For Quick Alerts
ALLOW NOTIFICATIONS  
For Daily Alerts

25 ಸಾವಿರ ಹೂಡಿಕೆ ಬರೋಬ್ಬರಿ 1.6 ಕೋಟಿ ಆಗಿದೆ! ಕೋಟ್ಯಾಧಿಪತಿ ಆಗಲು ಬಯಸಿದ್ರೆ ಇಲ್ಲಿ ನೋಡಿ..

ಶ್ರೀಮಂತರಾಗುವುದು ಹೇಗೆ ಎಂಬ ಪ್ರಶ್ನೆ ಇಂದಿನ ಜನಮಾನಸದಲ್ಲಿ ಕಾಣುವುಉದ ಸಹಜ! ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ, ಬಂಡವಾಳದ ವೈವಿಧ್ಯೀಕರಣವು ಅತ್ಯಗತ್ಯವಾಗಿರುತ್ತದೆ.

|

ಶ್ರೀಮಂತರಾಗುವುದು ಹೇಗೆ ಎಂಬ ಪ್ರಶ್ನೆ ಇಂದಿನ ಜನಮಾನಸದಲ್ಲಿ ಕಾಣುವುಉದ ಸಹಜ! ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವಾಗ, ಬಂಡವಾಳದ ವೈವಿಧ್ಯೀಕರಣವು ಅತ್ಯಗತ್ಯವಾಗಿರುತ್ತದೆ. ವಿಭಿನ್ನ ಅವಧಿಯ ವಿವಿಧ ಷೇರು/ಮ್ಯೂಚುವಲ್ ಫಂಡ್ ಗಳಲ್ಲಿನ ವೈವಿಧ್ಯೀಕರಣವು ಒಂದು ನಿರ್ದಿಷ್ಟ ವಲಯದಲ್ಲಿನ ನಷ್ಟವನ್ನು ತಡೆಗಟ್ಟಲು ಸಹಾಯ ಮಾಡುತ್ತದೆ ಎಂದು ಷೇರು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆದ್ದರಿಂದ, ಯಾರಾದರೂ ಈಕ್ವಿಟಿಗಳಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ನಗದು ಮತ್ತು ಎಫ್ & ಒ ಎರಡರಲ್ಲೂ ಹೂಡಿಕೆ ಮಾಡುವುದು ಉತ್ತಮ. ದೀರ್ಘಕಾಲೀನ ಹೂಡಿಕೆಯ ಮೂಲಕ ಕೋಟಿ ಕೋಟಿ ಹಣ ಗಳಿಸಲಾಗುತ್ತದೆ.

ಆಕ್ಸಿಸ್ ಬ್ಯಾಂಕ್ ಷೇರು

ಆಕ್ಸಿಸ್ ಬ್ಯಾಂಕ್ ಷೇರು

ಕಳೆದ 15 ವರ್ಷಗಳಲ್ಲಿ ಆಕ್ಸಿಸ್ ಬ್ಯಾಂಕ್ ಷೇರು ಚಲನೆಗಳನ್ನು ಯಾರಾದರೂ ಗಮನಿಸಿದರೆ ಷೇರುಗಳಲ್ಲಿ ದೀರ್ಘಾವಧಿಯ ಹೂಡಿಕೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಹುದು. ಅಕ್ಟೋಬರ್ 11, 2004 ರಂದು ಬ್ಯಾಂಕಿಂಗ್ ಪ್ರತಿ ಷೇರು ರೂ. 31.46ಕ್ಕೆ ಮುಕ್ತಾಯಗೊಂಡಿದೆ. ಇಂದು, ಆಕ್ಸಿಸ್ ಬ್ಯಾಂಕ್ ಪ್ರತಿ ಷೇರು ಬೆಲೆ ರೂ. 675 ಆಗಿದೆ.

25 ಸಾವಿರದಿಂದ 1.6 ಕೋಟಿ!

25 ಸಾವಿರದಿಂದ 1.6 ಕೋಟಿ!

ಆದ್ದರಿಂದ, ಯಾರಾದರೂ ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ಹೂಡಿಕೆ ಮಾಡಿದ್ದರೆ, ಅವರ ಒಂದು ರೂಪಾಯಿ 21.45 ರೂಗಳಾಗಿ ಬದಲಾಗುತ್ತಿತ್ತು! ಇದರರ್ಥ ಅವರ ಬಂಡವಾಳವು 21.45 ಪಟ್ಟು ಗಗನಕ್ಕೇರಿದೆ. ಪಟ್ಟಿಮಾಡಿದ ಕಂಪನಿಯು ತನ್ನ ಷೇರುದಾರರಿಗೆ ಕಾಲಕಾಲಕ್ಕೆ ನೀಡುವ ಲಾಭಾಂಶ ಮತ್ತು ಷೇರು ವಿಭಜನಾ ಪ್ರಯೋಜನಗಳನ್ನು ಬಿಟ್ಟು, ಆಕ್ಸಿಸ್ ಬ್ಯಾಂಕ್ ಷೇರು ಬೆಲೆ ನಿಖರವಾಗಿ 15 ವರ್ಷಗಳಲ್ಲಿ 21.45 ಪಟ್ಟು ಹೆಚ್ಚಾಗಿದೆ. ಆದ್ದರಿಂದ, ಅಕ್ಟೋಬರ್ 11, 2004 ರಂದು ಯಾರಾದರೂ ಆಕ್ಸಿಸ್ ಬ್ಯಾಂಕ್ ಷೇರುಗಳಲ್ಲಿ ರೂ. 25 ಸಾವಿರ ಹೂಡಿಕೆ ಮಾಡಿದ್ದರೆ ಈ ಅವಧಿಯಲ್ಲಿ ಬ್ಯಾಂಕ್ ಘೋಷಿಸಿದ ಲಾಭಾಂಶ ಮತ್ತು ವಿಭಜಿತ ಕೊಡುಗೆಗಳನ್ನು ಹೊರತುಪಡಿಸಿ, ಅವರ ಹೂಡಿಕೆ ರೂ. 1.6 ಕೋಟಿ ಆಗುತ್ತಿತ್ತು.

ಇಷ್ಟು ದೊಡ್ಡ ಮೊತ್ತ ಪಡೆಯಲು ಕಾರಣ

ಇಷ್ಟು ದೊಡ್ಡ ಮೊತ್ತ ಪಡೆಯಲು ಕಾರಣ

ಆಕ್ಸಿಸ್ ಬ್ಯಾಂಕ್ ಷೇರು ಇಷ್ಟು ದೊಡ್ಡ ಮೊತ್ತ ಪಡೆಯಲು ಕಾರಣವನ್ನು ಕುರಿತು ಮಾತನಾಡಿದ ಪ್ಲುಟಸ್ ಅಡ್ವೈಸರ್ಸ್ ಸಂಸ್ಥೆಯ ಎಂಡಿ ಮತ್ತು ಸಿಇಒ ಪ್ರಕಾಶ್ ಪಾಂಡೆ, "21 ನೇ ಶತಮಾನದ ಆರಂಭದಲ್ಲಿ, ಭಾರತೀಯ ಷೇರು ಮಾರುಕಟ್ಟೆಯಲ್ಲಿ ಭಾರತೀಯ ಆರ್ಥಿಕತೆಯು ಉದಾರೀಕರಣದ ಪ್ರಯೋಜನಗಳಿಗೆ ಸಾಕ್ಷಿಯಾಗಲು ಪ್ರಾರಂಭಿಸಿತು. ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಹೂಡಿಕೆ ಮಾಡಲು ಪ್ರಾರಂಭಿಸಿದ್ದರು. ಆಕ್ಸಿಸ್ ಬ್ಯಾಂಕ್ (ಆ ಸಮಯದಲ್ಲಿ ಯುಟಿಐ ಬ್ಯಾಂಕ್) ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಪ್ರಮುಖ ಖಾಸಗಿ ಬ್ಯಾಂಕುಗಳ ಪೈಕಿ ಆ ಸಮಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದವು.

ಆದ್ಯತೆಯ ಷೇರು

ಆದ್ಯತೆಯ ಷೇರು

ಮೂಲಭೂತವಾಗಿ ಆಕ್ಸಿಸ್ ಬ್ಯಾಂಕ್ ಪಾಲು ಸಾಕಷ್ಟು ಪ್ರಬಲವಾಗಿತ್ತು. ಈ ಕಾರಣಕ್ಕಾಗಿ, ಇದು ಯಾವಾಗಲೂ ಎಫ್‌ಐಐಗಳಿಗೆ ಆದ್ಯತೆಯ ಪೋರ್ಟ್ಫೋಲಿಯೋ ಸ್ಟಾಕ್ ಆಗಿ ಉಳಿದಿದೆ. ಇಂದಿಗೂ, ಆಕ್ಸಿಕ್ಸ್ ಬ್ಯಾಂಕ್ ಎಫ್‌ಐಐಗಳಿಗೆ ನೆಚ್ಚಿನ ಬ್ಯಾಂಕಿಂಗ್ ಸ್ಟಾಕ್ ಆಗಿ ಹೊರಹೊಮ್ಮಿದೆ.

ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..ಪ್ರತಿದಿನ 66 ಹೂಡಿಕೆ ಮಾಡಿ 1.11 ಕೋಟಿ ಗಳಿಸಿ, ಇಲ್ಲಿದೆ ಸಂಪೂರ್ಣ ಲೆಕ್ಕಾಚಾರ..

English summary

Rs 25,000 investment turned into Rs 1.6 crore

While investing in the stock market, diversification of the portfolio is a must.
Story first published: Friday, October 25, 2019, 12:54 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X