For Quick Alerts
ALLOW NOTIFICATIONS  
For Daily Alerts

ಅಪನಗದೀಕರಣದ ನಾಲ್ಕು ವರ್ಷದ ನಂತರವೂ ಕ್ಯಾಶ್ ಮಹಾರಾಜ

By ಅನಿಲ್ ಆಚಾರ್
|

ಸರ್ಕಾರದಿಂದ ಅಪನಗದೀಕರಣ ಘೋಷಣೆಯಾಗಿ, ನಾಲ್ಕು ವರ್ಷ ಪೂರ್ಣಗೊಂಡಿದೆ. ಆದರೆ ಜನರು ಬಳಕೆ ಮಾಡುತ್ತಿರುವುದು ಬಹುತೇಕ ನಗದು ಅನ್ನೋದಿಕ್ಕೆ ಇಲ್ಲಿ ಉದಾಹರಣೆ ಇದೆ. ಅಕ್ಟೋಬರ್ 23, 2020ಕ್ಕೆ ಸಾರ್ವಜನಿಕರ ಬಳಿ ಇದ್ದ ಕರೆನ್ಸಿ ದಾಖಲೆಯ ಮೊತ್ತವಾದ ರು. 26.19 ಲಕ್ಷ ಕೋಟಿ- ನವೆಂಬರ್ 4, 2016ರಲ್ಲಿ ಇದ್ದ 8.22 ಲಕ್ಷ ಕೋಟಿ ರುಪಾಯಿಗೆ ಹೋಲಿಸಿದಲ್ಲಿ 45.7 ಪರ್ಸೆಂಟ್ ಹೆಚ್ಚಳ.

ಐದು ಟ್ರೇಡಿಂಗ್ ಸೆಷನ್ ನಲ್ಲಿ 8381 ಕೋಟಿ ರು. FPI ನಿವ್ವಳ ಹೂಡಿಕೆಐದು ಟ್ರೇಡಿಂಗ್ ಸೆಷನ್ ನಲ್ಲಿ 8381 ಕೋಟಿ ರು. FPI ನಿವ್ವಳ ಹೂಡಿಕೆ

ಅಕ್ಟೋಬರ್ 23, 2020ಕ್ಕೆ ಕೊನೆಯಾದ ಪಾಕ್ಷಿಕದಲ್ಲಿ ಸಾರ್ವಜನಿಕರ ಬಳಿ ಇರುವ ಕರೆನ್ಸಿ ರು. 10,441 ಕೋಟಿ ಏರಿಕೆಯಾಗಿ, ಹೊಸ ದಾಖಲೆಯನ್ನೇ ಬರೆದಿದೆ. 2016ರ ನವೆಂಬರ್ ನಲ್ಲಿ 500 ಮತ್ತು 1,000 ರುಪಾಯಿ ನೋಟುಗಳನ್ನು ವ್ಯವಸ್ಥೆಯಿಂದ ಹಿಂಪಡೆಯಲು ನಿರ್ಧಾರ ಮಾಡಲಾಯಿತು. ನವೆಂಬರ್ 4, 2016ಕ್ಕೆ ಜನರ ಬಳಿ ಇದ್ದ ಕರೆನ್ಸಿ ರು. 17.97 ಲಕ್ಷ ಕೋಟಿ.

ಅಪನಗದೀಕರಣದ ಪರಿಣಾಮವಾಗಿ ನಗದು 7.8 ಲಕ್ಷ ಕೋಟಿಗೆ ಇಳಿಕೆ

ಅಪನಗದೀಕರಣದ ಪರಿಣಾಮವಾಗಿ ನಗದು 7.8 ಲಕ್ಷ ಕೋಟಿಗೆ ಇಳಿಕೆ

ಆ ನಂತರ ಜನವರಿ 2017ರ ಜನವರಿಗೆ ಅಪನಗದೀಕರಣದ ಪರಿಣಾಮವಾಗಿ 7.8 ಲಕ್ಷ ಕೋಟಿ ರುಪಾಯಿಗೆ ಇಳಿಕೆಯಾಯಿತು. ವ್ಯವಸ್ಥೆಯಲ್ಲಿ ನಗದು ನಿಧಾನಕ್ಕೆ ಏರಿಕೆ ಆಗುತ್ತಾ ಇದೆ. ಕಡಿಮೆ ನಗದು ಬಳಕೆ ಮಾಡುವುದಕ್ಕೆ ಸರ್ಕಾರ ಹಾಗೂ ಆರ್ ಬಿಐನಿಂದ ನಾನಾ ಕ್ರಮಗಳ ಉತ್ತೇಜನ ಮಾಡುತ್ತಿದ್ದರೂ, ಡಿಜಿಟೈಸೇಷನ್ ಪಾವತಿ ಮತ್ತು ವಿವಿಧ ವ್ಯವಹಾರಗಳಿಗೆ ನಗದು ಬಳಸುವುದಕ್ಕೆ ನಿರ್ಬಂಧ ಹೇರಿದ್ದರೂ ಏನೂ ಪ್ರಯೋಜನ ಆಗಿಲ್ಲ. ಆದರೂ ಕಳೆದ ಹತ್ತು ತಿಂಗಳಲ್ಲಿ ಸಾರ್ವಜನಿಕರು ನಗದು ಬಳಕೆ ಮಾಡುವ ಪ್ರಮಾಣದಲ್ಲಿ ತೀಕ್ಷ್ಣ ಏರಿಕೆ ಆಗಿದೆ. ಜನವರಿ 3, 2020ರಲ್ಲಿ 21.79 ಲಕ್ಷ ಕೋಟಿ ರುಪಾಯಿ ಇದ್ದ ನಗದು, ಹತ್ತು ತಿಂಗಳಲ್ಲಿ ಅಕ್ಟೋಬರ್ 23, 2020ಕ್ಕೆ 26.19 ಲಕ್ಷ ಕೋಟಿ ರುಪಾಯಿಗೆ ಹೆಚ್ಚಳವಾಗಿದೆ.

ದಿನಬಳಕೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ದಿನಬಳಕೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದ ಜನ

ಮಾರ್ಚ್ ನಿಂದ ಮೇ ಮಧ್ಯೆ ಸರ್ಕಾರವು ಘೋಷಣೆ ಮಾಡಿದ್ದ ಕಠಿಣ ನಿರ್ಬಂಧದ ಕಾರಣಕ್ಕೆ ಸಾರ್ವಜನಿಕರು ನಗದು ವಿಥ್ ಡ್ರಾ ಮಾಡುವುದಕ್ಕೆ ಮುಗಿಬಿದ್ದಿದ್ದರಿಂದ ಈ ಬೆಳವಣಿಗೆ ಆಗಿದೆ. ದಿನಬಳಕೆ ಸೇರಿದಂತೆ ಅಗತ್ಯ ವಸ್ತುಗಳ ಖರೀದಿಗಾಗಿ ಜನರು ನಗದು ಡ್ರಾ ಮಾಡಿಟ್ಟುಕೊಂಡಿದ್ದರು. ಆರ್ ಬಿಐ ವ್ಯಾಖ್ಯಾನದ ಪ್ರಕಾರ, ಜನರ ಬಳಿ ಇರುವ ಕರೆನ್ಸಿ ಅಂದರೆ: ಒಟ್ಟಾರೆ ಚಲಾವಣೆಯಲ್ಲಿ ಇರುವ ಕರೆನ್ಸಿಯಿಂದ ಬ್ಯಾಂಕ್ ಗಳ ಬಳಿ ಇರುವ ನಗದನ್ನು ಕಳೆದ ಮೇಲೆ ಉಳಿಯುವ ಮೊತ್ತ. ಚಲಾವಣೆಯಲ್ಲಿ ಇರುವ ಕರೆನ್ಸಿ ಅಂದರೆ, ನಗದು ಅಥವಾ ಕರೆನ್ಸಿ ದೇಶದೊಳಗೆ ಗ್ರಾಹಕರು ಮತ್ತು ಉದ್ಯಮಗಳ ಮಧ್ಯೆ ವ್ಯವಹಾರಕ್ಕಾಗಿ ಫಿಸಿಕಲ್ ಆಗಿ ಬಳಸುವಂಥದ್ದು.

ನಗದು ಕೊರತೆ ಸೃಷ್ಟಿಯಾಗಿತ್ತು

ನಗದು ಕೊರತೆ ಸೃಷ್ಟಿಯಾಗಿತ್ತು

ಈ ಹಿಂದೆ 2016ರಲ್ಲಿ ದಿಢೀರನೆ ನೋಟುಗಳನ್ನು ಹಿಂಪಡೆದಾಗ ಬೇಡಿಕೆ ಕುಸಿದು, ಉದ್ಯಮಗಳು ಬಿಕ್ಕಟ್ಟು ಎದುರಿಸಿದ್ದವು ಮತ್ತು ಜಿಡಿಪಿ ಬೆಳವಣಿಗೆ ಒಂದೂವರೆ ಪರ್ಸೆಂಟ್ ನಷ್ಟು ಹತ್ತಿರ ಕುಸಿದಿತ್ತು. ಹಲವು ಸಣ್ಣ ವ್ಯಾಪಾರಗಳಿಗೆ ಪೆಟ್ಟು ಬಿದ್ದು, ಬಾಗಿಲು ಮುಚ್ಚಿದ್ದವು. ಇದರ ಜತೆಗೆ ನಗದು ಕೊರತೆ ಕೂಡ ಸೃಷ್ಟಿಯಾಗಿತ್ತು. ಆದರೆ ತಜ್ಞರು ಅಭಿಪ್ರಾಯ ಪಡುವಂತೆ ಚಲಾವಣೆಯಲ್ಲಿ ಕರೆನ್ಸಿ ಹೆಚ್ಚಾಗುವುದು ವಾಸ್ತವದ ಪ್ರತಿಬಿಂಬ ಅಲ್ಲ. ಗಣನೆಗೆ ತೆಗೆದುಕೊಳ್ಳಬೇಕಾದದ್ದು ಕರೆನ್ಸಿ ಟು ಜಿಡಿಪಿ ರೇಷಿಯೋ. ಅಪನಗದೀಕರಣದ ನಂತರ ಅದು ಕಡಿಮೆ ಆಗಿದೆ. ಆದರೆ ನಂತರದಲ್ಲಿ ಬೆಳವಣಿಗೆ ಕಡಿಮೆ ಆದ ಮೇಲೆ ಸಂಖ್ಯೆ ಮೇಲೇರಿದೆ ಎನ್ನುತ್ತಾರೆ.

ಡಿಜಿಟಲ್ ಪಾವತಿ ಮೊತ್ತ, ಪ್ರಮಾಣ ಹೆ‌ಚ್ಚಾಗಿದೆ

ಡಿಜಿಟಲ್ ಪಾವತಿ ಮೊತ್ತ, ಪ್ರಮಾಣ ಹೆ‌ಚ್ಚಾಗಿದೆ

ಇನ್ನು ಡಿಜಿಟಲ್ ಪಾವತಿಯ ಮೊತ್ತ ಹಾಗೂ ಪ್ರಮಾಣ ಎರಡೂ ಹೆಚ್ಚಾಗಿದೆ ಎನ್ನುತ್ತದೆ ಆರ್ ಬಿಐ. ಆರ್ ಬಿಐ ಮಾಹಿತಿಯಂತೆ, ಎಟಿಎಂ ಮೂಲಕ ನಗದು ವಿಥ್ ಡ್ರಾ ಮಾಡುವುದು ಸ್ಥಿರವಾಗಿ ಹೆಚ್ಚಾಗುತ್ತಲೇ ಇದೆ. ಜನವರಿ 2017ರಿಂದ ಡೆಬಿಟ್ ಕಾರ್ಡ್ ವ್ಯವಹಾರ ಎಟಿಎಂ ವಿಥ್ ಡ್ರಾ ಹಾಗೂ ಪಿಒಎಸ್ ವಿಥ್ ಡ್ರಾ 2,00,648 ಕೋಟಿ ರುಪಾಯಿಯಿಂದ 2020ರ ಆಗಸ್ಟ್ ಗೆ 2,37,778 ಕೋಟಿ ರುಪಾಯಿಗೆ ಹೆಚ್ಚಳ ಆಗಿದೆ. ಯುನಿಫೈಡ್ ಪೇಮಂಟ್ಸ್ ಇಂಟರ್ ಫೇಸ್ (UPI) ವ್ಯವಹಾರಗಳ ಪ್ರಮಾಣ ಮಾರ್ಚ್ 2020ರಲ್ಲಿ 5.9 ಪರ್ಸೆಂಟ್ ಕುಸಿತವಾಗಿದೆ ಮತ್ತು ಏಪ್ರಿಲ್ 2020ರಲ್ಲಿ 19.8 ಇಳಿದಿದ್ದು, ನೂರು ಕೋಟಿ ವ್ಯವಹಾರಗಳಿಗಿಂತ ಸ್ವಲ್ಪ ಕಡಿಮೆ ಆಗಿದೆ. ಆದರೆ ಲಾಕ್ ಡೌನ್ ನಿರ್ಬಂಧ ತೆರವಾಗುತ್ತಾ ಬಂದಂತೆ ಇದು ಸುಧಾರಿಸಿದೆ.

English summary

After 4 Years Of Dmonetisation Still Cash Is King In System

After 4 years of demonetisation still cash is king in the system. Here is an explainer with numbers.
Story first published: Monday, November 9, 2020, 11:46 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X