ ಮಾಡಬಹುದು.

ಸನ್ ಫಾರ್ಮಾಸ್ಯುಟಿಕಲ್ಸ್ ಇಂಡಸ್ಟ್ರೀಸ್ | ಗುರಿ: ರೂ. 540, ರಿಟರ್ನ್: 29%

ಸನ್ ಫಾರ್ಮಾಸ್ಯುಟಿಕಲ್ಸ್ ಇಂಡಸ್ಟ್ರೀಸ್ | ಗುರಿ: ರೂ. 540, ರಿಟರ್ನ್: 29%

ಜಾಗತಿಕ ಔಷಧೀಯ ಉದ್ಯಮವು ಔಷಧಿಗಳ ಬೆಲೆಯನ್ನು ಹೆಚ್ಚಿಸುವ ಬಗ್ಗೆ ಸರ್ಕಾರ ಮತ್ತು ನಿಯಂತ್ರಕರಿಂದ ಹೆಚ್ಚುತ್ತಿರುವ ಒತ್ತಡದೊಂದಿಗೆ ಅಡ್ಡಹಾದಿಯಲ್ಲಿದೆ. ಉದ್ಯಮವು ಸಾಮಾನ್ಯವಾಗಿ, ಸನ್ ಫಾರ್ಮಾ ನೇತೃತ್ವದಲ್ಲಿ ವಹಿವಾಟು ನಡೆಸುತ್ತಿದೆ. ಇದು ಪ್ರಸ್ತುತ 52 ವಾರಗಳ ಗರಿಷ್ಠ ರೂ. 679 ಗಿಂತ 40 ಪ್ರತಿಶತದಷ್ಟು ಮಟ್ಟದಲ್ಲಿ ಸೆಪ್ಟೆಂಬರ್ 2018 ರಲ್ಲಿ ವಹಿವಾಟು ನಡೆಸಿರುವುದು ಸಾಕ್ಷಿಯಾಗಿದೆ. ವಿಶೇಷವಾಗಿ ಪ್ರಸ್ತುತ ಹಂತದಲ್ಲಿ ಸನ್ ಫಾರ್ಮಾ ಕಂಪನಿಯು ದೀರ್ಘಾವಧಿಯಲ್ಲಿ ಹೂಡಿಕೆದಾರರಿಗೆ ಉತ್ತಮ ಆಯ್ಕೆಯಾಗಿದೆ.

ಭಾರ್ತಿ ಏರ್ಟೆಲ್ | ಗುರಿ: ರೂ. 500, ರಿಟರ್ನ್: 38%

ಭಾರ್ತಿ ಏರ್ಟೆಲ್ | ಗುರಿ: ರೂ. 500, ರಿಟರ್ನ್: 38%

ಭಾರ್ತಿ ಏರ್ಟೆಲ್ | ಗುರಿ: ರೂ. 500, ರಿಟರ್ನ್: 38%

ದೂರಸಂಪರ್ಕ ಉದ್ಯಮದಲ್ಲಿ ಕಠಿಣ ಸ್ಪರ್ಧೆಯ ಹೊರತಾಗಿಯೂ ಏರ್‌ಟೆಲ್ ಸದೃಢವಾಗಿ ಉಳಿಯಲು ಯಶಸ್ವಿಯಾಗಿದೆ. ಕನಿಷ್ಠ ಬದ್ಧತೆ ಯೋಜನೆಗಳ ಪರಿಚಯ, ಡಿಜಿಟಲ್ ಆವಿಷ್ಕಾರಗಳತ್ತ ಗಮನಹರಿಸುತ್ತಲೇ ತನ್ನ ಪ್ರೀಮಿಯಂ ಗ್ರಾಹಕರಿಗೆ ವಿಭಿನ್ನ ಸೇವೆಗಳನ್ನು ನೀಡುತ್ತಾ ಬಂದಿದೆ. ಏರ್ಟೆಲ್ ಸ್ಟಾಕ್ ಪ್ರಸ್ತುತ 361 ರೂ.ಗಳಲ್ಲಿ ವಹಿವಾಟು ನಡೆಸುತ್ತಿದೆ.

ಕೊಟಕ್ ಮಹೀಂದ್ರಾ ಬ್ಯಾಂಕ್ | ಗುರಿ: ರೂ. 2,000, ರಿಟರ್ನ್: 34%
 

ಕೊಟಕ್ ಮಹೀಂದ್ರಾ ಬ್ಯಾಂಕ್ | ಗುರಿ: ರೂ. 2,000, ರಿಟರ್ನ್: 34%

ಕೊಟಕ್ ಮಹೀಂದ್ರಾ ಬ್ಯಾಂಕಿನ ಐತಿಹಾಸಿಕವಾಗಿ ಉತ್ತಮ ಆಸ್ತಿ ಗುಣಮಟ್ಟ ಮತ್ತು ಅದರ ಎನ್‌ಪಿಎಗಳನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾಗಿದೆ. ಬ್ಯಾಂಕ್ ಪ್ರಸ್ತುತ ಕಡಿಮೆ ಎನ್‌ಪಿಎಗಳನ್ನು ಹೊಂದಿದೆ.

ಕಳೆದ ವರ್ಷ ಅಕ್ಟೋಬರ್‌ನಿಂದ ಈ ಸ್ಟಾಕ್ ಸತತವಾಗಿ ಸಕಾರಾತ್ಮಕ ಆದಾಯವನ್ನು ನೀಡಿದೆ. ಅದರ 52 ವಾರಗಳ ಗರಿಷ್ಠ ರೂ. 1,555 ಸಿಎಂಪಿ: 1,492 ರೂ.) ವಹಿವಾಟು ನಡೆಸುತ್ತಿದೆ. ಹಣಕಾಸು ವಲಯವು ಪ್ರಸ್ತುತ ಪ್ರಮುಖ ದ್ರವ್ಯತೆ ಬಿಕ್ಕಟ್ಟನ್ನು ಕಂಡಿರುವುದರಿಂದ, ಮುಂಬರುವ ವರ್ಷದಲ್ಲಿ ಈ ವಲಯದಲ್ಲಿ ಕೊಟಕ್ ಮಹೀಂದ್ರಾ ಬ್ಯಾಂಕ್ ಉತ್ತಮ ಆದಾಯ ಗಳಿಸಬಲ್ಲದು.

ಬಜಾಜ್ ಆಟೋ | ಗುರಿ: ರೂ. 3,300, ರಿಟರ್ನ್: 22%

ಬಜಾಜ್ ಆಟೋ | ಗುರಿ: ರೂ. 3,300, ರಿಟರ್ನ್: 22%

ಇತ್ತೀಚೆಗೆ ಮೋಟಾರು ಸೈಕಲ್‌ಗಳ ವಿಭಾಗದಲ್ಲಿ ಬಜಾಜ್ ಆಟೋ ತನ್ನ ದೇಶೀಯ ಪಾಲನ್ನು ಶೇಕಡಾ 20 ಕ್ಕಿಂತ ಹೆಚ್ಚಿಸಿದೆ. ಇದು ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಉತ್ತಮ ಶೈಲಿಯ ಆಕರ್ಷಣೀಯ ಉತ್ಪನ್ನಗಳ ತಂತ್ರದಿಂದ ಪ್ರೇರಿತವಾಗಿದೆ. ಬಜಾಜ್ ಆಟೋ ತಮ್ಮ ರಫ್ತು ಬಂಡವಾಳವನ್ನು ಹೆಚ್ಚಿಸಲು ಮತ್ತು ವಿಶ್ವದ ನೆಚ್ಚಿನ ಭಾರತೀಯ ಬ್ರಾಂಡ್ ಆಗಿ ಇರಿಸಿಕೊಳ್ಳಲು ಹೆಚ್ಚು ಗಮನ ಹರಿಸಿದ್ದಾರೆ.

ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿನ ಮಂದಗತಿಯು ಮುಖ್ಯವಾಗಿ ಸಣ್ಣ ಮೋಟಾರು ಬೈಕ್‌ಗಳಿಂದ ಬರುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಈ ಸ್ಟಾಕ್ ಉತ್ತಮ ಶ್ರೇಣಿಯಲ್ಲಿದೆ.

ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ | ಗುರಿ: ರೂ. 500, ರಿಟರ್ನ್: 30%

ಐಸಿಐಸಿಐ ಪ್ರುಡೆನ್ಶಿಯಲ್ ಲೈಫ್ ಇನ್ಶುರೆನ್ಸ್ ಕಂಪನಿ | ಗುರಿ: ರೂ. 500, ರಿಟರ್ನ್: 30%

ಭಾರತದಲ್ಲಿ ವಿಮಾ ರಕ್ಷಣೆ ವಿಭಾಗವು ಶೇ. 8 ಕುಸಿತ ಕಂಡಿದ್ದು, ದೇಶದಲ್ಲಿ ಜೀವ ವಿಮಾ ಧನಾತ್ಮಕತೆ ಜಿಡಿಪಿಯ ಶೇಕಡಾ 2.76 ರಷ್ಟಿದೆ ಮತ್ತು ಜಾಗತಿಕ ಸರಾಸರಿ ಶೇ. 3.33 ರಷ್ಟಿದೆ. ದೇಶದ ಹೆಚ್ಚುತ್ತಿರುವ ಉದ್ಯೋಗಿಗಳ ಸಂಖ್ಯೆಯಿಂದ ಸಾಮಾನ್ಯವಾಗಿ ವಿಮಾ ಕ್ಷೇತ್ರ, ಜೀವ ವಿಮೆ ಮುಂಬರುವ ಸಮಯದಲ್ಲಿ ಸಾಮಾನ್ಯ ಬೆಳವಣಿಗೆಗಿಂತ ಹೆಚ್ಚಿನದಕ್ಕೆ ಸಾಕ್ಷಿಯಾಗಬಹುದು. ಐಸಿಐಸಿಐ ಪ್ರುಡೆನ್ಶಿಯಲ್ ಯುಲಿಪ್ಸ್ ಉತ್ತಮ ಸ್ಥಾನ ಹೊಂದಿದೆ.

ಕೊನೆ ಮಾತು

ಕೊನೆ ಮಾತು

ಕನ್ನಡ ಗುಡ್ ರಿಟರ್ನ್.ಇನ್ ಮೂಲಕ ಹೂಡಿಕೆ, ಉಳಿತಾಯ, ಸ್ಟಾಕ್ ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ನೀವು ಯಾವುದೇ ಹೂಡಿಕೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ತಜ್ಞರನ್ನು ಸಂಪರ್ಕಿಸಿ ಸೂಕ್ತ ನಿರ್ಧಾರ ಕೈಗೊಳ್ಳಿ. ನಿಮಗಾಗುವ ನಷ್ಟಕ್ಕೆ ಯಾರೂ ಕೂಡ ಜವಾಬ್ದಾರರಲ್ಲ. ಹೀಗಾಗಿ ಮಾರುಕಟ್ಟೆಯ ಬಗ್ಗೆ ಹೂಡಿಕೆದಾರರಿಗೆ ಸ್ವಯಂ ಜ್ಞಾನ ಇರುವುದು ತುಂಬಾ ಅವಶ್ಯಕ.

English summary

Purchase these 5 stocks for 22-38% returns by next one year

The domestic stock market may experience some large swings in the next one-year.
Story first published: Wednesday, August 21, 2019, 12:51 [IST]
Company Search
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Goodreturns sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Goodreturns website. However, you can change your cookie settings at any time. Learn more