For Quick Alerts
ALLOW NOTIFICATIONS  
For Daily Alerts

ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!

|

ಹಲವಾರು ರಾಜ್ಯಗಳಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ರಿಜಿಸ್ಟ್ರೇಷನ್ ಅನ್ನು ಮಾಡಲಾಗುತ್ತಿದೆ. ಹಾಗೆಯೇ ಮಕ್ಕಳಿಗೆ ಬ್ಲ್ಯೂ ಆಧಾರ್ ಅನ್ನು ಕೂಡಾ ನೀಡಲಾಗುತ್ತದೆ. ಇದನ್ನು ಕಿಡ್ ಆಧಾರ್ ಎಂದು ಕೂಡಾ ಕರೆಯಲಾಗುತ್ತದೆ. ಆದರೆ ಈ ಒಂದು ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಸೇವೆಯನ್ನು ಮನೆ ಬಾಗಿಲಿಗೆ ಬಂದು ನೀಡಲಾಗುತ್ತದೆ.

 

ಹೌದು, ಛತ್ತೀಸ್‌ಗಢ ಸರ್ಕಾರ ಈ ಸೇವೆಯನ್ನು ಇತ್ತೀಚೆಗೆ ಘೋಷಣೆ ಮಾಡಿದೆ. ಮುಖ್ಯಮಂತ್ರಿ ಮಿತನ್ ಯೋಜನೆಯಡಿಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಈ ಹೊಸ ಯೋಜನೆಯನ್ನು ಘೋಷಣೆ ಮಾಡಿದ್ದಾರೆ.

 

ನವಜಾತ ಶಿಶುಗಳಿಗೆ ಶೀಘ್ರವೇ ಜನನ ಪ್ರಮಾಣಪತ್ರದ ಜೊತೆ ಆಧಾರ್!ನವಜಾತ ಶಿಶುಗಳಿಗೆ ಶೀಘ್ರವೇ ಜನನ ಪ್ರಮಾಣಪತ್ರದ ಜೊತೆ ಆಧಾರ್!

ಈ ಹೊಸ ವ್ಯವಸ್ಥೆಯಲ್ಲಿ 5 ವರ್ಷದವರೆಗಿನ ಮಕ್ಕಳು ಮನೆಯಲ್ಲಿಯೇ ಆಧಾರ್ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಮನೆಯಲ್ಲಿಯೇ ಆಧಾರ್ ಕಾರ್ಡ್‌ಗಾಗಿ ರಿಜಿಸ್ಟ್ರೇಷನ್ ಪ್ರಕ್ರಿಯೆಯನ್ನು ನಡೆಸಲಾಗುತ್ತದೆ. ಇದರಿಂದ ಹಲವಾರು ಕುಟುಂಬಗಳಿಗೆ ಸಹಾಯವಾಗಲಿದೆ. ಈ ಬಗ್ಗೆ ಇಲ್ಲಿದೆ ಅಧಿಕ ಮಾಹಿತಿ ಮುಂದೆ ಓದಿ...

ಈ ರಾಜ್ಯದಲ್ಲಿ ಮಕ್ಕಳಿಗೆ ಆಧಾರ್ ಕಾರ್ಡ್ ಸೇವೆ ಮನೆ ಬಾಗಿಲಿಗೆ!

ಮನೆ ಬಾಗಿಲಿಗೆ ಆಧಾರ್ ಸೇವೆಪಡೆಯುವುದು ಹೇಗೆ?

ಛತ್ತೀಸ್‌ಗಢದಲ್ಲಿ ಮನೆ ಬಾಗಿಲಿಗೆ ಆಧಾರ್ ಸೇವೆಯನ್ನು ಪಡೆಯಬೇಕಾದರೆ ಅಪಾಯಿಂಟ್‌ಮೆಂಟ್ ಮಾಡಿಕೊಳ್ಳುವುದು ಮುಖ್ಯವಾಗಿದೆ. ಈ ಬಗ್ಗೆ ಈ ಕೆಳಗೆ ಹಂತ ಹಂತವಾದ ವಿವರಣೆ ನೀಡಲಾಗಿದೆ.

* ಅಪಾಯಿಂಟ್‌ಮೆಂಟ್‌ಗಾಗಿ 14545 ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಬೇಕಾಗುತ್ತದೆ.
* ನಿಮ್ಮ ಮನೆಗೆ ಮಿತನ್ ಯೋಜನೆಯ ಕಾರ್ಯಕರ್ತರು ಭೇಟಿ ನೀಡುತ್ತಾರೆ.
* 5 ವರ್ಷಕ್ಕಿಂತ ಕೆಳಗಿನ ಮಗುವಿಗೆ ಮನೆ ಬಾಗಿಲಿಗೆ ಬಂದು ಆಧಾರ್ ರಿಜಿಸ್ಟ್ರೇಷನ್ ಮಾಡುವ ಸಂದರ್ಭದಲ್ಲಿ ಪೋಷಕರ ಮಾಹಿತಿ ಅಗತ್ಯವಾಗಿದೆ. ಆಧಾರ್ ಕೇಂದ್ರದಲ್ಲಿಯಾದರೂ ಪೋಷಕರ ಮಾಹಿತಿ ಅಗತ್ಯ.
* ಪೋಷಕರ ಬಯೋಮೆಟ್ರಿಕ್ ಡೇಟಾ ಹಾಗೂ ಆಧಾರ್ ಸಂಖ್ಯೆಯನ್ನು ಮಕ್ಕಳ ಆಧಾರ್‌ಗೆ ನೀಡಲಾಗುತ್ತದೆ.
* ರೇಷನ್ ಕಾರ್ಡ್, ಸಿಜಿಎಸ್‌ಎಸ್/ರಾಜ್ಯ ಸರ್ಕಾರ ಕಾರ್ಡ್/ಇಸಿಎಚ್‌ಎಸ್/ ಇಎಸ್‌ಐಸಿ/ ಆರೋಗ್ಯ ಕಾರ್ಡ್, ಪೋಷಕರು ಯೋಧರಾದರೆ ಅದರ ಕಾರ್ಡ್, ಪಾಸ್‌ಪೋರ್ಟ್, ಜನನ ಪ್ರಮಾಣಪತ್ರ ಕಡ್ಡಾಯ
* ಎಲ್ಲ ದಾಖಲೆಗಳನ್ನು ಪರಿಶೀಲನೆ ಮಾಡಲಾಗುತ್ತದೆ. ಎಲ್ಲ ಪ್ರಕ್ರಿಯೆ ನಡೆದ ಬಳಿಕ ಕೆಲವೇ ದಿನಗಳಲ್ಲಿ ಆಧಾರ್ ಕಾರ್ಡ್ ಪೋಸ್ಟ್ ಮೂಲಕ ಮನೆ ಬಾಗಿಲಿಗೆ ತಲುಪಲಿದೆ.

ಹುಟ್ಟಿನಿಂದ ಸಾವಿನವರೆಗೆ ಆಧಾರ್: ನವಜಾತ ಶಿಶುವಿಗೂ ಕಾರ್ಡ್ಹುಟ್ಟಿನಿಂದ ಸಾವಿನವರೆಗೆ ಆಧಾರ್: ನವಜಾತ ಶಿಶುವಿಗೂ ಕಾರ್ಡ್

ಪ್ರಸ್ತುತ ಛತ್ತೀಸ್‌ಗಢದ ಪ್ರಮುಖ 14 ಮುನ್ಸಿಪಾಲ್ ಕಾರ್ಪೋರೇಷನ್‌ಗಳಲ್ಲಿ ಈ ಯೋಜನೆಯನ್ನು ಜಾರಿ ಮಾಡಲಾಗಿದೆ. ಪ್ರಸ್ತುತ ಯಾವುದೇ ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಬೇಕಾದರೆ ಆಧಾರ್ ಕಾರ್ಡ್ ಮುಖ್ಯವಾಗಿದೆ. ಮಕ್ಕಳಿಗೂ ಕೂಡಾ ಆಧಾರ್ ಕಾರ್ಡ್ ಅಗತ್ಯವಾಗಿದೆ. ಆದ್ದರಿಂದಾಗಿ ಸರ್ಕಾರವು ಆಧಾರ್ ಸೇವೆಯನ್ನು ವಿಸ್ತಾರ ಮಾಡುತ್ತಿದೆ.

English summary

Aadhaar Card Registration For Children At Doorstep In THIS State, Details in Kannada

Aadhaar Card Registration For Children Upto 5 Years Now At Doorstep In THIS State. Here Is How To Avail It. here's details read on.
Story first published: Saturday, November 5, 2022, 14:56 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X