For Quick Alerts
ALLOW NOTIFICATIONS  
For Daily Alerts

5G on iPhones: ಐಫೋನ್‌ ಬಳಕೆದಾರರಿಗೆ 5ಜಿ ಸೇವೆ ಲಭ್ಯ, ದರ, ಇಂಟರ್‌ನೆಟ್ ವೇಗ ಇತರೆ ಮಾಹಿತಿ

|

ಭಾರತದಲ್ಲಿ ಐಫೋನ್ ಬಳಕೆದಾರರು ಪ್ರಸ್ತುತ 5ಜಿ ಸೇವೆಯನ್ನು ಬಳಕೆ ಮಾಡಲು ಸಾಧ್ಯವಾಗಲಿದೆ. iOS 16.2 ಸಾಫ್ಟ್‌ವೇರ್ ಅಪ್‌ಡೇಟ್ ಬಳಿಕ ಐಫೋನ್ ಬಳಕೆದಾರರು 5ಜಿ ಸೇವೆಯನ್ನು ಬಳಸಬಹುದಾಗಿದೆ.

ಈ 5ಜಿ ಸೇವೆಯನ್ನು ಐಫೋನ್ 12, ಐಫೋನ್ 13, ಐಫೋನ್ 14 ಬಳಕೆದಾರರು ಅಪ್‌ಡೇಟ್ ಬಳಿಕ 5ಜಿ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ಭಾರತದಲ್ಲಿ ಪ್ರಸ್ತುತ ಏರ್‌ಟೆಲ್ ಹಾಗೂ ರಿಲಯನ್ಸ್ ಜಿಯೋ 5ಜಿ ಸೇವೆಯನ್ನು ನೀಡುತ್ತಿದೆ.

ಆ್ಯಪಲ್ ಬಳಕೆದಾರರಿಗೆ ಮುಂದಿನ ವಾರದಿಂದ 5ಜಿ ಸೇವೆ ಲಭ್ಯಆ್ಯಪಲ್ ಬಳಕೆದಾರರಿಗೆ ಮುಂದಿನ ವಾರದಿಂದ 5ಜಿ ಸೇವೆ ಲಭ್ಯ

ಐಫೋನ್‌ನಲ್ಲಿ 5ಜಿ ಸೇವೆಯನ್ನು ಸಕ್ರಿಯಗೊಳಿಸುವುದು ಸರಳವಾಗಿದೆ. ಆದರೆ ಹಲವಾರು ಮಂದಿಗೆ 5ಜಿ ಸೇವೆಗೆ ಎಷ್ಟು ವೆಚ್ಚವಾಗುತ್ತದೆ, ಹೇಗೆ ಪಡೆಯುವುದು ಎಂಬ ಇತರೆ ಮಾಹಿತಿಗಳು ತಿಳಿದಿಲ್ಲ. ಈ ಬಗ್ಗೆ ಇಲ್ಲಿದೆ ಮಾಹಿತಿ ಮುಂದೆ ಓದಿ...

 ಐಫೋನ್‌ನಲ್ಲಿ 5ಜಿ ಸೇವೆ ಸಕ್ರಿಯಗೊಳಿಸುವುದು ಹೇಗೆ?

ಐಫೋನ್‌ನಲ್ಲಿ 5ಜಿ ಸೇವೆ ಸಕ್ರಿಯಗೊಳಿಸುವುದು ಹೇಗೆ?

ಈ ಹಿಂದೆಯೇ ಹೇಳಿದಂತೆ ಐಫೋನ್ ಬಳಕೆದಾರರು iOS 16.2 ವರ್ಜನ್ ಅನ್ನು ಹೊಂದಿರಬೇಕು. ಐಫೋನ್‌ 16.2 ವರ್ಜನ್‌ಗೆ ಅಪ್‌ಡೇಟ್ ಆಗಿದ್ದರೆ ಮಾತ್ರ 5ಜಿ ಸೇವೆಯನ್ನು ಪಡೆಯಲು ಸಾಧ್ಯವಾಗಲಿದೆ. ನೀವು ಹೊಸ ವರ್ಜನ್ ಅನ್ನು ಡೌನ್‌ಲೋಡ್ ಮಾಡಲು, ಸೆಟ್ಟಿಂಗ್ಸ್‌ಗೆ ಹೋಗಿ, Generalನಲ್ಲಿ Software Update ಮೇಲೆ ಕ್ಲಿಕ್ ಮಾಡಿ. ಅಪ್‌ಡೇಟ್ ಅನ್ನು ಇನ್‌ಸ್ಟಾಲ್ ಮಾಡಿದ ಬಳಿಕ, ನೀವು 5ಜಿ ಸೇವೆಯನ್ನು ಸಕ್ರಿಯಗೊಳಿಸಬಹುದು. ಸೆಟ್ಟಿಂಗ್ಸ್‌ಗೆ ಹೋಗಿ, Mobile Dataದಲ್ಲಿ Mobile Data Options ನಲ್ಲಿ Voice and Data ಇರಲಿದೆ. 5G or 5G Auto ಮೇಲೆ ಕ್ಲಿಕ್ ಮಾಡಿ. ಆದರೆ 5ಜಿ ಬಳಕೆಯು ಕೊಂಚ ನಿಮ್ಮ ಬ್ಯಾಟರಿ ಲೈಫ್ ಅನ್ನು ಕಡಿಮೆ ಮಾಡಬಹುದು. ಅಂದರೆ ಮೊಬೈಲ್ ಬ್ಯಾಟರಿ ಶೀಘ್ರವಾಗಿ ಕಡಿಮೆಯಾಗಬಹುದು.

ಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭಜಿಯೋ ಟ್ರೂ 5G ಸೇವೆ ಬೆಂಗಳೂರು, ಹೈದರಾಬಾದ್‌ನಲ್ಲಿ ಆರಂಭ

 ಭಾರತದಲ್ಲಿ ಎಲ್ಲಿ 5ಜಿ ಸೇವೆ ಲಭ್ಯವಾಗಲಿದೆ?

ಭಾರತದಲ್ಲಿ ಎಲ್ಲಿ 5ಜಿ ಸೇವೆ ಲಭ್ಯವಾಗಲಿದೆ?

ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು, ಹೈದಾರಾಬಾದ್, ಸಿಲಿಗುರಿ, ನಾಗ್ಪುರ, ವಾರಾಣಾಸಿ, ಪಾಣಿಪತ್, ಗುರುಗ್ರಾಮ್, ಗುವಾಹಟಿ, ಪಾಟ್ನಾದಲ್ಲಿ ಏರ್‌ಟೆಲ್ 5ಜಿ ಸೇವೆ ಲಭ್ಯವಿದೆ ಎಂದು ಏರ್‌ಟೆಲ್ ಹೇಳಿದೆ. ದೆಹಲಿ-ಎನ್‌ಆರ್‌ಸಿ, ಮುಂಬೈ, ಕೋಲ್ಕತ್ತಾ, ವಾರಾಣಾಸಿ, ಚೆನ್ನೈ, ಬೆಂಗಳೂರು, ಹೈದಾರಾಬಾದ್ಮ ಪುಣೆ, ನಥ್ವಾರ, ಗುಜರಾತ್ (33 ಜಿಲ್ಲೆ)ಯಲ್ಲಿ ರಿಲಯನ್ಸಸ್ ಜಿಯೋ 5ಜಿ ಸೇವೆ ಲಭ್ಯವಿದೆ ಎಂದು ಜಿಯೋ ಹೇಳಿದೆ. ಇನ್ನು ವೊಡಾಫೋನ್ ಐಡಿಯಾ (Vi) ಇನ್ನೂ ಕೂಡಾ ಭಾರತದಲ್ಲಿ 5ಜಿ ಸೇವೆಯನ್ನು ಆರಂಭ ಮಾಡಿಲ್ಲ.

 5ಜಿ ಸೇವೆಯ ವೇಗ ಎಷ್ಟಿದೆ?

5ಜಿ ಸೇವೆಯ ವೇಗ ಎಷ್ಟಿದೆ?

ದಕ್ಷಿಣ ದೆಹಲಿಯಲ್ಲಿ ಏರ್‌ಟೆಲ್ 5ಜಿ ಸೇವೆಯನ್ನು ಬಳಕೆ ಮಾಡಲು ಸಾಧ್ಯವಾಗುತ್ತದೆ. ಪ್ರಯೋಗದ ಸಂದರ್ಭದಲ್ಲಿ 5ಜಿ ಸೇವೆಯ ವೇಗ 297Mbps ಆಗಿದೆ. ಇದು ಡೌನ್‌ಲೋಡ್ ವೇಗವಾಗಿದೆ. ಅಂದರೆ ಇದು 4ಜಿ ಸೇವೆಗಿಂತ ಅಧಿಕವಾಗಿದೆ. 4ಜಿ ಸೇವೆ ವೇಗ 20Mbps ಆಗಿದೆ. ಇನ್ನು ರಿಲಯನ್ಸ್ ಜಿಯೋ ಕೆಲವೇ ಕೆಲವು ಆಯ್ಕೆ ಮಾಡಿದಂತಹ ಗ್ರಾಹಕರಿಗೆ ಸೇವೆಯನ್ನು ನೀಡುತ್ತದೆ. ಇನ್ನು ಐಫೋನ್‌ ಮೇಲೆ ಇನ್ನು ಕೂಡಾ 5ಜಿ ಸೇವೆ ಪ್ರಯೋಗ ಆರಂಭವಾಗಿಲ್ಲ.

 ಭಾರತದಲ್ಲಿ ಏರ್‌ಟೆಲ್, ಜಿಯೋ 5ಜಿ ಸೇವೆ

ಭಾರತದಲ್ಲಿ ಏರ್‌ಟೆಲ್, ಜಿಯೋ 5ಜಿ ಸೇವೆ

ಏರ್‌ಟೆಲ್, ಜಿಯೋ 5 ಭಾರತದಲ್ಲಿ ಪ್ರಸ್ತುತ 5ಜಿ ಸೇವೆಯ ಪ್ರಯೋಗವನ್ನು ಮಾಡುತ್ತಿದೆ. ಪ್ರಸ್ತುತ ಭಾರತದಲ್ಲಿ 5ಜಿ ಸೇವೆಯನ್ನು ಸಂಪೂರ್ಣವಾಗಿ ಜಾರಿ ಮಾಡಲಾಗಿಲ್ಲ. ನೀವು 5ಜಿ ಸೇವೆಯನ್ನು ಪಡೆಯಲು ಬೇರೆ ಹೊಸ ಸಿಮ್ ಅನ್ನು ಬಳಕೆ ಮಾಡಬೇಕಾಗಿಲ್ಲ.

English summary

Airtel, Jio 5G now available on iPhone 12 and above, How to activate, price other details in kannada

5G in India: Airtel, Jio 5G now available on iPhone 12 and above, How to activate, price, internet speed other details in kannada, read on.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X