Air India Republic Day Sale: ರಿಯಾಯಿತಿ ದರದಲ್ಲಿ ಏರ್‌ಇಂಡಿಯಾ ಟಿಕೆಟ್, ದರ ಪರಿಶೀಲಿಸಿ
ದೇಶವು 74ನೇ ಗಣರಾಜ್ಯೋತ್ಸವ ಆಚರಣೆ ಮಾಡಲು ಇನ್ನು ಕೆಲವು ದಿನಗಳು ಮಾತ್ರ ಬಾಕಿ ಉಳಿದಿದೆ. ಈಗಾಗಲೇ ಎಲ್ಲ ತಯಾರಿಯನ್ನು ಸರ್ಕಾರ ನಡೆಸುತ್ತಿದೆ. ಈಗಾಗಲೇ ಹಲವಾರು ವಿಮಾನಗಳು ರದ್ದಾಗುವ ಬಗ್ಗೆ ಮಾಹಿತಿಯನ್ನು ವಿಮಾನಯಾನ ಸಂಸ್ಥೆಗಳು ನೀಡಿದೆ. ಈ ನಡುವೆ ಏರ್‌ಇಂಡಿಯಾ ರಿಯಾಯಿತಿ ದರದಲ್ಲಿ ಟಿಕೆಟ್ ಅನ್ನು ನೀಡುವ ಆಫರ್ ನೀಡಿದೆ.
ಹೌದು, ಏರ್ ಇಂಡಿಯಾ ರಿಪಬ್ಲಿಕ್ ಡೇ ಸೇಲ್ ಅನ್ನು ಆರಂಭಿಸಿದೆ. ಈ ಆಫರ್ ಅಡಿಯಲ್ಲಿ ಸಂಸ್ಥೆಯು ಕೆಲವು ಪ್ರದೇಶಗಳಿಗೆ ರಿಯಾಯಿತಿ ದರದಲ್ಲಿ ಟಿಕೆಟ್ ನೀಡಲಿದೆ. ಶನಿವಾರ ಏರ್ ಇಂಡಿಯಾ ಸಂಸ್ಥೆಯು ಈ ಆಫರ್ ಅನ್ನು ಆರಂಭಿಸಿದೆ. ಜನವರಿ 23ರವರೆಗೆ ಈ ಆಫರ್ ಇರಲಿದೆ.
ಈ ಆಫರ್ ಏರ್‌ಇಂಡಿಯಾ ಟಿಕೆಟ್ ಬುಕ್ಕಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಲಭ್ಯವಾಗಲಿದೆ. ಏರ್‌ಲೈನ್‌ನ ಅಧಿಕೃತ ಟ್ರಾವೆಲ್ ಏಜೆಂಟ್ ಬಳಿಯು ಆಫರ್ ದರದಲ್ಲಿ ಟಿಕೆಟ್ ಬುಕ್ಕಿಂಗ್ ಮಾಡಬಹುದಾಗಿದೆ. ಎಷ್ಟು ರಿಯಾಯಿತಿ, ಯಾವೆಲ್ಲ ವಾಯುಮಾರ್ಗದ ವಿಮಾನಕ್ಕೆ ರಿಯಾಯಿತಿ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ....

ಯಾರಿಗೆಲ್ಲ ರಿಯಾಯಿತಿ ದರದ ಟಿಕೆಟ್ ಲಭ್ಯ
ಏರ್‌ಇಂಡಿಯಾ ಸ್ಟೇಟ್‌ಮೆಂಟ್ ಪ್ರಕಾರ ಇಕಾನಮಿಕ್ ಕ್ಲಾಸ್‌ಗೆ ರಿಯಾಯಿತಿ ದರದಲ್ಲಿ ವಿಮಾನ ಟಿಕೆಟ್ ಲಭ್ಯವಾಗಲಿದೆ. ಫೆಬ್ರವರಿ 1ರಿಂದ ಸೆಪ್ಟೆಂಬರ್ 30ರವರೆಗೆ ಸ್ಥಳೀಯ ವಿಮಾನದಲ್ಲಿ ಹಾರಾಟಕ್ಕೆ ಬುಕ್ಕ್ ಮಾಡಲಾಗುವ ಟಿಕೆಟ್ ರಿಯಾಯಿತಿ ದರದಲ್ಲಿ ಲಭ್ಯವಾಗುತ್ತದೆ. ಜನವರಿ 23ರವರೆಗೆ ಮಾತ್ರ ಈ ಆಫರ್ ಇರಲಿದೆ. ಕಡಿಮೆಯೆಂದರೆ ನೀವು 1,705 ರೂಪಾಯಿಗೆ ಟಿಕೆಟ್ ಲಭ್ಯವಾಗುತ್ತದೆ. 49 ಸ್ಥಳೀಯ ಪ್ರದೇಶಗಳಿಗೆ ಟಿಕೆಟ್ ಇದೆ.
ಆಫರ್‌ಗಳ ಬಗ್ಗೆ ಮಾಹಿತಿ ತಿಳಿಯಿರಿ
ದೆಹಲಿಯಿಂದ ಮುಂಬೈ: ಟಿಕೆಟ್ ದರ 5,075 ರೂಪಾಯಿ
ಚೆನ್ನೈಯಿಂದ ದೆಹಲಿ: ಟಿಕೆಟ್ ದರ 5,895 ರೂಪಾಯಿ
ಬೆಂಗಳೂರಿನಿಂದ ಮುಂಬೈ: ಟಿಕೆಟ್ ದರ 2,319 ರೂಪಾಯಿ
ದೆಹಲಿಯಿಂದ ಉದಯ್‌ಪುರ: ಟಿಕೆಟ್ ದರ 3,680 ರೂಪಾಯಿ
ದೆಹಲಿಯಿಂದ ಗೋವಾ: ಟಿಕೆಟ್ ದರ 5,656 ರೂಪಾಯಿ
ದೆಹಲಿಯಿಂದ ಪೋರ್ಟ್ ಬ್ಲೇರ್: ಟಿಕೆಟ್ ದರ 8,690 ರೂಪಾಯಿ
ದೆಹಲಿಯಿಂದ ಶ್ರೀನಗರ: ಟಿಕೆಟ್ ದರ 3,730 ರೂಪಾಯಿ
ಅಹಮದಾಬಾದ್‌ನಿಂದ ಮುಂಬೈ: ಟಿಕೆಟ್ ದರ 1,806 ರೂಪಾಯಿ
ಗೋವಾದಿಂದ ಮುಂಬೈ: ಟಿಕೆಟ್ ದರ 2,830 ರೂಪಾಯಿ
ದಿಮಾಪುರದಿಂದ ಗುವಾಹಟಿ: ಟಿಕೆಟ್ ದರ 1,783 ರೂಪಾಯಿ