For Quick Alerts
ALLOW NOTIFICATIONS  
For Daily Alerts

ಲಾಟರಿ ಹೊಡೆಯೋದು ಅಂದ್ರೆ ಹೀಗಾ..! ಒಂದೇ ಕುಟುಂಬದ ಮೂವರಿಗೆ ಒಂದೇ ದಿನದಲ್ಲಿ ಬಂಪರ್ ಗೆಲುವು

|

ನವದೆಹಲಿ, ಅ. 30: ಲಾಟರಿ ಹೊಡೆಯೋದೇ ಅದೃಷ್ಟದ ಆಟ, ಅಂಥದ್ರಲ್ಲಿ ಒಂದೇ ಕುಟುಂಬದ ಮೂವರಿಗೆ ಸಮಾನವಾಗಿ ಅದೃಷ್ಟಲಕ್ಷ್ಮೀ ಒಲಿಯುತ್ತಾಳೆ ಎಂದರೆ..! ಅಮೆರಿಕದ ಒಂದೇ ಕುಟುಂಬದ ಮೂವರು ವ್ಯಕ್ತಿಗಳಿಗೆ ಅದೇ ಲಾಟರಿ ಕಂಪನಿಯ ಅದೇ ದಿನದ ಲಕಿ ಡ್ರಾ, ಅದೇ ನಂಬರ್, ಅದೇ ಮೊತ್ತದ ಬಹುಮಾನವನ್ನು ಪಡೆದಿರುವ ಅಪರೂಪದ ಘಟನೆ ನಡೆದಿದೆ.

 

ಇದು ಅಮೆರಿಕದ ಮೇರಿಲ್ಯಾಂಡ್‌ನಲ್ಲಿರುವ ಕುಟುಂಬದವರ ಅದೃಷ್ಟದ ಕಥೆ. ಆಶ್ಚರ್ಯ ಎಂದರೆ ಈ ಕುಟುಂಬದ ಮೂವರಿಗೂ ಪರಸ್ಪರ ಲಾಟರಿ ಡ್ರಾ ಪ್ರಕಟ ಆಗುವವರೆಗೂ ತಮ್ಮ ಕುಟುಂಬದ ಇತರರಿಗೂ ತನ್ನಂತೆಯೇ ಬಂಪರ್ ಪ್ರೈಸ್ ಸಿಕ್ಕಿದೆ ಎಂದು ಗೊತ್ತೇ ಇರಲಿಲ್ಲವಂತೆ. ಈ ಮೂವರಿಗೂ ಮೇರಿಲ್ಯಾಂಡ್ ಲಾಟರಿ ಡ್ರಾನಿಂದ 41 ಲಕ್ಷ ರೂಪಾಯಿಯ ನಗದು ಬಹುಮಾನ ಸಿಕ್ಕಿದೆ.

ಈ ಕುಟುಂಬದ ಹಿರಿಯ ಸದಸ್ಯ 61 ವರ್ಷದ ವ್ಯಕ್ತಿ ಅಕ್ಟೋಬರ್ 13ರಂದು ಹ್ಯಾಂಪ್‌ಸ್ಟೆಡ್ ಪಟ್ಟಣದಲ್ಲಿ ಮೇರಿಲ್ಯಾಂಡ್ ಲಾಟರಿ ಟಿಕೆಟ್ ಖರೀದಿಸಿದ್ದಾರೆ. ಇವರ 31 ವರ್ಷದ ಮಗ ಮತ್ತು 28 ವರ್ಷದ ಮಗಳು ಬೇರೆ ಬೇರೆ ದಿನಗಳಲ್ಲಿ ಅದೇ ಲಾಟರಿ ಅಂಗಡಿಯಲ್ಲಿ ಅದೇ ಮುಖಬೆಲೆಯ ಲಾಟರಿಯನ್ನು ಖರೀದಿಸುತ್ತಾರೆ. ಆದರೆ, ಪರಸ್ಪರರಿಗೆ ಇದರ ಅರಿವಿರಲಿಲ್ಲ. ಕಾಕತಾಳೀಯವೆಂದರೆ ಮೂವರಿಗೂ ಕೂಡ ಏಕರೀತಿಯ ನಂಬರ್ ಕಾಂಬಿನೇಶನ್ ಇರುವ ಲಾಟರಿಯೇ ಸಿಕ್ಕಿತ್ತು.

ಒಂದೇ ಕುಟುಂಬದ ಮೂವರಿಗೆ ಒಂದೇ ದಿನದಲ್ಲಿ ಬಂಪರ್ ಲಾಟರಿ

ಅದೇ ದಿನ, ಅಂದರೆ ಅಕ್ಟೋಬರ್ 13ರಂದು ಡ್ರಾ ನಡೆದಾಗ ಇದೇ ಕಾಂಬಿನೇಶನ್‌ಗೆ ಬಹುಮಾನ ಸಿಕ್ಕಿತು. ಅಗಲೇ ಅವರಿಗೆ ತಮ್ಮ ಕುಟುಂಬದ ಇತರ ಇಬ್ಬರು ಸದಸ್ಯರಿಗೂ ಇದೇ ಲಾಟರಿ ಬಹುಮಾನ ಬಂದಿದೆ ಎಂದು ಗೊತ್ತಾದದ್ದು.

ಲಾಟರಿ ದುಡ್ಡು ಏನ್ ಮಾಡ್ತಾರೆ?

ಲಾಟರಿ ಗೆದ್ದ ಈ ಕುಟುಂಬದವರಲ್ಲಿ ಒಬ್ಬರು ಬಹುಮಾನದ ಹಣದಲ್ಲಿ ‍ಷೇರುಪೇಟೆಯಲ್ಲಿ ಹೂಡಿಕೆ ಮಾಡುವ ಆಲೋಚನೆಯಲ್ಲಿ ಇದ್ದರೆ, ಇನ್ನಿಬ್ಬರಿಗೆ ಹೊಸ ಮನೆಯನ್ನು ಖರೀದಿಸುವ ಇರಾದೆ ಇಟ್ಟುಕೊಂಡಿದ್ದಾರೆ.

ಕೆಲ ದಿನಗಳ ಹಿಂದೆ ಇದೇ ಮೇರಿಲ್ಯಾಂಡ್‌ನ ಹಿರಿಯ ವ್ಯಕ್ತಿಯೊಬ್ಬರು 50 ಸಾವಿರ ಡಾಲರ್ (ಸುಮಾರು 40 ಲಕ್ಷ ರೂಪಾಯಿ) ಲಾಟರಿ ಬಹುಮಾನ ಪಡೆದಿದ್ದರು. ಅದೇ ಆಗಿದ್ದರೆ ಸುದ್ದಿ ಆಗುತ್ತಿರಲಿಲ್ಲ. 77 ವರ್ಷದ ಈ ವ್ಯಕ್ತಿ ತಾನು 20 ವರ್ಷಗಳ ಲಾಟಿ ಡ್ರಾಗಳನ್ನು ವಿಶ್ಲೇಷಿಸಿ ಯಾವ ನಂಬರ್ ಈ ಬಾರಿ ಡ್ರಾ ಆಗಬಹುದು ಎಂದು ಅಂದಾಜಿಸಿ ಅದೇ ನಂಬರ್‌ನ ಲಾಟರಿಯನ್ನು ಆಯ್ದುಕೊಂಡಿದ್ದರಂತೆ. ಅವರ ಅಂದಾಜಿನಂತೆಯೇ ಆ ನಂಬರ್‌ಗೇ ಬಹುಮಾನ ಬಂದಿತ್ತಂತೆ. ಹಾಗಂತ ಆ ವ್ಯಕ್ತಿ ಹೇಳಿಕೊಂಡು ಕುತೂಹಲ ಮೂಡಿಸಿದ್ದಾರೆ. ಆ ಮೂಲಕ ಲಾಟರಿ ವ್ಯಸನಿಗಳ ಅಡಿಕ್ಷನ್ ಹೆಚ್ಚಿಸಿದ್ದಾರೆ ಎನ್ನಬಹುದು.

 
ಒಂದೇ ಕುಟುಂಬದ ಮೂವರಿಗೆ ಒಂದೇ ದಿನದಲ್ಲಿ ಬಂಪರ್ ಲಾಟರಿ

ಗಮನಿಸಿ: ಲಾಟರಿ ಒಂದು ಜೂಜಾಟ. ಅದೃಷ್ಟದ ಮೇಲೆ ನಿಂತಿರುವ ಆಟ ಅಷ್ಟೇ ಅದು. ಲಾಟರಿ ಆಡಿ ಗೆದ್ದವರು ವಿರಳ. ಲಾಟರಿಯಲ್ಲಿ ಸೋತು ಮನೆ ಮಠ ಕಳೆದುಕೊಂಡಿರುವ ಅಸಂಖ್ಯ ನಿದರ್ಶನಗಳಿವೆ. ಗೆದ್ದವರನ್ನು ಮಾತ್ರ ಹೈಲೈಟ್ ಮಾಡಲಾಗುವುದರಿಂದ ಜನರು ಲಾಟರಿ ಕಡೆಗೆ ಸಹಜವಾಗಿ ಆಕರ್ಷಿತರಾಗುತ್ತಾರೆ. ಜೊತೆಗೆ, ಮುಂದೊಂದು ದಿನ ಜಾಕ್‌ಪಾಟ್ ಹೊಡೆದು ತಮ್ಮೆಲ್ಲಾ ಕಷ್ಟಗಳು ಒಮ್ಮೆಗೇ ತೀರಿಹೋಗಬಹುದು ಎಂಬ ಹುಂಬ ಧೈರ್ಯದಲ್ಲಿ ಜನರು ಲಾಟರಿ ಆಡುತ್ತಾರೆ.

ಕರ್ನಾಟಕದಲ್ಲಿ ಲಾಟರಿ ನಿಷೇಧ ಇದೆ. ಭಾರತದ ಹಲವು ರಾಜ್ಯಗಳಲ್ಲೂ ಲಾಟರಿಯನ್ನು ನಿಷೇಧಿಸಲಾಗಿದೆ. ಲೋಟೋದಂಥ ಆನ್‌ಲೈನ್ ಜೂಜಾಟಕ್ಕೂ ಅನುಮತಿ ಇಲ್ಲ.

English summary

3 Persons From Single Family Win Bumper Lottery On Same Day

In a co-incidence and interesting development, 3 family members of USA have won lottery of same company, same prize money on same day.
Story first published: Sunday, October 30, 2022, 13:20 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X