For Quick Alerts
ALLOW NOTIFICATIONS  
For Daily Alerts

Demonetization: ಅಪನಗದೀಕರಣಕ್ಕೆ 6 ವರ್ಷ, ಬದಲಾವಣೆ ಏನಾಗಿದೆ?

|

ಪ್ರಧಾನ ಮಂತ್ರಿ ನರೇಂದ್ರ ಮೋದಿ ನವೆಂಬರ್ 8, 2016ರಂದು ದೇಶದ ಜನರನ್ನು ಉದ್ದೇಶಿಸಿ ಮಾಧ್ಯಮದಲ್ಲಿ ಮಾತನಾಡುತ್ತಾ, ಕೂಡಲೇ ಜಾರಿಗೆ ಬರುವಂತೆ 500 ರೂಪಾಯಿ ಹಾಗೂ 1000 ರೂಪಾಯಿ ನೋಟಿನ ಅಪನಗದೀಕರಣ ಮಾಡಿದ್ದಾರೆ. ಈ ಅಪನಗದೀಕರಣ ನಡೆದು ನವೆಂಬರ್ 8, 2022ಕ್ಕೆ 6 ವರ್ಷಗಳು ಆಗಿದೆ. ಪ್ರಮುಖವಾಗಿ ಕಪ್ಪು ಹಣದ ವಿರುದ್ಧ ಇದು ನಮ್ಮ ಹೋರಾಟ ಎಂದು ಕೇಂದ್ರ ಸರ್ಕಾರವು ಹೇಳಿಕೊಂಡಿದೆ. ಅಂದರೆ ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ನೋಟ್ ಬ್ಯಾನ್ ಮಾಡಲಾಗಿದೆ ಎಂದು ಸರ್ಕಾರ ಆ ಸಂದರ್ಭದಲ್ಲಿ ತಿಳಿಸಿದೆ.

 

ಕೇಂದ್ರ ಸರ್ಕಾರದ ಈ ದಿಡೀರ್ ನಿರ್ಧಾರವನ್ನು ಬಿಜೆಪಿಯು ಉತ್ತಮ ನಿರ್ಧಾರ ಎಂದು ಹಾಡಿಹೊಗಳಿದರೆ, ವಿರೋಧ ಪಕ್ಷವು ಟೀಕೆ ಮಾಡಿದೆ. ಯಾವುದೇ ತಯಾರಿ ನಡೆಸದೆಯೇ ಏಕಾಏಕಿ ಘೋಷಣೆ ಮಾಡಿ, ಬಡ ಜನರನ್ನು ಸರ್ಕಾರವೇ ಇಕ್ಕಟ್ಟಿಗೆ ಸಿಲುಕಿಸಿದೆ ಎಂದು ವಿರೋಧ ಪಕ್ಷಗಳು ದೂರಿದೆ.

Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!Note Ban: ಜನರಲ್ಲಿ ಇರುವ ನಗದು ಪ್ರಮಾಣ ಸಾರ್ವಕಾಲಿಕ ಏರಿಕೆ!

ಅಪನಗದೀಕರಣಕ್ಕೆ ಆರು ವರ್ಷವಾದ ಸಂದರ್ಭದಲ್ಲಿ ಈ ಬಗ್ಗೆ ಸೋಮವಾರ ಟ್ವೀಟ್ ಮಾಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, "ಕಪ್ಪು ಹಣ ಬರಲಿಲ್ಲ, ಆದರೆ ಬಡತನ ಎಂಬುವುದು ಬಂದಿದೆ. ಆರ್ಥಿಕತೆ ದುರ್ಬಲವಾಗಿದೆ. ದೇಶದಲ್ಲಿ ಭಯೋತ್ಪಾದನೆಯಲ್ಲ, ಕೋಟ್ಯಾಂತರ ಮಂದಿ ತಮ್ಮ ಉದ್ಯೋಗವನ್ನೇ ಕಳೆದುಕೊಂಡಿದ್ದಾರೆ," ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಬಿಜೆಪಿಯು ಕೂಡಾ ಪ್ರತ್ಯುತ್ತರ ನೀಡಿದೆ. ಆದರೆ ಆ ದಿನ ನಡೆದಿದ್ದು ಏನು, ಪ್ರಸ್ತುತ ಸ್ಥಿತಿ ಏನಾಗಿದೆ ಎಂಬ ಬಗ್ಗೆ ತಿಳಿಯೋಣ ಮುಂದೆ ಓದಿ....

 ಡಿಜಿಟಲ್ ವಹಿವಾಟಿಗೆ ಬಲ ನೀಡಿದೆಯಾ ಅಪನಗದೀಕರಣ?

ಡಿಜಿಟಲ್ ವಹಿವಾಟಿಗೆ ಬಲ ನೀಡಿದೆಯಾ ಅಪನಗದೀಕರಣ?

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಅಪನಗದೀಕರಣ ಡಿಜಿಟಲ್ ಆರ್ಥಿಕತೆಗೆ ಪ್ರಮುಖ ಬಲ ಎಂದು 2020ರಲ್ಲಿ ಹೇಳಿಕೊಂಡಿದ್ದಾರೆ. ಆದರೆ ತಜ್ಞರುಗಳು ಮಾತ್ರ ಡಿಜಿಟಲ್ ವಹಿವಾಟು ಬಲಗೊಳ್ಳಲು ಪ್ರಮುಖ ಕಾರಣ ಕೋವಿಡ್ ಸಾಂಕ್ರಾಮಿಕ ಎಂದು ಹೇಳಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಬಳಿಕ 2020, 2021ರಲ್ಲಿ ಜನರು ಹೆಚ್ಚಾಗಿ ಆನ್‌ಲೈನ್ ವಹಿವಾಟಿಗೆ ಶರಣಾಗಿದ್ದಾರೆ. ಆದರೂ ಜನರ ಕೈಯಲ್ಲಿ ಇರುವ ಮೊತ್ತದ ಪ್ರಮಾಣ ಮಾತ್ರ ಹೆಚ್ಚಾಗಿಯೇ ಇದೆ. ಅಪನಗದೀಕರಣ ಮಾಡಿದ ನಂತರದ ವರ್ಷ ಜನರ ಕೈಯಲ್ಲಿರುವ ನಗದು ಪ್ರಮಾಣ ಕಡಿತವಾಗಿದೆಯಾದರೂ ಕೂಡಾ ಆ ಬಳಿಕ 2020ರಿಂದ ಭಾರೀ ಪ್ರಮಾಣದಲ್ಲಿ ಅಧಿಕವಾಗುತ್ತಾ ಬಂದಿದೆ.

 ಜನರ ಕೈಯಲ್ಲಿರುವ ನಗದು ಪ್ರಮಾಣ ಭಾರೀ ಏರಿಕೆ!
 

ಜನರ ಕೈಯಲ್ಲಿರುವ ನಗದು ಪ್ರಮಾಣ ಭಾರೀ ಏರಿಕೆ!

ಕೇಂದ್ರ ಸರ್ಕಾರವು ನೋಟಿನ ಅಪನಗದೀಕರಣ ಮಾಡುವ ಮುನ್ನ 2016ರ ನವೆಂಬರ್ 4ರ ವೇಳೆಗೆ ಜನರ ಬಳಿ ಇರುವ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ ಆಗಿತ್ತು. ಆದರೆ ಅಪನಗದೀಕರಣ ಮಾಡಿದ ಬಳಿಕ 2017ಕ್ಕೆ ಜನರ ಬಳಿಕ ಇರುವ ನಗದು ಪ್ರಮಾಣವು 7.8 ಲಕ್ಷ ಕೋಟಿ ರೂಪಾಯಿಗೆ ಇಳಿಕೆಯಾಗಿತ್ತು. ಆದರೆ ಆ ಬಳಿಕ ಜನರ ಕೈಯಲ್ಲಿರುವ ನಗದು ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಅಕ್ಟೋಬರ್ 21, 2022ರವರೆಗಿನ ಲೆಕ್ಕಾಚಾರದ ಪ್ರಕಾರ ಜನರ ಕೈಯಲ್ಲಿರುವ ನಗದು ಸಾರ್ವಕಾಲಿಕ ಏರಿಕೆಯಾಗಿದ್ದು, ಪ್ರಸ್ತುತ 30.88 ಲಕ್ಷ ಕೋಟಿ ರೂಪಾಯಿ ನಗದು ಇದೆ. 2022ರಲ್ಲಿ ಜನರ ಕೈಯಲ್ಲಿರುವ ನಗದು ಪ್ರಮಾಣವನ್ನು 2016ರಲ್ಲಿನ ಪ್ರಮಾಣಕ್ಕೆ ಹೋಲಿಕೆ ಮಾಡಿದಾಗ ಸುಮಾರು ಶೇಕಡ 72ರಷ್ಟು ಅಥವಾ 12.91 ಲಕ್ಷ ಕೋಟಿ ರೂಪಾಯಿ ಹೆಚ್ಚಳವಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಜನರು ಆನ್‌ಲೈನ್ ವಹಿವಾಟಿನ ಜೊತೆಗೆ ಜನರು ಹೆಚ್ಚಾಗಿ ಹಣ ವಿತ್‌ಡ್ರಾ ಮಾಡಿ ತಮ್ಮ ಕೈಯಲ್ಲಿ ಇಟ್ಟುಕೊಳ್ಳಲು ಆರಂಭಿಸಿದ್ದಾರೆ.

 ವಿರೋಧ ಪಕ್ಷಗಳ ಆರೋಪವೇನು?

ವಿರೋಧ ಪಕ್ಷಗಳ ಆರೋಪವೇನು?

ಸರ್ಕಾರವು ದಿಡೀರ್ ಆಗಿ ಮಾಡಿದ ಅಪನಗದೀಕರಣವೇ ಪ್ರಸ್ತುತ ಆರ್ಥಿಕ ದುಸ್ಥಿತಿಗೆ ಕಾರಣ ಎಂದು ವಿರೋಧ ಪಕ್ಷಗಳು ಆರೋಪ ಮಾಡಿದೆ. ತಜ್ಞರುಗಳು ಕೂಡಾ ಈ ಅಪನಗದೀಕರಣವನ್ನು ಸರಿಯಾಗಿ, ವ್ಯವಸ್ಥಿತವಾಗಿ ಮಾಡದ ಕಾರಣ ಆರ್ಥಿಕವಾಗಿ ಭಾರೀ ಕೆಟ್ಟ ಪರಿಣಾಮ ಬೀರಿದೆ ಎಂದು ಹೇಳಿಕೊಂಡಿದ್ದಾರೆ. 2016ರಲ್ಲಿ ಸರ್ಕಾರ ನೋಟ್ ಬ್ಯಾನ್ ಮಾಡಿದ ಬೆನ್ನಲ್ಲೇ ಜನರು ತಮ್ಮಲ್ಲಿರುವ ನೋಟನ್ನು ಬ್ಯಾಂಕ್‌ಗೆ ಬಂದು ಬದಲಾವಣೆ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಆ ಸಂದರ್ಭದಲ್ಲಿ ನಗದು ಕೊರತೆ ಕೂಡಾ ಕಂಡು ಬಂದಿದೆ. ಬ್ಯಾಂಕ್‌ನ ಹೊರಗೆ ಜನರು ದಿನಪೂರ್ತಿ ಸಾಲುಗಟ್ಟಿ ಕಾಯಬೇಕಾದ ಸ್ಥಿತಿಯು ಕೂಡಾ ಬಂದಿತ್ತು. ವರದಿಯ ಪ್ರಕಾರ ನೋಟು ಬದಲಾವಣೆ ಮಾಡಿಕೊಳ್ಳಲು ಸಾಲಿನಲ್ಲಿ ನಿಂತಿರುವಾಗ ಸುಮಾರು 115 ಜನರು ಸಾವನ್ನಪ್ಪಿದ್ದಾರೆ. ಸಣ್ಣ ಸಣ್ಣ ವಹಿವಾಟು ನಷ್ಟದಿಂದಾಗಿ ಮುಚ್ಚಬೇಕಾದ ಸ್ಥಿತಿಗೆ ಬಂದು ತಲುಪಿತ್ತು. ಜಿಡಿಪಿ ಬೆಳವಣಿಗೆಯೂ ಕೂಡಾ ಕುಂಠಿತವಾಗಿತ್ತು. ಸರ್ಕಾರದ ಈ ನಡೆಯನ್ನು ವಿರೋಧ ಮಾಡಿ ಎಡಪಕ್ಷ, ಕಾಂಗ್ರೆಸ್, ಎಎಪಿ ಪ್ರತಿಭಟನೆಗಳನ್ನು ನಡೆಸಿತ್ತು.

2 ಸಾವಿರ ರೂ. ನೋಟು ಚಲಾವಣೆ ಕುಸಿತ: ಯಾವ ನೋಟು ಎಷ್ಟು ಚಲಾವಣೆ?2 ಸಾವಿರ ರೂ. ನೋಟು ಚಲಾವಣೆ ಕುಸಿತ: ಯಾವ ನೋಟು ಎಷ್ಟು ಚಲಾವಣೆ?

English summary

6 Years Of Demonetization: What Happened and Changed, Explained in Kannada

6 Years Of Demonetization: Six years ago, on this day, November 8, the Government of India announced the demonetisation of all banknotes of Rs 500 and Rs 1,000. Here's Effects of Demonetization.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X