For Quick Alerts
ALLOW NOTIFICATIONS  
For Daily Alerts

ಬ್ರ್ಯಾಂಡ್ ವಾಹನ ಕೊಳ್ಳುವ ಮುನ್ನ ಸೆಕೆಂಡ್ ಹ್ಯಾಂಡ್ ಬಗ್ಗೆಯೂ ಗಮನ ಇರಲಿ

|

ಬ್ರ್ಯಾಂಡ್ ಬ್ರ್ಯಾಂಡ್ ಬ್ರ್ಯಾಂಡ್... ಇದೊಂದು ತಲೆಯಲ್ಲಿ ಹೊಕ್ಕಿ ಕೂತರೆ ಉಳಿತಾಯ ಬಂದ್ ಬಂದ್ ಬಂದ್. ಯಾಕೆ ಈ ಮಾತನ್ನು ಹೇಳಬೇಕಾಗಿದೆ ಅಂದರೆ, ಇಂಥದ್ದೇ ಬೈಕ್, ಇದೇ ಬ್ರ್ಯಾಂಡ್ ಮೊಬೈಲ್ ಫೋನ್, ಲ್ಯಾಪ್ ಟಾಪ್, ಬೈಕ್, ಕಾರು ಹೀಗೆ ಬಟ್ಟೆಯಿಂದ ಮೊದಲುಗೊಂಡು ವಾಸವಿರುವ ಬಡಾವಣೆ ತನಕ ಬ್ರ್ಯಾಂಡ್ ವ್ಯಾಲ್ಯೂ ನೋಡಲಾಗುತ್ತಿದೆ.

ಆ ಕಾರಣಕ್ಕೇ ಸಾಲ ತೀರಿಸುವ ಸಲುವಾಗಿಯೇ ದುಡಿಮೆ ಮಾಡಬೇಕು ಎಂಬ ಸ್ಥಿತಿ ನಿರ್ಮಾಣವಾಗಿದೆ. ಈ ದಿನ ಸೆಕೆಂಡ್ ಹ್ಯಾಂಡ್ ವಸ್ತುಗಳನ್ನು ಖರೀದಿ ಮಾಡುವುದರಿಂದ ಏನು ಫಾಯಿದೆ ಎಂದು ವಿವರಿಸುವ ಪ್ರಯತ್ನ ಮಾಡಲಾಗುತ್ತಿದೆ. ಯಾವ ಬ್ರ್ಯಾಂಡ್ ನದು ಖರೀದಿ ಮಾಡಬೇಕು ಅಂದುಕೊಂಡಿರುತ್ತೇವೋ ಅದನ್ನು ಖರೀದಿಯೂ ಮಾಡಬಹುದು, ಜತೆಗೆ ಕಡಿಮೆ ದುಡ್ಡಲ್ಲಿ ವ್ಯವಹಾರವೂ ಮುಗಿಯುತ್ತದೆ.

ಬೈಕ್ ಕಡೆಗೆ ಆಕರ್ಷಣೆ

ಬೈಕ್ ಕಡೆಗೆ ಆಕರ್ಷಣೆ

ವೃತ್ತಿ ಜೀವನದ ಆರಂಭದಲ್ಲಿ ಇರುವವರು ಅಥವಾ ಕಾಲೇಜು ಹಂತದಲ್ಲೇ ಸೂಪರ್ ಬೈಕ್ ಗಳು ಅಥವಾ ಹೆಚ್ಚಿನ ಸಿ.ಸಿ. ಸಾಮರ್ಥ್ಯದ ಬೈಕ್ ಗಳ ಕಡೆಗೆ ಆಕರ್ಷಿತರಾಗುತ್ತಾರೆ. ಈಗೆಲ್ಲ ಇನ್ನೂರು ಸಿ.ಸಿ.ಯ ಹೊಸ ಬೈಕ್ ಖರೀದಿ ಮಾಡಬೇಕು ಅಂದರೆ 1.25 ಲಕ್ಷ ರುಪಾಯಿಗೂ ಹೆಚ್ಚು ಬೇಕು. ಒಬ್ಬ ವ್ಯಕ್ತಿಯ ವೃತ್ತಿ ಜೀವನದ ಆರಂಭದ ವರ್ಷದಲ್ಲಿ ಸರಾಸರಿ ವಾರ್ಷಿಕ ಸಿಟಿಸಿ (ಕಾಸ್ಟ್ ಟು ಕಂಪೆನಿ) 3ರಿಂದ 3.5 ಲಕ್ಷ ರುಪಾಯಿ ಅಥವಾ ಅದಕ್ಕಿಂತ ಕಡಿಮೆ ಸಿಗಬಹುದು. ಅಂಥದ್ದರಲ್ಲಿ ಇಷ್ಟು ಹಣ ಕೊಟ್ಟು ಬೈಕ್ ಖರೀದಿ ಮಾಡಿದರೆ ಆ ಸಾಲವನ್ನು ಎಷ್ಟು ಸಮಯ ತೀರಿಸಬೇಕು. ಜೊತೆಗೆ ಹೊಸ ಬೈಕ್ ಮೈಲೇಜ್ ಸ್ವಲ್ಪ ಕಡಿಮೆ ಇರುತ್ತದೆ. ಮೇಂಟೇನೆನ್ಸ್ ಕಡಿಮೆ ಇರುತ್ತದೆ ಒಪ್ಪಿಕೊಳ್ಳಬೇಕು. ಆದರೆ ಬೈಕ್ ಖರೀದಿಗಾಗಿ ಪಡೆದ ಸಾಲಕ್ಕೆ ಬಡ್ಡಿ ಅಥವಾ ಕೈಯಿಂದಲೇ ಪೂರ್ತಿ ದುಡ್ಡು ಹಾಕಿದ್ದಲ್ಲಿ, ಅದನ್ನು ಹೂಡಿಕೆ ಅಥವಾ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಇಟ್ಟಿದ್ದರೆ ಎಷ್ಟು ಬರುತ್ತಿತ್ತು ಎಂದೆಲ್ಲ ಲೆಕ್ಕ ಹಾಕಿಕೊಂಡು ನೋಡಿ.

ಅಗತ್ಯ ಇದೆಯಾ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು
 

ಅಗತ್ಯ ಇದೆಯಾ ಎಂಬ ಪ್ರಶ್ನೆ ಕೇಳಿಕೊಳ್ಳಬೇಕು

ಅದರಲ್ಲೂ ಕೆಲಸದ ಸಲುವಾಗಿ ಹೆಚ್ಚಾಗಿ ಬೈಕ್ ಬಳಸುವವರು ಕಡ್ಡಾಯವಾಗಿ ಮೈಲೇಜ್ ಕಡೆಗೆ ಗಮನ ನೀಡಲೇಬೇಕು. ನಗರಪ್ರದೇಶದಲ್ಲಿ ವಾಸವಿದ್ದರಂತೂ ಟ್ರಾಫಿಕ್ ಮಧ್ಯೆ ಮೈಲೇಜ್ ಇನ್ನಷ್ಟು ಕಡಿಮೆ ಆಗುತ್ತದೆ. ಇದೇ ಮಾತನ್ನು ಯಥಾವತ್ ಕಾರಿಗೆ ಕೂಡ ಅನ್ವಯಿಸಿಕೊಳ್ಳಬಹುದು. ಕಾರು- ಬೈಕ್ ಇವೆಲ್ಲ ಈಗ ಅಗತ್ಯ ಎಂಬ ಕಾರಣಕ್ಕೆ ಖರೀದಿ ಮಾಡಬೇಕಾದ ಸ್ಥಿತಿ ಬಂದಿದೆ. ಆದರೆ ಅದನ್ನು ಖರೀದಿ ಮಾಡಿದ ನಂತರ ಖರ್ಚು ಹೆಚ್ಚಾಗಬಾರದು ಅಲ್ಲವಾ? ಇವತ್ತಿನ ದಿನಮಾನಕ್ಕೆ ಮರ್ಸಿಡಿಸ್ ಬೆಂಜ್ ಕಾರು ಕೂಡ ಸಾಲಕ್ಕೆ ಸಿಗುತ್ತದೆ. ಆದರೆ ಅದರ ಇಎಂಐ, ಮೇಂಟೇನೆನ್ಸ್, ಮೈಲೇಜ್, ಇನ್ಷೂರೆನ್ಸ್ ಇತ್ಯಾದಿಯೆಲ್ಲ ಯೋಚನೆ ಮಾಡದಿದ್ದಲ್ಲಿ ಕಾರು ಮನೆಯಲ್ಲೇ ನಿಲ್ಲಿಸಿರಬೇಕಾಗಿರುತ್ತದೆ ಅಷ್ಟೇ. ಬಹಳ ಮಂದಿಯ ಸ್ಥಿತಿ ಕೂಡ ಅದೇ. ತಮಗೆ ಕಾರು ಅಥವಾ ಬೈಕ್ ಅಗತ್ಯ ಇದೆಯಾ ಎಂಬ ಪ್ರಶ್ನೆ ಕೂಡ ಕೇಳಿಕೊಳ್ಳದೆ ಮದುವೆ ಆಗ್ತಿದ್ದೀನಿ, ಸ್ನೇಹಿತರೆಲ್ಲ ಖರೀದಿ ಮಾಡ್ತಿದ್ದಾರೆ, ಸಾಲ ಸಿಗುತ್ತಿದೆ... ಈ ಥರದ ಕಾರಣಗಳಿಗೆ ಖರೀದಿ ಕೊಂಡುಬಿಡುತ್ತಾರೆ.

ಸಾಲ ಕೇಳುವುದಕ್ಕಿಂತ ಉತ್ತಮ ಮಾರ್ಗವಿದು

ಸಾಲ ಕೇಳುವುದಕ್ಕಿಂತ ಉತ್ತಮ ಮಾರ್ಗವಿದು

ಸರಿ, ಹಾಗಿದ್ದರೆ ಏನನ್ನೂ ಹೊಸದು ಖರೀದಿಯೇ ಮಾಡಬಾರದಾ ಎಂಬ ಪ್ರಶ್ನೆ ಮೂಡುತ್ತದೆ. ಈಗೆಲ್ಲ ಸೆಕೆಂಡ್ ಹ್ಯಾಂಡ್ ಅಥವಾ ಬಳಕೆ ಮಾಡಿದ ಕಾರು, ಬೈಕ್ ಮತ್ತಿತರ ವಾಹನಗಳೆಲ್ಲ ತುಂಬ ಉತ್ತಮ ಬೆಲೆಗೆ, ಅರ್ಥಾತ್ ಅರ್ಧಕ್ಕರ್ಧ ಬೆಲೆಗೆ ಸಿಗುತ್ತವೆ. ಅಷ್ಟೇ ಅಲ್ಲ, ಅವುಗಳಿಗೆ ಅಗತ್ಯ ಇದ್ದಲ್ಲಿ ಸಾಲ ಕೂಡ ಸಿಗುವುದು ಉಂಟು. ಸೂಕ್ತ ರೀತಿಯಲ್ಲಿ ಚೆಕ್ ಮಾಡಿಸಿ, ತಜ್ಞರ ಅಭಿಪ್ರಾಯ ಪಡೆದು, ಖರೀದಿ ಮಾಡಿದರೆ ಅವುಗಳನ್ನೇ ವರ್ಷಗಟ್ಟಲೆ ಬಳಸಬಹುದು. ಆದರೆ ನಿಮಗೆ ಏನು ಬೇಕು ಎಂಬ ಬಗ್ಗೆ ಸ್ಪಷ್ಟತೆ ಅಗತ್ಯ. ಉದಾಹರಣೆಗೆ, ಬೈಕ್ ಬೇಕು. ಸರಿ, ಅದರಲ್ಲಿ ಎಷ್ಟು ಬೆಲೆಯ, ಎಷ್ಟು ಸಿ.ಸಿ., ಮೈಲೇಜ್, ಬ್ರ್ಯಾಂಡ್ ಇತ್ಯಾದಿಯನ್ನೆಲ್ಲ ನಿರ್ಧರಿಸಿಕೊಂಡ ಮೇಲೆ ಆ ಎಲ್ಲ ನಿರೀಕ್ಷೆಯನ್ನೂ ಮುಟ್ಟಬಲ್ಲ, ಬೆಲೆಯಲ್ಲಿ ಕಡಿಮೆ ಇರುವ ಸೆಕೆಂಡ್ ಹ್ಯಾಂಡ್ ವಾಹನವನ್ನೇ ಖರೀದಿಸಬಹುದು. ಆದರೆ ಕೆಲವರಿಗೆ ತಮ್ಮ ಬಳಿ ಇರುವುದು ಸೆಕೆಂಡ್ ಹ್ಯಾಂಡ್ ಕಾರು ಅಥವಾ ಬೈಕ್ ಎಂದು ಹೇಳಿಕೊಳ್ಳುವುದು ಮುಜುಗರದ ಸಂಗತಿ ಆಗಿರುತ್ತದೆ. ದುಡ್ಡಿಗೆ ಕಷ್ಟವಾಗಿ ಅವರಿವರ ಬಳಿ ಹಣ ಕೇಳುವುದೋ ಅಥವಾ ವಾಹನವನ್ನೇ ಮಾರುವುದಕ್ಕಿಂತ ಸೆಕೆಂಡ್ ಹ್ಯಾಂಡ್ ವಾಹನ ಉತ್ತಮ ಅಲ್ಲವೇ?

ಬ್ರ್ಯಾಂಡ್ ವಾಹನ ಕೊಳ್ಳುವ ಮುನ್ನ

ಬ್ರ್ಯಾಂಡ್ ವಾಹನ ಕೊಳ್ಳುವ ಮುನ್ನ

ರಾಯಲ್ ಎನ್ ಫೀಲ್ದ್, ಹಾರ್ಲೆ ಡೇವಿಡ್ಸನ್ ಬೈಕ್ ನಿಂದ ಮೊದಲುಗೊಂಡು ಬಿಎಂಡಬ್ಲ್ಯು, ಮರ್ಸಿಡಿಸ್ ಬೆಂಜ್ ಇನ್ನು ಹಲವಾರು ದುಬಾರಿ ಬ್ರ್ಯಾಂಡ್ ನ ಸೆಕೆಂಡ್ ಹ್ಯಾಂಡ್ ಬೈಕ್, ಕಾರುಗಳು ಒಳ್ಳೆ ಬೆಲೆಗೆ ಸಿಗುತ್ತವೆ. ಜತೆಗೆ ದಾಖಲಾತಿಗಳ ಬಗ್ಗೆಯೂ ಸ್ಪಷ್ಟತೆ ಇರುತ್ತದೆ. ಸಾಲವೂ ಸಿಗುತ್ತದೆ (ಅಗತ್ಯ ಇದ್ದಲ್ಲಿ). ಇಷ್ಟೆಲ್ಲ ಇರುವಾಗ ಹೊಸದು ಎಂಬ ಕಾರಣಕ್ಕೆ ವಿಪರೀತ ಹಣ ಸುರಿದು, ಸಾಲಗಾರರು ಯಾಕೆ ಆಗಬೇಕು? ಅದರಲ್ಲೂ ದೇಶದ ಆರ್ಥಿಕ ಸ್ಥಿತಿ ಹೀಗಿರುವ ಸಂದರ್ಭದಲ್ಲಿ ರಿಸ್ಕ್ ಮೈ ಮೇಲೆ ಎಳೆದುಕೊಳ್ಳಬೇಕೆ? ಹಾಗಂತ ನಿಮ್ಮ ಆಸೆ, ಅಗತ್ಯಗಳನ್ನು ಪೂರ್ತಿಯಾಗಿ ಬಿಡಬೇಕು ಅಂತಲೂ ಇಲ್ಲ. ಕೆಲವು ಕಂಪೆನಿಗಳು ತಾವೇ ಸೆಕೆಂಡ್ ಹ್ಯಾಂಡ್ ಅಥವಾ ಪ್ರೀ ಓನ್ಡ್ ವಾಹನಗಳ ಮಾರಾಟವನ್ನು ಮಾಡುತ್ತವೆ. ಅವುಗಳ ಸ್ಥಿತಿ ಚೆನ್ನಾಗಿಯೂ ಇರುತ್ತದೆ, ಜತೆಗೆ ವಾರಂಟಿಯೂ ಸಿಗುತ್ತದೆ. ಆದ್ದರಿಂದ ಬ್ರ್ಯಾಂಡ್ ವಾಹನ ಕೊಳ್ಳುವ ಮುನ್ನ ಸೆಕೆಂಡ್ ಹ್ಯಾಂಡ್ ಬಗ್ಗೆಯೂ ಗಮನ ಇರಲಿ. ಈಗೆಲ್ಲ ಮೊಬೈಲ್ ಫೋನ್, ಲ್ಯಾಪ್ ಟಾಪ್, ಟೀವಿ ಸೇರಿದಂತೆ ಬಹುತೇಕ ವಸ್ತುಗಳು ಸೆಕೆಂಡ್ ಹ್ಯಾಂಡ್ ಖರೀದಿಗೆ ಲಭ್ಯವಿವೆ.

English summary

Advantages Of Purchasing Pre Owned Car, Bikes

Here is the advantages of purchasing pre owned car, bikes.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X