For Quick Alerts
ALLOW NOTIFICATIONS  
For Daily Alerts

2020ನೇ ಇಸವಿಗೆ 6 ಅತ್ಯುತ್ತಮ ಮತ್ತು ಅದ್ಭುತ ಹೂಡಿಕೆ ಐಡಿಯಾಗಳು

|

ಇನ್ನೇನು ಕೆಲ ದಿನಕ್ಕೆ 2020ನೇ ಇಸವಿಗೆ ಹೆಜ್ಜೆ ಇರಿಸುತ್ತೀವಿ. ನಿಮ್ಮ ಹೂಡಿಕೆ ಈ ವರ್ಷ ಅದೆಂಥ ಪ್ರತಿಫಲ ನೀಡಿತ್ತೋ ಗೊತ್ತಿಲ್ಲ. ಆದರೆ ಈಗಂತೂ ಹೂಡಿಕೆ ಮೇಲಿನ ಪ್ರತಿಫಲವನ್ನು ಹೆಚ್ಚಿಸಿಕೊಳ್ಳುವ ಸಮಯ. ಷೇರು, ಎಫ್. ಡಿ. ಮತ್ತು ಚಿನ್ನ ಹೀಗೆ ಯಾವುದನ್ನಾದರೂ ಆರಿಸಿಕೊಳ್ಳಿ. ಆದರೆ ಲಾಭದ ಪ್ರಮಾಣ ಹೇಗೆ ಹೆಚ್ಚಿಸಿಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳಿ.

ಇಲ್ಲಿ ಕೆಲವು ಹೂಡಿಕೆ ಆಯ್ಕೆಗಳನ್ನು ನಿಮ್ಮೆದುರು ಇಡುತ್ತಿದ್ದೇವೆ. ಇವು ಸುರಕ್ಷಿತ ಅಷ್ಟೇ ಅಲ್ಲ, ಅದರ ಜತೆಗೆ ಉತ್ತಮವಾದ ರಿಟರ್ನ್ಸ್ ಕೂಡ ನೀಡಬಲ್ಲವು. ಏನು ಆ ಹೂಡಿಕೆಗಳು? 6 ಸಲಹೆಗಳು ಇಲ್ಲಿವೆ. ಈ ಪೈಕಿ ನೀವು ಯಾವುದನ್ನು ಆರಿಸಿಕೊಳ್ಳುತ್ತೀರಿ ಎಂಬುದನ್ನು ನಿರ್ಧರಿಸಿ. ಹೊಸ ವರ್ಷದಲ್ಲಿ ಯಶಸ್ಸು ನಿಮಗೆ ಜತೆಯಾಗಲಿ.

GAIL ಕಂಪೆನಿ ಷೇರುಗಳು

GAIL ಕಂಪೆನಿ ಷೇರುಗಳು

ನೀವು ದೀರ್ಘಾವಧಿ ಹೂಡಿಕೆದಾರರಾಗಿದ್ದಲ್ಲಿ ಸದ್ಯದ ಮಾರುಕಟ್ಟೆ ದರದಲ್ಲಿ GAIL ಕಂಪೆನಿ ಷೇರುಗಳನ್ನು ಖರೀದಿಸುವುದು ಉತ್ತಮ ಆಯ್ಕೆ. 117 ರುಪಾಯಿಯಲ್ಲಿ ವಹಿವಾಟು ನಡೆಸುತ್ತಿರುವ ಈ ಷೇರು ಹತ್ತಿರ ಹತ್ತಿರ 52 ವಾರಗಳ ಕನಿಷ್ಠ ಮಟ್ಟದಲ್ಲಿ ಇದೆ. ನೈಸರ್ಗಿಕ ಅನಿಲ, ಲಿಕ್ವಿಡ್ ಹೈಡ್ರೋಕಾರ್ಬನ್ಸ್, ಎಲ್ ಪಿಜಿ, ಪೆಟ್ರೋಕೆಮಿಕಲ್ಸ್, ಸಿಟಿ ಗ್ಯಾಸ್ ವಿತರಣೆ, ಉತ್ಪಾದನೆ ಕ್ಷೇತ್ರದಲ್ಲಿ ಅತಿ ಮುಖ್ಯವಾದ ಕಂಪೆನಿ ಇದು. ಕಳೆದ ಸೆಪ್ಟೆಂಬರ್ ತ್ರೈಮಾಸಿಕ ಅಂತ್ಯದ ಫಲಿತಾಂಶ ಅಷ್ಟೇನೂ ಉತ್ತಮವಾಗಿರಲಿಲ್ಲ. ಆ ಕಾರಣಕ್ಕೆ ಕಂಪೆನಿಯ ಷೇರಿನ ಮೌಲ್ಯ ಕುಸಿಯಿತು. ಷೇರಿನ ಬೆಲೆಯು 140 ರುಪಾಯಿಯಿಂದ 117ಕ್ಕೆ ಕುಸಿಯಿತು. ಮುಂದಿನ ತ್ರೈಮಾಸಿಕದಲ್ಲಿ ಫಲಿತಾಂಶ ಉತ್ತಮವಾಗುವ ಸಾಧ್ಯತೆ ಇದೆ. ಇನ್ನು ಲಾಭಾಂಶದ (ಡಿವಿಡೆಂಡ್) ದೃಷ್ಟಿಯಿಂದಲೂ ಒಳ್ಳೆ ಆಯ್ಕೆ. ಹತ್ತಿರ ಹತ್ತಿರ 5ರಿಂದ 6 ಪರ್ಸೆಂಟ್ ಡಿವಿಡೆಂಡ್ ದೊರೆಯುತ್ತದೆ. ದೀರ್ಘಾವಧಿ ಹೂಡಿಕೆದಾರರಾದರೆ ಷೇರಿಗೂ ಉತ್ತಮ ಮೌಲ್ಯ ದೊರೆಯುತ್ತದೆ. ಈ ಕಂಪೆನಿಯು ಮಹಾನಗರ್ ಗ್ಯಾಸ್, ಇಂದ್ರಪ್ರಸ್ಥ ಗ್ಯಾಸ್ ಮುಂತಾದವುಗಳಲ್ಲಿ ಪಾಲು ಹೊಂದಿದೆ. ಆ ಪ್ರಮಾಣವು ಕೋಟಿಗಟ್ಟಲೆ ಆಗುತ್ತದೆ. ಈ ಷೇರನ್ನು 117 ರುಪಾಯಿ ಮಟ್ಟದಲ್ಲಿ ಖರೀದಿಸಬಹುದು. ಒಳ್ಳೆ ಡಿವಿಡೆಂಡ್ ಅಂತೂ ದೊರೆಯುತ್ತದೆ.

ಬಜಾಜ್ ಫೈನಾನ್ಸ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ಸ್

ಬಜಾಜ್ ಫೈನಾನ್ಸ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ಸ್

ಷೇರು ಹೂಡಿಕೆಯಲ್ಲಿ ಆಸಕ್ತಿ ಇಲ್ಲ. ಆದರೂ ಒಳ್ಳೆ ರಿಟರ್ನ್ಸ್ ಬೇಕು ಅಂದುಕೊಳ್ಳುವವರು ಫಿಕ್ಸೆಡ್ ಡೆಪಾಸಿಟ್ಸ್ ನಿಂದ ಪಡೆಯಬಹುದು. ಆ ಪೈಕಿ ಉತ್ತಮ ಆಯ್ಕೆ ಅಂದರೆ ಬಜಾಜ್ ಫೈನಾನ್ಸ್ ಎಫ್ ಡಿ. ಇತರ ಬ್ಯಾಂಕ್ ಡೆಪಾಸಿಟ್ ಗಳಿಗೆ ಹೋಲಿಸಿದರೆ ಬಜಾಜ್ ಫೈನಾನ್ಸ್ ಎಫ್ ಡಿ ಮೇಲಿನ ಬಡ್ಡಿ ದರ ಅತ್ಯುತ್ತಮವಾಗಿದೆ. 36ರಿಂದ 60 ತಿಂಗಳ ಅವಧಿಗೆ 8.10 ಪರ್ಸೆಂಟ್ ಬಡ್ಡಿ ದರ ನೀಡುತ್ತದೆ. ಕನಿಷ್ಠ ಠೇವಣಿ ಮೊತ್ತ 25,000 ರುಪಾಯಿ. ಬಜಾಜ್ ಫೈನಾನ್ಸ್ ಎಫ್ ಡಿ ಸುರಕ್ಷಿತವೂ ಹೌದು. AAA ರೇಟಿಂಗ್ ಅನ್ನು ಇದಕ್ಕೆ ನೀಡಲಾಗಿದೆ.

ONGC ಷೇರುಗಳು

ONGC ಷೇರುಗಳು

ತೈಲ ಮತ್ತು ಅನಿಲ ಉತ್ಪಾದನೆ ಕ್ಷೇತ್ರದ ಪ್ರಮುಖ ಕಂಪೆನಿ ONGC. ಡಿವಿಡೆಂಡ್ ಗಮನದಲ್ಲಿ ಇಟ್ಟುಕೊಂಡು ಆರಿಸಿಕೊಳ್ಳುವುದಾದರೆ ಉತ್ತಮ ಷೇರು ಇದು. ಸದ್ಯದ ಮಾರುಕಟ್ಟೆ ಬೆಲೆ ಪ್ರತಿ ಷೇರಿಗೆ 125 ರುಪಾಯಿ ಇದೆ. ಈ ಷೇರಿಗೆ ಡಿವಿಡೆಂಡ್ ಹೂಡಿಕೆ ಮೇಲೆ 5.6 ಪರ್ಸೆಂಟ್ ನಷ್ಟು ಬರುತ್ತದೆ. ಹೂಡಿಕೆದಾರರಿಗೆ ಈ ಡಿವಿಡೆಂಡ್ ಗೆ ಯಾವುದೇ ತೆರಿಗೆ ಇಲ್ಲ. ಭಾರತದ ಟಾಪ್ ತೈಲ ಮತ್ತು ಅನಿಲ ಕಂಪೆನಿ ಇದು. ಸದ್ಯಕ್ಕೆ ಪಿ.ಇ. ಸರಾಸರಿಯಲ್ಲೇ ದರ ಇದೆ. ಈ ಷೇರಿನ ಬೆಲೆ ಇನ್ನಷ್ಟು ಮೇಲಕ್ಕೆ ಏರುವ ಎಲ್ಲ ಸಾಧ್ಯತೆಗಳಿವೆ. ನಿರಂತರವಾಗಿ ವರ್ಷಕ್ಕೆ 2ರಿಂದ 3 ಬಾರಿ ಡಿವಿಡೆಂಡ್ ವಿತರಣೆ ಮಾಡುತ್ತದೆ. ಈ ಕಂಪೆನಿಯ ಷೇರುಗಳನ್ನು ಖರೀದಿಸಲು ಇದು ಕೂಡ ಮುಖ್ಯ ಕಾರಣ.

ಮಹೀಂದ್ರಾ ಫೈನಾನ್ಸ್ ಎಫ್.ಡಿ.

ಮಹೀಂದ್ರಾ ಫೈನಾನ್ಸ್ ಎಫ್.ಡಿ.

ಸುರಕ್ಷಿತವಾದ ನಿಶ್ಚಿತ ಆದಾಯಕ್ಕೆ ಎದುರು ನೋಡುವವರಿಗೆ ಮಹೀಂದ್ರಾ ಫೈನಾನ್ಸ್ ನ ಫಿಕ್ಸೆಡ್ ಡೆಪಾಸಿಟ್ಸ್ ಅತ್ಯುತ್ತಮ ಆಯ್ಕೆ. 33 ತಿಂಗಳ ಠೇವಣಿಗೆ 8.35 ಪರ್ಸೆಂಟ್ ಬಡ್ಡಿ ಬರುತ್ತದೆ. ಇನ್ನು 40 ತಿಂಗಳ ಠೇವಣಿಗೆ 9.22 ಪರ್ಸೆಂಟ್ ದೊರೆಯುತ್ತದೆ. ಇದು ಖಂಡಿತಾ ಕಡಿಮೆ ದರವಲ್ಲ. ಈ ಠೇವಣಿಗೆ AAA ರೇಟಿಂಗ್ ಇದೆ. ಇದರ ಅರ್ಥ ಇದು ಸುರಕ್ಷಿತವಾದ ಠೇವಣಿ. ಈ ಠೇವಣಿಗಳಲ್ಲಿ ದೀರ್ಘಾವಧಿಗೆ ಹೂಡಿಕೆ ಮಾಡಿದರೆ ಮುಂದಿನ ದಿನಗಳಲ್ಲಿ ಬಡ್ಡಿ ದರ ಇಳಿಕೆಯಾದರೂ ರಿಟರ್ನ್ಸ್ ಕಡಿಮೆ ಆಗುವುದಿಲ್ಲ.

ಚಿನ್ನದ ಮೇಲೆ ಹೂಡಿಕೆ

ಚಿನ್ನದ ಮೇಲೆ ಹೂಡಿಕೆ

ಚಿನ್ನವು ಉತ್ತಮ ಹೂಡಿಕೆ ಆಗಬಹುದು. ಚಿನ್ನದ ಮೇಲಿನ ಹೂಡಿಕೆ ಒಂದು ವರ್ಷದಲ್ಲಿ ಇಪ್ಪತ್ತೊಂದು ಪರ್ಸೆಂಟ್ ರಿಟರ್ನ್ಸ್ ಕೊಟ್ಟಿದೆ. ಷೇರಿಗೆ ಹೋಲಿಸಿದರೂ ಇದು ಒಳ್ಳೆ ರಿಟರ್ನ್ಸ್. ಹೊಸ ವರ್ಷದಲ್ಲೂ ಇದು ಅತ್ಯುತ್ತಮ ಆಯ್ಕೆ ಆಗಲಿದೆ. ಏಕೆಂದರೆ ಚಿನ್ನದ ಮೇಲಿನ ಹೂಡಿಕೆಯಲ್ಲಿ ರಿಸ್ಕ್ ಕಡಿಮೆ. ಮತ್ತೊಂದು ಸುತ್ತು ಜಾಗತಿಕ ಆರ್ಥಿಕತೆಯಲ್ಲಿ ಸ್ವಲ್ಪ ಮಟ್ಟಿಗಿನ ತಲ್ಲಣ ಕಂಡು ಬಂದರೂ ಚಿನ್ನದ ಬೆಲೆ ಗಗನಕ್ಕೆ ತಲುಪುತ್ತದೆ. ಇನ್ನು ಎರಡರಿಂದ ಮೂರು ವರ್ಷದ ಅವಧಿಯನ್ನು ಗಮನದಲ್ಲಿ ಇಟ್ಟುಕೊಂಡು ಹೇಳುವುದಾದರೆ ಚಿನ್ನದ ಮೇಲಿನ ಹೂಡಿಕೆ ಅತ್ಯುತ್ತಮ ಆಯ್ಕೆ.

ಎನ್ ಸಿಡಿಗಳು

ಎನ್ ಸಿಡಿಗಳು

ಶ್ರೀರಾಮ್ ಟ್ರಾನ್ಸ್ ಪೋರ್ಟ್ ಫೈನಾನ್ಸ್ ಮತ್ತು ಮುತ್ತೂಟ್ ಫೈನಾನ್ಸ್ ನಂಥ ಲಿಸ್ಟೆಡ್ ಎನ್ ಸಿಡಿಗಳ ಮೇಲೆ ಹೂಡಿಕೆ ಮಾಡಬಹುದು. ಇವುಗಳು ಉತ್ತಮ ರಿಟರ್ನ್ಸ್ ಕೂಡ ನೀಡುತ್ತವೆ. ಎನ್ ಸಿಡಿಗಳು ಎನ್ ಸಿಇ ಮತ್ತು ಬಿಎಸ್ ಇಯಲ್ಲಿ ಲಿಸ್ಟ್ ಆಗುತ್ತವೆ. ಎನ್ ಸಿಗಳಿಂದ ನಿಶ್ಚಿತ ಬಡ್ಡಿ ದರ ದೊರೆಯುತ್ತದೆ. ಮೆಚ್ಯೂರಿಟಿ ಸಂದರ್ಭದಲ್ಲಿ ಕಂಪೆನಿಗಳಿಂದ ಪಡೆಯಬಹುದು.

ತೆರಿಗೆಯನ್ನು ಗಮನದಲ್ಲಿ ಇರಿಸಿಕೊಳ್ಳಿ

ತೆರಿಗೆಯನ್ನು ಗಮನದಲ್ಲಿ ಇರಿಸಿಕೊಳ್ಳಿ

ಯಾವುದೇ ಹೂಡಿಕೆಯನ್ನು ಮಾಡುವ ಮುನ್ನ ಅವುಗಳಿಗೆ ಹೇಗೆ ತೆರಿಗೆ ಬೀಳುತ್ತದೆ ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ. ಮೇಲಿನ ಎಲ್ಲ ಹೂಡಿಕೆಗೂ ತೆರಿಗೆ ಬೀಳುತ್ತದೆ. ಅದು ಬಡ್ಡಿಯ ಆದಾಯ ಇರಬಹುದು ಅಥವಾ ಷೇರು ಮಾರಾಟದಿಂದ ಬರುವ ಲಾಭವೇ ಇರಬಹುದು. ಅದಕ್ಕೆ ತೆರಿಗೆ ಬೀಳುತ್ತದೆ. ಆದ್ದರಿಂದ ಹೂಡಿಕೆ ಮಾಡುವ ಮುನ್ನ ಈ ಅಂಶವನ್ನು ಗಮನಿಸಿ. ಅತ್ಯುತ್ತಮವಾದ ರಿಟರ್ನ್ಸ್ ಬೇಕು ಅಂದುಕೊಳ್ಳುವವರು ದೀರ್ಘಾವಧಿಗೆ ಹೂಡಿಕೆ ಮಾಡುವುದು ಉತ್ತಮ.

English summary

6 Best Investment Ideas For 2020

Here is the 6 best and great business ideas for 2020.
Story first published: Friday, December 20, 2019, 14:06 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X